Monday, 29 March 2021

ʼಮ್ಯಾನ್ಮಾರ್ʼನಲ್ಲಿ ಮಿಲಿಟರಿ ಜುಂಟಾ ಪ್ರತಿಭಟನೆ: ಸಾವಿನ ಸಂಖ್ಯೆ 459ಕ್ಕೆ ಏರಿಕೆ..!


ಮ್ಯಾನ್ಮಾರ್ʼನಲ್ಲಿ ಮಿಲಿಟರಿ ಜುಂಟಾ ಪ್ರತಿಭಟನೆ: ಸಾವಿನ ಸಂಖ್ಯೆ 459ಕ್ಕೆ ಏರಿಕೆ..!

ಮ್ಯಾನ್ಮಾರ್ʼನಲ್ಲಿ ಮಿಲಿಟರಿ ಜುಂಟಾ ಪ್ರತಿಭಟನೆ ಮುಂದುವರಿಸಿದ್ದು, ಮ್ಯಾನ್ಮಾರ್ʼನಾದ್ಯಾಂತ ಕನಿಷ್ಠ 459 ಮಂದಿ ಮೃತಪಟ್ಟಿದ್ದಾರೆ.

ಧಂಗೆ ವಿರೋಧಿ ಪ್ರತಿಭಟನಾಕಾರರ ವಿರುದ್ಧ ಮಿಲಿಟರಿಯು ನಿರಂತರವಾಗಿ ಹಿಂಸಾಚಾರವನ್ನ ಬಳಸೋದ್ರಿಂದ ಮ್ಯಾನ್ಮಾರ್ʼನಲ್ಲಿ ಹಿಂಸಾಚಾರ ತೀವ್ರಗೊಂಡಿದೆ. ಫೆಬ್ರವರಿ 1ರಂದು ನಡೆದ ಹಿಂಸಾಚಾರದ ನಂತರ 459 ಜನರು ಮೃತಪಟ್ಟಿದ್ದಾರೆ' ಎಂದು ಅಸಿಸ್ಟೆನ್ಸ್ ಅಸೋಸಿಯೇಷನೇಷನ್ ಫಾರ್ ಪೊಲಿಟಿಕಲ್ ಖೈದಿಸ್ (AAPP) ವರದಿ ಮಾಡಿದೆ.

ದೇಶದ ಉತ್ತರಭಾಗದ ಕಚಿನ್ ರಾಜ್ಯ ಮತ್ತು ಸಗಾಂಗ್ ಪ್ರಾಂತ್ಯದಲ್ಲಿ ಸೋಮವಾರ ಜನರು ಬೀದಿಗಿಳಿದಿದ್ದು, ದಕ್ಷಿಣದ ದವೆಯಲ್ಲಿ ಜನರು ಮೂರು ಬೆರಳುಗಳ ಸೆಲ್ಯೂಟ್ ಮಾಡಿದ್ದಾರೆ ಎಂದು ವರದಿ ಹೇಳಿದೆ.

ಪೂರ್ವ ರಾಜ್ಯವಾದ ಕಯಿನ್ʼನಲ್ಲಿ ಜನಾಂಗೀಯ ಅಲ್ಪಸಂಖ್ಯಾತ ಗುಂಪಿನಿಂದ ನಿಯಂತ್ರಿಸಲ್ಪಟ್ಟ ಪ್ರದೇಶದಲ್ಲಿ ಮಿಲಿಟರಿ ನಡೆಸಿದ ವೈಮಾನಿಕ ದಾಳಿಯ ನಂತ್ರ ಸುಮಾರು 3,000 ಜನರು ಭಾನುವಾರ ನೆರೆಯ ಥಾಯ್ಲೆಂಡ್ʼಗೆ ಪಲಾಯನ ಮಾಡಿದ್ದರು.

ಶನಿವಾರ ಮ್ಯಾನ್ಮಾರ್ʼನಾದ್ಯಂತ ನಡೆದ ಈ ದಾಳಿ ನಂತ್ರ 114 ನಾಗಾರಿಕರು ಮೃತಪಟ್ಟಿದ್ದಾರೆ. ಮೃತರಲ್ಲಿ 13 ವರ್ಷದ ಬಾಲಕಿ ಮಿಖಿಟಿಲಾ ಪ್ರದೇಶದ ಜನವಸತಿ ಪ್ರದೇಶದಲ್ಲಿ ಗುಂಡಿನ ದಾಳಿ ನಡೆಸಿದ ನಂತರ ಆಕೆಯ ಮನೆಯಲ್ಲಿ ಗುಂಡಿನ ದಾಳಿ ನಡೆದಿದೆ.

ಫೆಬ್ರವರಿ 1ರಂದು ಮ್ಯಾನ್ಮಾರ್ʼನ ಮಿಲಿಟರಿಯು ನಾಗರಿಕ ಸರ್ಕಾರವನ್ನ ಉರುಳಿಸಿ, ಒಂದು ವರ್ಷಕಾಲ ತುರ್ತು ಪರಿಸ್ಥಿತಿ ಘೋಷಿಸಿತು. ಈ ದಂಗೆಯು ಸಾಮೂಹಿಕ ಪ್ರತಿಭಟನೆಗೆ ಪ್ರಚೋದನೆ ನೀಡಿ, ಜುಂಟಾದ ಮಾರಣಾಂತಿಕ ಹಿಂಸಾಚಾರವನ್ನು ಎದುರಿಸಿತು.SHARE THIS

Author:

0 التعليقات: