Monday, 15 March 2021

ಏಪ್ರಿಲ್ 1ರಿಂದ ಕುಂಭ ಮೇಳ: ಹರಿದ್ವಾರದಲ್ಲಿ ಕೋವಿಡ್-19 ಶಿಷ್ಠಾಚಾರ ಪರಾಮರ್ಶೆಗೆ ಕೇಂದ್ರ ತಂಡ

 

ಏಪ್ರಿಲ್ 1ರಿಂದ ಕುಂಭ ಮೇಳ: ಹರಿದ್ವಾರದಲ್ಲಿ ಕೋವಿಡ್-19 ಶಿಷ್ಠಾಚಾರ ಪರಾಮರ್ಶೆಗೆ ಕೇಂದ್ರ ತಂಡ

ನವದೆಹಲಿ: ಏಪ್ರಿಲ್ 1ರಂದು ಆರಂಭವಾಗುವ ಕುಂಭ ಮೇಳದಲ್ಲಿ ಮಾಡಿರುವ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಮತ್ತು ವೈದ್ಯಕೀಯ ನೆರವಿನ ಬಗ್ಗೆ ಪರಾಮರ್ಶೆ ನಡೆಸಲು ಉತ್ತರಾಖಂಡದ ಹರಿದ್ವಾರದಲ್ಲಿ ರೋಗ ನಿಯಂತ್ರಣದ ರಾಷ್ಟ್ರೀಯ ಕೇಂದ್ರ ನಿರ್ದೇಶಕ ಡಾ ಎಸ್ ಕೆ ಸಿಂಗ್ ನೇತೃತ್ವದಲ್ಲಿ ಉನ್ನತ ಮಟ್ಟದ ಕೇಂದ್ರ ಸಮಿತಿಯನ್ನು ನೇಮಕ ಮಾಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ತಂಡ ಹರಿದ್ವಾರಕ್ಕೆ ಇಂದು ಹೊರಡಲಿದೆ. ಕುಂಭ ಮೇಳ ಸಂದರ್ಭದಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿರುವ ಕೋವಿಡ್ ಶಿಷ್ಠಾಚಾರಗಳನ್ನು ಸರಿಯಾಗಿ ಪಾಲಿಸಲಾಗುತ್ತಿದೆಯೇ ಎಂದು ತಪಾಸಣೆ ಮಾಡುವತ್ತ ತಂಡ ಗಮನ ಹರಿಸಲಿದೆ.

ಕಳೆದ ತಿಂಗಳು ತನ್ನ ಭೇಟಿಯ ಸಮಯದಲ್ಲಿ ರಾಜ್ಯಕ್ಕೆ ನೀಡಿದ ಕ್ಷೇತ್ರ ಮಟ್ಟದ ಶಿಫಾರಸುಗಳ ಅನುಷ್ಠಾನವನ್ನೂ ತಂಡವು ಪರಿಶೀಲಿಸುತ್ತದೆ.


SHARE THIS

Author:

0 التعليقات: