ಚಿನ್ನದ ಬೆಲೆ ಸತತ 4ನೇ ದಿನ ಇಳಿಕೆ: ಗರಿಷ್ಠ ಪ್ರಮಾಣಕ್ಕಿಂತ 12,000 ರೂಪಾಯಿ ಕಡಿಮೆ
ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಮತ್ತಷ್ಟು ದುರ್ಬಲಗೊಂಡಿದ್ದು, ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಇಂದು ಕುಸಿದಿದೆ. ಎಂಸಿಎಕ್ಸ್ನಲ್ಲಿ ಜೂನ್ ಚಿನ್ನದ ಭವಿಷ್ಯವು 10 ಗ್ರಾಂಗೆ ಶೇಕಡಾ 0.4ರಷ್ಟುಇಳಿಕೆಯಾಗಿ, 44,538 ರೂಪಾಯಿಗೆ ಇಳಿದಿದೆ.
ಇನ್ನು ಬೆಳ್ಳಿ ಬೆಲೆಯು ಶೇಕಡಾ 0.3ರಷ್ಟು ಕುಸಿದು ಪ್ರತಿ ಕೆಜಿಗೆ 63,985 ರೂಪಾಯಿಗೆ ತಲುಪಿದೆ. ಕಳೆದ ವಹಿವಾಟಿನ್ಲಲಿ ಚಿನ್ನವು ಶೇಕಡಾ 8ರಷ್ಟು ಕುಸಿದಿದ್ದರೆ, ಬೆಳ್ಳಿ ಪ್ರತಿ ಕೆಜಿಗೆ ಶೇಕಡಾ 1ರಷ್ಟು ಇಳಿಕೆಯಾಗಿದೆ.
ಜಾಗತಿಕ ಮಾರುಕಟ್ಟೆಗಳಲ್ಲಿ ಚಿನ್ನವು ಶೇಕಡಾ 0.4ರಷ್ಟು ಇಳಿದು ಎರಡು ವಾರಗಳ ಕನಿಷ್ಠ ಮಟ್ಟಕ್ಕೆ ತಲುಪಿದ್ದು, ಔನ್ಸ್ಗೆ 1,704.90 ಡಾಲರ್ಗೆ ತಲುಪಿದೆ. ಅಮೆರಿಕಾ ಅಧ್ಯಕ್ಷ ಜೋ ಬಿಡನ್ ಅವರ ಮೂಲಸೌಕರ್ಯ ಪ್ಯಾಕೇಜ್ ಮತ್ತು ಸಾಲ ವಿತರಣೆಯನ್ನು ಹೆಚ್ಚಿಸಬಹುದೆಂಬ ನಿರೀಕ್ಷೆಯ ಮೇಲೆ ಯುಎಸ್ ಬಾಂಡ್ ಇಳುವರಿ ಹೆಚ್ಚಾಗಿದೆ.
ಏಷ್ಯಾದ ಷೇರು ಮಾರುಕಟ್ಟೆಗಳು ಇಂದು ಸಕಾರಾತ್ಮಕವಾಗಿ ತೆರೆದಿವೆ. ಸರಕು ಸಾಗಣೆ ಹಡಗು ಮುಕ್ತವಾದ ನಂತರ ವಿಶ್ವದ ಪ್ರಮುಖ ಜಲಮಾರ್ಗಗಳಲ್ಲಿ ಒಂದಾದ ಸೂಯೆಜ್ ಕಾಲುವೆಯನ್ನು ಪುನಃ ತೆರೆದಿದೆ.
0 التعليقات: