Monday, 1 March 2021

ಉತ್ತರ ಪ್ರದೇಶ: 7 ಜಿಲ್ಲಾ ಘಟಕಗಳಿಗೆ ಮುಖ್ಯಸ್ಥರನ್ನು ನೇಮಿಸಿದ ಕಾಂಗ್ರೆಸ್


 ಉತ್ತರ ಪ್ರದೇಶ: 7 ಜಿಲ್ಲಾ ಘಟಕಗಳಿಗೆ ಮುಖ್ಯಸ್ಥರನ್ನು ನೇಮಿಸಿದ ಕಾಂಗ್ರೆಸ್

ಲಖನೌ: ಕಾಂಗ್ರೆಸ್‌ ಪಕ್ಷವು ಉತ್ತರ ಪ್ರದೇಶದಲ್ಲಿನ 7 ಜಿಲ್ಲಾ ಕಾಂಗ್ರೆಸ್‌ ಸಮಿತಿಗಳಿಗೆ ಹೊಸದಾಗಿ ಅಧ್ಯಕ್ಷರನ್ನು ನೇಮಿಸಿದೆ.

ಡಿಯೊರಿಯಾ, ಮಹಾರಾಜ್‌ಗಂಜ್‌, ಜಲೌನ್‌, ಕಾನ್ಪುರ ಗ್ರಾಮೀಣ, ಉನ್ನಾವೋ, ಬುಲಂದ್‌ಷಹರ್‌, ಲಖನೌ ಸಿಟಿ (ದಕ್ಷಿಣ) ಜಿಲ್ಲೆ ಹಾಗೂ ನಗರ ಘಟಕಗಳಿಗೆ ಹೊಸದಾಗಿ ಅಧ್ಯಕ್ಷರುಗಳನ್ನು ನೇಮಿಸಲಾಗಿದೆ.

ಈ ಸಂಬಂಧ ಎಐಸಿಸಿ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಡಿಯೊರಿಯಾ ಜಿಲ್ಲಾ ಘಟಕಕ್ಕೆ ರಾಮ್‌ಜಿ ಗಿರಿ, ಮಹಾರಾಜ್‌ಗಂಜ್‌ಗೆ ಶರದ್‌ ಸಿಂಘ್‌ ಬಬ್ಲೂ, ಜಲೌನ್‌ ಜಿಲ್ಲೆಗೆ ರಾಜೀವ್‌ ನಾರಾಯಣ್‌ ಮಿಶ್ರಾ, ಕಾನ್ಪುರ ನಗರ್‌ ಗ್ರಾಮೀಣ ಭಾಗಕ್ಕೆ ಅಮಿತ್‌ ಕುಮಾರ್‌ ಪಾಂಡೆ, ಉನ್ನಾವೊಗೆ ಆರ್ತಿ ಬಜ್ಪೈ, ಬುಲಂದ್‌ಷಹರ್‌ಗೆ ಶಿಯೋಪಾಲ್‌ ಸಿಂಗ್‌ ಮತ್ತು ಲಖನೌ ನಗರಕ್ಕೆ ದಿಲ್‌ಪ್ರೀತ್‌ ಸಿಂಗ್‌ ಅವರನ್ನು ನೇಮಿಸಿರುವುದಾಗಿ ತಿಳಿಸಿದೆ.SHARE THIS

Author:

0 التعليقات: