Tuesday, 9 March 2021

ಹಿಮಾಚಲ ಪ್ರದೇಶ : ಬಸ್ ಕಂದಕಕ್ಕೆ ಉರುಳಿ 6 ಮಂದಿ ಸಾವು, 13 ಮಂದಿಗೆ ಗಾಯ


 ಹಿಮಾಚಲ ಪ್ರದೇಶ : ಬಸ್ ಕಂದಕಕ್ಕೆ ಉರುಳಿ 6 ಮಂದಿ ಸಾವು, 13 ಮಂದಿಗೆ ಗಾಯ

ಚಂಬಾ : ಹಿಮಾಚಲ ಪ್ರದೇಶದ ಚಂಬಾದಲ್ಲಿ ಬುಧವಾರ ಬಸ್ ಕಂದಕಕ್ಕೆ ಉರುಳಿ 6 ಮಂದಿ ಮೃತಪಟ್ಟು, 13 ಮಂದಿ ಗಾಯಗೊಂಡಿದ್ದಾರೆ. ಬಸ್ ಚಂಬಾ ಜಿಲ್ಲೆಯ ತೀಸಾದ ಮಂಗ್ಲಿಯಿಂದ ಚಂಬಾಕ್ಕೆ ಬರುತ್ತಿತ್ತು.

ಕಳೆದ ವರ್ಷ ನವೆಂಬರ್ ನಲ್ಲಿ ಚಂಬಾ ಜಿಲ್ಲೆಯ ರಸ್ತೆ ಮೇಲೆ ಕಾರು ಸ್ಕಿಡ್ ಆಗಿ ಕಂದಕಕ್ಕೆ ಉರುಳಿ ಮೂವರು ಮೃತಪಟ್ಟಿದ್ದರು. ಚಂಬಾ-ಖಜ್ಜಿಯಾರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದ್ದು, ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಮಾರ್ಚ್ ನಲ್ಲೂ ಹಿಮಾಚಲ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಇದೇ ರೀತಿ ಯಲ್ಲಿ ಮುಖಾಮುಖಿಯಾಗಿ ಐವರು ಮೃತಪಟ್ಟು, 35 ಮಂದಿ ಗಾಯಗೊಂಡಿದ್ದರು. ಚಂಬಾ ಜಿಲ್ಲಾ ಕೇಂದ್ರದಿಂದ 20 ಕಿ.ಮೀ ದೂರದಲ್ಲಿರುವ ಚೆಹ್ಲಿ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ.


SHARE THIS

Author:

0 التعليقات: