Monday, 22 March 2021

ಕೋರ್ಟ್ ಮೆಟ್ಟಿಲೇರಿದ 6 ಸಚಿವರ ರಾಜೀನಾಮೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯ


ಕೋರ್ಟ್ ಮೆಟ್ಟಿಲೇರಿದ 6 ಸಚಿವರ ರಾಜೀನಾಮೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯ

ಬೆಂಗಳೂರು : ಗೃಹ ಇಲಾಖೆ ಇದೆ, ಪೊಲೀಸರಿದ್ದಾರೆ.. ಅವರಿಗೆ ಮೊದಲು ತಮಗೆ ನ್ಯಾಯಕ್ಕಾಗಿ ಕೋರಬೇಕಿತ್ತು. ಅದನ್ನು ಬಿಟ್ಟು 6 ಸಚಿವರು ಕೋರ್ಟ್ ಮೆಟ್ಟಿಲೇರಿದ್ದಾರೆ. ಇಂತಹ ಕೋರ್ಟ್ ಮೆಟ್ಟಿಲೇರಿಂದ 6 ಸಚಿವರು ಸಚಿವರಾಗಲು ಯೋಗ್ಯರಲ್ಲ. ಅವರು ರಾಜೀನಾಮೆ ನೀಡಬೇಕು. ಈ ಪ್ರಕರಣವನ್ನು ರಾಜ್ಯ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂಬುದಾಗಿ ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ವಿಧಾನಸಭೆಯ ಮಧ್ಯಾಹ್ನದ ಕಲಾಪ ಆರಂಭವಾಗುತ್ತಿದ್ದಂತೆ, ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಕುರಿತಂತೆ ಪ್ರಸ್ತಾಪಿಸಿದಂತ ಅವರು, ಸಿಡಿ ಬಿಡುಗಡೆಗೂ ಮುನ್ನವೇ, ಕಬ್ಬನ್ ಪಾರ್ಕ್ ಠಾಣೆಗೆ ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡುತ್ತಾರೆ. ಆದ್ರೇ ದೂರು ನೀಡಿದ್ರೂ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳೋದಿಲ್ಲ. ಇದಾದ ಬಳಿಕ ಅದು ನಕಲಿ ಹಾಗೇ ಹೀಗೆ ಎನ್ನುವಂತೆ ಸುದ್ದಿಗೋಷ್ಠಿಯಲ್ಲಿ ರಮೇಶ್ ಜಾರಕಿಹೊಳಿ, ಅವರ ಸಹೋದರ ಬಾಲಚಂದ್ರ ಜಾರಕಿಹೊಳಿ ಹೇಳುತ್ತಾರೆ.

ಇದಾದ ಬಳಿಕ, ಈ ಸಂಬಂಧ ಸಿಡಿ ರಿಲೀಸ್ ಮಾಡಿದಂತ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿಯನ್ನು ವಿಚಾರಣೆಗೆ ಪೊಲೀಸರು ಕರೆಯುತ್ತಾರೆ. ವಿಚಾರಣೆಗೆ ವಕೀಲರ ಜೊತೆಗೆ ಹಾಜರಾಗಿ, ಹೇಳಿಕೆ ನೀಡಿದ್ದಾರೆ. ಇದೆಲ್ಲಾ ಆದ್ರೂ ಪೊಲೀಸರು ಮಾತ್ರ ರಮೇಶ್ ಜಾರಕಿಹೊಳಿ ವಿರುದ್ಧ ಎಫ್‌ಐಆರ್ ದಾಖಲಿಸೋದೇ ಇಲ್ಲ. ಇದೆಲ್ಲದ ನಂತ್ರ, ನೈತಿಕತೆಯ ಹೊಣೆ ಹೊತ್ತು ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡುತ್ತಾರೆ.

ಹೀಗೆ ರಾಜೀನಾಮೆ ನೀಡಿದ ಬಳಿಕ, ಹಾಲಿ 6 ಸಚಿವರು ಕೂಡ ಸೆಷನ್ ಕೋರ್ಟ್ ನ ಮೊರೆ ಹೋಗಿ, ತಮ್ಮ ವಿರುದ್ಧದ ಯಾವುದೇ ಸುದ್ದಿಯನ್ನು ಪ್ರಸಾರ ಮಾಡದಂತೆ ಇಂಜೆಕ್ಷನ್ ಆದೇಶ ಪಡೆದಿರುತ್ತಾರೆ. ಕುಂಬಳಕಾಯಿ ಕಳ್ಳ ಅಂದ್ರೆ.. ಹೆಗಲು ಮುಟ್ಟಿಕೊಟ್ಟಂತೆ ನಡೆದುಕೊಂಡಿದ್ದಾರೆ. ಯಾವುದೇ ಭಯವಿಲ್ಲದೇ ಸಚಿವರಾಗಿ ಕಾರ್ಯನಿರ್ವಹಿಸುವುದಾಗಿ ಪ್ರಮಾಣ ವಚನ ಸ್ವೀಕರಿಸಿದಂತ ಇವರು, ನ್ಯಾಯಾಲಯದ ರಕ್ಷಣೆ ಯಾಕ್ ಹೋಗಬೇಕು. ಇಂತವರು ಹೇಗೆ ಜನರಿಗೆ ರಕ್ಷಣೆ ನೀಡುತ್ತಾರೆ. ಅವರಿಗೆ ರಕ್ಷಣೆ ಇಲ್ಲ ಎಂದಾದರೇ ಜನರಿಗೆ ರಕ್ಷಣೆ ಎಲ್ಲಿದೆ.? ಇವರು ಸಚಿವರಾಗಲು ಅರ್ಹರಲ್ಲ. ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.


SHARE THIS

Author:

0 التعليقات: