Wednesday, 3 March 2021

ಕೋವಿಡ್‌-19: ದೇಶದಲ್ಲಿ 1.73 ಲಕ್ಷ ಪ್ರಕರಣಗಳು ಸಕ್ರಿಯ


 ಕೋವಿಡ್‌-19: ದೇಶದಲ್ಲಿ 1.73 ಲಕ್ಷ ಪ್ರಕರಣಗಳು ಸಕ್ರಿಯ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 17,407 ಕೋವಿಡ್‌-19 ಪ್ರಕರಣಗಳು ದೃಢಪಟ್ಟಿದ್ದು, 89 ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 1,11,56,923ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 1,57,435ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ತಿಳಿಸಿದೆ.

ಸಚಿವಾಲಯದ ಮಾಹಿತಿ ಪ್ರಕಾರ ಬುಧವಾರ ಗುಣಮುಖರಾದ 14,031 ಸೋಂಕಿತರೂ ಸೇರಿದಂತೆ ಈ ವರೆಗೆ ಒಟ್ಟು 1,08,26,075 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಹೀಗಾಗಿ ಗುಣಮುಖರಾದವರ ಪ್ರಮಾಣ ಶೇ. 97.03 ರಷ್ಟಾಗಿದೆ.

ದೇಶದಲ್ಲಿ ಇನ್ನೂ 1,73,413 ಸಕ್ರಿಯ ಪ್ರಕರಣಗಳು ಇವೆ. ಕೇರಳ (46,288) ಮತ್ತು ಮಹಾರಾಷ್ಟ್ರದಲ್ಲಿ (83,556) ಮಾತ್ರವೇ ಹತ್ತು ಸಾವಿರಕ್ಕಿಂತ ಹೆಚ್ಚು ಪ್ರಕರಣಗಳಿದ್ದು, ಈ ಎರಡು ರಾಜ್ಯಗಳಲ್ಲಿಯೇ ಅರ್ಧಕ್ಕಿಂತಲೂ ಹೆಚ್ಚು ಪ್ರಕರಣಗಳು ಇವೆ ಎಂಬುದು ಗಮನಿಸಬೇಕಾದ ವಿಚಾರ. ಸಕ್ರಿಯ ಪ್ರಕರಣಗಳ ಪಟ್ಟಿಯಲ್ಲಿ ಕರ್ನಾಟಕ (6,076) ಮೂರನೇ ಸ್ಥಾನದಲ್ಲಿದೆ.

ಈವರೆಗೆ ಒಟ್ಟು 1,66,16,048 ಜನರಿಗೆ ಕೋವಿಡ್ ಲಸಿಕೆ ಹಾಕಲಾಗಿದೆ. ಬುಧವಾರ ಒಂದೇದಿನ 9,94,452 ಮಂದಿಗೆ ಲಸಿಕೆ ವಿತರಿಸಲಾಗಿದೆ.


SHARE THIS

Author:

0 التعليقات: