Tuesday, 23 March 2021

ರಾಜ್ಯದಲ್ಲಿ 5 ತಿಂಗಳ ಬಳಿಕ ದಾಖಲೆಯ ಕೊರೋನಾ ಕೇಸ್ ಪತ್ತೆ : 24 ಗಂಟೆಯಲ್ಲಿ 2,010 ಜನರಿಗೆ ಕೊರೋನಾ, ಐವರು ಸಾವು


ರಾಜ್ಯದಲ್ಲಿ 5 ತಿಂಗಳ ಬಳಿಕ ದಾಖಲೆಯ ಕೊರೋನಾ ಕೇಸ್ ಪತ್ತೆ : 24 ಗಂಟೆಯಲ್ಲಿ 2,010 ಜನರಿಗೆ ಕೊರೋನಾ, ಐವರು ಸಾವು

ಬೆಂಗಳೂರು : ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಪತ್ತೆಯಾಗಿರುವಂತ ಹೊಸ ಕೊರೋನಾ ಪ್ರಕರಣಗಳ ಸಂಖ್ಯೆ 2010 ಆಗಿದೆ. ಇದು 5 ತಿಂಗಳ ಬಳಿಕ ದಾಖಲಾದಂತ ಹೆಚ್ಚು ಕೊರೋನಾ ಪ್ರಕರಣಗಳ ಸಂಖ್ಯೆಯಾಗಿದೆ.

ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಗಳಲ್ಲಿ ಬೆಂಗಳೂರು ನಗರದಲ್ಲಿ 1280 ಜನರು ಸೇರಿದಂತೆ ರಾಜ್ಯಾಧ್ಯಂತ 2010 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 9,73,657ಕ್ಕೆ ಏರಿಕೆಯಾಗಿದೆ ಎಂಬುದಾಗಿ ತಿಳಿಸಿದೆ.

ಇನ್ನು ಇಂದು ಬೆಂಗಳೂರು ನಗರದಲ್ಲಿ 399 ಸೇರಿದಂತೆ ರಾಜ್ಯದಲ್ಲಿ ಸೋಂಕಿತರಾದಂತ 677 ಜನರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಇದುವರೆಗೆ 9,45,594 ಸೋಂಕಿತರು ಗುಣಮುಖರಾಗಿರುವುದಾಗಿ ತಿಳಿಸಿದೆ.

ಇಂದು ಕೊರೋನಾ ಸೋಂಕಿತರಾದಂತ ಬೆಂಗಳೂರಿನ ಮೂವರು, ಹಾಸನದಲ್ಲಿ ಒಬ್ಬರು ಹಾಗೂ ಕಲಬುರ್ಗಿಯಲ್ಲಿ ಒಬ್ಬರು ಸೇರಿದಂತೆ ಐವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇದರಿಂದಾಗಿ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ ರಾಜ್ಯದಲ್ಲಿ 12,449ಕ್ಕೆ ಏರಿಕೆಯಾಗಿದೆ.SHARE THIS

Author:

0 التعليقات: