ನಾಗ್ಪುರದಲ್ಲಿ ಮಾ.15ರಿಂದ ಒಂದು ವಾರ ಲಾಕ್ ಡೌನ್
ಮುಂಬೈ: ಕೊರೋನ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ನಾಗ್ಪುರ ನಗರದಲ್ಲಿ ಮಾರ್ಚ್ 15ರಿಂದ 21ರ ತನಕ ಲಾಕ್ಡೌನ್ ವಿಧಿಸಲು ನಿರ್ಧರಿಸಲಾಗಿದೆ.
ಅವಶ್ಯಕ ಸೇವೆಗಳಾದ ತರಕಾರಿ, ಹಣ್ಣುಗಳ ಅಂಗಡಿಗಳು ಹಾಗೂ ಹಾಲಿನ ಬೂತ್ ಗಳು ತೆರೆದಿರುತ್ತವೆ.
ಸುಮಾರು ಒಂದು ತಿಂಗಳಿನಿಂದ ಮಹಾರಾಷ್ಟ್ರದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದ ಕಾರಣ ರಾಜ್ಯದ ಇತರ ಭಾಗಗಳಲಿ ಲಾಕ್ ಡೌನ್ ವಿಧಿಸಲಾಗುವುದು ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಇತ್ತೀಚೆಗೆ ಸುಳಿವು ನೀಡಿದ್ದರು.
ಮುಂದಿನ ದಿನಗಳಲ್ಲಿ ಕೆಲವು ಸ್ಥಳಗಳಲ್ಲಿ ಲಾಕ್ ಡೌನ್ ಹೇರುವುದು ಅನಿವಾರ್ಯವಾಗಲಿದೆ. ಮುಂದಿನ ಕೆಲವೇ ದಿನಗಳಲ್ಲಿ ಈ ಕುರಿತು ನಿರ್ಧರಿಸುತ್ತೇವೆ ಎಂದು ಕೊರೋನ ಲಸಿಕೆಯ ಮೊದಲ ಡೋಸ್ ಪಡೆದ ಬಳಿಕ ಠಾಕ್ರೆ ಹೇಳಿದ್ದರು.
ನಾಗ್ಪುರ ಪೊಲೀಸ್ ಕಮಿಷನರ್ ವ್ಯಾಪ್ತಿಯಡಿ ಬರುವ ಪ್ರದೇಶದಲ್ಲಿ ಲಾಕ್ ಡೌನ್ ವಿಧಿಸಲಾಗುವುದು.
ಮಹಾರಾಷ್ಟ್ರದಲ್ಲಿ ಪ್ರತಿದಿನ 13,659 ಕೋವಿಡ್-19 ಪ್ರಕರಣಗಳು ವರದಿಯಾಗುತ್ತಿದ್ದು, ದೇಶದ ದೈನಂದಿನ ನೂತನ ಪ್ರಕರಣಗಳ ಶೇ.60ರಷ್ಟು ಪ್ರಕರಣ ಈ ರಾಜ್ಯದಲ್ಲೇ ವರದಿಯಾಗಿದೆ. ದೇಶದಲ್ಲಿ ಅತ್ಯಂತ ಹೆಚ್ಚು ಕೊರೋನ ಕೇಸ್ ಇರುವ ರಾಜ್ಯ ಮಹಾರಾಷ್ಟ್ರ.
0 التعليقات: