Sunday, 7 March 2021

ಬಾಲಕಿ ಮೇಲೆ ಅತ್ಯಾಚಾರ : ಅಪರಾಧಿಗಳಿಗೆ 30 ವರ್ಷ ಜೈಲು ಶಿಕ್ಷೆ ವಿಧಿಸಿದ ಪೋಕ್ಸೋ ನ್ಯಾಯಾಲಯ


ಬಾಲಕಿ ಮೇಲೆ ಅತ್ಯಾಚಾರ : ಅಪರಾಧಿಗಳಿಗೆ 30 ವರ್ಷ ಜೈಲು ಶಿಕ್ಷೆ ವಿಧಿಸಿದ ಪೋಕ್ಸೋ ನ್ಯಾಯಾಲಯ

ಲಕ್ನೋ : ಈ ವರ್ಷದ ಜನವರಿಯಲ್ಲಿ ಉತ್ತರ ಪ್ರದೇಶದ ಬುಲಂದ್ ಶಹರ್ ನಲ್ಲಿ 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಇಬ್ಬರು ಪುರುಷರಿಗೆ ತಲಾ 30 ವರ್ಷ ಜೈಲು ಶಿಕ್ಷೆ ವಿಧಿಸಿ ವಿಶೇಷ ಪೋಕ್ಸೊ ನ್ಯಾಯಾಲಯ ತೀರ್ಪು ನೀಡಿದೆ.

ಈ ಇಬ್ಬರು ಆರೋಪಿಗಳಾದ ಬೀರೇಶ್ ಮತ್ತು ಗೀತಾಂ ಅವರಿಗೆ ನ್ಯಾಯಾಲಯ ₹50 ಸಾವಿರ ದಂಡ ವಿಧಿಸಿದೆ. ಘಟನೆ ನಡೆದ 52 ದಿನಗಳೊಳಗೆ ಇಬ್ಬರನ್ನೂ ದೋಷಿಗಳೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

13 ವರ್ಷದ ಬಾಲಕಿ ಮೇಲೆ ರಾಮಘಟ್​​ ಪೊಲೀಸ್​ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ಜನವರಿ 11 ರಂದು ಅತ್ಯಾಚಾರ ನಡೆದಿತ್ತು. ಪ್ರಕರಣ ಸಂಬಂಧ ಇಬ್ಬರನ್ನು ಘಟನೆ ನಡೆದ 52 ದಿನಗಳೊಳಗೆ ಬಂಧಿಸಿ ಕೋರ್ಟ್​ಗೆ ಚಾರ್ಜ್​ಶೀಟ್​ ಸಲ್ಲಿಕೆ ಮಾಡಲಾಗಿತ್ತು ಎಂದು ಬುಲಂದ್​ಶಹರ್​ನ ಹಿರಿಯ ಪೊಲೀಸ್​ ವರಿಷ್ಠಾಧಿಕಾರಿ ಸಂತೋಷ್​ ಕುಮಾರ್​ ತಿಳಿಸಿದ್ದಾರೆ. ಪ್ರಕರಣ ಸಂಬಂಧ ಇಬ್ಬರನ್ನು ಘಟನೆ ನಡೆದ 52 ದಿನಗಳೊಳಗೆ ಬಂಧಿಸಿ ಕೋರ್ಟ್​ಗೆ ಚಾರ್ಜ್​ಶೀಟ್​ ಸಲ್ಲಿಕೆ ಮಾಡಲಾಗಿತ್ತು ಎಂದು ಬುಲಂದ್​ಶಹರ್​ನ ಹಿರಿಯ ಪೊಲೀಸ್​ ವರಿಷ್ಠಾಧಿಕಾರಿ ಸಂತೋಷ್​ ಕುಮಾರ್​ ತಿಳಿಸಿದ್ದಾರೆ.



SHARE THIS

Author:

0 التعليقات: