Monday, 8 March 2021

ದೇಶದಾದ್ಯಂತ 24 ಗಂಟೆಗಳಲ್ಲಿ 15388 ಮಂದಿಗೆ ಕೊರೊನಾ..!


 ದೇಶದಾದ್ಯಂತ 24 ಗಂಟೆಗಳಲ್ಲಿ 15388 ಮಂದಿಗೆ ಕೊರೊನಾ..!

ನವದೆಹಲಿ,ಮಾ.9-ಕಳೆದ 24 ಗಂಟೆಗಳಲ್ಲಿ ಮತ್ತೆ 15388 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 1,12,44,786ಕ್ಕೆ ಏರಿಕೆಯಾಗಿದೆ.77 ಮಂದಿ ಸೋಂಕಿಗೆ ಬಲಿಯಾಗುವುದರೊಂದಿಗೆ ಕೊರೊನಾಗೆ ಬಲಿಯಾದವರ ಸಂಖ್ಯೆ 1,57,930ಕ್ಕೆ ಹೆಚ್ಚಳಗೊಂಡಿದೆ.

ಕಳೆದ ಆರು ತಿಂಗಳಿನಿಂದ ಕೊರೊನಾ ಸೋಂಕು ಗಣನಿಯವಾಗಿ ಇಳಿಮುಖವಾಗುತ್ತಿದೆ. ಇದರ ಜತೆಗೆ ಸಾವಿನ ಪ್ರಮಾಣವೂ ಶೇ.1.40ಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಅಂಕಿ ಅಂಶದಲ್ಲಿ ಉಲ್ಲೇಖವಾಗಿದೆ. ಎರಡನೆ ಹಂತದ ಕೊರೊನಾ ಭೀತಿ ಎದುರಾಗಿರುವ ಮಹಾರಾಷ್ಟ್ರದಲ್ಲಿ 22, ಕೇರಳದಲ್ಲಿ 12 ಹಾಗೂ ಪಂಜಾಬಿನಲ್ಲಿ 14 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ನಿನ್ನೆ ಒಂದೇ ದಿನ ದೇಶದಾದ್ಯಂತ 7,48,525 ಮಂದಿಯ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದೆ. ಇದರೊಂದಿಗೆ ಇದುವರೆಗೂ 22,27,16,796 ಮಂದಿಯ ರೋಗ ತಪಾಸಣೆ ನಡೆಸಲಾಗಿದೆ.


SHARE THIS

Author:

0 التعليقات: