Thursday, 11 March 2021

ಕೊರೋನಾ ಬಳಿಕ ಮೊದಲ ಬಾರಿಗೆ ಪ್ರಧಾನಿ ವಿದೇಶಿ ಪ್ರವಾಸ : ಮಾರ್ಚ್ 26ರಂದು ಬಾಂಗ್ಲಾದೇಶ ಭೇಟಿ


ಕೊರೋನಾ ಬಳಿಕ ಮೊದಲ ಬಾರಿಗೆ ಪ್ರಧಾನಿ ವಿದೇಶಿ ಪ್ರವಾಸ : ಮಾರ್ಚ್ 26ರಂದು ಬಾಂಗ್ಲಾದೇಶ ಭೇಟಿ

ನವದೆಹಲಿ: ಕೊರೋನಾ ಸಂಕಷ್ಟದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದು, ಮಾರ್ಚ್ 26ರಂದು  ನೆರೆಯ ಬಾಂಗ್ಲಾದೇಶಕ್ಕೆ ಭೇಟಿ ನೀಡಲಿದ್ದಾರೆ.

1971ರಲ್ಲಿ ಸ್ವಾತಂತ್ರ್ಯ ಪಡೆದ ಬಾಂಗ್ಲಾದೇಶ ಮಾರ್ಚ್ 26ಕ್ಕೆ 50ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದೆ. ಗೋಲ್ಡನ್ ಜುಬಿಲಿ ಆಚರಣೆಯ ಸಂದರ್ಭದಲ್ಲಿ ಮೋದಿ ಭೇಟಿ ನೀಡಲಿದ್ದಾರೆ.

ಮಾರ್ಚ್ 26, 1971ರಲ್ಲಿ ಬಾಂಗ್ಲಾದೇಶ ಪಾಕಿಸ್ತಾನದಿಂದ ವಿಮೋಚನೆಗೊಂಡಿತ್ತು. ಈ ವಿಮೋಚನೆಯಲ್ಲಿ ಬಾಂಗ್ಲಾದೇಶಕ್ಕೆ ಭಾರತ ನೆರವು ನೀಡಿತ್ತು. ಭಾರತದ ನೆರವಿನಿಂದ ಬಾಂಗ್ಲಾದೇಶ ಸೇನೆ ಮುಂದೆ ಪಾಕಿಸ್ತಾನ ಶರಣಾಗಿತ್ತು.


SHARE THIS

Author:

0 التعليقات: