Friday, 19 March 2021

ಧಾರವಾಡ; ಮಾಸ್ಕ್ ಹಾಕದವರಿಂದ 66,500 ರೂ. ದಂಡ ಸಂಗ್ರಹ


 ಧಾರವಾಡ; ಮಾಸ್ಕ್ ಹಾಕದವರಿಂದ 66,500 ರೂ. ದಂಡ ಸಂಗ್ರಹ

ಧಾರವಾಡ: ಕೋವಿಡ್ ಎರಡನೇ ಅಲೆಯ ಸಂಭವ ಕುರಿತು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಜನರು ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ ಮನವಿ ಮಾಡಿದ್ದಾರೆ.

ಹುಬ್ಬಳ್ಳಿ-ಧಾರವಾರ ಮಹಾನಗರ ಪಾಲಿಕೆ ಮಾಸ್ಕ್‌ ಧರಿಸದ, ಸಾಮಾಜಿಕ ಅಂತರ ಉಲ್ಲಂಘನೆ ಪ್ರಕರಣಗಳನ್ನು ಪತ್ತೆ ಹಚ್ಚಿದ್ದು ಗುರುವಾರ 71,300 ರೂ. ದಂಡವನ್ನು ಸಂಗ್ರಹ ಮಾಡಿದ್ದಾರೆ. ಪಾಲಿಕೆಯ 12 ವಲಯ ಕಚೇರಿ ಅಧಿಕಾರಿಗಳು ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ.

ಮಾಸ್ಕ್ ಇಲ್ಲದೇ ಸಂಚಾರ ನಡೆಸುತ್ತಿದ್ದ 266 ಜನರಿಂದ 66,500 ರೂ. ದಂಡವನ್ನು ಸಂಗ್ರಹ ಮಾಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದ 24ರಿಂದ ಜನರಿಂದ 4,800 ರೂ. ದಂಡವನ್ನು ವಸೂಲಿ ಮಾಡಲಾಗಿದೆ.SHARE THIS

Author:

0 التعليقات: