Friday, 5 March 2021

ಸುಶಾಂತ್‌ ಸಿಂಗ್‌ ಪ್ರಕರಣ: ಚಾರ್ಜ್​ಶೀಟ್​ನಲ್ಲಿ 35 ಮಂದಿಯ ಹೆಸರು ಉಲ್ಲೇಖ

 

ಸುಶಾಂತ್‌ ಸಿಂಗ್‌ ಪ್ರಕರಣ: ಚಾರ್ಜ್​ಶೀಟ್​ನಲ್ಲಿ 35 ಮಂದಿಯ ಹೆಸರು ಉಲ್ಲೇಖ

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಸಾವು ಪ್ರಕರಣದ ಜೊತೆ ಥಳುಕು ಹಾಕಿಕೊಂಡಿದ್ದ ಡ್ರಗ್​ ಪ್ರಕರಣ ಸಂಬಂಧ ಎನ್​ಸಿಬಿ ಚಾರ್ಜ್​ಶೀಟ್​ ಸಲ್ಲಿಸಿದ್ದು ಇದರಲ್ಲಿ 35 ಮಂದಿಯ ಹೆಸರನ್ನ ಉಲ್ಲೇಖಿಸಲಾಗಿದೆ. ಸುಶಾಂತ್​​ ಸಿಂಗ್​ ರಜಪೂತ್​​ರ ಗೆಳತಿಯಾಗಿದ್ದ ರಿಯಾ ಚಕ್ರವರ್ತಿ, ಆಕೆಯ ಸಹೋದರ ಶೋವಿಕ್​ ಚಕ್ರವರ್ತಿ, ರಜಪೂತ್​ ಮಾಜಿ ಮ್ಯಾನೇಜರ್​ ಸ್ಯಾಮುವಲ್​​ ಮಿರಾಂದಾ, ಸಹಾಯಕ ದೀಪೇಶ್​ ಸಾವಂತ್​ ಸೇರಿದಂತೆ ಇನ್ನೂ ಹಲವರ ಹೆಸರು ಚಾರ್ಜ್​ಶೀಟ್​ನಲ್ಲಿದೆ.

ಎಲ್​ಸಿಡಿ ಶೀಟ್ಸ್ ಹಾಗೂ ಮರಿಜುವಾನಾದಂತಹ ಡ್ರಗ್​​ಗಳನ್ನ ಭಾರೀ ಪ್ರಮಾಣದಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದ ಅನುಜ್​ ಕೇಶ್ವಾನಿ ಹೆಸರು ಕೂಡ ಚಾರ್ಜ್​ಶೀಟ್​ನಲ್ಲಿದೆ. ಇದರ ಜೊತೆಯಲ್ಲಿ ಡ್ರಗ್​ ಪೆಡ್ಲರ್​ಗಳಾಗಿರುವ ಇಬ್ಬರು ಕಾಲೇಜು ವಿದ್ಯಾರ್ಥಿಗಳು, ಅಗಿಸಿಲಾಸ್ ಡೆಮೆಟ್ರಿಯಡ್ಸ್ ಸೇರಿದಂತೆ ಇಬ್ಬರು ವಿದೇಶಿಗರ ಹೆಸರು ಚಾರ್ಜ್​ಶೀಟ್​ನಲ್ಲಿದೆ. ಅಗಿಸಿಲಾಸ್ ಡೆಮೆಟ್ರಿಯಡ್ಸ್ ಬಾಲಿವುಡ್​ ನಟ ಅರ್ಜುನ್​ ರಾಮ್​​ಪಾಲ್​ರ ಸ್ನೇಹಿತರಾಗಿದ್ದಾರೆ.

ಕ್ಷಿತಿಜಿ ಪ್ರಸಾದ್​ ಹೆಸರನ್ನೂ ಎನ್​ಸಿಬಿ ಅಧಿಕಾರಿಗಳು ಸೇರಿಸಿದ್ದಾರೆ. ಚಾರ್ಜ್​ಶೀಟ್​ನಲ್ಲಿರುವ 35 ಮಂದಿಯಲ್ಲಿ ಐವರು ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ.

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ಸಾವು ಪ್ರಕರಣದ ತನಿಖೆ ವೇಳೆ ಡ್ರಗ್​ ಮಾಫಿಯಾ ಬೆಳಕಿಗೆ ಬಂದಿತ್ತು. ಈ ಸಂಬಂಧ ಪ್ರಕರಣ ಕೈಗೆತ್ತಿಕೊಂಡಿದ್ದ ಎನ್​ಸಿಬಿ ಸಾಕಷ್ಟು ಬಾಲಿವುಡ್​ ಸೆಲೆಬ್ರಿಟಿಗಳನ್ನ ವಿಚಾರಣೆಗೆ ಒಳಪಡಿಸಿದೆ.


SHARE THIS

Author:

0 التعليقات: