Monday, 8 March 2021

ಶವವಾಗಿ ಪತ್ತೆಯಾದ ಮಾಜಿ ಶಾಸಕರ 2 ಮೊಮ್ಮಕ್ಕಳು


ಶವವಾಗಿ ಪತ್ತೆಯಾದ ಮಾಜಿ ಶಾಸಕರ 2 ಮೊಮ್ಮಕ್ಕಳು 

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಮಾಜಿ ಶಾಸಕರ ನಾಪತ್ತೆಯಾದ ಎರಡು ಮೊಮ್ಮಕ್ಕಳು ಸಿರವಾರ ತಾಲೂಕಿನ ಬಲ್ಲಟಗಿ ಗ್ರಾಮದಲ್ಲಿ ಶವವಾಗಿ ಪತ್ತೆಯಾದ ಘಟನೆ ಸೋಮವಾರ ನಡೆದಿದೆ.

ಮಾಜಿ ಶಾಸಕ ಹಂಪಯ್ಯ ನಾಯಕ ಅವರ ಇಬ್ಬರು ಮೊಮ್ಮಕ್ಕಳು ವರುಣ್ (9)ಮತ್ತು ಸಣ್ಣಯ್ಯ (5)ಭಾನುವಾರ ಮಧ್ಯಾಹ್ನ ಆಟವಾಡಲು ತೆರಳಿದವರು ನಾಪತ್ತೆಯಾಗಿದ್ದರು. ಇಂದು ಸಿರವಾರ ತಾಲೂಕಿನ ಬಲ್ಲಟಗಿ ಗ್ರಾಮದ ಹಳ್ಳದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ನಿನ್ನೆಯಿಂದ ಸಿರವಾರ ಮತ್ತು ಕವಿತಾಳ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರೂ ಯಾವುದೇ ಸುಳಿವು ಲಭ್ಯವಾಗಿರಲಿಲ್ಲ . ಇವತ್ತು ಎರಡು ಮಕ್ಕಳು ಹಳ್ಳದಲ್ಲಿ ಶವವಾಗಿ ಪತ್ತೆಯಾಗಿದ್ದಾರೆSHARE THIS

Author:

0 التعليقات: