Saturday, 20 March 2021

ಮಾಲಿಕ್ ದೀನಾರ್ ಕಲ್ಚರಲ್ ಫೋರಂ, ತ್ವಾಹಿರುಲ್ ಅಹ್ದಲ್ ಸ್ಮಾರಕ ಅವಾರ್ಡ್ ಬಿ.ಎಸ್ ಅಬ್ದುಲ್ಲಾ ಕುಞ್ಞಿ ಫೈಝಿಗೆ; 23 ರಂದು ಗ್ರ್ಯಾಂಡ್ ಮುಫ್ತಿ ನೀಡುವರು


 ಮಾಲಿಕ್ ದೀನಾರ್ ಕಲ್ಚರಲ್ ಫೋರಂ, ತ್ವಾಹಿರುಲ್ ಅಹ್ದಲ್ ಸ್ಮಾರಕ ಅವಾರ್ಡ್ ಬಿ.ಎಸ್ ಅಬ್ದುಲ್ಲಾ ಕುಞ್ಞಿ ಫೈಝಿಗೆ; 23 ರಂದು ಗ್ರ್ಯಾಂಡ್ ಮುಫ್ತಿ ನೀಡುವರು

ಕಾಸರಗೋಡು :ಮಾಲಿಕ್ ದೀನಾರ್ ಕಲ್ಚರಲ್ ಫೋರಂ ಎರಡನೇ ತ್ವಾಹಿರುಲ್ ಅಹ್ದಲ್ ಸ್ಮಾರಕ ಅವಾರ್ಡ್  ಮುಹಿಮ್ಮಾತ್ ಪ್ರಧಾನ ಕಾರ್ಯದರ್ಶಿ ಬಿ.ಎಸ್ ಅಬ್ದುಲ್ಲಾ ಕುಞ್ಞಿ ಫೈಝಿ ರವರಿಗೆ 23 ರಂದು ಕುಂಬ್ಳೆ ಮುಹಿಮ್ಮಾತಿನಲ್ಲಿ ನಡೆಯುವ ತ್ವಾಹಿರುಲ್ ಅಹ್ದಲ್ ತಂಙಳ್ ಉರೂಸ್ ಮುಬಾರಕ್ ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ರವರು ಬಿ.ಎಸ್ ಅಬ್ದುಲ್ಲಾ ಕುಞ್ಞಿ ಫೈಝಿ ಅವರಿಗೆ ನೀಡಲಿದ್ದಾರೆ.  

ಜಿಸಿಸಿ ರಾಷ್ಟ್ರಗಳ  ಕಾಸರಗೋಡು ಜಿಲ್ಲೆಯವರ ಗ್ರೂಪ್ ಆಗಿದೆ  ಮಾಲಿಕ್ ದೀನಾರ್ ಕಲ್ಚರಲ್ ಫೋರಂ.2019 ರಲ್ಲಿ ರೂಪಿಸಲಾದ ಫೋರಂನ ಅಡಿಯಲ್ಲಿ ಹಲವಾರು ಕಾರುಣ್ಯಗಳು ನಡೆಯುತ್ತಿದೆ.  ಪ್ರತೀ ವರ್ಷವೂ ಜಿಲ್ಲೆಯ ಸುನ್ನಿ ಸಂಘಟನಾ  ಸಂಸ್ಥೆಗಳ ಮಜಲುಗಳಲ್ಲಿ ಉತ್ತಮ ಸೇವೆಗಳನ್ನು ಅರ್ಪಿಸಿದ ಪ್ರಮುಖ ವ್ಯಕ್ತಿಗಳಿಗೆ   ತ್ವಾಹಿರುಲ್ ಅಹ್ದಲ್ ಪ್ರಶಸ್ತಿ ನೀಡಲಾಗುತ್ತದೆ.  ಎರಡನೇ ವರ್ಷದ 2021ರ ಪ್ರಶಸ್ತಿಗೆ ಬಿ.ಎಸ್ ಅಬ್ದುಲ್ಲಾ ಕುಞ್ಞಿ ಫೈಝಿ ಯವರನ್ನು ಆಯ್ಕೆ ಮಾಡಲಾಗಿದೆ. 

ಎಸ್.ಎಸ್.ಎಫ್ ಸ್ಥಾಪಕ ನಾಯಕರಾದ ಬಿ.ಎಸ್ ಅಬ್ದುಲ್ಲಾ ಕುಞ್ಞಿ ಫೈಝಿ  ಎಸ್ಸೆಸ್ಸೆಫ್ ಜಿಲ್ಲಾ, ತಾಲೂಕು ಘಟಕಗಳಲ್ಲಿ ವಿವಿಧ ಸ್ಥಾನಗಳನ್ನು ಅಲಂಕರಿಸಿದ್ದರು. ದೀರ್ಘ ಕಾಲ ರಾಜ್ಯ ಪದಾಧಿಕಾರಿಯಾಗಿದ್ದರು. ಎಸ್.ವೈ.ಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಅಧ್ಯಕ್ಷರು, ರಾಜ್ಯ ಉಪಾಧ್ಯಕ್ಷ ಪದವಿಗಳನ್ನು ವಹಿಸಿದ್ದರು. ಈಗ ಕೇರಳ ಮುಸ್ಲಿಂ ಜಮಾಅತ್ ರಾಜ್ಯ ನಿರ್ವಾಹಕ ಸಮಿತಿ ಸದಸ್ಯರಾಗಿದ್ದಾರೆ. ಸುನ್ನಿ ವಿದ್ಯಾಭ್ಯಾಸ ಬೋರ್ಡ್ ಸಮಿತಿ ಸದಸ್ಯರು, ಮುಹಿಮ್ಮಾತ್ ಪ್ರಧಾನ ಕಾರ್ಯದರ್ಶಿ ಸ್ಥಾನ ಅಲ್ಲದೆ ಕಾಸರಗೋಡು ಜಾಮಿಅ ಸಅದಿಯ್ಯಾ  ಸೆಕ್ರೆಟರಿಯೇಟ್ ಸದಸ್ಯರು, ಮುಟ್ಟಂ ಮಖ್ದೂಮಿಯಾ, ಬದಿಯಡ್ಕ ದಾರುಲ್ ಇಹ್ಸಾನ್ ಮುಂತಾದ ಸಂಸ್ಥೆಗಳ ಉಪಾಧ್ಯಕ್ಷ ಪದವಿಗಳನ್ನು ವಹಿಸುತ್ತಿದ್ದಾರೆ.


SHARE THIS

Author:

0 التعليقات: