Friday, 5 March 2021

ಭಾರತದಿಂದ 47 ದೇಶಗಳಿಗೆ ಕೋವಿಡ್ ಲಸಿಕೆ :ವಿಶ್ವ ನಾಯಕರಿಂದ ಪ್ರಧಾನಿಗೆ ಧನ್ಯವಾದ


 ಭಾರತದಿಂದ 47 ದೇಶಗಳಿಗೆ ಕೋವಿಡ್ ಲಸಿಕೆ :ವಿಶ್ವ ನಾಯಕರಿಂದ ಪ್ರಧಾನಿಗೆ ಧನ್ಯವಾದ

ನವದೆಹಲಿ : ಮಹಾಮಾರಿ ಕೊರೊನಾ ವೈರಸ್​ ವಿರುದ್ಧ ಹೋರಾಡಲು ಭಾರತ ಟೊಂಕ ಕಟ್ಟಿ ನಿಂತಿದ್ದು, ಈಗಾಗಲೇ ದೇಶದಲ್ಲಿ ಎರಡನೇ ಹಂತದ ಕೋವಿಡ್​ ವ್ಯಾಕ್ಸಿನ್ ನೀಡುವ ಅಭಿಯಾನ ಆರಂಭಗೊಂಡಿದೆ. ಇದರ ಮಧ್ಯೆ ಭಾರತ ವಿವಿಧ ರಾಷ್ಟ್ರಗಳಿಗೆ ಲಸಿಕೆ ರವಾನೆ ಮಾಡಿ ಮೆಚ್ಚುಗೆಗೆ ಪಾತ್ರವಾಗಿದೆ. ದೇಶದಲ್ಲಿ ಕೋವಿಡ್​ ವ್ಯಾಕ್ಸಿನ್​ ಅಭಿವೃದ್ಧಿಯಾಗಲು ಶುರುವಾದಾಗಿನಿಂದಲೂ ಇಲ್ಲಿಯವರೆಗೆ ಒಟ್ಟು 47 ದೇಶಗಳಿಗೆ ಲಸಿಕೆ ರವಾನೆ ಮಾಡಿದ್ದು, ಅದಕ್ಕಾಗಿ ವಿಶ್ವದ ನಾಯಕರು ನಮೋಗೆ ಧನ್ಯವಾದ ಹೇಳಿದ್ದಾರೆ.

ಇಲ್ಲಿಯವರೆಗೆ 4.64 ಕೋಟಿ ಭಾರತದಲ್ಲಿ ಅಭಿವೃದ್ಧಿಗೊಂಡಿರುವ ಕೋವಿಡ್​-19 ವ್ಯಾಕ್ಸಿನ್​ ಡೋಸ್​​ 47 ದೇಶಗಳಿಗೆ ರವಾನೆಯಾಗಿದೆ. ಇಂದು ಕೂಡ ಕೆನಡಾ,ಲೆಸೊಥೊ, ಹನಾ, ರುವಾಂಡಾ, ಸೆನೆಗಲ್, ಡೆಮಾಕ್ರಟಿಕ್​ ರಿಪಬ್ಲಿಕ್ ಆಫ್​ ಕಾಂಗೋ ಸೇರಿದಂತೆ ಅನೇಕ ದೇಶಗಳಿಗೆ ಲಸಿಕೆ ಕಳುಹಿಸಲಾಗಿದೆ. ಭಾರತ 71.25 ಲಕ್ಷ ಡೋಸ್​ ಉಚಿತವಾಗಿ ಹಾಗೂ 3.93 ಕೋಟಿ ಡೋಸ್​ ಮಾರಾಟ ಮಾಡಿದ್ದು, ಎಲ್ಲ ದೇಶಗಳಿಂದಲೂ ಭಾರತಕ್ಕೆ ಅಭಿನಂದನೆ ಸಲ್ಲಿಕೆ ಮಾಡಿವೆ.

ಭಾರತದ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿರುವ ಅಂಟಿಗುವಾ, ಬಾರ್ಬುಡಾ ಪ್ರಧಾನಿ ಗ್ಯಾಸ್ಟನ್​ ಬ್ರೌನ್​, ಬೇರೆ ಯಾವುದೇ ನಾಯಕರಿಗೆ ಹೋಲಿಕೆ ಮಾಡಿದಾಗ ಪಿಎಂ ಮೋದಿ ಜಾಗತಿಕವಾಗಿ ದಯೆ, ಪರಾನುಭೂತಿಯ ನಾಯಕರಾಗಿದ್ದಾರೆ ಎಂದಿದ್ದು, ಕಳೆದ 100 ವರ್ಷಗಳಲ್ಲಿ ನಾವು ಕಂಡ ಅತ್ಯಂತ ಗಮನಾರ್ಹ ಉಪಕಾರಗಳಲ್ಲಿ ಒಂದಾಗಿದೆ ಎಂದಿದ್ದಾರೆ. ಇತರ ಜತೆಗೆ ಬಾರ್ಬಡೋಸ್​, ಕೆನಡಾ, ಬ್ರೆಜಿಲ್​, ಮೆಕ್ಸಿಕೊ ಮತ್ತು ಅರ್ಜೆಂಟೀನಾ ಭಾರತಕ್ಕೆ ಧನ್ಯವಾದ ಅರ್ಪಿಸಿವೆ.


SHARE THIS

Author:

0 التعليقات: