Monday, 1 March 2021

ಕೇರಳದಲ್ಲಿ ಕೇಸರಿ ಅಲೆ ಆರಂಭ! ಇಬ್ಬರು ಮಾಜಿ ನ್ಯಾಯಮೂರ್ತಿಗಳು ಸೇರಿ 18 ಮಂದಿ ಬಿಜೆಪಿ ಸೇರ್ಪಡೆ


 ಕೇರಳದಲ್ಲಿ ಕೇಸರಿ ಅಲೆ ಆರಂಭ! ಇಬ್ಬರು ಮಾಜಿ ನ್ಯಾಯಮೂರ್ತಿಗಳು ಸೇರಿ 18 ಮಂದಿ ಬಿಜೆಪಿ ಸೇರ್ಪಡೆ

ತಿರುವನಂತಪುರಂ: ಕಮ್ಯುನಿಷ್ಟರ ಪಕ್ಷದ ಆಡಳಿತವಿರುವ ಕೇರಳದಲ್ಲಿ ಇದೀಗ ಬಿಜೆಪಿ ಅಲೆ ಆರಂಭವಾಗಿದೆ. ರಾಜ್ಯದಲ್ಲಿ ಪ್ರತಿ ವಾರ ಒಂದಿಷ್ಟು ಮಂದಿ ಎಡ ಪಂಥದಿಂದ ಬಲ ಪಂಥಕ್ಕೆ ವಾಲಿ, ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ಇದೀಗ ಕೇರಳ ಹೈ ಕೋರ್ಟ್​ನ ಇಬ್ಬರು ಮಾಜಿ ನ್ಯಾಯಮೂರ್ತಿಗಳು ಸೇರಿ ಒಟ್ಟು 18 ಮಂದಿ ಬಿಜೆಪಿ ಸೇರಿದ್ದಾರೆ.

ಎರ್ನಾಕುಲಂನ ತ್ರಿಪುಣಿತುರಾದಲ್ಲಿ ಭಾನುವಾರ ಬಿಜೆಪಿ 'ವಿಜಯ ಯಾತ್ರೆ' ನಡೆದಿದೆ. ಈ ಸಮಯದಲ್ಲಿ ಒಟ್ಟು 18 ಮಂದಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಅದರಲ್ಲಿ ಕೇರಳ ಹೈ ಕೋರ್ಟ್​ನ ಮಾಜಿ ನ್ಯಾಯಮೂರ್ತಿಗಳಾದ ಪಿ.ಎನ್.ರವೀಂದ್ರನ್ ಮತ್ತು ವಿ.ಸೀತಂಬರೇಶ್ ಕೂಡ ಸೇರಿದ್ದಾರೆ. ಸೀತಾಂಬರೇಶ್​ ಅವರು ದೆಹಲಿಯಲ್ಲಿದ್ದು, ಅಲ್ಲಿಂದಲೇ ವಿಡಿಯೋ ಕಾಲ್​ ಮುಖಾಂತರ ಬಿಜೆಪಿ ಸೇರಿಕೊಂಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಕ್ಟೋರಿಯಾ ಕಾಲೇಜಿನ ಪಾಲಕ್ಕಾಡ್ನಲ್ಲಿ ಓದುತ್ತಿದ್ದಾಗ ಅಖಿಲ್ ಭಾರತೀಯ ವಿದ್ಯಾ ಪರಿಷತ್ (ಎಬಿವಿಪಿ) ಕಾರ್ಯಕರ್ತರಾಗಿದ್ದ ಅನುಭವವನ್ನು ಹಂಚಿಕೊಂಡರು. ಈ ಇಬ್ಬರು ಮಾಜಿ ನ್ಯಾಯಮೂರ್ತಿಗಳು ಈ ಹಿಂದೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ ಅವರಿಗೆ ಲವ್​ ಜಿಹಾದ್​ ಕಾನೂನನ್ನು ಬೆಂಬಲಿಸಿ ಪತ್ರ ಬರೆದಿದ್ದರು.

ಈ ಇಬ್ಬರು ಗಣ್ಯರ ಜತೆಗೆ ಮಾಜಿ ಡಿಜಿಪಿ ವೇಣುಗೋಪಾಲ್ ನಾಯರ್, ಅಡ್ಮಿರಲ್ ಬಿಆರ್ ಮೆನನ್ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್) ನ ಮಾಜಿ ಜನರಲ್ ಮ್ಯಾನೇಜರ್ ಸೋಮಚುದನ್ ಅವರೂ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.


SHARE THIS

Author:

0 التعليقات: