Wednesday, 31 March 2021

 ಬೆಳ್ತಂಗಡಿ: ದನ ಸಾಗಾಟದ ಆರೋಪ ಹೊರಿಸಿ ಇಬ್ಬರಿಗೆ ಸಂಘ ಪರಿವಾರ ಕಾರ್ಯಕರ್ತರಿಂದ ಮಾರಣಾಂತಿಕ ಹಲ್ಲೆ

ಬೆಳ್ತಂಗಡಿ: ದನ ಸಾಗಾಟದ ಆರೋಪ ಹೊರಿಸಿ ಇಬ್ಬರಿಗೆ ಸಂಘ ಪರಿವಾರ ಕಾರ್ಯಕರ್ತರಿಂದ ಮಾರಣಾಂತಿಕ ಹಲ್ಲೆ

 

ಬೆಳ್ತಂಗಡಿ: ದನ ಸಾಗಾಟದ ಆರೋಪ ಹೊರಿಸಿ ಇಬ್ಬರಿಗೆ ಸಂಘ ಪರಿವಾರ ಕಾರ್ಯಕರ್ತರಿಂದ ಮಾರಣಾಂತಿಕ ಹಲ್ಲೆ

ಬೆಳ್ತಂಗಡಿ: ದನ ಸಾಗಾಟದ ಆರೋಪ ಹೊರಿಸಿ ಇಬ್ಬರ ಮೇಲೆ ಸಂಘ ಪರಿವಾರದ ಕಾರ್ಯಕರ್ತರು ಸೇರಿದಂತೆ ಸುಮಾರು 12 ಮಂದಿಯ ತಂಡವೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಎಂಬಲ್ಲಿ ಬುಧವಾರ ರಾತ್ರಿ 11 ಗಂಟೆಗೆ ನಡೆದಿರುವ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶರೀಫ್ ಮತ್ತು ಹಕೀಂ ಹಲ್ಲೆಗೊಳಗಾದವರು. ಗಾಯಾಳುಗಳನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ವಿವರ: ಬೆಳ್ತಂಗಡಿ ತಾಲೂಕಿನ ಕುಪ್ಪೆಟ್ಟಿಯ ಪಿಕಪ್ ವಾಹನ ಹೊಂದಿರುವ ಶರೀಫ್ ಬುಧವಾರ ಸಂಜೆ ಬೆಳ್ತಂಗಡಿ ಸಂತೆಕಟ್ಟೆಯಲ್ಲಿ  ಕೆಲಸ ಮಾಡಿಸಲು ಪಿಕಪ್  ಮಾಡಿ ಬಂದಿದ್ದು, ಜೊತೆಗೆ ಹಕೀಂರನ್ನು ಕರೆದುಕೊಂಡು ಬಂದಿದ್ದರೆನ್ನಲಾಗಿದೆ. ಆದರೆ ಕೆಲಸ  ಆಗದ ಕಾರಣ ಶರೀಫ್ ಸವಣಾಲಿನಲ್ಲಿರುವ ತನ್ನ ಸಂಬಂಧಿಕರ ಮನೆಗೆ  ಹೋಗಿ ಊಟ ಮಾಡಿ ರಾತ್ರಿ 11 ಗಂಟೆ ಸುಮಾರಿಗೆ ವಾಪಸ್ ಬರುತ್ತಿದ್ದ ವೇಳೆ ಈ ಹಲ್ಲೆ ನಡೆದಿದೆ. ಇವರ ಪಿಕಪ್ ಅನ್ನು ಸವಣಾಲಿನಿಂದ ಕೆಲ ವ್ಯಕ್ತಿಗಳು ಬೈಕ್, ಕಾರುಗಳಲ್ಲಿ ಬೆನ್ನಟ್ಟಿದ್ದಾರೆ ಮತ್ತು ಮೇಲಂತಬೆಟ್ಟು ತಲುಪುತ್ತಿದ್ದಂತೆ  ಬೈಕ್ ನಲ್ಲಿ ಬಂದು ಪಿಕಪ್ ಅನ್ನು ಅಡ್ಡಗಟ್ಟಿದ್ದಾರೆ. ಈ ವೇಳೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು “ನೀವು ದನ ಕಳ್ಳರು, ನಮ್ಮ ಊರಿನಿಂದ ದನ ಕಳ್ಳತನ ಮಾಡಲು ಬಂದಿದ್ದಿರಿ” ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಶರೀಫ್ ಹಾಗೂ ಹಕೀಂರನ್ನು ಪಿಕಪ್ ನಿಂದ ಹೊರಗೆಳೆದು ರಾಡ್, ದೊಣ್ಣೆಗಳಿಂದ ಮನಸ್ಸೋ ಇಚ್ಛೆ ಥಳಿಸಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ದುಷ್ಕರ್ಮಿಗಳ ದಾಳಿಯಿಂದ ಶರೀಫ್ ಅವರ ಒಂದು ಕಣ್ಣಿಗೆ, ಹಣೆಗೆ ಗಾಯವಾಗಿದೆ. ಉಳಿದಂತೆ ಇಬ್ಬರ ಬೆನ್ನು ಸೇರಿದಂತೆ ದೇಹದೆಲ್ಲೆಡೆ ಬಾಸುಂಡೆ ಬಂದಿವೆ. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಗುಂಪನ್ನು ಚದುರಿಸಿ ಗಾಯಗೊಂಡ ಇಬ್ಬರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ನಾಲ್ವರ ಬಂಧನ, ಕೆಲವರು ವಶಕ್ಕೆ: ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗಾಗಲೇ ನಾಲ್ವರನ್ನು ಬಂಧಿಸಿರುವ ಪೊಲೀಸರು ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸೂಪರ್ ಸ್ಟಾರ್ ನಟ ರಜನಿಕಾಂತ್ ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

ಸೂಪರ್ ಸ್ಟಾರ್ ನಟ ರಜನಿಕಾಂತ್ ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ


 ಸೂಪರ್ ಸ್ಟಾರ್ ನಟ ರಜನಿಕಾಂತ್ ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ 

ಹೊಸದಿಲ್ಲಿ: ಸೂಪರ್ ಸ್ಟಾರ್ ಖ್ಯಾತಿಯ ನಟ ರಜನಿಕಾಂತ್ ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕೇಂದ್ರ ಮಾಹಿತಿ ಹಾಗೂ ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಗುರುವಾರ ಬೆಳಗ್ಗೆ ಘೋಷಿಸಿದ್ದಾರೆ ಎಂದು ಎಎನ್ ಐ ವರದಿ ಮಾಡಿದೆ.

ಭಾರತೀಯ ಸಿನೆಮಾ ಇತಿಹಾಸದ ಓರ್ವ ಶ್ರೇಷ್ಟ ನಟ ರಜನಿಕಾಂತ್‍ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ-2019ನ್ನು ಘೋಷಿಸಲು ನನಗೆ ಸಂತೋಷವಾಗುತ್ತಿದೆ, ನಟ, ನಿರ್ಮಾಪಕ ಹಾಗೂ ಚಿತ್ರಕಥೆಗಾರರಾಗಿ ಅವರ ಕೊಡುಗೆ ಮಹತ್ವದ್ದಾಗಿದೆ ಎಂದು ಜಾವಡೇಕರ್ ಟ್ವೀಟಿಸಿದ್ದಾರೆ. 

70ರ ವಯಸ್ಸಿನ ದಕ್ಷಿಣ ಭಾರತದ ಖ್ಯಾತ ನಟ ರಜನಿಕಾಂತ್ ಕಳೆದ ವರ್ಷದ ಡಿಸೆಂಬರ್ ನಲ್ಲಿ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ತನ್ನ ಯೋಜನೆಯನ್ನು ಕೈಬಿಟ್ಟಿದ್ದರು.

ಪ್ರತಿಷ್ಠಿತ ಪ್ರಶಸ್ತಿಗಾಗಿ ಈ ವರ್ಷದ ತೀರ್ಪುಗಾರರಾಗಿ ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ, ನಿರ್ದೇಶಕ-ನಿರ್ಮಾಪಕ ಸುಭಾಷ್ ಘೈ, ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್, ಸಂಗೀತ ಸಂಯೋಜಕ ಹಾಗೂ ಗಾಯಕ ಶಂಕರ್ ಮಹಾದೇವನ್ ಹಾಗೂ ಬಿಸ್ವಾಜೀತ್ ಚಟರ್ಜಿ ಅವರಿದ್ದರು.

ರಜನಿಕಾಂತ್ ಗೆ ಈ ಹಿಂದೆ ಪದ್ಮಭೂಷಣ ಹಾಗೂ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. 

ರಜನಿಕಾಂತ್ 1950ರ ಡಿಸೆಂಬರ್ 12ರಂದು ಕರ್ನಾಟಕದ ಮರಾಠಾ ಕುಟುಂಬದಲ್ಲಿ ಜನಿಸಿದ್ದರು. ಬಸ್ ಕಂಡಕ್ಟರ್ ಆಗಿದ್ದ  ರಜನಿ ಭಾರತದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ಚಿತ್ರ ತಾರೆಯರಲ್ಲಿ ಒಬ್ಬರಾಗಿದ್ದಾರೆ.

 ಕಲಬುರಗಿಯಲ್ಲಿ ಬುಧವಾರದಂದು ಗರಿಷ್ಠ ತಾಪಮಾನ ದಾಖಲು

ಕಲಬುರಗಿಯಲ್ಲಿ ಬುಧವಾರದಂದು ಗರಿಷ್ಠ ತಾಪಮಾನ ದಾಖಲು


ಕಲಬುರಗಿಯಲ್ಲಿ ಬುಧವಾರದಂದು ಗರಿಷ್ಠ ತಾಪಮಾನ ದಾಖಲು

ಬಿಸಿಲ ನಾಡು ಎಂದೇ ಕರೆಯಲಾಗುವ ಕಲಬುರಗಿ ಜಿಲ್ಲೆಯಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಬುಧವಾರದಂದು 41.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಈ ತಿಂಗಳ ಅಂತ್ಯಕ್ಕೆ ಕಲಬುರಗಿಯಲ್ಲಿ ತಾಪಮಾನ 44 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಯಾದಗಿರಿ, ಬಳ್ಳಾರಿ, ಕೊಪ್ಪಳದಲ್ಲಿ ಬುಧವಾರದಂದು 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದರೆ, ರಾಯಚೂರಿನಲ್ಲಿ 39.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.


 ಎಲ್ಲ ಖಾಸಗಿ ಆಸ್ಪತ್ರೆಗಳು ಪ್ರತ್ಯೇಕ ಕೋವಿಡ್ ಬ್ಲಾಕ್ ತೆರೆಯಬೇಕು: ಮಂಜುನಾಥ ಪ್ರಸಾದ್

ಎಲ್ಲ ಖಾಸಗಿ ಆಸ್ಪತ್ರೆಗಳು ಪ್ರತ್ಯೇಕ ಕೋವಿಡ್ ಬ್ಲಾಕ್ ತೆರೆಯಬೇಕು: ಮಂಜುನಾಥ ಪ್ರಸಾದ್


ಎಲ್ಲ ಖಾಸಗಿ ಆಸ್ಪತ್ರೆಗಳು ಪ್ರತ್ಯೇಕ ಕೋವಿಡ್ ಬ್ಲಾಕ್ ತೆರೆಯಬೇಕು: ಮಂಜುನಾಥ ಪ್ರಸಾದ್

ಬೆಂಗಳೂರು, ಮಾ.31: ಖಾಸಗಿ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ಕೋವಿಡ್ ಬ್ಲಾಕ್‍ಗಳಿರಬೇಕು. ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ವೈದ್ಯರು, ಸಿಬ್ಬಂದಿ ಪ್ರತ್ಯೇಕವಾಗಿರಬೇಕು. ಕೋವಿಡ್ ಹಾಗೂ ಅನ್ಯ ಖಾಯಿಲೆಗಳಿಗೆ ಚಿಕಿತ್ಸೆ ನೀಡಲು ಒಂದೇ ಸಿಬ್ಬಂದಿಯನ್ನು ನಿಯೋಜನೆ ಮಾಡಿರಬಾರದೆಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಸೂಚಿಸಿದ್ದಾರೆ.

ಬುಧವಾರ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿಗೆ ಸಂಬಂಧಿಸಿದಂತೆ ಖಾಸಗಿ ಆಸ್ಪತ್ರೆಗಳ ನೋಡಲ್ ಅಧಿಕಾರಿಗಳ ಜೊತೆ ಜೂಮ್ ಮುಖಾಂತರ ವರ್ಚುವಲ್ ಸಭೆ ನಡೆಸಿದ ಅವರು, ನಗರದಲ್ಲಿ ಕೋವಿಡ್ ಸೋಂಕು ಕ್ರಮೇಣ ಹೆಚ್ಚಾಗುತ್ತಿದೆ. ಈ ಸಂಬಂಧ ಖಾಸಗಿ ಆಸ್ಪತ್ರೆಗಳಲ್ಲಿ ಮುಂದಿನ 7 ದಿನಗಳ ಕಾಲ ಕೋವಿಡ್ ಸೋಂಕು ದೃಢಪಟ್ಟವರಿಗೆ ಚಿಕಿತ್ಸೆ ನೀಡಲು ಶೇ.10 ರಷ್ಟು ಹಾಸಿಗೆಗಳನ್ನು ಮೀಸಲಿಡಬೇಕು. ಈ ಸಂಬಂಧ ತಮ್ಮ ತಮ್ಮ ಆಸ್ಪತ್ರೆಗಳ ಮುಖ್ಯಸ್ಥರ ಜೊತೆ ಮಾತನಾಡಬೇಕೆಂದು ತಿಳಿಸಿದ್ದಾರೆ.

ನಗರದಲ್ಲಿ ಕೋವಿಡ್ ಸೋಂಕು ದೃಢಪಟ್ಟವರು ಬಹುತೇಕ ಹೋಮ್ ಐಸೋಲೇಷನ್‍ನಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಸಿಮ್ಟಾಮ್ಯಾಟಿಕ್ ಇರುವವರಿಗೆ ಸರಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಲಭ್ಯವಿದೆ. ಮುಂದಿನ ದಿನಗಳಲ್ಲಿ ಕೋವಿಡ್ ಸೋಂಕು ಕ್ರಮೇಣ ಹೆಚ್ಚಾದರೆ ಖಾಸಗಿ ಆಸ್ಪತ್ರೆಗಳಲ್ಲಿ ಹಂತ ಹಂತವಾಗಿ ಹಾಸಿಗೆ ಸಾಮರ್ಥ್ಯವನ್ನು ಹೆಚ್ಚಳ ಮಾಡುವಂತೆ ಅವರು ತಿಳಿಸಿದ್ದಾರೆ.

ಸೋಂಕು ದೃಢಪಟ್ಟ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಲು ಬಂದರೆ ಅವರಿಗೆ ಆಕ್ಸಿಜನ್ ವ್ಯವಸ್ಥೆಯಿಲ್ಲವೆಂದು ದಾಖಲು ಮಾಡಿಕೊಳ್ಳದೆ ಬೇರೆ ಆಸ್ಪತ್ರೆಗೆ ತೆರಳಲು ಸೂಚಿಸಕೂಡದು. ಆಸ್ಪತ್ರೆಗೆ ಬಂದಂತಹ ಸೋಂಕಿತ ವ್ಯಕ್ತಿಯನ್ನು ಕೂಡಲೆ ಆಸ್ಪತ್ರೆಗೆ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಬೇಕು. ಎಲ್ಲಾ ಆಸ್ಪತ್ರೆಗಳ ಮುಂಭಾಗ ಕೋವಿಡ್ ಚಿಕಿತ್ಸೆಗಾಗಿ ಎಷ್ಟು ಹಾಸಿಗೆಗಳಿವೆ, ಎಷ್ಟು ಹಾಸಿಗೆಗಳು ಭರ್ತಿಯಾಗಿವೆ, ಯಾವ ಹಾಸಿಗೆ ಖಾಲಿಯಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಸೂಚನಾ ಫಲಕದಲ್ಲಿ ಅಳವಡಿಸಿದಾಗ ಆಸ್ಪತ್ರೆಗೆ ದಾಖಲಾಗಲು ಬಂದಂತಹ ವ್ಯಕ್ತಿಗೆ ಸುಲಭವಾಗಿ ಮಾಹಿತಿ ಲಭ್ಯವಾಗಲಿದೆ ಎಂದು ಅವರು ಹೇಳಿದ್ದಾರೆ.

45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವ ಪ್ರಕ್ರಿಯೆ ಜಾರಿಯಾಗಲಿದೆ. ಈ ಸಂಬಂಧ ಖಾಸಗಿ ಆಸ್ಪತ್ರೆಗಳಲ್ಲಿ ಇನ್ನೂ ಹೆಚ್ಚಿನ ಸೆಷನ್‍ಗಳನ್ನು ಮಾಡಿಕೊಂಡು ಅವಶ್ಯಕ ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಂಡು ವ್ಯವಸ್ಥಿತವಾಗಿ ಲಸಿಕೆ ನೀಡಲು ಕ್ರಮವಹಿಸಬೇಕೆಂದು ಆಯುಕ್ತ ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ. 

ನಗರದಲ್ಲಿ ಲಸಿಕೆಗೆ ಯಾವುದೇ ಕೊರತೆಯಿಲ್ಲ. ಅವಶ್ಯಕ ಲಸಿಕೆ ಲಭ್ಯವಿದ್ದು, ಸದ್ಯ 1.50 ಲಕ್ಷ ಲಸಿಕೆ ಸಂಗ್ರಹವಿದ್ದು, ನಾಳೆ 4 ಲಕ್ಷ ಲಸಿಕೆ ಬರಲಿದೆ. ಹೆಚ್ಚು ಸೆಷನ್‍ಗಳನ್ನು ಮಾಡುವ ಆಸ್ಪತ್ರೆಗಳಿಗೆ ಅವಶ್ಯಕ ಲಿಸಿಕೆಗಳನ್ನು ನೀಡಲಾಗುವುದು. ನಗರದಲ್ಲಿ ಇದುವರೆಗೆ 7 ಲಕ್ಷ ಲಸಿಕೆ ನೀಡಲಾಗಿದ್ದು, ಎಲ್ಲರೂ ಲಸಿಕೆ ಪಡೆದುಕೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ. 

 ಹೆಚ್ಚುತ್ತಿರುವ ಕೊರೋನ: ನೂತನ ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರಕಾರ

ಹೆಚ್ಚುತ್ತಿರುವ ಕೊರೋನ: ನೂತನ ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರಕಾರ


ಹೆಚ್ಚುತ್ತಿರುವ ಕೊರೋನ: ನೂತನ ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರಕಾರ

ಬೆಂಗಳೂರು, : ರಾಜ್ಯ ಸರಕಾರವು ಕೋವಿಡ್-19 ವೈರಾಣು ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಎ.1 ರಿಂದ 30ರವರೆಗೆ ಜಾರಿಯಲ್ಲಿರುವಂತೆ ನೂತನ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಬಿಬಿಎಂಪಿ ಆಯುಕ್ತರು, ಪೊಲೀಸ್ ಆಯುಕ್ತರು, ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ಇಲಾಖಾ ಮುಖ್ಯಸ್ಥರು ಮತ್ತು ಪ್ರಾಧಿಕಾರಗಳು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಆದೇಶ ಹೊರಡಿಸಿದ್ದಾರೆ.

ಕೋವಿಡ್ ಪ್ರಕರಣಗಳು ಹೆಚ್ಚಾಗಿ ವರದಿಯಾಗಿರುವ ತಾಲೂಕು, ವಾರ್ಡ್ ಗಳಲ್ಲಿ ಗಣನೀಯವಾಗಿ ಹೆಚ್ಚಿನ ಪರೀಕ್ಷೆಗಳನ್ನು ನಡೆಸಬೇಕು. ಆರ್‍ಟಿಪಿಸಿಆರ್ ಪರೀಕ್ಷೆಗಳ ಪ್ರಮಾಣವನ್ನು ಶೇ.70ರಷ್ಟು ಅಥವಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನಿಗದಿಪಡಿಸಿದಂತೆ ಹೆಚ್ಚಿಸಲು ಪ್ರಯತ್ನಿಸಬೇಕು. ಆರ್ಟಿಪಿಸಿಆರ್ ಪರೀಕ್ಷೆಗಳ ಪ್ರಮಾಣವು ಕಡಿಮೆ ಇರುವ ತಾಲೂಕು ಹಾಗೂ ನಗರ ವಾರ್ಡ್ ಗಳಲ್ಲಿ ನಿಗದಿತ ಮಟ್ಟವನ್ನು ತಲುಪಲು ಪರೀಕ್ಷೆಯ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಬೇಕು.

ಹೊಸ ಪಾಸಿಟಿವ್ ಪ್ರಕರಣಗಳನ್ನು ಪ್ರತ್ಯೇಕಿಸಬೇಕು ಮತ್ತು ಸೋಂಕಿತರ ಸಂಪರ್ಕಗಳನ್ನು ಶೀಘ್ರವಾಗಿ ಪತ್ತೆ ಹಚ್ಚಿ ಪ್ರತ್ಯೇಕಿಸಬೇಕು. ಕಂಟೈನ್ಮೆಂಟ್ ವಲಯಗಳನ್ನು ಗುರುತಿಸಿ ಅಂತಹ ವಲಯಗಳಲ್ಲಿ ಧಾರಕ ಕ್ರಮಗಳನ್ನು ಜಾರಿಗೆ ತರಬೇಕು. ಜಿಲ್ಲಾಡಳಿತಗಳು ತಳ ಹಂತದಲ್ಲಿ ಕಂಟೈನ್ಮೆಂಟ್ ವಲಯಗಳ ಗಡಿ ಗುರುತಿಸುವಿಕೆಗೆ ಕೇಂದ್ರ ಮತ್ತು ರಾಜ್ಯ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದಿಷ್ಟಪಡಿಸಿದ ಮಾರ್ಗಸೂಚಿಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು.

ಕಂಟೈನ್ಮೆಂಟ್ ವಲಯಗಳ ಮಾಹಿತಿಯನ್ನು ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಬಿಬಿಎಂಪಿ ಆಯುಕ್ತರು ಮತ್ತು ಸ್ಥಳೀಯ ಪ್ರಾಧಿಕಾರಗಳ ಮೂಲಕ ವೆಬ್‍ಸೈಟ್‍ನಲ್ಲಿ ಅಳವಡಿಸಬೇಕು ಹಾಗೂ ಈ ಮಾಹಿತಿಯನ್ನು ನಿರಂತರವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದೊಂದಿಗೆ ಹಂಚಿಕೊಳ್ಳಬೇಕು.

ಕಂಟೈನ್ಮೆಂಟ್ ವಲಯಗಳಲ್ಲಿ ಮಾರ್ಗಸೂಚಿ: ಕಂಟೈನ್ಮೆಂಟ್ ವಲಯಗಳಲ್ಲಿ ಅತ್ಯಗತ್ಯ ಚಟುವಟಿಕೆಗಳಿಗೆ ಮಾತ್ರ ಅವಕಾಶ ಕಲ್ಪಿಸಬೇಕು. ಅಗತ್ಯ ಸರಕು ಪೂರೈಕೆ ಹಾಗೂ ತುರ್ತು ಆರೋಗ್ಯ ಸೇವೆ ಹೊರತುಪಡಿಸಿ ಈ ವಲಯಗಳಲ್ಲಿ ಹೊರ ಹೋಗುವ ಅಥವಾ ಒಳಗೆ ಬರುವ ಜನರ ಚಲನವಲನಗಳನ್ನು ನಿಯಂತ್ರಿಸಲು ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕು. ಈ ಉದ್ದೇಶಕ್ಕಾಗಿ ರಚಿಸಲಾಗಿರುವ ಕಣ್ಗಾವಲು ತಂಡಗಳು ನಿರಂತರವಾಗಿ ಮನೆ-ಮನೆ ಪರಿಶೀಲನೆ ನಡೆಸಬೇಕು.

ನಿಗದಿಪಡಿಸಿದ ಶಿಷ್ಟಾಚಾರದೊಂದಿಗೆ ಪರೀಕ್ಷೆಗಳನ್ನು ಕೈಗೊಳ್ಳಬೇಕು. ಕೋವಿಡ್-19 ಪಾಸಿಟಿವ್ ಕಂಡು ಬಂದಿರುವ ವ್ಯಕ್ತಿಯ ಸಂಪರ್ಕ ಹೊಂದಿರುವ ಎಲ್ಲ ವ್ಯಕ್ತಿಗಳನ್ನು ಪಟ್ಟಿ ಮಾಡಿ, ಪತ್ತೆ ಮಾಡಿ, ಗುರುತಿಸಿ, ನಿರ್ಬಂಧಿಸಿ ಮತ್ತು 14 ದಿನಗಳ ವರೆಗೆ ನಿಗಾ ಇಡಬೇಕು (ಶೇ.80ರಷ್ಟು ಸಂಪರ್ಕಿತರನ್ನು 72 ಗಂಟೆಗಳೊಳಗೆ ಅಥವಾ ರಾಜ್ಯ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಹೊರ ತಂದಿರುವ ಎಸ್‍ಓಪಿಗಳ ಅನ್ವಯ ಕೋವಿಡ್ ಸೋಂಕಿತರನ್ನು ಪತ್ತೆ ಹಚ್ಚಬಹುದು).

ಐಎಲ್‍ಐ/ಎಸ್‍ಎಆರ್‍ಐ ಪ್ರಕರಣಗಳನ್ನು ಆರೋಗ್ಯ ಸೌಲಭ್ಯ ಅಥವಾ ಮೊಬೈಲ್ ಕ್ಲಿನಿಕ್‍ಗಳ ಅಥವಾ ಬಫರ್ ವಲಯಗಳ ಫೀವರ್ ಕ್ಲಿನಿಕ್‍ಗಳ ಮೂಲಕ ಕಣ್ಗಾವಲಿರಿಸಬೇಕು. ಕಂಟೈನ್‍ಮೆಂಟ್ ವಲಯಗಳ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇಲ್ಲದಿದ್ದಲ್ಲಿ, ಬಿಬಿಎಂಪಿ, ಜಿಲ್ಲಾಡಳಿತ, ತಾಲೂಕು ಪ್ರಾಧಿಕಾರಗಳು ಸಂಬಂಧಪಟ್ಟ ಅಧಿಕಾರಿಯನ್ನು ಹೊಣೆಗಾರರನ್ನಾಗಿಸಬೇಕು.

ದಂಡ ವಿಧಿಸಿ: ಮಾಸ್ಕ್ ಧರಿಸದಿದ್ದರೆ ಅಂತಹವರ ವಿರುದ್ಧ ನಗರ ಪಾಲಿಕೆ ಪ್ರದೇಶಗಳಲ್ಲಿ 250 ರೂ.ಮತ್ತು ಇನ್ನಿತರ ಪ್ರದೇಶಗಳಲ್ಲಿ 100 ರೂ.ದಂಡವನ್ನು ವಿಧಿಸಲು ಬಿಬಿಎಂಪಿ, ಜಿಲ್ಲಾ ಪ್ರಾಧಿಕಾರಗಳು, ಸ್ಥಳೀಯ ಪ್ರಾಧಿಕಾರಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು.

ಸುರಕ್ಷಿತ ಅಂತರ: ಕೋವಿಡ್-19 ಹರಡುವಿಕೆ ತಡೆಗಟ್ಟಲು ಸಾರ್ವಜನಿಕ ವಲಯಗಳಲ್ಲಿ, ವಾರದ ಸಂತೆಗಳಲ್ಲಿ, ಸಾರ್ವಜನಿಕ ಸಾರಿಗೆ ಮತ್ತು ಜನಸಂದಣಿ ಪ್ರದೇಶಗಳಲ್ಲಿ ಕಟ್ಟುನಿಟ್ಟಾಗಿ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದನ್ನು ನಿಗಾವಹಿಸಬೇಕು. ವಿಮಾನಯಾನ, ರೈಲು ಸೇವೆ ಮತ್ತು ಮೆಟ್ರೋ ರೈಲು ಸಂಚಾರದ ಕುರಿತು ಈಗಾಗಲೆ ಪ್ರಮಾಣಿತ ಕಾರ್ಯ ವಿಧಾನಗಳು ಜಾರಿಯಲ್ಲಿದ್ದು, ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಬಸ್‍ಗಳು, ದೋಣಿ ಸೇರಿದಂತೆ ಇತ್ಯಾದಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಲ್ಲಿಯೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಸೂಕ್ತ.

ಪ್ರಸ್ತುತ ಪರಿಸ್ಥಿತಿಯಲ್ಲಿ ಲಸಿಕಾ ಕಾರ್ಯದಿಂದ ಕೋವಿಡ್-19 ಸೋಂಕು ಪ್ರಸರಣದ ಸರಪಳಿ ತುಂಡರಿಕೆ ಕಠಿಣವಾಗಿದೆ. ಆದುದರಿಂದ, ಕೇಂದ್ರ ಸರಕಾರವು ಅನುಮೋದಿಸಿರುವ ‘ಎನ್‍ಇಜಿವಿಎಸಿ’ ಶಿಫಾರಸ್ಸಿನನ್ವಯ ಬಿಬಿಎಂಪಿ, ಜಿಲ್ಲಾ ಮತ್ತು ಸ್ಥಳೀಯ ಪ್ರಾಧಿಕಾರಗಳು ಪ್ರಾಧಾನ್ಯತೆ ಹೊಂದಿದ ಗುಂಪುಗಳಲ್ಲಿ ಲಸಿಕಾ ಕಾರ್ಯದ ಪ್ರಗತಿಗೆ ಶೀಘ್ರವಾಗಿ ಕ್ರಮ ವಹಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.


 


 ಬಿಎಸ್‌ವೈ ವಿರುದ್ಧ ಸಚಿವ ಈಶ್ವರಪ್ಪ ದೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಗೆ ಡಿ.ಕೆ.ಶಿವಕುಮಾರ್ ಆಗ್ರಹ

ಬಿಎಸ್‌ವೈ ವಿರುದ್ಧ ಸಚಿವ ಈಶ್ವರಪ್ಪ ದೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಗೆ ಡಿ.ಕೆ.ಶಿವಕುಮಾರ್ ಆಗ್ರಹ


ಬಿಎಸ್‌ವೈ ವಿರುದ್ಧ ಸಚಿವ ಈಶ್ವರಪ್ಪ ದೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಗೆ ಡಿ.ಕೆ.ಶಿವಕುಮಾರ್ ಆಗ್ರಹ

ಬೆಂಗಳೂರು, ಮಾ.31: 'ತನ್ನ ಇಲಾಖೆ ವಿಚಾರಗಳಲ್ಲಿ ಕಾನೂನು ಮೀರಿ ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದಾರೆ' ಎಂದು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ಅವರು ಬಿಜೆಪಿ ವರಿಷ್ಠರು ಮತ್ತು ರಾಜ್ಯಪಾಲರಿಗೆ ದೂರು ನೀಡಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಿಎಂ ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

'ಬಿಜೆಪಿಯ ಹಿರಿಯ ಸಚಿವರೊಬ್ಬರು ಮುಖ್ಯಮಂತ್ರಿಯ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿರುವ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅಥವಾ ಆರೋಪಗಳು ಸತ್ಯಕ್ಕೆ ದೂರವಾಗಿದ್ದಲ್ಲಿ ಸಚಿವರನ್ನು ಸಂಪುಟದಿಂದ ಕಿತ್ತೊಗೆಯಬೇಕು. ರಾಜ್ಯದ ಬಿಜೆಪಿ ಸರಕಾರ ಭ್ರಷ್ಟಾಚಾರದ ಕೂಪವಾಗಿ ಮಾರ್ಪಟ್ಟಿದೆ ಎಂದು ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.


 ಸಿಡಿ ಪ್ರಕರಣಕ್ಕೆ ರೋಚಕ ತಿರುವು, ಯುವತಿಯ ತಂದೆಯಿಂದಲೇ ಸ್ಪೋಟಕ ಆರೋಪ

ಸಿಡಿ ಪ್ರಕರಣಕ್ಕೆ ರೋಚಕ ತಿರುವು, ಯುವತಿಯ ತಂದೆಯಿಂದಲೇ ಸ್ಪೋಟಕ ಆರೋಪ


ಸಿಡಿ ಪ್ರಕರಣಕ್ಕೆ ರೋಚಕ ತಿರುವು, ಯುವತಿಯ ತಂದೆಯಿಂದಲೇ ಸ್ಪೋಟಕ ಆರೋಪ

ಬೆಂಗಳೂರು: ನಮ್ಮ ಮಗಳು ಒತ್ತಡ ಮತ್ತು ಪ್ರಭಾವಕ್ಕೆ ಒಳಗಾಗಿ ಹೇಳಿಕೆ ನೀಡಿದ್ದು, ಆಕೆ ನೀಡಿರುವ ಹೇಳಿಕೆಯನ್ನು ರದ್ದು ಮಾಡಬೇಕೆಂದು ಕೋರಿ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಯುವತಿಯ ತಂದೆ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.

ಈ ಬೆಳವಣಿಗೆಯಿಂದಾಗಿ ಸಂತ್ರಸ್ತ ಯುವತಿಯ ಹೇಳಿಕೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿರುವ ಯುವತಿಯ ತಂದೆ, ಸೆಕ್ಷನ್ 164 ಅಡಿ ದಾಖಲಾದ ಹೇಳಿಕೆಯನ್ನು ಪರಿಗಣಿಸಬಾರದು ಎಂದು ಮನವಿ ಮಾಡಿದ್ದಾರೆ.

ನಮ್ಮ ಅಥವಾ ನ್ಯಾಯಾಂಗದ ಸುಪರ್ದಿಯಲ್ಲಿ ಮಗಳನ್ನು ಏಕಾಂತದಲ್ಲಿ ಇರಿಸಬೇಕು. ಕೋರ್ಟ್ ಸೂಚಿಸಿದ ಸ್ವತಂತ್ರ ಸಂಸ್ಥೆಯ ಸುಪರ್ದಿಯಲ್ಲಿ ಇರಿಸಬೇಕು. ಆ ನಂತರವಷ್ಟೇ ನನ್ನ ಮಗಳು ಸ್ವತಂತ್ರವಾಗಿ ಹೇಳಿಕೆ ನೀಡಲು ಸಾಧ್ಯ ಎಂದು ಹೇಳಿದ್ದಾರೆ.

ನಾಟಕೀಯ ಬೆಳವಣಿಗೆಯಲ್ಲಿ ನಮ್ಮ ಪುತ್ರಿಯ ಹೇಳಿಕೆ ದಾಖಲಿಸಲಾಗಿದೆ. ನಮ್ಮ ಮಗಳು ಯಾವುದೇ ಒತ್ತಡಕ್ಕೆ ಒಳಗಾಗಿರುವ ಶಂಕೆಯಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಒತ್ತಡಕ್ಕೆ ಒಳಗಾಗಿ ನೀಡಿದ ಹೇಳಿಕೆಯನ್ನು ಪರಿಗಣಿಸಬಾರದು. ಆಕೆ ದಾಖಲಿಸಿದ ಹೇಳಿಕೆಯನ್ನು ರದ್ದುಗೊಳಿಸಬೇಕು ಎಂದು ಹೈಕೋರ್ಟ್ ಗೆ ರಿಟ್ ಅರ್ಜಿಯ ಮೂಲಕ ಸಿಡಿ ಯುವತಿಯ ತಂದೆ ಮನವಿ ಮಾಡಿದ್ದಾರೆ.

 ಇಂದಿನಿಂದ ದಿಲ್ಲಿ ವಿಮಾನ ನಿಲ್ದಾಣದಲ್ಲಿ ರಾಡಮ್ ಕೋವಿಡ್ ಟೆಸ್ಟ್

ಇಂದಿನಿಂದ ದಿಲ್ಲಿ ವಿಮಾನ ನಿಲ್ದಾಣದಲ್ಲಿ ರಾಡಮ್ ಕೋವಿಡ್ ಟೆಸ್ಟ್


 ಇಂದಿನಿಂದ ದಿಲ್ಲಿ ವಿಮಾನ ನಿಲ್ದಾಣದಲ್ಲಿ ರಾಡಮ್ ಕೋವಿಡ್ ಟೆಸ್ಟ್

ಹೊಸದಿಲ್ಲಿ: ಕೊರೋನ ವೈರಸ್ ಉಲ್ಬಣಕ್ಕೆ ಸಾಕ್ಷಿಯಾಗಿರುವ ರಾಜ್ಯಗಳಿಂದ ದಿಲ್ಲಿ ವಿಮಾನ ನಿಲ್ದಾಣಗಳಿಗೆ ಆಗಮಿಸುವ ಪ್ರಯಾಣಿಕರಿಗೆ ಇಂದಿನಿಂದ ರ್ಯಾಡಮ್ ಕೋವಿಡ್ ಟೆಸ್ಟ್ ನಡೆಸಲು ನಿರ್ಧರಿಸಲಾಗಿದೆ. ಪಾಸಿಟಿವ್ ಎಂದು ಕಂಡುಬರುವವರನ್ನು ಕಡ್ಡಾಯವಾಗಿ ಕ್ವಾರಂಟೈನ್ ನಲ್ಲಿ ಇಡಲಾಗುವುದು ಎಂದು ಸರಕಾರವು ತಿಳಿಸಿದೆ. 

ಇದೇ ರೀತಿಯ ಹೆಜ್ಜೆಗಳನ್ನು ಮುಂದಿನ ದಿನಗಳಲ್ಲಿ ರೈಲ್ವೆ ಹಾಗೂ ಬಸ್ ನಿಲ್ದಾಣಗಳಲ್ಲೂ ಇಡಲಾಗುತ್ತದೆ.

ದಿಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ(ಡಿಡಿಎಂಎ)ಪ್ರಕರಣಗಳು ಹೆಚ್ಚುತ್ತಿರುವ ರಾಜ್ಯಗಳಿಂದ ಬರುವ ಪ್ರಯಾಣಿಕರ ರ್ಯಾಡಮ್ ಕೋವಿಡ್-19 ಪರೀಕ್ಷೆಯನ್ನು ನಡೆಸುತ್ತದೆ ಎಂದು ದಿಲ್ಲಿ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ಇಂದು ಟ್ವೀಟ್ ನಲ್ಲಿ ಹಾಕಿರುವ ಹೇಳಿಕೆಯಲ್ಲಿ ತಿಳಿಸಿದೆ.

ಸ್ಯಾಂಪಲ್ ಗಳ ಸಂಗ್ರಹದ ಬಳಿಕವೇ ಪ್ರಯಾಣಿಕರಿಗೆ ವಿಮಾನನಿಲ್ದಾಣದಿಂದ ನಿರ್ಗಮಿಸಲು ಅವಕಾಶವಿರುತ್ತದೆ. ಪಾಸಿಟಿವ್ ಎಂದು ಕಂಡುಬರುವ ಪ್ರಯಾಣಿಕರನ್ನು ಅವರ ವಾಸ್ತವ್ಯದ ಸ್ಥಳದಲ್ಲಿ ಕಡ್ಡಾಯವಾಗಿ ಕ್ವಾರಂಟೈನ್ ನಲ್ಲಿ ಇಡಲಾಗುವುದು ಎಂದು ತಿಳಿದುಬಂದಿದೆ.

 ಕೊರೋನ ಪಾಸಿಟಿವ್ : ಮಾಜಿ ಪ್ರಧಾನಿ ದೇವೇಗೌಡ ಹಾಗೂ ಪತ್ನಿ ಚೆನ್ನಮ್ಮ ಆಸ್ಪತ್ರೆಗೆ ದಾಖಲು

ಕೊರೋನ ಪಾಸಿಟಿವ್ : ಮಾಜಿ ಪ್ರಧಾನಿ ದೇವೇಗೌಡ ಹಾಗೂ ಪತ್ನಿ ಚೆನ್ನಮ್ಮ ಆಸ್ಪತ್ರೆಗೆ ದಾಖಲು

 

ಕೊರೋನ ಪಾಸಿಟಿವ್ : ಮಾಜಿ ಪ್ರಧಾನಿ ದೇವೇಗೌಡ ಹಾಗೂ ಪತ್ನಿ ಚೆನ್ನಮ್ಮ ಆಸ್ಪತ್ರೆಗೆ ದಾಖಲು

ಬೆಂಗಳೂರು : ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಅವರ ಪತ್ನಿ ಚೆನ್ನಮ್ಮ ಅವರಿಗೆ ಕೊರೋನ ಪಾಸಿಟಿವ್ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.

'ನಾನು ಮತ್ತು ನನ್ನ ಪತ್ನಿ ಚೆನ್ನಮ್ಮಗೆ ಕೋವಿಡ್ ಪಾಸಿಟಿವ್ ದೃಢವಾಗಿದ್ದು, ನಮ್ಮ ಕುಟುಂಬದ ಸದಸ್ಯರಿಂದ ಸ್ವಯಂ ಆಗಿ  ಪ್ರತ್ಯೇಕ ವಾಗಿರುತ್ತೇವೆ. ಕಳೆದ ಕೆಲವು ದಿನಗಳಿಂದ ನಮ್ಮೊಂದಿಗೆ ಸಂಪರ್ಕಕ್ಕೆ ಬಂದವರೆಲ್ಲರೂ ಕೊವಿಡ್ ಪರೀಕ್ಷೆಗೆ ಒಳಪಡುವಂತೆ ಮನವಿ ಮಾಡುತ್ತಿದ್ದೇವೆ. ಪಕ್ಷದ ಕಾರ್ಯಕರ್ತರು ಮತ್ತು ಹಿತೈಷಿಗಳು ಭಯಭೀತರಾಗದಂತೆ ನಾನು ವಿನಂತಿಸುತ್ತೇನೆ ಎಂದು ದೇವೇಗೌಡರು ಟ್ವೀಟ್ ಮಾಡಿದ್ದಾರೆ.


 ಮಂಗಳೂರು : ಬಸ್ ಢಿಕ್ಕಿ; ಕಾಲೇಜು ವಿದ್ಯಾರ್ಥಿನಿ‌ ಸ್ಥಳದಲ್ಲೇ ಮೃತ್ಯು

ಮಂಗಳೂರು : ಬಸ್ ಢಿಕ್ಕಿ; ಕಾಲೇಜು ವಿದ್ಯಾರ್ಥಿನಿ‌ ಸ್ಥಳದಲ್ಲೇ ಮೃತ್ಯು


 ಮಂಗಳೂರು : ಬಸ್ ಢಿಕ್ಕಿ; ಕಾಲೇಜು ವಿದ್ಯಾರ್ಥಿನಿ‌ ಸ್ಥಳದಲ್ಲೇ ಮೃತ್ಯು

ಮಂಗಳೂರು: ನಗರದ ಮರಕಡ ಜಂಕ್ಷನ್‌ನಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಕಾಲೇಜು ವಿದ್ಯಾರ್ಥಿನಿ‌ ಮೃತಪಟ್ಟ ಘಟನೆ ನಡೆದಿದೆ.

ಮೃತ ವಿದ್ಯಾರ್ಥಿನಿಯನ್ನು ಕಾವೂರು ಕುಂಜತ್ ಬೈಲ್ ಜ್ಯೋತಿನಗರ ನಿವಾಸಿ ಚೆಲ್ಲಯ್ಯ ಎಂಬವರ ಪುತ್ರಿ ಸಿ.ಪವಿತ್ರಾ (21) ಎಂದು ಗುರುತಿಸಲಾಗಿದೆ.

ಕಾಲೇಜು ವಿದ್ಯಾರ್ಥಿನಿಯಾಗಿರುವ ಈಕೆ ಬುಧವಾರ ಬೆಳಗ್ಗೆ ಸುಮಾರು‌ 9 ಗಂಟೆಯ ವೇಳೆಗೆ ಮರಕಡ ಜಂಕ್ಷನ್‌ನಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಖಾಸಗಿ ಬಸ್ ಢಿಕ್ಕಿ ಹೊಡೆಯಿತು ಎನ್ನಲಾಗಿದೆ. ಇದರಿಂದ ಪವಿತ್ರ ಸ್ಥಳದಲ್ಲೇ ಮೃತಪಟ್ಟರು ಎಂದು ಪ್ರಕರಣ ದಾಖಲಿಸಿರುವ ಮಂಗಳೂರು ಸಂಚಾರ ಉತ್ತರ ಠಾಣೆಯ ಪೊಲೀಸರು ತಿಳಿಸಿದ್ದಾರೆ.

 ಬಿಜೆಪಿ ನಾಯಕನಿಗೆ ಕರೆ ಮಾಡಿದ ಮಮತಾ ಆಡಿಯೋ ವೈರಲ್ !

ಬಿಜೆಪಿ ನಾಯಕನಿಗೆ ಕರೆ ಮಾಡಿದ ಮಮತಾ ಆಡಿಯೋ ವೈರಲ್ !

 

ಬಿಜೆಪಿ ನಾಯಕನಿಗೆ ಕರೆ ಮಾಡಿದ ಮಮತಾ ಆಡಿಯೋ ವೈರಲ್ !

ಕೊಲ್ಕತ್ತಾ : ಬಿಜೆಪಿಗೆ ಸೇರ್ಪಡೆಗೊಂಡ ತಮ್ಮ ಪಕ್ಷದ ಮಾಜಿ ನಾಯಕರೊಂದಿಗೆ ಮಾತನಾಡುವುದು ಅಪರಾಧವಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಮರ್ಥಿಸಿಕೊಂಡಿದ್ದಾರೆ.

ಬಿಜೆಪಿ ನಾಯಕ ಪ್ರೇಲೆ ಪಾಲ್ ಅವರೊಂದಿಗಿನ ಸಂಭಾಷಣೆ ಎಂದು ಹೇಳಲಾದ ಆಡಿಯೋ ಸೋರಿಕೆಯಾದ ಹಿನ್ನಲೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಮುಜುಗರಕ್ಕೀಡು ಮಾಡಿತ್ತು, ಆರಂಭದಲ್ಲಿ ನಿರಾಕರಿಸಿತ್ತಾದರೂ, ಸಂವಹನವು ನಡೆದಿದೆ ಎಂದು ಪಕ್ಷ ಹೇಳಿದೆ.

ಈ ಸಂಭಾಷಣೆಯ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಮಮತಾ ಬ್ಯಾನರ್ಜಿ, ಹೌದು ನಾನು ಆ ಬಿಜೆಪಿ ನಾಯಕರಿಗೆ ಕರೆ ಮಾಡಿದ್ದೆ. ಅವರ ಸಂಖ್ಯೆ ಸಿಕ್ಕಿದಾಗ ನಾನು ಅವರಲ್ಲಿ ಮಾತನಾಡಿದ್ದೇನೆ. ಚೆನ್ನಾಗಿರಿ, ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ ಎಂದಿದ್ದೆ. ಇದರಲ್ಲಿ ನನ್ನದೇನು ಅಪರಾದವಿದೆ..? ಎಂದು ಅವರು ಪ್ರಶ್ನಿಸಿದ್ದಾರೆ.

ನಾನೊಂದು ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಾನು ಯಾರ ಸಹಾಯ ಬೇಕಾದರೂ ಪಡೆದುಕೊಳ್ಳಬಹುದು. ಯಾರಲ್ಲಿ ಬೇಕಾದರೂ ಮಾತನಾಡಬಹುದು. ಅದರಲ್ಲಿ ಏನೂ ತಪ್ಪಿಲ್ಲ. ಅಪರಾಧ ಏನಿದೆ ಅದರಲ್ಲಿ..? ಪಕ್ಷಾಂತರಗೊಂಡವರಲ್ಲಿ ನಾನು ಮಾತಾಡಿದ್ದು, ಇದೇ ಮೊದಲಲ್ಲ, ಈ ಹಿಂದೆಯೂ ನಾನು ಸಂಪರ್ಕಿಸಿದ್ದೇನೆ. ಆದರೇ, ಸಂಭಾಷಣೆಯನ್ನು ಯಾರಾದರೂ ವೈರಲ್ ಮಾಡಿದರೆ, ಅದು ಅಪರಾಧ. ಸಂಭಾಷಣೆಯನ್ನು ವೈರಲ್ ಮಾಡಿದವರ ವಿರುದ್ಧ ಕಾನೂನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

'ನಂದಿಗ್ರಾಮ್ ಗೆಲ್ಲಲು ನೀವು ನಮಗೆ ಸಹಾಯ ಮಾಡಬೇಕು. ನೋಡಿ, ನಿಮಗೆ ಕೆಲವು ಅಡಚಣೆಗಳಿವೆ ಎಂದು ನನಗೆ ತಿಳಿದಿದೆ, ಅದು ಅಧಿಕಾರಿಯ ಕಾರಣದಿಂದ ಎನ್ನುವುದು ಕೂಡ ತಿಳಿದಿದೆ” ಎಂದು ಬ್ಯಾನರ್ಜಿ ಅವರು ಸುವೇಂದು ಅಧಿಕಾರಿಯ ಬೆಂಬಲಿಗರಾದ ಪಾಲ್ ಅವರಿಗೆ ಹೇಳುವುದನ್ನು ಆಡಿಯೋದಲ್ಲಿ ಗಮನಿಸಬಹುದಾಗಿದೆ. “ಇನ್ನು ಮುಂದೆ ನಾನು ಎಲ್ಲವನ್ನೂ ನೋಡಿಕೊಳ್ಳುತ್ತೇನೆ” ಎಂದು ಬ್ಯಾನರ್ಜಿ ಭರವಸೆ ನೀಡುವುದನ್ನೂ ಕೂಡ ಆಡಿಯೋದಲ್ಲಿ ಕೇಳಬಹುದು.

ಇನ್ನು, ಪಾಲ್ ಕೂಡ ಮಮತಾ ಬ್ಯಾನರ್ಜಿ ಅವರಿಗೆ ಸಂಭಾಷಣೆಯಲ್ಲಿ ಪ್ರತಿಕ್ರಿಯಿಸಿದ್ದು, ದೀದಿ ನೀವು ಕರೆ ಮಾಡಿರುವ ಬಗ್ಗೆ ನನಗೆ ಗೌರವವಿದೆ. ನಾನು ಸುವೇಂದು ಅಧಿಕಾರಿಯವರೊಂದಿಗಿದ್ದೇನೆ. ಹಾಗಾಗಿ ನಾನು ಅವರಿಗೆ ದ್ರೋಹ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಮಾಧ್ಯಮಗಳ ವರದಿಗಾರರಿಗೆ ಸ್ಪಂದಿಸಿದ ಬಿಜೆಪಿ ನಾಯಕ ಪಾಲ್, ತೃಣಮೂಲಕ್ಕೆ ಮರಳಿ ಬನ್ನಿ ಎಂಬ ಮಮತಾ ಬ್ಯಾನರ್ಜಿ ಅವರ ಮಾತನ್ನು ನಾನು ತಿರಸ್ಕರಿಸಿದ್ದೇನೆ. ನಾನು ಈಗ ಬಿಜೆಪಿಗೆ ಕೆಲಸ ಮಾಡುತ್ತಿದ್ದೇನೆ. ಬಿಜೆಪಿಗೆ ದ್ರೋಹ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

ಇನ್ನು, ಆಡಿಯೋ ಸಂಭಾಷಣೆಯ ಬಗ್ಗೆ ಮಮತಾ ಅವರನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಅಧಿಕಾರವನ್ನು ಚುನಾವಣೆಯ ಹಿನ್ನಲೆಯಲ್ಲಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಆಕ್ರೊಶ ಹೊರ ಹಾಕಿದೆ.

ಬಿಜೆಪಿಯ ಬಂಗಾಳ ಉಸ್ತುವಾರಿ, ಕೈಲಾಶ್ ವಿಜಯವರ್ಗಿಯಾ ನೇತೃತ್ವದ ನಿಯೋಗವು ಚುನಾವಣಾ ಆಯೋಗಕ್ಕೆ ಮಮತಾ ಹಾಗೂ ಪಾಲ್ ಸಂಭಾಷಣೆಯ ಆಡಿಯೋವನ್ನು ನೀಡುವುದರ ಮೂಲಕ ಮಮತಾ ವಿರುದ್ಧ ದೂರು ನೀಡಿದೆ ಎಂಬ ವರದಿಯಾಗಿದೆ.

 ಹುಬ್ಬಳ್ಳಿ-ಹೈದರಾಬಾದ್ ವಿಮಾನ ಸಂಚಾರ ಆರಂಭ

ಹುಬ್ಬಳ್ಳಿ-ಹೈದರಾಬಾದ್ ವಿಮಾನ ಸಂಚಾರ ಆರಂಭ

 

ಹುಬ್ಬಳ್ಳಿ-ಹೈದರಾಬಾದ್ ವಿಮಾನ ಸಂಚಾರ ಆರಂಭ

ಹುಬ್ಬಳ್ಳಿ; ಅಲಯನ್ಸ್ ಏರ್ ಹುಬ್ಬಳ್ಳಿ-ಹೈದರಾಬಾದ್ ಮಾರ್ಗದಲ್ಲಿ ವಿಮಾನ ಸಂಚಾರವನ್ನು ಆರಂಭಿಸಿದೆ. ಹುಬ್ಬಳ್ಳಿ-ಮಂಗಳೂರು ನಡುವೆ ವಿಮಾನ ಸೇವೆಯನ್ನು ಶೀಘ್ರದಲ್ಲೇ ಆರಂಭಿಸಲು ಸಹ ಮನವಿ ಮಾಡಲಾಗಿದೆ.

ಬುಧವಾರ ಅಲಯನ್ಸ್ ಏರ್ ಹುಬ್ಬಳ್ಳಿ-ಹೈದರಾಬಾದ್ ವಿಮಾನ ಸೇವೆಗೆ ಕೇಂದ್ರ ಸಚಿವ, ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಚಾಲನೆ ನೀಡಿದರು. ಅಲಯನ್ಸ್ ಏರ್ ಸಿಇಒ ಹರ್ಪ್ರೀತ್ ಎ ಡಿ.ಸಿಂಗ್ ಮತ್ತು ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಉಪಸ್ಥಿತರಿದ್ದರು.

ಎಐ 9879 ವಿಮಾನ ಹೈದರಾಬಾದ್-ಹುಬ್ಬಳ್ಳಿ ನಡುವೆ ಸಂಚಾರ ನಡೆಸಲಿದೆ. ಸೋಮವಾರ, ಬುಧವಾರ ಮತ್ತು ಶುಕ್ರವಾರ ಹೈದರಾಬಾದ್‌ನಿಂದ ಬೆಳಗ್ಗೆ 6.25ಕ್ಕೆ ಹೊರಡುವ ವಿಮಾನ 8 ಗಂಟೆಗೆ ಹುಬ್ಬಳ್ಳಿಗೆ ತಲುಪಲಿದೆ.

ಎಐ 9890 ವಿಮಾನ ಹುಬ್ಬಳ್ಳಿ-ಹೈದರಾಬಾದ್ ನಡುವೆ ಸಂಚಾರ ನಡೆಸಲಿದೆ. ಬೆಳಗ್ಗೆ 8.25ಕ್ಕೆ ಹುಬ್ಬಳ್ಳಿಯಿಂದ ಹೊರಡುವ ವಿಮಾನ 9.55ಕ್ಕೆ ಹೈದರಾಬಾದ್ ತಲುಪಲಿದೆ. ಸೋಮವಾರ, ಬುಧವಾರ ಮತ್ತು ಶುಕ್ರವಾರ ಈ ವಿಮಾನ ಸಂಚಾರ ನಡೆಸಲಿದೆ.

Tuesday, 30 March 2021

 ಕರ್ನಾಟಕ-ಕೇರಳ ನಡುವಿನ ಗಡಿ ಪ್ರವೇಶ ನಿರ್ಬಂಧ ವಾಪಸ್ ಪಡೆದುಕೊಳ್ಳಲಾಗುವುದು: ಹೈಕೋರ್ಟ್‌ಗೆ ತಿಳಿಸಿದ ರಾಜ್ಯ ಸರಕಾರ

ಕರ್ನಾಟಕ-ಕೇರಳ ನಡುವಿನ ಗಡಿ ಪ್ರವೇಶ ನಿರ್ಬಂಧ ವಾಪಸ್ ಪಡೆದುಕೊಳ್ಳಲಾಗುವುದು: ಹೈಕೋರ್ಟ್‌ಗೆ ತಿಳಿಸಿದ ರಾಜ್ಯ ಸರಕಾರ


 ಕರ್ನಾಟಕ-ಕೇರಳ ನಡುವಿನ ಗಡಿ ಪ್ರವೇಶ ನಿರ್ಬಂಧ ವಾಪಸ್ ಪಡೆದುಕೊಳ್ಳಲಾಗುವುದು: ಹೈಕೋರ್ಟ್‌ಗೆ ತಿಳಿಸಿದ ರಾಜ್ಯ ಸರಕಾರ

ಬೆಂಗಳೂರು: ಕರ್ನಾಟಕ-ಕೇರಳ ರಾಜ್ಯಗಳ ನಡುವಿನ ಗಡಿ ಪ್ರವೇಶಗಳನ್ನು ಮುಚ್ಚುವ ಸಂಬಂಧ ಜಿಲ್ಲಾಡಳಿತಗಳಿಗೆ ನೀಡಿದ್ದ ಅಧಿಕಾರವನ್ನು ವಾಪಸ್ ಪಡೆದುಕೊಳ್ಳಲಾಗುವುದು ಎಂದು ರಾಜ್ಯ ಸರಕಾರ ಮೌಖಿಕವಾಗಿ ಹೈಕೋರ್ಟ್​ಗೆ ತಿಳಿಸಿದೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕೇರಳ ಗಡಿ ನಿರ್ಬಂಧಿಸಿದ್ದ ಕ್ರಮ ಪ್ರಶ್ನಿಸಿ ಕಾಸರಗೋಡಿನ ವಕೀಲ ಬಿ. ಸುಬ್ಬಯ್ಯ ರೈ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ಈ ವೇಳೆ ಅರ್ಜಿದಾರರ ಪರ ವಕೀಲ ಕೆ. ರವಿಶಂಕರ್ ವಾದಿಸಿ, ಅಂತರರಾಜ್ಯ ಗಡಿಗಳಲ್ಲಿ ಪ್ರಯಾಣಿಕರ ಮತ್ತು ಸರಕು ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಬಾರದು ಎಂದು ಕೇಂದ್ರ ಸರಕಾರ ತನ್ನ ಹೊಸ ನಿಯಮಾವಳಿಯಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಆದರೂ, ರಾಜ್ಯ ಸರಕಾರ ಸಂಚಾರ ನಿರ್ಬಂಧಿಸುತ್ತಿದೆ. ಅಷ್ಟಕ್ಕೂ ಸ್ಥಳೀಯ ಆಡಳಿತ ಸಂಸ್ಥೆಗಳ ಮೂಲಕ ಸಂಚಾರ ನಿರ್ಬಂಧಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಪೀಠಕ್ಕೆ ತಿಳಿಸಿದರು.

ಇದಕ್ಕೆ ರಾಜ್ಯ ಸರಕಾರದ ಪರ ವಕೀಲರು ಪ್ರತಿಕ್ರಿಯಿಸಿ, ಗಡಿ ಭಾಗಗಳಲ್ಲಿ ಮತ್ತು ಚೆಕ್‌ಪೋಸ್ಟ್‌ಗಳಲ್ಲಿ ಸಂಚಾರ ನಿರ್ಬಂಧಿಸಲು ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ನೀಡಲಾಗಿದ್ದ ಅಧಿಕಾರವನ್ನು ವಾಪಸ್ ಪಡೆದುಕೊಳ್ಳುವುದಾಗಿ ಮೌಖಿಕವಾಗಿ ತಿಳಿಸಿದರು. ಹೇಳಿಕೆ ದಾಖಲಿಸಿಕೊಂಡ ಪೀಠ, ಈ ಕುರಿತು ಲಿಖಿತ ಸ್ಪಷ್ಟನೆ ನೀಡುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಎ. 1ಕ್ಕೆ ಮುಂದೂಡಿತು. 

ಕೇಂದ್ರ ಸರಕಾರದ ಪರ ವಾದಿಸಿದ ವಕೀಲ ಎಂ.ಎನ್.ಕುಮಾರ್ ಅವರು, ಕೇಂದ್ರ ಸರಕಾರದ ಹೊಸ ನಿಯಮಾವಳಿ ಪ್ರಕಾರ ರಾಜ್ಯಗಳ ಗಡಿ ಪ್ತವೇಶಗಳನ್ನು ಮುಚ್ಚುವಂತಿಲ್ಲ‌ ಎಂದು ಪೀಠಕ್ಕೆ ತಿಳಿಸಿದರು.


 ದೇಶಕ್ಕೆ ಬಿಜೆಪಿ ಆಡಳಿತದಿಂದ ಆಗಿರುವ ನೋವಿಗೆ ಹೋಲಿಸಿದರೆ ನನ್ನ ನೋವು ಏನೂ ಅಲ್ಲ : ಮಮತಾ ಬ್ಯಾನರ್ಜಿ

ದೇಶಕ್ಕೆ ಬಿಜೆಪಿ ಆಡಳಿತದಿಂದ ಆಗಿರುವ ನೋವಿಗೆ ಹೋಲಿಸಿದರೆ ನನ್ನ ನೋವು ಏನೂ ಅಲ್ಲ : ಮಮತಾ ಬ್ಯಾನರ್ಜಿ


 ದೇಶಕ್ಕೆ ಬಿಜೆಪಿ ಆಡಳಿತದಿಂದ ಆಗಿರುವ ನೋವಿಗೆ ಹೋಲಿಸಿದರೆ ನನ್ನ ನೋವು ಏನೂ ಅಲ್ಲ : ಮಮತಾ ಬ್ಯಾನರ್ಜಿ

ನಂದಿಗ್ರಾಮ (ಪಶ್ಚಿಮ ಬಂಗಾಳ): ನಂದಿಗ್ರಾಮ ಕ್ಷೇತ್ರದಿಂದ ರಾಜ್ಯ ವಿಧಾನಸಭೆಗೆ ಆಯ್ಕೆ ಬಯಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ತಮ್ಮ ಪ್ರಚಾರ ಅಭಿಯಾನವನ್ನು ಭರ್ಜರಿಯಾಗಿ ಮುಗಿಸಿದರು. ರಾಷ್ಟ್ರಗೀತೆ ಹಾಡುವ ವೇಳೆ ವ್ಹೀಲ್‌ಚೇರ್‌ನಿಂದ ಎದ್ದುನಿಂತು ಗೌರವ ಸೂಚಿಸಿ ಗಮನ ಸೆಳೆದರು.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಅವರ ಮಾಜಿ ಸಹವರ್ತಿ ಸುವೇಂಧು ಅಧಿಕಾರಿ ನಡುವಿನ ಹೋರಾಟದಿಂದಾಗಿ ನಂದಿಗ್ರಾಮ ಕ್ಷೇತ್ರ ರಾಷ್ಟ್ರದ ಗಮನ ಸೆಳೆದಿದೆ. ಈ ಕ್ಷೇತ್ರದಲ್ಲಿ ಗುರುವಾರ ಮತದಾನ ನಡೆಯಲಿದ್ದು, ಬಹಿರಂಗ ಪ್ರಚಾರ ಮಂಗಳವಾರ ಸಂಜೆ ಮುಕ್ತಾಯವಾಯಿತು.

ನಾಮಪತ್ರ ಸಲ್ಲಿಕೆ ದಿನ ಕಾಲಿಗೆ ತೀವ್ರ ಗಾಯವಾಗಿದ್ದ ಮಮತಾ ಬ್ಯಾನರ್ಜಿ ವ್ಹೀಲ್‌ಚೇರ್‌ನಲ್ಲಿ ಕುಳಿತೇ ರಾಜ್ಯಾದ್ಯಂತ ಪ್ರಚಾರ ನಡೆಸಿದ್ದರು. ತಮ್ಮ ಪ್ರತಿ ಪ್ರಚಾರ ಭಾಷಣದಲ್ಲಿ, "ದೇಶಕ್ಕೆ ಬಿಜೆಪಿ ಆಡಳಿತದಿಂದ ಆಗಿರುವ ನೋವಿಗೆ ಹೋಲಿಸಿದರೆ ನನ್ನ ನೋವು ಏನೂ ಅಲ್ಲ" ಎಂದು ಒತ್ತಿ ಹೇಳಿದ್ದರು.

ಅವರು ರಾಷ್ಟ್ರಗೀತೆ ವೇಳೆ ವ್ಹೀಲ್‌ಚೇರ್‌ನಿಂದ ಎದ್ದು ನಿಲ್ಲುವ ಮೂಲಕ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಇದನ್ನು ಮಾಸ್ಟರ್‌ಸ್ಟ್ರೋಕ್ ಎಂದು ಬಣ್ಣಿಸಲಾಗಿದೆ.

ಹತ್ತು ವರ್ಷದ ಹಿಂದೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾರಣವಾಗಿದ್ದ ನಂದಿಗ್ರಾಮ, 35 ವರ್ಷಗಳ ಎಡರಂಗ ಸರ್ಕಾರದ ಆಡಳಿತವನ್ನು ಕೊನೆಗೊಳಿಸಿತ್ತು. ಈ ಬಾರಿಯ ಚುನಾವಣೆ ಹೋರಾಟ ಅವರ ವೃತ್ತಿಜೀವನದಲ್ಲೇ ಕಠಿಣ ಹೋರಾಟ ಎಂದು ವಿಶ್ಲೇಷಿಸಲಾಗುತ್ತಿದೆ. ಸುವೇಂಧು ಅಧಿಕಾರಿಗೆ ನಂದಿಗ್ರಾಮವನ್ನು ಆಯ್ಕೆ ಮಾಡಿಕೊಳ್ಳುವುದು ಅನಿವಾರ್ಯವಾಗಿತ್ತು.

ಎಡರಂಗ ಸರ್ಕಾರ ಭೂಮಿಸ್ವಾಧೀನಪಡಿಸಿಕೊಂಡಿದ್ದನ್ನು ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ತಳಮಟ್ಟದ ಸಂಘಟನೆ ಮಾಡಿದ್ದ ಸುವೇಂಧು ಅಧಿಕಾರಿ ತೀರಾ ಇತ್ತೀಚಿನವರೆಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ನಿಕಟವರ್ತಿಯಾಗಿದ್ದರು. ಇತ್ತೀಚೆಗೆ ಬಿಜೆಪಿ ಸೇರುವ ಮೂಲಕ ದೀದಿ ವಿರುದ್ಧ ಸಮರ ಸಾರಿದ್ದರು.


 'ಇನ್ಸ್ಟಾಗ್ರಾಮ್' ಸರ್ವರ್ ಡೌನ್ : ಬಳಕೆದಾರರು ವೀಡಿಯೋ, ಪೋಟೋ ಶೇರ್ ಮಾಡೋದಕ್ಕೆ ಹರಸಾಹಸ

'ಇನ್ಸ್ಟಾಗ್ರಾಮ್' ಸರ್ವರ್ ಡೌನ್ : ಬಳಕೆದಾರರು ವೀಡಿಯೋ, ಪೋಟೋ ಶೇರ್ ಮಾಡೋದಕ್ಕೆ ಹರಸಾಹಸ


'ಇನ್ಸ್ಟಾಗ್ರಾಮ್' ಸರ್ವರ್ ಡೌನ್ : ಬಳಕೆದಾರರು ವೀಡಿಯೋ, ಪೋಟೋ ಶೇರ್ ಮಾಡೋದಕ್ಕೆ ಹರಸಾಹಸ

ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಈಗಾಗಲೇ ಗೂಗಲ್, ಫೇಸ್ ಬುಕ್ ಸರ್ವರ್ ನಂತ್ರ, ಇದೀಗ ಇನ್ಸ್ಟಾಗ್ರಾಮ್ ಸರ್ವರ್ ಡೌನ್ ಆಗಿದೆ. ಹೀಗಾಗಿ ಆಂಡ್ರಾಯ್ಡ್ ಯೂಸರ್ ಪೋಟೋ, ವೀಡಿಯೋ ಶೇರ್ ಮಾಡೋದಕ್ಕೆ ಹರ ಸಾಹಸ ಪಡುವಂತಾಗಿದೆ.

ಈ ಕುರಿತಂತೆ ಅನೇಕರು ಇನ್ಸ್ಟಾಗ್ರಾಮ್ ಬಳಕೆದಾರರು ಟ್ವಿಟ್ ಮಾಡಿದ್ದು, ಇಂದು ಇನ್ಸ್ಟಾಗ್ರಾಮ್ ಬಳಸೋದಕ್ಕೆ ಕಷ್ಟವಾಗಿದೆ. ನೇರ ಚಾಟಿಂಗ್, ವೀಡಿಯೋ ಶೇರಿಂಗ್ ಮಾಡೋದಕ್ಕೆ ಸರ್ವಸ್ ಸ್ಲೋ ಆಗಿದೆ. ಇದರಿಂದಾಗಿ ನಾವು ಕಿರಿಕಿರಿ ಎಂದುರಿಸುವಂತಾಗಿದೆ ಎಂದು ತಿಳಿಸಿದ್ದಾರೆ.


ರಮೇಶ್ ಜಾರಕಿಹೊಳಿ ವಿರುದ್ಧ ಅನಗತ್ಯ ಆರೋಪ ಮಾಡಲಾಗಿದೆ: ಸಿಎಂ ಯಡಿಯೂರಪ್ಪ

ರಮೇಶ್ ಜಾರಕಿಹೊಳಿ ವಿರುದ್ಧ ಅನಗತ್ಯ ಆರೋಪ ಮಾಡಲಾಗಿದೆ: ಸಿಎಂ ಯಡಿಯೂರಪ್ಪ


ರಮೇಶ್ ಜಾರಕಿಹೊಳಿ ವಿರುದ್ಧ ಅನಗತ್ಯ ಆರೋಪ ಮಾಡಲಾಗಿದೆ: ಸಿಎಂ ಯಡಿಯೂರಪ್ಪ

ಬೆಳಗಾವಿ, ಮಾ.30: ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧದ ಸಿಡಿ ಪ್ರಕರಣ ಕುರಿತು ಎಸ್‍ಐಟಿಯವರು ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಿದ್ದು, ಕಾಂಗ್ರೆಸ್ ಪಕ್ಷದವರು ಇದರಲ್ಲಿ ದುರುದ್ದೇಶದ ರಾಜಕೀಯ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ನಾಮಪತ್ರ ಸಲ್ಲಿಕೆ ಮಾಡಿದ ನಂತರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಸಿಡಿ ಪ್ರಕರಣದ ಕುರಿತು ಪೊಲೀಸರು ಸಮರ್ಥವಾಗಿ ತನಿಖೆ ನಡೆಸುತ್ತಿದ್ದಾರೆ. ಪ್ರತಿದಿನ ಈ ಬಗ್ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಂದ ಮಾಹಿತಿ ಪಡೆಯುತ್ತಿದ್ದೇನೆ. ರಮೇಶ್ ಜಾರಕಿಹೊಳಿ ವಿರುದ್ಧ ಅನಗತ್ಯವಾದ ಆರೋಪ ಮಾಡಲಾಗಿದ್ದು, ಅವರು ನಿರಪರಾಧಿಯಾಗಿ ಹೊರಬರುತ್ತಾರೆ ಎಂಬ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಕಾನೂನು ಚೌಕಟ್ಟಿನಲ್ಲಿ ಏನೆಲ್ಲ ಆಗುತ್ತೆ ಅನ್ನೋದನ್ನು ಕಾದು ನೋಡೋಣ. ನಾವು ಎಲ್ಲ ಬಗೆಯ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಿದ್ದೇವೆ. ಈ ಸಿಡಿ ಪ್ರಕರಣ ಉಪ ಚುನಾವಣೆಯ ಮೇಲೆ ಯಾವುದೆ ಪರಿಣಾಮ ಬೀರಲ್ಲ. ಉಪ ಚುನಾವಣೆಯ ಪ್ರಚಾರ ಕಾರ್ಯಕ್ಕೆ ಬರುವಂತೆ ರಮೇಶ್ ಜಾರಕಿಹೊಳಿಯನ್ನು ಆಹ್ವಾನಿಸಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.

ಆಕಸ್ಮಿಕವಾಗಿ ಈ ಉಪ ಚುನಾವಣೆ ಎದುರಾಗಿದೆ. ಸುರೇಶ್ ಅಂಗಡಿ ಅವರ ಅಕಾಲಿಕ ನಿಧನದಿಂದಾಗಿ ಈ ಚುನಾವಣೆಯನ್ನು ಎದುರಿಸಬೇಕಾಗಿದೆ. ಸುರೇಶ್ ಅಂಗಡಿ ಅವರ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡುವಂತೆ ಬೆಳಗಾವಿ ಜಿಲ್ಲಾ ಬಿಜೆಪಿ ನಾಯಕರ ಬೇಡಿಕೆಯಾಗಿತ್ತು. ಆದುದರಿಂದ, ಸುರೇಶ್ ಅಂಗಡಿ ಅವರ ಪತ್ನಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ ಎಂದು ಅವರು ಹೇಳಿದರು.

ಸುರೇಶ್ ಅಂಗಡಿ ಮಾಡಿರುವ ಜನಪರ ಕಾರ್ಯಗಳು ಮತದಾರರ ಮನಸ್ಸಿನಲ್ಲಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಜೊತೆಯಲ್ಲಿ ಬಸವಕಲ್ಯಾಣ ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿಗಳು ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದರು.


 


 ಸುಯೆಜ್‌ ಕಾಲುವೆಯಲ್ಲಿ ಹಡಗು ಸಿಲುಕಿದ್ದು ಹೇಗೆ? ತನಿಖೆ ಆರಂಭ

ಸುಯೆಜ್‌ ಕಾಲುವೆಯಲ್ಲಿ ಹಡಗು ಸಿಲುಕಿದ್ದು ಹೇಗೆ? ತನಿಖೆ ಆರಂಭ


 ಸುಯೆಜ್‌ ಕಾಲುವೆಯಲ್ಲಿ ಹಡಗು ಸಿಲುಕಿದ್ದು ಹೇಗೆ? ತನಿಖೆ ಆರಂಭ

ಸುಯೆಜ್ (ಈಜಿಪ್ಟ್): ವಾರದ ಬಳಿಕ ಸುಯೆಜ್‌ ಕಾಲುವೆ ಸಂಚಾರಕ್ಕೆ ಮುಕ್ತವಾಗಿದೆ. ಇಲ್ಲಿ ಸಿಲುಕಿದ್ದ ಎವರ್‌ಗಿವನ್‌ ಬೃಹತ್‌ ಕಂಟೇನರ್‌ಗಳ ಹಡಗನ್ನು ಸೋಮವಾರ ತೆರವುಗೊಳಿಸಲಾಗಿದೆ. ಈ ಹಡಗು ಕಾಲುವೆಯಲ್ಲಿ ಸಿಲುಕಿಕೊಂಡ ಕುರಿತು ವಿವಿಧ ತಜ್ಞರು ತನಿಖೆ ನಡೆಸಲಿದ್ದಾರೆ ಎಂದು ಹಡಗಿನ ಮಾಲೀಕ ಸಂಸ್ಥೆ ಶೋಯ ಕಿಸೆನ್‌ ಹೇಳಿದೆ.

ಹಡಗು ಬದಿಗೆ ಸರಿಯಲು ಉಂಟಾದ ಕಾರಣಗಳ ಬಗ್ಗೆ ಚರ್ಚಿಸಲು ನಿರಾಕರಿಸಿದ ಸಂಸ್ಥೆಯ ಪ್ರತಿನಿಧಿ, ಹಡಗಿನ ವೇಗ ಮತ್ತು ಇತರ ದೋಷಗಳು ಸೇರಿದಂತೆ ನಡೆಯುತ್ತಿರುವ ತನಿಖೆ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ಹಡಗಿನ ಕೆಳಭಾಗದಲ್ಲಿ ಹೆಚ್ಚಿನ ಹಾನಿ ಆಗಿರಬಹುದು ಎಂದು ಕಂಪನಿ ತಿಳಿಸಿದೆ. ಈಜಿಪ್ಟ್‌ ಅಥವಾ ಬೇರೆ ಬಂದರಿನಲ್ಲಿ ಈ ಹಡಗನ್ನು ರಿಪೇರಿ ಮಾಡಿಸಲಾಗುತ್ತದೆಯಾ ಅಥವಾ ಅದರ ಗಮ್ಯಕ್ಕೆ ಹೋಗುತ್ತದೆಯಾ ಎಂಬುದು ತಕ್ಷಣಕ್ಕೆ ತಿಳಿದಿಲ್ಲ. ಇದನ್ನು ಹಡಗಿನ ಮಾಲೀಕರಿಗಿಂತ ಅದರ ನಾವಿಕರು ನಿರ್ಧರಿಸುತ್ತಾರೆ ಎಂದು ಕಂಪನಿ ತಿಳಿಸಿದೆ.

ತಜ್ಞರು ಸಂಭವನೀಯ ಹಾನಿಯ ಕುರಿತು ಕುರುಹುಗಳನ್ನೂ ಹುಡುಕುತ್ತಿದ್ದಾರೆ ಮತ್ತು ಕಾಲುವೆಯಲ್ಲಿ ಹಡಗು ಸಿಲುಕಲು ನಿಖರ ಕಾರಣಗಳೇನು ಎಂಬುದನ್ನು ಪತ್ತೆ ಹಚ್ಚುವಲ್ಲಿ ತೊಡಗಿದ್ದಾರೆ ಎಂದು ಹೆಸರು ಹೇಳಲು ಬಯಸದ ಹಿರಿಯ ನಾವಿಕರೊಬ್ಬರು ಮಾಹಿತಿ ನೀಡಿದರು.

ಎಂಜಿನಿಯರ್‌ಗಳು ಹಡಗಿನ ಎಂಜಿನ್‌ಗಳನ್ನು ಪರೀಕ್ಷಿಸುತ್ತಿದ್ದಾರೆ. ಅದು ತನ್ನ ಗಮ್ಯ ಸ್ಥಾನವಾದ ನೆದರ್‌ಲೆಂಡ್ಸ್‌ಗೆ ಯಾವಾಗ ತಲುಪಬಹುದು ಎಂಬುದನ್ನು ಅಂದಾಜು ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಸುಯೆಜ್ ಕಾಲುವೆಯಲ್ಲಿ ಉಂಟಾಗಿದ್ದ ಸಂಚಾರ ದಟ್ಟಣೆಯಿಂದಾಗಿ ಎರಡೂ ಬದಿಯಲ್ಲಿ 367 ಹಡಗುಗಳು ಕಾಯುತ್ತಿದ್ದವು. ಇದೀಗ ಅವುಗಳ ಸಂಚಾರ ಆರಂಭವಾಗಿದ್ದು, ಎಲ್ಲ ಹಡಗುಗಳು ಇಲ್ಲಿಂದ ತೆರವುಗೊಳ್ಳಲು ಕನಿಷ್ಠ 10 ದಿನಗಳಾದರೂ ಬೇಕಾಗಬಹುದು ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.

 ಚಿನ್ನದ ಬೆಲೆ ಸತತ 4ನೇ ದಿನ ಇಳಿಕೆ: ಗರಿಷ್ಠ ಪ್ರಮಾಣಕ್ಕಿಂತ 12,000 ರೂಪಾಯಿ ಕಡಿಮೆ

ಚಿನ್ನದ ಬೆಲೆ ಸತತ 4ನೇ ದಿನ ಇಳಿಕೆ: ಗರಿಷ್ಠ ಪ್ರಮಾಣಕ್ಕಿಂತ 12,000 ರೂಪಾಯಿ ಕಡಿಮೆ


 ಚಿನ್ನದ ಬೆಲೆ ಸತತ 4ನೇ ದಿನ ಇಳಿಕೆ: ಗರಿಷ್ಠ ಪ್ರಮಾಣಕ್ಕಿಂತ 12,000 ರೂಪಾಯಿ ಕಡಿಮೆ

ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಮತ್ತಷ್ಟು ದುರ್ಬಲಗೊಂಡಿದ್ದು, ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಇಂದು ಕುಸಿದಿದೆ. ಎಂಸಿಎಕ್ಸ್‌ನಲ್ಲಿ ಜೂನ್ ಚಿನ್ನದ ಭವಿಷ್ಯವು 10 ಗ್ರಾಂಗೆ ಶೇಕಡಾ 0.4ರಷ್ಟುಇಳಿಕೆಯಾಗಿ, 44,538 ರೂಪಾಯಿಗೆ ಇಳಿದಿದೆ.

ಇನ್ನು ಬೆಳ್ಳಿ ಬೆಲೆಯು ಶೇಕಡಾ 0.3ರಷ್ಟು ಕುಸಿದು ಪ್ರತಿ ಕೆಜಿಗೆ 63,985 ರೂಪಾಯಿಗೆ ತಲುಪಿದೆ. ಕಳೆದ ವಹಿವಾಟಿನ್ಲಲಿ ಚಿನ್ನವು ಶೇಕಡಾ 8ರಷ್ಟು ಕುಸಿದಿದ್ದರೆ, ಬೆಳ್ಳಿ ಪ್ರತಿ ಕೆಜಿಗೆ ಶೇಕಡಾ 1ರಷ್ಟು ಇಳಿಕೆಯಾಗಿದೆ.

ಜಾಗತಿಕ ಮಾರುಕಟ್ಟೆಗಳಲ್ಲಿ ಚಿನ್ನವು ಶೇಕಡಾ 0.4ರಷ್ಟು ಇಳಿದು ಎರಡು ವಾರಗಳ ಕನಿಷ್ಠ ಮಟ್ಟಕ್ಕೆ ತಲುಪಿದ್ದು, ಔನ್ಸ್‌ಗೆ 1,704.90 ಡಾಲರ್‌ಗೆ ತಲುಪಿದೆ. ಅಮೆರಿಕಾ ಅಧ್ಯಕ್ಷ ಜೋ ಬಿಡನ್ ಅವರ ಮೂಲಸೌಕರ್ಯ ಪ್ಯಾಕೇಜ್ ಮತ್ತು ಸಾಲ ವಿತರಣೆಯನ್ನು ಹೆಚ್ಚಿಸಬಹುದೆಂಬ ನಿರೀಕ್ಷೆಯ ಮೇಲೆ ಯುಎಸ್ ಬಾಂಡ್ ಇಳುವರಿ ಹೆಚ್ಚಾಗಿದೆ.

ಏಷ್ಯಾದ ಷೇರು ಮಾರುಕಟ್ಟೆಗಳು ಇಂದು ಸಕಾರಾತ್ಮಕವಾಗಿ ತೆರೆದಿವೆ. ಸರಕು ಸಾಗಣೆ ಹಡಗು ಮುಕ್ತವಾದ ನಂತರ ವಿಶ್ವದ ಪ್ರಮುಖ ಜಲಮಾರ್ಗಗಳಲ್ಲಿ ಒಂದಾದ ಸೂಯೆಜ್ ಕಾಲುವೆಯನ್ನು ಪುನಃ ತೆರೆದಿದೆ.

 ಇಂದು ತಮಿಳುನಾಡಿಗೆ ಪ್ರಧಾನಿ ನರೇಂದ್ರ ಮೋದಿ: ಟ್ವಿಟರ್‌ ನಲ್ಲಿ ‌ಗೋ ಬ್ಯಾಕ್ ಮತ್ತೆ ಟ್ರೆಂಡಿಂಗ್‌

ಇಂದು ತಮಿಳುನಾಡಿಗೆ ಪ್ರಧಾನಿ ನರೇಂದ್ರ ಮೋದಿ: ಟ್ವಿಟರ್‌ ನಲ್ಲಿ ‌ಗೋ ಬ್ಯಾಕ್ ಮತ್ತೆ ಟ್ರೆಂಡಿಂಗ್‌


 ಇಂದು ತಮಿಳುನಾಡಿಗೆ ಪ್ರಧಾನಿ ನರೇಂದ್ರ ಮೋದಿ: ಟ್ವಿಟರ್‌ ನಲ್ಲಿ ‌ಗೋ ಬ್ಯಾಕ್ ಮತ್ತೆ ಟ್ರೆಂಡಿಂಗ್‌

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿಗೆ ಭೇಟಿ ನೀಡುವ ಸಂದರ್ಭಗಳಲ್ಲೆಲ್ಲಾ ʼಗೋ ಬ್ಯಾಕ್‌ ಮೋದಿʼ ಹ್ಯಾಶ್‌ ಟ್ಯಾಗ್‌ ಟ್ರೆಂಡಿಂಗ್‌ ಆಗಿದ್ದು, ಇದೀಗ ಇಂದು ಸಮಾವೇಶದಲ್ಲಿ ಭಾಗವಹಿಸಲೆಂದು ಪ್ರಧಾನಿ ನರೇಂದ್ರ ಮೋದಿ ತಮಿಳುನಾಡಿಗೆ ಆಗಮಿಸಲಿದ್ದು, ಟ್ವಿಟರ್‌ ನಲ್ಲಿ ಗೋ ಬ್ಯಾಕ್‌ ಮೋದಿ ಹ್ಯಾಶ್‌ ಟ್ಯಾಗ್‌ ಮತ್ತೆ ಟ್ರೆಂಡಿಂಗ್‌ ಆಗಿದೆ.

"ಗೋ ಬ್ಯಾಕ್‌ ಮೋದಿ ಕೇವಲ ತಮಿಳರದ್ದಲ್ಲ, ರೈತರು, ಅಲ್ಪಸಂಖ್ಯಾತರು, ಮಹಿಳೆಯರು, ದಲಿತರು ಮತ್ತು ತುಳಿಥಕ್ಕೊಳಗಾದ ವರ್ಗದವರ ಘೋಷಣೆಯಾಗಿದೆ. ತುಳಿತಕ್ಕೊಳಗಾಗುವುದು ನಮ್ಮ ಅತೀದೊಡ್ಡ ಶತ್ರು ಎಂದು ಪೆರಿಯಾರ್‌ ನಮಗೆ ತಿಳಿಸಿಕೊಟ್ಟಿದ್ದಾರೆ" ಎಂದು ಬಳಕೆದಾರರೋರ್ವರು ಟ್ವೀಟ್‌ ಮಾಡಿದ್ದಾರೆ. "ಗೋ ಬ್ಯಾಕ್ ಮೋದಿ ಟ್ರೆಂಡಿಂಗ್‌ ಆಗುತ್ತಿದೆ. ಹಾಗಾದ್ರೆ ಇಂದು ಮೋದಿ ತಮಿಳುನಾಡಿಗೆ ಆಗಮಿಸುತ್ತಿರಬಹುದು" ಎಂದು ಬಳಕೆದಾರರು ಟ್ವೀಟ್‌ ಮಾಡಿದ್ದಾರೆ.‌

"ನಮಗೆ ತಮಿಳುನಾಡು ಉತ್ತರಪ್ರದೇಶ ಆಗುವುದು ಇಷ್ಟವಿಲ್ಲ" ಎಂಧು ವ್ಯಕ್ತಿಯೋರ್ವರು ಟ್ವೀಟ್‌ ಮಾಡಿದ್ದಾರೆ. ಕೇವಲ ಸಾಮಾಜಿಕ ತಾಣಗಳಲ್ಲಿ ಮಾತ್ರವಲ್ಲದೇ, ಚೆನ್ನೈನಲ್ಲಿ ಜನರು ಬೃಹದಾಕಾರದ ಬಲೂನ್‌ ನಲ್ಲಿ ʼಗೋ ಬ್ಯಾಕ್‌ ಮೋದಿʼ ಎಂದು ಬರೆದು ಆಕಾಶಕ್ಕೆ ಬಿಟ್ಟಿದ್ದಾರೆ. ಈ ಫೋಟೊಗಳು ಕೂಡಾ ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿದೆ.

 ಕೊರೋನ ಅಲೆ ತೀವ್ರವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಾದ್ಯಂತ 144(3) ಸೆಕ್ಷನ್ ಜಾರಿ: ಡಿ.ಸಿ ಡಾ. ರಾಜೇಂದ್ರ

ಕೊರೋನ ಅಲೆ ತೀವ್ರವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಾದ್ಯಂತ 144(3) ಸೆಕ್ಷನ್ ಜಾರಿ: ಡಿ.ಸಿ ಡಾ. ರಾಜೇಂದ್ರ


 ಕೊರೋನ ಅಲೆ ತೀವ್ರವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಾದ್ಯಂತ 144(3) ಸೆಕ್ಷನ್ ಜಾರಿ: ಡಿ.ಸಿ ಡಾ. ರಾಜೇಂದ್ರ

ಮಂಗಳೂರು : ಕೊರೋನ ವೈರಸ್‌ ಸೋಂಕು 2ನೇ ಅಲೆ ತೀವ್ರವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಹಾಗೂ ದ.ಕ. ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆಯಿಂದ ಸಾರ್ವಜನಿಕ ಆರೋಗ್ಯ ಕಾಪಾಡುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ 144 (3) ಸೆಕ್ಷನ್ ಜಾರಿ ಮಾಡಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅವರು ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯಾದ್ಯಂತ ಮಾರ್ಚ್‌ 29ರಿಂದಲೇ 144(3) ಸೆಕ್ಷನ್‌ ನಿಷೇಧಾಜ್ಞೆ ಜಾರಿಯಲ್ಲಿದ್ದು, ಮುಂದಿನ ಆದೇಶದವರೆಗೆ ಇದು ಮುಂದುವರಿಯಲಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಮುಂಬರುವ ಧಾರ್ಮಿಕ ಹಬ್ಬಗಳಾದ ಯುಗಾದಿ, ಹೋಳಿಹಬ್ಬ, ಶಬೇ ಬರಾಅತ್ , ಗುಡ್ ಫ್ರೈಡೇ ಇತ್ಯಾದಿ ಸಂದರ್ಭದಲ್ಲಿ ಯಾವುದೇ ಸಾರ್ವಜನಿಕ ಸ್ಥಳಗಳು, ಸಾರ್ವಜನಿಕ ಮೈದಾನ, ಉದ್ಯಾನವನ, ಮಾರುಕಟ್ಟೆ, ಧಾರ್ಮಿಕ ಪ್ರದೇಶಗಳು ಇತ್ಯಾದಿ ಪ್ರದೇಶದಲ್ಲಿ ಸಾರ್ವಜನಿಕ ಸಮಾರಂಭಗಳನ್ನು ಸಭೆಗಳನ್ನು ನಡೆಸುವಂತಿಲ್ಲ ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಲಾಗಿದೆ.

ಇದು ಮಾತ್ರವಲ್ಲದೆ ಸಾರ್ವಜನಿಕರು ಗುಂಪಾಗಿ ಹೆಚ್ಚು ಸೇರುವಂತಹ ಜಾತ್ರೆ, ಮೇಳ, ಸಮಾವೇಶ, ಸಮ್ಮೇಳನ, ಆಚರಣೆ ಹಾಗೂ ಧಾರ್ಮಿಕ ಸಮಾರಂಭಗಳಲ್ಲಿ ಕೊರೋನ ವೈರಸ್‌ ಸೋಂಕು ಹರಡುವ ಸಾಧ್ಯಗಳಿವೆ. ಈ ಹಿನ್ನೆಲೆಯಲ್ಲಿ ಸೋಂಕನ್ನು ನಿಯಂತ್ರಿಸುವ ದೃಷ್ಟಿಯಿಂದ ಮಾರ್ಚ್‌ 29 ರಿಂದ ಮುಂದಿನ ಸೂಚನೆಯ ವರೆಗೆ ಜಿಲ್ಲೆಯಾದ್ಯಂತ ಮೇಲೆ ತಿಳಿಸಿರುವ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸ ಲಾಗಿದೆ. ಅಲ್ಲದೆ, ಜಿಲ್ಲೆಯಾದ್ಯಂತ 5 ಜನಕ್ಕಿಂತ ಹೆಚ್ಚು ಜನರು ಗುಂಪು ಸೇರುವುದನ್ನು ನಿಷೇಧಿಸಿ, ಜಿಲ್ಲಾಧಿಕಾರಿಗಳು ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.

  ಕೇರಳದಲ್ಲಿ ಯುಡಿಎಫ್‌ ಮತ್ತು ಎಲ್‌ಡಿಎಫ್‌ ವಿರುದ್ಧ ಗುಡುಗಿದ ಪ್ರಧಾನಿ ನರೇಂದ್ರ ಮೋದಿ

ಕೇರಳದಲ್ಲಿ ಯುಡಿಎಫ್‌ ಮತ್ತು ಎಲ್‌ಡಿಎಫ್‌ ವಿರುದ್ಧ ಗುಡುಗಿದ ಪ್ರಧಾನಿ ನರೇಂದ್ರ ಮೋದಿ


  ಕೇರಳದಲ್ಲಿ ಯುಡಿಎಫ್‌ ಮತ್ತು ಎಲ್‌ಡಿಎಫ್‌ ವಿರುದ್ಧ ಗುಡುಗಿದ ಪ್ರಧಾನಿ ನರೇಂದ್ರ ಮೋದಿ 

ಪಾಲಕ್ಕಾಡ್‌: ಕೇರಳದಲ್ಲಿ 'ಮೆಟ್ರೋಮ್ಯಾನ್‌' ಇ. ಶ್ರೀಧರನ್ ಸೇರಿದಂತೆ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದು, ಯುಡಿಎಫ್‌ ಮತ್ತು ಎಲ್‌ಡಿಎಫ್‌ ವಿರುದ್ಧ ಗುಡುಗಿದರು.

ಸಿಪಿಐ(ಎಂ) ಮತ್ತು ಕಾಂಗ್ರೆಸ್‌ ನೇತೃತ್ವದ ಮೈತ್ರಿ ಪಕ್ಷಗಳ ಕಾರ್ಯಾಚರಣೆಯನ್ನು ಟೀಕಿಸುತ್ತ, 'ಹಲವು ವರ್ಷಗಳಿಂದ ಕೇರಳ ರಾಜಕೀಯದಲ್ಲಿ ರಹಸ್ಯವಾಗಿದ್ದ ಅತ್ಯಂತ ಕೆಟ್ಟ ಸಂಗತಿ ಎಂದರೆ ಯುಡಿಎಫ್‌ ಮತ್ತು ಎಲ್‌ಡಿಎಫ್‌ನ ಸ್ನೇಹಪರ ಒಪ್ಪಂದ. ಈಗ ಮೊಟ್ಟಮೊದಲ ಬಾರಿಗೆ ಕೇರಳದ ಮತದಾರರು, ಏನಿದು ಮ್ಯಾಚ್‌-ಫಿಕ್ಸಿಂಗ್‌ (ಒಳ ಒಪ್ಪಂದ) ಎಂದು ಕೇಳುತ್ತಿದ್ದಾರೆ' ಎಂದರು.

'ಮೆಟ್ರೊಮ್ಯಾನ್‌ ಇ.ಶ್ರೀಧರನ್‌ ಕೇರಳದ ಸುಪುತ್ರ' ಎಂದ ಪ್ರಧಾನಿ ಮೋದಿ, ಅವರು ಸಮಾಜಕ್ಕಾಗಿ ಹಲವು ಪ್ರಮುಖ ಕೊಡುಗೆಗಳನ್ನು ನೀಡಿದ್ದಾರೆ ಹಾಗೂ ಅವರಿಗೆ ಅಧಿಕಾರದ ಹಪಾಹಪಿ ಇಲ್ಲ ಎಂದರು.

'ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ನಿಮ್ಮ ಆಶೀರ್ವಾದ ಕೋರಲು ಇಂದು ನಾನಿಲ್ಲಿಗೆ ಬಂದಿರುವೆ. ಪ್ರಸ್ತುತ ಕೇರಳದಲ್ಲಿರುವ ಪರಿಸ್ಥಿತಿಗಿಂತ ಭಿನ್ನವಾದ ದೂರದೃಷ್ಟಿತ್ವದೊಂದಿಗೆ ಬಂದಿದ್ದೇನೆ. ಬಿಜೆಪಿಯ ಉದ್ದೇಶವು ದೂರದೃಷ್ಟಿತ್ವ ಮತ್ತು ಮಹತ್ವಾಕಾಂಕ್ಷೆಯದ್ದಾಗಿದೆ. ಹಾಗಾಗಿಯೇ, ರಾಜ್ಯದಲ್ಲಿನ ಯುವಕರು, ವೃತ್ತಿಪರ ಸಮುದಾಯಗಳು ಬಹಿರಂಗವಾಗಿ ಬಿಜೆಪಿಯನ್ನು ಬೆಂಬಲಿಸುತ್ತಿವೆ. ದೇಶದಾದ್ಯಂತ ಇಂಥದ್ದೇ ಟ್ರೆಂಡ್‌ ಕಾಣಬಹುದಾಗಿದೆ' ಎಂದು ಮೋದಿ ರ್‍ಯಾಲಿಯಲ್ಲಿ ಹೇಳಿದರು.

'ಈ ಕ್ಷೇತ್ರಕ್ಕಾಗಿ ನಾನು ಮಾಸ್ಟರ್ ಪ್ಲಾನ್‌ ಸಿದ್ಧಪಡಿಸಿದ್ದೇನೆ. ಅದರಲ್ಲಿ 24 ಗಂಟೆಗಳು ನೀರು ಪೂರೈಕೆ, ಘನ ತ್ಯಾಜ್ಯ ನಿರ್ವಹಣೆ ಕಾರ್ಯಕ್ರಮಗಳಿವೆ. ಮುಂದಿನ 5 ವರ್ಷಗಳಲ್ಲಿ 25 ಲಕ್ಷ ಮರಗಳನ್ನು ನೆಡುವ ಮೂಲಕ ಹರಿಸು ಹೊದಿಕೆಯನ್ನು ಸೃಷ್ಟಿಸುವ ಗುರಿ ಇದೆ' ಎಂದು ಪಾಲಕ್ಕಾಡ್‌ನ ಬಿಜೆಪಿ ಅಭ್ಯರ್ಥಿ ಇ.ಶ್ರೀಧರನ್‌ ಹೇಳಿದರು.

ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಯಾದ ಇ. ಶ್ರೀಧರನ್ ಸ್ಪರ್ಧೆಯಿಂದಾಗಿ ಪಾಲಕ್ಕಾಡ್‌ ಕ್ಷೇತ್ರವು ಪ್ರತಿಷ್ಠಿತ ಎನಿಸಿಕೊಂಡಿದೆ. ಮೂರನೇ ಅವಧಿಗೆ ಮರು ಆಯ್ಕೆ ಬಯಸಿರುವ ಕಾಂಗ್ರೆಸ್‌ನ ಶಫಿ ಪರಂಬಿಲ್‌ ಪ್ರಬಲ ಸ್ಪರ್ಧಿಯಾಗಿದ್ದಾರೆ.

Monday, 29 March 2021

 ಬಿಜೆಪಿ ಕಚೇರಿಯಲ್ಲೇ ವ್ಯಕ್ತಿಗೆ ಹೊಡೆದ ಕೇಂದ್ರ ಸಚಿವ !

ಬಿಜೆಪಿ ಕಚೇರಿಯಲ್ಲೇ ವ್ಯಕ್ತಿಗೆ ಹೊಡೆದ ಕೇಂದ್ರ ಸಚಿವ !

 

ಬಿಜೆಪಿ ಕಚೇರಿಯಲ್ಲೇ ವ್ಯಕ್ತಿಗೆ ಹೊಡೆದ ಕೇಂದ್ರ ಸಚಿವ !

ಕೊಲ್ಕತ್ತಾ: ಬಿಜೆಪಿ ಕಚೇರಿಯಲ್ಲೇ ವ್ಯಕ್ತಿಯೊಬ್ಬರನ್ನು ಥಳಿಸಿದ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ರಾಜ್ಯ ಸಚಿವ ಬಬೂಲ್ ಸುಪ್ರಿಯೊ, ಮೈಮೇಲೆ ವಿವಾದ ಎಳೆದುಕೊಂಡಿದ್ದಾರೆ. ಈ ಗಾಯಕ, ರಾಜಕಾರಣಿ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೋಲಿಗಂಜ್ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದಾರೆ.

ಕೇವಲ ಟಿವಿ ಕ್ಯಾಮೆರಾ ಮುಂದೆ ಪೋಸ್ ನೀಡುವುದು ಮತ್ತು ಬೈಟ್‌ಗಳನ್ನು ಕೊಡುವ ಬದಲು ಕ್ಷೇತ್ರದಲ್ಲಿ ಗಂಭೀರ ಪ್ರಚಾರ ಕೈಗೊಳ್ಳಿ ಎಂದು ಪದೇ ಪದೇ ಸುಪ್ರಿಯೊ ಅವರಿಗೆ ಸಲಹೆ ಮಾಡಿದ ವ್ಯಕ್ತಿಯನ್ನು ಬಿಜೆಪಿ ಕಚೇರಿಯಲ್ಲೇ ಥಳಿಸಿರುವ ಕುರಿತ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

"ನಾನು ಆ ವ್ಯಕ್ತಿಗೆ ಹೊಡೆದಿಲ್ಲ; ಹೊಡೆಯುವ ರೀತಿಯಲ್ಲಿ ಸನ್ನೆ ಮಾಡಿದೆ" ಎಂದು ಸುಪ್ರಿಯೋ ಹೇಳಿಕೊಂಡಿದ್ದಾರೆ. ತೋಲಿಗುಂಜ್ ಕ್ಷೇತ್ರದ ರಾಣಿಕುಂತಿ ಬಿಜೆಪಿ ಕಚೇರಿಯಲ್ಲಿ ಈ ಘಟನೆ ನಡೆದಿದೆ. ದೋಲ್‌ಜಾತ್ರಾ ಹಬ್ಬ ಸಂಬಂಧ ಏರ್ಪಡಿಸಿದ್ದ ಸಮಾರಂಭ ವೊಂದರಲ್ಲಿ ಭಾಗವಹಿಸಲು ಸುಪ್ರಿಯೊ ಆಗಮಿಸಿದ್ದರು.

ಗಂಭೀರ ಪ್ರಚಾರ ಕೈಗೊಳ್ಳುವಂತೆ ವ್ಯಕ್ತಿ ಸಲಹೆ ಮಾಡಿದಾಗ, ಮೊದಲು ತೆಪ್ಪಗಿರುವಂತೆ ಆ ವ್ಯಕ್ತಿಯನ್ನು ಸುಪ್ರಿಯೊ ಗದರಿದರು. ಆ ವ್ಯಕ್ತಿ ಮತ್ತೆ ಮತ್ತೆ ಇದೇ ಸಲಹೆ ಮಾಡಿದರು ಎಂದು ಬಿಜೆಪಿ ಮೂಲಗಳು ಹೇಳಿವೆ. ಒಮ್ಮೆ ತಾಳ್ಮೆ ಕಳೆದುಕೊಂಡ ಸಚಿವ ಆ ವ್ಯಕ್ತಿಯನ್ನು ಹೊಡೆಯುತ್ತಿರುವುದು ವೀಡಿಯೊದಲ್ಲಿ ಕಂಡುಬರುತ್ತಿದೆ.

"ಜನ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಕೆಲವರು ದ್ರೋಹಿಗಳು ಅಥವಾ ಮೀರ್‌ಜಾಫರ್‌ಗಳೂ ಇರುತ್ತಾರೆ. ಕೆಲ ವ್ಯಕ್ತಿಗಳು ತೊಂದರೆಗಳನ್ನು ಸೃಷ್ಟಿಸುವ ಸಲುವಾಗಿಯೇ ಇರುತ್ತಾರೆ. ಪ್ರಚೋದನೆಯ ನಡುವೆಯೂ ನಾನು ತಣ್ಣಗಿದ್ದೆ" ಎಂದು ಸುಪ್ರಿಯೊ ಹೇಳಿದ್ದಾರೆ. ಆದರೆ ಏಟು ತಿಂದ ವ್ಯಕ್ತಿ ಬೇರೆ ಪಕ್ಷದಿಂದ ಬಂದವರೇ ಅಥವಾ ಬಿಜೆಪಿ ಕಾರ್ಯಕರ್ತರೇ ಎನ್ನುವುದು ಸ್ಪಷ್ಟವಾಗಿ ತಿಳಿದುಬಂದಿಲ್ಲ.

 ಪಾಣೆಮಂಗಳೂರು : ಕಾರಿಗೆ ಗ್ಯಾಸ್ ಟ್ಯಾಂಕರ್ ಢಿಕ್ಕಿ; ಆರು ಮಂದಿಗೆ ಗಾಯ

ಪಾಣೆಮಂಗಳೂರು : ಕಾರಿಗೆ ಗ್ಯಾಸ್ ಟ್ಯಾಂಕರ್ ಢಿಕ್ಕಿ; ಆರು ಮಂದಿಗೆ ಗಾಯ

 

ಪಾಣೆಮಂಗಳೂರು : ಕಾರಿಗೆ ಗ್ಯಾಸ್ ಟ್ಯಾಂಕರ್ ಢಿಕ್ಕಿ; ಆರು ಮಂದಿಗೆ ಗಾಯ

ಬಂಟ್ವಾಳ: ಮೆಲ್ಕಾರ್ ಸಮೀಪದ ಪಾಣೆಮಂಗಳೂರಿನಲ್ಲಿ ಮಾರುತಿ ಇಕೋ ಕಾರಿಗೆ ಗ್ಯಾಸ್ ಟ್ಯಾಂಕರ್ ಢಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಗಾಯಗೊಂಡ ಘಟನೆ ಮಂಗಳವಾರ ಬೆಳಗ್ಗೆ 10 ಗಂಟೆಯ ಸುಮಾರಿಗೆ ನಡೆದಿದೆ. 

ಮುಲ್ಕಿ ಕಿನ್ನಿಗೋಳಿ ಐಕಳ ನಿವಾಸಿಗಳು ಸುಳ್ಯ ನಿಂತಿಕಲ್ಲು ಎಂಬಲ್ಲಿ ಕೊರಗಜ್ಜ ದೈವದ ನರ್ತನ ಸೇವೆಗೆ ಡೋಲು ಬಾರಿಸುವ ಸೇವೆ ಸಲ್ಲಿಸಿ ಕಾರಿನಲ್ಲಿ ವಾಪಸು ಆಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆರು ಮಂದಿಗೆ ಗಂಭೀರ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದಿಂದ ಕಾರು ನಜ್ಜುಗುಜ್ಜಾಗಿದೆ.

ಸ್ಥಳಕ್ಕೆ ಟ್ರಾಫಿಕ್ ಎಸ್ಸೈ ರಾಜೇಶ್ ಮತ್ತು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.

 ರಾಜ್ಯದಲ್ಲಿ ಮತ್ತೆ ಎಲ್ ಡಿಎಫ್ ಗೆ ಆಡಳಿತ ಖಚಿತ : ಕೇರಳ ಸಿಎಂ ಪಿಣರಾಯಿ ವಿಜಯನ್

ರಾಜ್ಯದಲ್ಲಿ ಮತ್ತೆ ಎಲ್ ಡಿಎಫ್ ಗೆ ಆಡಳಿತ ಖಚಿತ : ಕೇರಳ ಸಿಎಂ ಪಿಣರಾಯಿ ವಿಜಯನ್


 ರಾಜ್ಯದಲ್ಲಿ ಮತ್ತೆ ಎಲ್ ಡಿಎಫ್ ಗೆ ಆಡಳಿತ ಖಚಿತ : ಕೇರಳ ಸಿಎಂ ಪಿಣರಾಯಿ ವಿಜಯನ್

ಕಾಸರಗೋಡು : ರಾಜ್ಯದಲ್ಲಿ ಮತ್ತೆ ಎಲ್ ಡಿಎಫ್ ಗೆ ಆಡಳಿತ ಖಚಿತ. ಕಳೆದ ಐದು ವರ್ಷಗಳಲ್ಲಿ ಜಾರಿಗೆ ತಂದ ಜನಪರ ಯೋಜನೆ ಹಾಗೂ ಅಭಿವೃದ್ದಿ ಯೋಜನೆಗಳು ಜನರಿಂದ ಮೆಚ್ಚುಗೆ ಪಡೆದಿವೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದರು.

ಕಾಸರಗೋಡು ಸಿಟಿ ಟವರ್ ಸಭಾಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಪಿಣರಾಯಿ ವಿಜಯನ್ ಮಾತನಾಡಿದರು.

ಕಳೆದ ಐದು ವರ್ಷಗಳಲ್ಲಿ ಕೇರಳ ಜಾಗತಿಕ ಮಟ್ಟದಲ್ಲಿ ಗುರುತಿಸುವಂತಹ ಅಭಿವೃದ್ಧಿ ಪಡೆದಿದೆ. ಪ್ರವಾಹ ಸೇರಿದಂತೆ ಪ್ರಕೃತಿ ವಿಕೋಪ, ಕೋವಿಡ್ ಸೋಂಕು ಸಂದರ್ಭದಲ್ಲೂ ಕೇರಳದಲ್ಲಿ ಜನರ ಸಮಸ್ಯೆಗೆ ಸರಕಾರ ಸ್ಪಂದಿಸಿದೆ ಆದರೆ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಲು ಪ್ರತಿಪಕ್ಷ ಮುಂದಾಗುತ್ತಿಲ್ಲ. 5 ವರ್ಷಗಳ ಹಿಂದಿನ ಕೇರಳ ಹಾಗು ಈಗಿನ ಕೇರಳವನ್ನು ಹೋಲಿಕೆ ಮಾಡಬೇಕು. ಅಭಿವೃದ್ಧಿಯನ್ನು ಮುಚ್ಚಿ ಹಾಕಲು ಪ್ರತಿಪಕ್ಷದಿಂದ ಯತ್ನ ನಡೆಯುತ್ತಿದ್ದು, ವಿವಾದಗಳ ಹಿಂದೆ ಪ್ರತಿಪಕ್ಷ ಸುತ್ತು ಹಾಕುತ್ತಿವೆ ಎಂದು ಅವರು ತಿಳಿಸಿದರು.

ಕೇಂದ್ರ ಸರಕಾರ ಜನರನ್ನು ವಿಂಗಡಿಸಲು ಪ್ರಯತ್ನಿಸುತ್ತಿದೆ ಮತ್ತು ಅದು ಆರೆಸ್ಸೆಸ್ ಅಜೆಂಡಾವನ್ನು ಜಾರಿಗೆ ತರಲು ಯತ್ನಿಸುತ್ತಿದೆ. ಪೌರತ್ವ ಕಾಯ್ದೆ ತಿದ್ದುಪಡಿಯನ್ನು ಯಾವುದೇ ಕಾರಣಕ್ಕೂ ಕೇರಳದಲ್ಲಿ ಜಾರಿಗೆ ತರಲು ಬಿಡುವುದಿಲ್ಲ. ಧರ್ಮದ ಆಧಾರದಲ್ಲಿ ಪೌರತ್ವ ನಿರ್ಭಯ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ ಎಂದು ಸಿಎಂ ಹೇಳಿದರು.

ಅಲ್ಪ ಸಂಖ್ಯಾತರು, ಸಾಮಾನ್ಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಮಾತಾಂತರ ನೆಪದಲ್ಲಿ ಸಂಘಪರಿವಾರ ನಡೆಸುವ ಇಂತಹ ಕೃತ್ಯವನ್ನು ಖಂಡಿಸುವುದಾಗಿ ಅವರು ಹೇಳಿದರು.

 ಮಾ.31ಕ್ಕೆ ಭಾರತಕ್ಕೆ ಬರಲಿವೆ ಮೂರು ರಫೇಲ್ ಯುದ್ಧ ವಿಮಾನಗಳು

ಮಾ.31ಕ್ಕೆ ಭಾರತಕ್ಕೆ ಬರಲಿವೆ ಮೂರು ರಫೇಲ್ ಯುದ್ಧ ವಿಮಾನಗಳು


ಮಾ.31ಕ್ಕೆ ಭಾರತಕ್ಕೆ ಬರಲಿವೆ ಮೂರು ರಫೇಲ್ ಯುದ್ಧ ವಿಮಾನಗಳು

ನವದೆಹಲಿ, ಮಾರ್ಚ್ 29: ಫ್ರಾನ್ಸ್‌ನೊಂದಿಗಿನ ಯುದ್ಧವಿಮಾನ ಖರೀದಿ ಒಪ್ಪಂದದಂತೆ ಮಾರ್ಚ್ 31ರಂದು ಮೂರು ರಫೇಲ್ ಯುದ್ಧ ವಿಮಾನಗಳು ಭಾರತ ತಲುಪಲಿವೆ. ಈ ಯುದ್ಧ ವಿಮಾನಗಳು ಭಾರತೀಯ ವಾಯುಪಡೆಯ ಅಂಬಾಲ ವಾಯುನೆಲೆಯಲ್ಲಿರುವ "ಗೋಲ್ಡನ್ ಆರೋಸ್ ಸ್ಕ್ವಾಡ್ರನ್" ಸೇರಿಕೊಳ್ಳಲಿರುವುದಾಗಿ ತಿಳಿದುಬಂದಿದೆ.

ಡಸ್ಟಾಲ್ ಏವಿಯೇಷನ್ ಮೂಲದ ಪ್ರಕಾರ, ಮೂರು ರಫೇಲ್ ವಿಮಾನಗಳು ಫ್ರಾನ್ಸ್‌ನ ಬೋಡಾರ್ವ್ ವಾಯುನೆಲೆಯಿಂದ ಬುಧವಾರ ಬೆಳಿಗ್ಗೆ 7 ಗಂಟೆಗೆ ಟೇಕಾಫ್ ಆಗಲಿವೆ. ಯುನೈಟೆಡ್ ಅರಬ್ ಎಮಿರೇಟ್ಸ್‌ ವಾಯುಪಡೆ ಏರ್ ಬಸ್ 330 ಮಲ್ಟಿ ರೋಲ್ ಟ್ರಾನ್ಸ್‌ಪೋರ್ಟ್ ಟ್ಯಾಂಕರ್‌ಗಳು ಮಾರ್ಗ ಮಧ್ಯ ಗಲ್ಫ್ ಆಫ್ ಒಮಾನ್ ಪ್ರದೇಶದಲ್ಲಿ ರಫೇಲ್ ಜೆಟ್ ಗಳಿಗೆ ಇಂಧನ ಪೂರೈಸಲಿವೆ. ಸಂಜೆ 7 ಗಂಟೆಗೆ ಜೆಟ್‌ಗಳು ಗುಜರಾತ್ ತಲುಪಲಿರುವುದಾಗಿ ತಿಳಿದುಬಂದಿದೆ.

ಮುಂದಿನ ತಿಂಗಳು 9 ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಬರಲಿದ್ದು, ಅದರಲ್ಲಿ ಐದು ವಿಮಾನಗಳನ್ನು ಹಶಿಮರ ಏರ್‌ಬಸ್‌ನಲ್ಲಿ ಇಳಿಸಲಾಗುವುದು ಎನ್ನಲಾಗಿದೆ.

ಸೆಪ್ಟೆಂಬರ್ 2016 ರಲ್ಲಿ ಭಾರತ ಫ್ರಾನ್ಸ್‌ನೊಂದಿಗೆ 36 ರಫೇಲ್ ಫೈಟರ್ ಜೆಟ್‌ಗಳಿಗೆ ಸಹಿ ಹಾಕಿತ್ತು. ಈ ಒಪ್ಪಂದದ ಮೌಲ್ಯ ಸುಮಾರು 59,000 ಕೋಟಿಗಳು ಆಗಿದ್ದು, ಒಪ್ಪಂದದ ಪ್ರಕಾರ ಪ್ರತಿ ವರ್ಷ 12 ವಿಮಾನಗಳನ್ನು ಭಾರತಕ್ಕೆ ತಲುಪಿಸಬೇಕಿದೆ. ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಭಾರತ ಸಹಿ ಹಾಕಿದ ನಾಲ್ಕು ವರ್ಷಗಳ ಬಳಿಕ, ಅಂದರೆ 2020ರ ಜುಲೈನಲ್ಲಿ ಮೊದಲ ಹಂತದ ಐದು ರಫೇಲ್ ಜೆಟ್‌ಗಳು ಭಾರತಕ್ಕೆ ಬಂದಿದ್ದವು.

 ಸುಯೆಜ್‌ ಕಾಲುವೆಯಲ್ಲಿ ಸಿಲುಕಿದ್ದ ಹಡಗು ತೆರವು

ಸುಯೆಜ್‌ ಕಾಲುವೆಯಲ್ಲಿ ಸಿಲುಕಿದ್ದ ಹಡಗು ತೆರವು


ಸುಯೆಜ್‌ ಕಾಲುವೆಯಲ್ಲಿ ಸಿಲುಕಿದ್ದ ಹಡಗು ತೆರವು

ಸುಯೆಜ್‌ (ಈಜಿಪ್ಟ್‌): ಸುಯೆಜ್ ಕಾಲುವೆಯಲ್ಲಿ ಕಳೆದ ಒಂದು ವಾರದಿಂದ ಸಿಲುಕಿದ್ದ ಎವರ್‌ ಗಿವನ್‌ ಬೃಹತ್‌ ಹಡಗನ್ನು ಸೋಮವಾರ ಮುಕ್ತಗೊಳಿಸಲಾಯಿತು.

10 ಶಕ್ತಿಶಾಲಿ ನಾವೆಗಳನ್ನು ಬಳಸಿಕೊಂಡು ಹಡಗನ್ನು ಹಿಂದು-ಮುಂದು ಚಲಿಸುವಂತೆ ಮಾಡಲಾಯಿತು. ಹುಣ್ಣಿಮೆಯ ದಿನವಾದ್ದರಿಂದ ಉಬ್ಬರ ಹೆಚ್ಚಾಗಿತ್ತು.ಇದೂ ಸಹ ಹಡಗನ್ನು ಆ ಜಾಗದಿಂದ ತೆರವುಗೊಳಿಸಲು ನೆರವಾಯಿತು ಎಂದು ಮೂಲಗಳು ಹೇಳಿವೆ.

ಹಡಗನ್ನು ಮುಕ್ತಗೊಳಿಸುವ ಪ್ರಯತ್ನದಲ್ಲಿನ ಯಶಸ್ಸನ್ನು ನಾವೆಗಳ ಸಿಬ್ಬಂದಿ ಸಂಭ್ರಮಿಸುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

2,20,000 ಟನ್‌ನಷ್ಟು ಸರಕು ಹೊತ್ತಿದ್ದ ಈ ಹಡಗು ಸುಯೆಜ್‌ ಕಾಲುವೆಯಲ್ಲಿ ಸಿಲುಕಿದ ಪರಿಣಾಮ ಅಂತರರಾಷ್ಟ್ರೀಯ ವ್ಯಾಪಾರಕ್ಕೆ ತೀವ್ರ ಹಿನ್ನಡೆ ಉಂಟಾಗಿತ್ತು.


 ʼಮ್ಯಾನ್ಮಾರ್ʼನಲ್ಲಿ ಮಿಲಿಟರಿ ಜುಂಟಾ ಪ್ರತಿಭಟನೆ: ಸಾವಿನ ಸಂಖ್ಯೆ 459ಕ್ಕೆ ಏರಿಕೆ..!

ʼಮ್ಯಾನ್ಮಾರ್ʼನಲ್ಲಿ ಮಿಲಿಟರಿ ಜುಂಟಾ ಪ್ರತಿಭಟನೆ: ಸಾವಿನ ಸಂಖ್ಯೆ 459ಕ್ಕೆ ಏರಿಕೆ..!


ಮ್ಯಾನ್ಮಾರ್ʼನಲ್ಲಿ ಮಿಲಿಟರಿ ಜುಂಟಾ ಪ್ರತಿಭಟನೆ: ಸಾವಿನ ಸಂಖ್ಯೆ 459ಕ್ಕೆ ಏರಿಕೆ..!

ಮ್ಯಾನ್ಮಾರ್ʼನಲ್ಲಿ ಮಿಲಿಟರಿ ಜುಂಟಾ ಪ್ರತಿಭಟನೆ ಮುಂದುವರಿಸಿದ್ದು, ಮ್ಯಾನ್ಮಾರ್ʼನಾದ್ಯಾಂತ ಕನಿಷ್ಠ 459 ಮಂದಿ ಮೃತಪಟ್ಟಿದ್ದಾರೆ.

ಧಂಗೆ ವಿರೋಧಿ ಪ್ರತಿಭಟನಾಕಾರರ ವಿರುದ್ಧ ಮಿಲಿಟರಿಯು ನಿರಂತರವಾಗಿ ಹಿಂಸಾಚಾರವನ್ನ ಬಳಸೋದ್ರಿಂದ ಮ್ಯಾನ್ಮಾರ್ʼನಲ್ಲಿ ಹಿಂಸಾಚಾರ ತೀವ್ರಗೊಂಡಿದೆ. ಫೆಬ್ರವರಿ 1ರಂದು ನಡೆದ ಹಿಂಸಾಚಾರದ ನಂತರ 459 ಜನರು ಮೃತಪಟ್ಟಿದ್ದಾರೆ' ಎಂದು ಅಸಿಸ್ಟೆನ್ಸ್ ಅಸೋಸಿಯೇಷನೇಷನ್ ಫಾರ್ ಪೊಲಿಟಿಕಲ್ ಖೈದಿಸ್ (AAPP) ವರದಿ ಮಾಡಿದೆ.

ದೇಶದ ಉತ್ತರಭಾಗದ ಕಚಿನ್ ರಾಜ್ಯ ಮತ್ತು ಸಗಾಂಗ್ ಪ್ರಾಂತ್ಯದಲ್ಲಿ ಸೋಮವಾರ ಜನರು ಬೀದಿಗಿಳಿದಿದ್ದು, ದಕ್ಷಿಣದ ದವೆಯಲ್ಲಿ ಜನರು ಮೂರು ಬೆರಳುಗಳ ಸೆಲ್ಯೂಟ್ ಮಾಡಿದ್ದಾರೆ ಎಂದು ವರದಿ ಹೇಳಿದೆ.

ಪೂರ್ವ ರಾಜ್ಯವಾದ ಕಯಿನ್ʼನಲ್ಲಿ ಜನಾಂಗೀಯ ಅಲ್ಪಸಂಖ್ಯಾತ ಗುಂಪಿನಿಂದ ನಿಯಂತ್ರಿಸಲ್ಪಟ್ಟ ಪ್ರದೇಶದಲ್ಲಿ ಮಿಲಿಟರಿ ನಡೆಸಿದ ವೈಮಾನಿಕ ದಾಳಿಯ ನಂತ್ರ ಸುಮಾರು 3,000 ಜನರು ಭಾನುವಾರ ನೆರೆಯ ಥಾಯ್ಲೆಂಡ್ʼಗೆ ಪಲಾಯನ ಮಾಡಿದ್ದರು.

ಶನಿವಾರ ಮ್ಯಾನ್ಮಾರ್ʼನಾದ್ಯಂತ ನಡೆದ ಈ ದಾಳಿ ನಂತ್ರ 114 ನಾಗಾರಿಕರು ಮೃತಪಟ್ಟಿದ್ದಾರೆ. ಮೃತರಲ್ಲಿ 13 ವರ್ಷದ ಬಾಲಕಿ ಮಿಖಿಟಿಲಾ ಪ್ರದೇಶದ ಜನವಸತಿ ಪ್ರದೇಶದಲ್ಲಿ ಗುಂಡಿನ ದಾಳಿ ನಡೆಸಿದ ನಂತರ ಆಕೆಯ ಮನೆಯಲ್ಲಿ ಗುಂಡಿನ ದಾಳಿ ನಡೆದಿದೆ.

ಫೆಬ್ರವರಿ 1ರಂದು ಮ್ಯಾನ್ಮಾರ್ʼನ ಮಿಲಿಟರಿಯು ನಾಗರಿಕ ಸರ್ಕಾರವನ್ನ ಉರುಳಿಸಿ, ಒಂದು ವರ್ಷಕಾಲ ತುರ್ತು ಪರಿಸ್ಥಿತಿ ಘೋಷಿಸಿತು. ಈ ದಂಗೆಯು ಸಾಮೂಹಿಕ ಪ್ರತಿಭಟನೆಗೆ ಪ್ರಚೋದನೆ ನೀಡಿ, ಜುಂಟಾದ ಮಾರಣಾಂತಿಕ ಹಿಂಸಾಚಾರವನ್ನು ಎದುರಿಸಿತು.


ಉತ್ತರ ಪ್ರದೇಶ: ಕುಡಿದು ಹೋಳಿ ಆಚರಿಸುತ್ತಿದ್ದನ್ನು ಪ್ರಶ್ನಿಸಿದ 60 ವರ್ಷದ ಮಹಿಳೆಯನ್ನೇ ಹೊಡೆದು ಕೊಂದರು

ಉತ್ತರ ಪ್ರದೇಶ: ಕುಡಿದು ಹೋಳಿ ಆಚರಿಸುತ್ತಿದ್ದನ್ನು ಪ್ರಶ್ನಿಸಿದ 60 ವರ್ಷದ ಮಹಿಳೆಯನ್ನೇ ಹೊಡೆದು ಕೊಂದರು


ಉತ್ತರ ಪ್ರದೇಶ: ಕುಡಿದು ಹೋಳಿ ಆಚರಿಸುತ್ತಿದ್ದನ್ನು ಪ್ರಶ್ನಿಸಿದ 60 ವರ್ಷದ ಮಹಿಳೆಯನ್ನೇ ಹೊಡೆದು ಕೊಂದರು

ಇಟವಾ: ತಮ್ಮ ಮನೆಯ ಮುಂದೆ ಕುಡಿದು ಹೋಳಿ ಆಚರಿಸುತ್ತಿದ್ದನ್ನು ಪ್ರಶ್ನಿಸಿದ 60 ವರ್ಷದ ಮಹಿಳೆಯನ್ನು ಹೊಡೆದ ಕೊಂದ ದಾರುಣ ಘಟನೆ ಉತ್ತರ ಪ್ರದೇಶದ ಮೇವಾತಿ ಟೋಲಾ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೋಳಿ ಆಚರಿಸುತ್ತಿದ್ದ ಕೆಲವರು ಇಂದು ಬೆಳಗ್ಗೆ 10ರ ಸುಮಾರಿಗೆ ಮಹಿಳೆಯ ಮನೆಗೆ ನುಗ್ಗಿ ಕೋಲು ಮತ್ತು ಕಲ್ಲಿನಿಂದ ಹೊಡೆದು ಕೊಂದಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ(ನಗರ) ಪ್ರಶಾಂತ್ ಕುಮಾರ್ ಪ್ರಸಾದ್ ಹೇಳಿದ್ದಾರೆ.

ಮಹಿಳೆಯ ರಕ್ಷಣೆಗೆ ಧಾವಿಸಿದ ಇತರ ಕುಟುಂಬದ ಸದಸ್ಯರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು, ಘಟನೆಯಲ್ಲಿ ಮೂವರು ಮಕ್ಕಳು ಹಾಗೂ ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.


 ನಿರೀಕ್ಷಣಾ ಜಾಮೀನು ಕೋರಿ ರಮೇಶ್ ಜಾರಕಿಹೊಳಿ ಕೋರ್ಟ್ ಗೆ ಅರ್ಜಿ ಸಲ್ಲಿಸುವ ಸಾಧ್ಯತೆ

ನಿರೀಕ್ಷಣಾ ಜಾಮೀನು ಕೋರಿ ರಮೇಶ್ ಜಾರಕಿಹೊಳಿ ಕೋರ್ಟ್ ಗೆ ಅರ್ಜಿ ಸಲ್ಲಿಸುವ ಸಾಧ್ಯತೆ


ನಿರೀಕ್ಷಣಾ ಜಾಮೀನು ಕೋರಿ ರಮೇಶ್ ಜಾರಕಿಹೊಳಿ ಕೋರ್ಟ್ ಗೆ ಅರ್ಜಿ ಸಲ್ಲಿಸುವ ಸಾಧ್ಯತೆ

ಬೆಂಗಳೂರು, ಮಾ.29: ಅಶ್ಲೀಲ ವೀಡಿಯೊ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರಾಗುವ ಸಾಧ್ಯತೆ ಹೆಚ್ಚಾಗಿರುವ ಬೆನ್ನಲ್ಲೇ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಇತ್ತ ಸಿಟಿ ಸಿವಿಲ್ ಕೋರ್ಟ್ ಗೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಲು ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ.

ಸಂತ್ರಸ್ತ ಯುವತಿ ಈಗಾಗಲೇ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ವೀಡಿಯೊಗಳನ್ನು ಬಿಡುಗಡೆ ಮಾಡಿದ್ದಾರೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರಿಗೆ ನಿಮ್ಮ ನೇತೃತ್ವದಲ್ಲಿಯೇ ಎಸ್‍ಐಟಿ ತನಿಖೆಯಾಗಬೇಕೆಂದು ಪತ್ರ ಬರೆದಿದ್ದಾರೆ. ಮಾ.29ರಂದು ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಹಾಜರಾಗುವ ಬಗ್ಗೆ ತಮ್ಮ ವಕೀಲರ ಮೂಲಕ ಹೇಳಿಕೆಯನ್ನು ನೀಡಿಸಿದ್ದರು.

ಈ ಎಲ್ಲ ವಿಚಾರಗಳನ್ನು ಗಮನಿಸಿರುವ ರಮೇಶ್ ಅವರು ಸಿಟಿ ಸಿವಿಲ್ ಕೋರ್ಟ್‍ಗೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸುವ ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ತಮ್ಮ ವಕೀಲರೊಂದಿಗೆ ಚರ್ಚೆಯನ್ನೂ ನಡೆಸಿದ್ದಾರೆ ಎನ್ನಲಾಗುತ್ತಿದೆ. ರಮೇಶ್ ಅವರು ಈ ಹಿಂದೆ ಕೋರ್ಟ್‍ಗೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಲ್ಲ ಎಂಬ ಹೇಳಿಕೆಯನ್ನೂ ನೀಡಿದ್ದರು.

 ಒಬಾಮಾರ ತಂದೆಯನ್ನು ಪೋಷಿಸಿದ ಅಜ್ಜಿ ನಿಧನ

ಒಬಾಮಾರ ತಂದೆಯನ್ನು ಪೋಷಿಸಿದ ಅಜ್ಜಿ ನಿಧನ

 

ಒಬಾಮಾರ ತಂದೆಯನ್ನು ಪೋಷಿಸಿದ ಅಜ್ಜಿ ನಿಧನ

ನೈರೋಬಿ: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ತಂದೆ ಬರಾಕ್‌ ಒಬಾಮಾ ಸೀನಿಯರ್‌ ಅವರನ್ನು ಪೋಷಿಸಿ, ಬೆಳೆಸಿದ್ದ ಅಜ್ಜಿ ಕಿನ್ಯಾದ ಸಾರಾ ಒಬಾಮಾ(99) ಅವರು ವಯೋಸಹಜ ಅನಾರೋಗ್ಯದಿಂದ ಪಶ್ಚಿಮ ಕೀನ್ಯಾದಲ್ಲಿ ನಿಧನರಾದರು.

'ಇಂದು ಬೆಳಿಗ್ಗೆ ಅವರು ನಿಧನರಾಗಿದ್ದಾರೆ. ಆಕೆ ಭಗವಂತನಲ್ಲಿ ಲೀನವಾಗಿದ್ದಾಳೆ' ಎಂದು ಪುತ್ರಿ ಮಾರ್ಸಾಟ್‌ ಒನ್ಯಾಂಗೊ ಹೇಳಿದರು.

ಮಾಮಾ ಸಾರಾ ಎಂದೇ ಜನಪ್ರಿಯರಾಗಿದ್ದ ಸಾರಾ ಒಬಾಮಾ ಅನಾಥ ಮಕ್ಕಳಿಗೆ ಶಿಕ್ಷಣ ಕೊಡಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಬರಾಕ್‌ ಒಬಾಮ ಅವರ ಅಜ್ಜನ ಎರಡನೇ ಹೆಂಡತಿಯಾಗಿರುವ ಸಾರಾ ಅವರು ಒಬಾಮಾ ಅವರ ತಂದೆಯನ್ನು ‌ಸೈಕಲ್‌ನಲ್ಲಿ ಕೂರಿಸಿಕೊಂಡು 9 ಕಿ.ಮೀ.ದೂರದ ಶಾಲೆಗೆ ಬಿಟ್ಟುಬರುತ್ತಿದ್ದರು. ತನಗೆ ಸಿಗದ ಶಿಕ್ಷಣ ತನ್ನ ಮಕ್ಕಳಿಗೆ ಸಿಗದೆ ಅನ್ಯಾಯವಾಗಬಾರದು ಎಂಬ ಕಾಳಜಿಯಿಂದ ಅವರು ಕಿನ್ಯಾದ ಕೊಗೆಲೊ ಎಂಬ ಹಳ್ಳಿಯಿಂದ ನೆಗಿಯಾ ಎಂಬ ಪಟ್ಟಣಕ್ಕೆ ಒಬಾಮ ಅವರನ್ನು ಕರೆತರುವ ಪ್ರಯತ್ನ ಮಾಡಿ ಅದರಲ್ಲಿ ಯಶಸ್ವಿಯಾಗಿದ್ದರು.

ಬರಾಕ್‌ ಅವರು ತಮ್ಮ ಅಜ್ಜಿ ಸಾರಾ ಅವರ ಶಿಕ್ಷಣ ಪ್ರೀತಿ, ತ್ಯಾಗವನ್ನು ಹಲವು ಬಾರಿ ಹೇಳಿಕೊಂಡಿದ್ದರು. 2009ರ ಮೊದಲ ಅವಧಿಯ ಅಧ್ಯಕ್ಷ ಪದಗ್ರಹಣ ಸಮಾರಂಭದಲ್ಲಿ ಅವರು ಪಾಲ್ಗೊಂಡಿದ್ದರು.


ನಂದಿಗ್ರಾಮದಲ್ಲಿ ಬೃಹತ್ ರೋಡ್ ಶೋ; ದೀದಿ ಬಲಪ್ರದರ್ಶನ

ನಂದಿಗ್ರಾಮದಲ್ಲಿ ಬೃಹತ್ ರೋಡ್ ಶೋ; ದೀದಿ ಬಲಪ್ರದರ್ಶನ


ನಂದಿಗ್ರಾಮದಲ್ಲಿ ಬೃಹತ್ ರೋಡ್ ಶೋ; ದೀದಿ ಬಲಪ್ರದರ್ಶನ

ಕೋಲ್ಕತ್ತ: ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಾಲಿಕುರ್ಚಿಯಲ್ಲಿ ಬೃಹತ್ ರೋಡ್ ಶೋ ನಡೆಸುವ ಮೂಲಕ ಬಲಪ್ರದರ್ಶನ ನಡೆಸಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾಣೆಯ ಎರಡನೇ ಹಂತದಲ್ಲಿ ಏಪ್ರಿಲ್ 1ರಂದು ನಂದಿಗ್ರಾಮದಲ್ಲಿ ಮತದಾನ ನಡೆಯಲಿದೆ. ಇಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಬಿಜೆಪಿಯ ಸುವೇಂದು ಅಧಿಕಾರಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಹಿರಿಯ ನಾಯಕರೊಂದಿಗೆ ಮಮತಾ ಗಾಲಿಕುರ್ಚಿಯಲ್ಲಿ ರೇಯಾಪರಾ ಖುದಿರಾಮ್ ಮೋರ್‌ನಿಂದ ಠಾಕೂರ್‌ಚೌಕ್‌ ವರೆಗೆ 8 ಕಿ.ಮೀ. ಉದ್ದರ ರೋಡ್ ಶೋವನ್ನು ಮುನ್ನಡೆಸಿದರು. ಈ ವೇಳೆ ಸಾವಿರಾರು ಪಕ್ಷದ ಕಾರ್ಯಕರ್ತರು ಮಮತಾ ಪರ ಘೋಷಣೆ ಕೂಗಿದರು. ಮಧ್ಯಾಹ್ನದ ಬಳಿಕ ಮತ್ತೊಂದು ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಪ್ರಸಕ್ತ ತಿಂಗಳಲ್ಲಿ ನಂದಿಗ್ರಾಮದಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಪ್ರಚಾರದ ವೇಳೆ ಅಪರಿಚಿತರು ತಳ್ಳಿದ ಪರಿಣಾಮ ಮಮತಾ ಕಾಲಿಗೆ ನೋವಾಗಿತ್ತು. ಬಳಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಹಾಗಿದ್ದರೂ ಮಮತಾ ಆರೋಪಗಳನ್ನು ಚುನಾವಣಾ ಆಯೋಗವು ತಳ್ಳಿ ಹಾಕಿತ್ತು.

ಈ ಘಟನೆಯ ಬಳಿಕ ನಂದಿಗ್ರಾಮದಲ್ಲಿ ನಡೆಸಿದ ಮೊದಲ ಪಾದಯಾತ್ರೆ ಇದಾಗಿದೆ.

ಮಮತಾ ಆಪ್ತರಾಗಿದ್ದ ಸುವೇಂದು ಅಧಿಕಾರಿ ಕಳೆದ ವರ್ಷಾಂತ್ಯದಲ್ಲಿ ಟಿಎಂಸಿ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಅಲ್ಲದೆ ಮಮತಾ ವಿರುದ್ಧ ನಂದಿಗ್ರಾಮದಲ್ಲಿ ನೇರ ಸ್ಪರ್ಧೆಗಿಳಿದಿದ್ದಾರೆ.

ನಂದಿಗ್ರಾಮದಲ್ಲಿ ಬಿಜೆಪಿ 50,000ಕ್ಕೂ ಹೆಚ್ಚು ಮತಗಳಿಂದ ಗೆಲುವು ಸಾಧಿಸುವುದಾಗಿ ಸುವೇಂದು ಅಧಿಕಾರಿ ಹೇಳಿಕೆ ನೀಡಿದ್ದರು. ಸುವೇಂದು ಬೆಂಬಲಕ್ಕಾಗಿ ಕೇಂದ್ರದಿಂದ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಯ ಘಟಾನುಘಟಿ ನಾಯಕರು ಪ್ರಚಾರ ನಡೆಸಿದ್ದರು.

 ನಾಪೊಕ್ಲು: ಕೊಟ್ಟಮುಡಿ ಮಸೀದಿ ಅಧ್ಯಕ್ಷನ ಬರ್ಬರ ಹತ್ಯೆ

ನಾಪೊಕ್ಲು: ಕೊಟ್ಟಮುಡಿ ಮಸೀದಿ ಅಧ್ಯಕ್ಷನ ಬರ್ಬರ ಹತ್ಯೆ


 ನಾಪೊಕ್ಲು: ಕೊಟ್ಟಮುಡಿ ಮಸೀದಿ ಅಧ್ಯಕ್ಷನ ಬರ್ಬರ ಹತ್ಯೆ

ನಾಪೊಕ್ಲು: ಕೊಟ್ಟಮುಡಿ ಜಮಾಅತ್ ಅಧ್ಯಕ್ಷ ಹಾರಿಸ್ ಎಂಬವರನ್ನು ದುಷ್ಕರ್ಮಿಗಳ ತಂಡ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಸಂಭವಿಸಿದೆ. ಪಿರಿಯಾಪಟ್ಟಣದಲ್ಲಿ ಹಲ್ಲೆ ಮಾಡಿ ಬರ್ಬರವಾಗಿ ಕೊಲೆ ಮಾಡಲಾಗಿದೆ. 

ಕೊಲೆಗೆ ಕಾರಣ ಏನೆಂಬುವುದು ಇನ್ನಷ್ಠೆ ತಿಳಿಯಬೇಕಾಗಿದೆ. ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.


 ಬೆಂಗಳೂರು : ಕಾಂಗ್ರೆಸ್ ಯುವ ಘಟಕದ ಸದಸ್ಯರು ಪೊಲೀಸ್ ವಶಕ್ಕೆ

ಬೆಂಗಳೂರು : ಕಾಂಗ್ರೆಸ್ ಯುವ ಘಟಕದ ಸದಸ್ಯರು ಪೊಲೀಸ್ ವಶಕ್ಕೆ


 ಬೆಂಗಳೂರು : ಕಾಂಗ್ರೆಸ್ ಯುವ ಘಟಕದ ಸದಸ್ಯರು ಪೊಲೀಸ್ ವಶಕ್ಕೆ

ಬೆಂಗಳೂರು : ಸಿ.ಡಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅನ್ನು ಬಂಧಿಸಬೇಕು ಎಂದು ಆಗ್ರಹಿಸಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ಸೋಮವಾರ ನಗರದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಮುಂಭಾಗ ಜಮಾಯಿಸಿದ  ಕಾಂಗ್ರೆಸ್ ಯುವ ಘಟಕದ ನೂರಾರು ಸದಸ್ಯರು, ಕೆಪಿಸಿಸಿ ಅಧ್ಯಕ್ಷ  ಡಿ.ಕೆ.ಶಿವಕುಮಾರ್‌ ವಿರುದ್ಧ ಮಾತನಾಡಿರುವ ರಮೇಶ್ ಜಾರಕಿಹೊಳಿ ಅವರು ಈ ಕೂಡಲೇ ಕ್ಷಮೆ‌ ಕೇಳಬೇಕು ಎಂದು ಒತ್ತಾಯಿಸಿದರು.

ಮಂತ್ರಿಯಾಗಿ ಇಂತಹ ಕೃತ್ಯ ಎಸಗಿದ್ದಾರೆ ಎಂದರೆ ಸರ್ಕಾರವೇ ಇದರಲ್ಲಿ ಭಾಗಿಯಾಗಿದೆ ಎಂಬ ಅರ್ಥ ಬರುತ್ತದೆ. ಆದರೆ ರಾಜ್ಯ ಸರ್ಕಾರ ಎಸ್‌ಐಟಿ ತನಿಖೆ ಹೆಸರಲ್ಲಿ ಇಡೀ ಪ್ರಕರಣದ ದಿಕ್ಕು ತಪ್ಪಿಸುತ್ತಿದೆ. ಎಸ್‌ಐಟಿಯವರು ತನಿಕೆ ನಡೆಸುವುದನ್ನು ಬಿಟ್ಟು ಸಂತ್ರಸ್ತೆ ಕುಟುಂಬದವರಿಗೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ದೂರಿದರು.

ಡಿ.ಕೆ. ಶಿವಕುಮಾರ್‌ ವಿರುದ್ಧ ಅವಾಚ್ಯ ಶಬ್ಧದಿಂದ ಮಾತನಾಡಿರುವ ಜಾರಕಿಹೊಳಿ ವಿರುದ್ಧ ಕ್ರಮ ಕೈಗೊಳ್ಳಬೇಕು. ಅವರ ಮಾತಿನಿಂದ ಇಡೀ ರಾಜ್ಯ ನಗೆಪಾಟಲಿಗೀಡಾಗಿದೆ. ಒಂದು ವೇಳೆ ಅವರು ಡಿಕೆಶಿ ಬಳಿ ಕ್ಷಮೆ ಕೇಳಲಿಲ್ಲವೆಂದರೆ, ರಾಜ್ಯದಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಘೋಷಣೆ ಕೂಗಿ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಪೊಲೀಸರು ಯುವ ಘಟಕದ ಮಿಥುನ್ ರೈ, ಮಹಮ್ಮದ್ ನಾಲಪಾಡ್ ಸೇರಿದಂತೆ ಹಲವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 

 "ಸುದ್ದಿ ರೂಪದಲ್ಲಿ ಜಾಹೀರಾತು ಪ್ರಕಟಿಸಿ ಮತದಾರರ ದಿಕ್ಕು ತಪ್ಪಿಸಿದ ಬಿಜೆಪಿ"

"ಸುದ್ದಿ ರೂಪದಲ್ಲಿ ಜಾಹೀರಾತು ಪ್ರಕಟಿಸಿ ಮತದಾರರ ದಿಕ್ಕು ತಪ್ಪಿಸಿದ ಬಿಜೆಪಿ"


 "ಸುದ್ದಿ ರೂಪದಲ್ಲಿ ಜಾಹೀರಾತು ಪ್ರಕಟಿಸಿ ಮತದಾರರ ದಿಕ್ಕು ತಪ್ಪಿಸಿದ ಬಿಜೆಪಿ"

ಗುವಾಹಟಿ: ಅಸ್ಸಾಂನಲ್ಲಿ ಮೊದಲ ಹಂತದ ಚುನಾವಣೆ ನಡೆದ  ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಜಯ ಗಳಿಸಲಿದೆ ಎಂದು ಹೇಳಿಕೊಂಡ ಜಾಹೀರಾತನ್ನು ಸುದ್ದಿಯೆಂಬ ರೀತಿಯಲ್ಲಿ ಬಿಂಬಿಸಿ ಪ್ರಕಟಿಸಿದ್ದಾರೆಂದು ಆರೋಪಿಸಿ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್, ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಹಾಗೂ ಅಸ್ಸಾಂ ಬಿಜೆಪಿ ಅಧ್ಯಕ್ಷ ರಂಜೀತ್ ಕುಮಾರ್ ದಾಸ್ ಹಾಗೂ ಎಂಟು ಪ್ರಮುಖ ದೈನಿಕಗಳ ವಿರುದ್ಧ ಕಾಂಗ್ರೆಸ್ ಪೊಲೀಸ್ ದೂರು ನೀಡಿದೆ.

ರವಿವಾರ ರಾತ್ರಿ ದಿಸ್ಪುರ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಬಿಜೆಪಿ ಹಾಗೂ ಇತರರು ಚುನಾವಣಾ ನೀತಿ ಸಂಹಿತೆಯನ್ನು ಹಾಗೂ ಜನ ಪ್ರತಿನಿಧಿತ್ವ ಕಾಯಿದೆ 1951ರ ಸೆಕ್ಷನ್ 126ಎ ಹಾಗೂ  ಮಾರ್ಚ್  26ರಂದು ಚುನಾವಣಾ ಆಯೋಗ ನೀಡಿದ ಸೂಚನೆಯನ್ನು  ಉಲ್ಲಂಘಿಸಿದ್ದಾರೆಂದು ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾನೂನು ಘಟಕದ ಅಧ್ಯಕ್ಷ ನಿರಾನ್ ಬೋರಾಹ್ ಹೇಳಿದ್ದಾರೆ.

ತಮ್ಮ ಸೋಲು ಖಚಿತ ಎಂದು ತಿಳಿದಿರುವ ಬಿಜೆಪಿ ನಾಯಕರು ಹತಾಶೆಯಿಂದ ಅಕ್ರಮ ಮತ್ತು ಅಸಂವಿಧಾನಿಕ ವಿಧಾನಗಳ ಮೂಲಕ ಮತದಾರರ ಮೇಲೆ ಪ್ರಭಾವ ಬೀರಲು ಹಾಗೂ  ಎರಡನೇ ಮತ್ತು ಮೂರನೇ ಹಂತದ ಚುನಾವಣೆ ವೇಳೆ ಮತದಾರರನ್ನು ವಂಚಿಸಲು ವಿವಿಧ ದಿನಪತ್ರಿಕೆಗಳ ಮುಖಪುಟದಲ್ಲಿ  ತಪ್ಪುದಾರಿಗೆಳೆಯುವಂತಹ ಶೀರ್ಷಿಕೆಯಲ್ಲಿ ಜಾಹೀರಾತನ್ನು ಸುದ್ದಿ ರೂಪದಲ್ಲಿ ಪ್ರಕಟಿಸಿದ್ದಾರೆ ಎಂದು ಬೋರಾಹ್ ಆರೋಪಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಈ ಕುರಿತಂತೆ ಅಸ್ಸಾಂ ಮುಖ್ಯ ಚುನಾವಣಾಧಿಕಾರಿ ಹಾಗೂ  ಭಾರತದ ಚುನಾವಣಾ ಆಯೋಗಕ್ಕೂ ದೂರು ನೀಡಿದೆ ಹಾಗೂ ರವಿವಾರ ಪ್ರಕಟಗೊಂಡ ಈ ಜಾಹೀರಾತಿಗೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ದೈನಿಕಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.

ದೂರನ್ನು ಚುನಾವಣಾ ಆಯೋಗ ಪರಿಶೀಲಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಜೆಪಿಯ ಸುದ್ದಿ ರೂಪದ ಜಾಹೀರಾತು ಪ್ರಮುಖ ಅಸ್ಸಾಮಿ ಪತ್ರಿಕೆಗಳಾದ ದಿ ಅಸ್ಸಾಂ ಟ್ರಿಬ್ಯೂನ್, ಅಸೊಮಿಯಾ ಪ್ರತಿದಿನ್, ಅಮರ್ ಅಸೊಮ್, ನಿಯಮಿಯ ಬರ್ತ, ಅಸೊಮಿಯ ಖಬೊರ್, ದೈನಿಕ್ ಅಸಮ್, ದೈನಿಕ್ ಜುಗಸಂಖ ಹಾಗೂ ದೈನಿಕ್ ಪೂರ್ವೋದಯದಲ್ಲಿ ಪ್ರಕಟಗೊಂಡಿದೆ.

 ಮಧ್ಯಪ್ರದೇಶ: ಅತ್ಯಾಚಾರ ಸಂತ್ರಸ್ತೆ ಹಾಗೂ ಅತ್ಯಾಚಾರ ಆರೋಪಿಯ ಜತೆಯಾಗಿ ಕಟ್ಟಿಹಾಕಿ ಮೆರವಣಿಗೆ !

ಮಧ್ಯಪ್ರದೇಶ: ಅತ್ಯಾಚಾರ ಸಂತ್ರಸ್ತೆ ಹಾಗೂ ಅತ್ಯಾಚಾರ ಆರೋಪಿಯ ಜತೆಯಾಗಿ ಕಟ್ಟಿಹಾಕಿ ಮೆರವಣಿಗೆ !


 ಮಧ್ಯಪ್ರದೇಶ: ಅತ್ಯಾಚಾರ ಸಂತ್ರಸ್ತೆ ಹಾಗೂ ಅತ್ಯಾಚಾರ ಆರೋಪಿಯ ಜತೆಯಾಗಿ ಕಟ್ಟಿಹಾಕಿ ಮೆರವಣಿಗೆ !

ಅಲಿರಾಜ್‌ಪುರ: ಹದಿನಾರು ವರ್ಷ ವಯಸ್ಸಿನ ಅತ್ಯಾಚಾರ ಸಂತ್ರಸ್ತೆ ಹಾಗೂ ಅತ್ಯಾಚಾರ ಆರೋಪಿಯನ್ನು ಜತೆಯಾಗಿ ಕಟ್ಟಿಹಾಕಿ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ಮಾಡಿದ ಅಮಾನವೀಯ ಘಟನೆ ಮಧ್ಯಪ್ರದೇಶದ ಬುಡಕಟ್ಟು ಪ್ರಾಬಲ್ಯದ ಅಲಿರಾಜ್‌ಪುರ ಗ್ರಾಮದಿಂದ ವರದಿಯಾಗಿದೆ.

ಘಟನೆ ಸಂಬಂಧ ಅತ್ಯಾಚಾರ ಆರೋಪಿ ಸೇರಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ. ಹದಿನಾರು ವರ್ಷದ ಬಾಲಕಿ ಮೇಲೆ 21 ವರ್ಷದ ಯುವಕ ಅತ್ಯಾಚಾರ ಎಸಗಿದ್ದ ಎಂದು ಆಪಾದಿಸಲಾಗಿತ್ತು. ಬಾಲಕಿ ಹಾಗೂ ಆರೋಪಿಯನ್ನು ಜತೆಯಾಗಿಯೇ ಹಗ್ಗದಿಂದ ಬಿಗಿದು, ಥಳಿಸಿ ಬೀದಿಯಲ್ಲಿ ನಡೆಸಿಕೊಂಡು ಹೋಗುತ್ತಾ "ಭಾರತ್ ಮಾತಾ ಕಿ ಜೈ" ಘೋಷಣೆ ಕೂಗುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಾಲಕಿಯನ್ನು ಪೊಲೀಸರು ರಕ್ಷಿಸಿದ್ದಾರೆ. ಸಂತ್ರಸ್ತೆ ನೀಡಿದ ದೂರಿನ ಆಧಾರದಲ್ಲಿ ಎರಡು ಪ್ರಕರಣ ದಾಖಲಿಸಲಾಗಿದೆ ಎಂದು ಉಪವಿಭಾಗ ಪೊಲೀಸ್ ಅಧಿಕಾರಿ ದಿಲೀಪ್ ಸಿಂಗ್ ಬಿಲ್ವಾಲ್ ಹೇಳಿದ್ದಾರೆ.

"21 ವರ್ಷದ ಯುವಕನ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತೆಯನ್ನು ಹೊಡೆದು ಮೆರವಣಿಗೆ ಮಾಡಿದ್ದಕ್ಕಾಗಿ ಸಂತ್ರಸ್ತೆಯ ಕುಟುಂಬದವರು ಮತ್ತು ಗ್ರಾಮಸ್ಥರ ವಿರುದ್ಧ ಇನ್ನೊಂದು ಪ್ರಕರಣ ದಾಖಲಿಸಲಾಗಿದೆ" ಎಂದು ಹೇಳಿದ್ದಾರೆ. ಆರೋಪಿ ಯುವಕ ವಿವಾಹಿತನಾಗಿದ್ದು, ಈತನಿಗೆ ಇಬ್ಬರು ಮಕ್ಕಳಿದ್ದಾರೆ.

ಭಾರತೀಯ ದಂಡಸಂಹಿತೆ ಮತ್ತು ಪೋಕ್ಸೋ ಕಾಯ್ದೆ ಅನ್ವಯ ಆರೋಪಿ ವಿರುದ್ಧ ದೂರು ದಾಖಲಿಸಲಾಗಿದೆ. ಸಂತ್ರಸ್ತೆಯ ಕುಟುಂಬದವರು ಮತ್ತು ಸಂಬಂಧಿಕರ ವಿರುದ್ಧ ಭಾರತೀಯ ದಂಡಸಂಹಿತೆಯ ಸೆಕ್ಷನ್ 294 (ಸಾರ್ವಜನಿಕ ಸ್ಥಳಗಳಲ್ಲಿ ಅಶ್ಲೀಲ ಕ್ರಮ), 355 (ಹಲ್ಲೆ ಅಥವಾ ವ್ಯಕ್ತಿಯ ಗೌರವಕ್ಕೆ ಚ್ಯುತಿ ಬರುವ ರೀತಿಯಲ್ಲಿ ಅಪರಾಧ ಬಲಪ್ರಯೋಗ), 323 (ಘಾಸಿಗೊಳಿಸಿರುವುದು) ಮತ್ತು 342 (ಅಕ್ರಮವಾಗಿ ಕೂಡಿಹಾಕಿದ್ದು) ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Sunday, 28 March 2021

 ಸಿಡಿ ಲೇಡಿಯಿಂದ ಹೈಕೋರ್ಟಿಗೆ ಪತ್ರ: ಸಿದ್ದರಾಮಯ್ಯ ಮಹತ್ವದ ಪ್ರತಿಕ್ರಿಯೆ

ಸಿಡಿ ಲೇಡಿಯಿಂದ ಹೈಕೋರ್ಟಿಗೆ ಪತ್ರ: ಸಿದ್ದರಾಮಯ್ಯ ಮಹತ್ವದ ಪ್ರತಿಕ್ರಿಯೆ


 ಸಿಡಿ ಲೇಡಿಯಿಂದ ಹೈಕೋರ್ಟಿಗೆ ಪತ್ರ: ಸಿದ್ದರಾಮಯ್ಯ ಮಹತ್ವದ ಪ್ರತಿಕ್ರಿಯೆ

ಬೆಂಗಳೂರು: ಹಲವು ವಿಡಿಯೋಗಳನ್ನು ಬಿಡುಗಡೆ ಮಾಡಿರುವ ಸಿಡಿ ಸಂತ್ರಸ್ತೆ, ಇನ್ನೂ ಒಂದೆ ಹೆಜ್ಜೆ ಮುಂದೆ ಹೋಗಿ, ರಾಜ್ಯ ಉಚ್ಚ ನ್ಯಾಯಾಲಯದ, ನ್ಯಾಯಮೂರ್ತಿಯವರಿಗೆ ಪತ್ರವನ್ನು ಬರೆದಿದ್ದಾರೆ.

ಪತ್ರದಲ್ಲಿ ಹಲವಾರು ಅಂಶಗಳನ್ನು ಸಂತ್ರಸ್ತೆ ಬರೆದಿದ್ದು, ನನಗೆ ರಮೇಶ್ ಜಾರಕಿಹೊಳಿಯವರಿಂದ ಜೀವ ಬೆದರಿಕೆಯಿದೆ, ಸಾಕ್ಷ್ಯ ನಾಶ ಮುಂತಾದ ವಿಚಾರಗಳನ್ನು ಪ್ರಸ್ತಾವಿಸಿದ್ದಾರೆ. ಈ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

"ಸಿಡಿ ಹಗರಣದ ಯುವತಿ ತನಗೆ ಪ್ರಾಣ ಭಯ ಇದೆ ಎಂದು ರಾಜ್ಯದ ಹೈಕೋರ್ಟ್ ಮುಖ್ಯನ್ಯಾಯಾಧೀಶರಿಗೆ ಬರೆದಿದ್ದಾರೆನ್ನಲಾದ ಪತ್ರ ಗಾಬರಿ ಹುಟ್ಟಿಸುವಂತಿದೆ. ಮುಖ್ಯಮಂತ್ರಿ @BSYBJP ಅವರೇ ರಾಜ್ಯದಲ್ಲಿ ನಿಮ್ಮ ಸರ್ಕಾರ ಅಸ್ತಿತ್ವದಲ್ಲಿದೆಯೇ"ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

"ಸಂತ್ರಸ್ತ ಯುವತಿ ಪ್ರಾರಂಭದ ಆಡಿಯೋದಲ್ಲಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದೆ ಎಂದು ಹೇಳಿದ್ದಳು, ಈಗ ತನಗೆ ಪ್ರಾಣಭಯ ಇದೆ ಎಂದು ಪತ್ರ ಬರೆದಿದ್ದಾಳೆ. ಆ ಯುವತಿಯ ಪ್ರಾಣಕ್ಕೇನಾದರೂ ಅಪಾಯ ಎದುರಾದರೆ ರಾಜ್ಯದ ಮುಖ್ಯಮಂತ್ರಿ @BSYBJP, ಗೃಹಸಚಿವ @BSBommai ಮತ್ತು ಇಡೀ @BJP4Karnataka ಸರ್ಕಾರವೇ ಹೊಣೆಯಾಗುತ್ತದೆ"ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.

"ಹೈಕೋರ್ಟ್ ಮುಖ್ಯನ್ಯಾಯಾಧೀಶರಿಗೆ ಸಂತ್ರಸ್ತೆ ಯುವತಿ ಬರೆದ ಪತ್ರದಲ್ಲಿ ಎಸ್.ಐ.ಟಿ ಮೇಲೆಯೇ ಅಪನಂಬಿಕೆ ವ್ಯಕ್ತಪಡಿಸಿರುವುದು ಮಾತ್ರವಲ್ಲ, ಅವರು ಸಾಕ್ಷ್ಯನಾಶ ಮಾಡುತ್ತಿದ್ದಾರೆ, ತನ್ನ ವಿರೋಧಿಗಳ ಜೊತೆ ಷಾಮೀಲಾಗಿದ್ದಾರೆ ಎಂದೆಲ್ಲ ಆರೋಪಿಸಿರುವುದು ಗಂಭೀರವಾದ ವಿಷಯ"ಎಂದು ಸಿದ್ದರಾಮಯ್ಯ ಟ್ವೀಟ್ ನಲ್ಲಿ ಹೇಳಿದ್ದಾರೆ.‌

 ಆರೋಪಿ ಬಂಧಿಸದೆ ಯುವತಿ ಹಾಜರಾಗಲು ಒಳ್ಳೆ ವಾತಾವರಣವಿಲ್ಲ; ಸಿಡಿ ಲೇಡಿ ಪರ ವಕೀಲ ಜಗದೀಶ್

ಆರೋಪಿ ಬಂಧಿಸದೆ ಯುವತಿ ಹಾಜರಾಗಲು ಒಳ್ಳೆ ವಾತಾವರಣವಿಲ್ಲ; ಸಿಡಿ ಲೇಡಿ ಪರ ವಕೀಲ ಜಗದೀಶ್


 ಆರೋಪಿ ಬಂಧಿಸದೆ ಯುವತಿ ಹಾಜರಾಗಲು ಒಳ್ಳೆ ವಾತಾವರಣವಿಲ್ಲ; ಸಿಡಿ ಲೇಡಿ ಪರ ವಕೀಲ ಜಗದೀಶ್

ಬೆಂಗಳೂರು: ಸಿಡಿ ಪ್ರಕರಣದ ಸಂತ್ರಸ್ತ ಯುವತಿ ಇಂದು ನ್ಯಾಯಾಲಯದ ಮುಂದೆ ಹಾಜರಾಗಿ ನ್ಯಾಯಾಧೀಶರ ಮುಂದೆಯೇ ಹೇಳಿಕೆಗಳನ್ನು ದಾಖಲಿಸಲಿದ್ದಾಳೆ. ಆದರೆ ಆಕೆ ಬಂದು ಹೇಳಿಕೆಗಳನ್ನು ದಾಖಲಿಸಲು ಒಳ್ಳೆಯ ವಾತಾವರಣ ಕಲ್ಪಿಸಬೇಕು ಎಂದು ಸಿಡಿ ಯುವತಿ ಪರ ವಕೀಲ ಜಗದೀಶ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾಯಾಲಯದಲ್ಲಿ ಯುವತಿ ಹೇಳಿಕೆ ರೆಕಾರ್ಡ್ ಮಾಡಲು ಅನುಮತಿ ಕೇಳುತ್ತಿದ್ದೇವೆ. ಯುವತಿಗೆ ಸೂಕ್ತ ರಕ್ಷಣೆ ಸಿಕ್ಕರೆ ಇಂದು ಮಧ್ಯಾಹ್ನವೇ ಆಕೆಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುತ್ತೇವೆ ಎಂದರು.

ನಿನ್ನೆ ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರ ಮೇಲೆ ಕಲ್ಲುತೂರಾಟ, ಚಪ್ಪಲಿ ಎಸೆತದಂತಹ ಕೃತ್ಯ ನಡೆಸಿ ಆರೋಪಿ ಬೆಂಬಲಿಗರು ದಾಳಿ ಮಾಡಿದ್ದಾರೆ. ಹೀಗಿರುವಾಗ ಸಂತ್ರಸ್ತ ಯುವತಿ ನ್ಯಾಯಾಲಯದ ಮುಂದೆ ಬಂದು ಹೇಳಿಕೆ ನೀಡಲು ಕೂಡ ಭಯದ ವಾತಾವರಣವಿದೆ. ಸಧ್ಯದ ಬೆಳವಣಿಗೆ ನೋಡಿದರೆ ನನಗೆ ವ್ಯವಸ್ಥೆ ಮೇಲೆ ನಂಬಿಕೆ ಬರುತ್ತಿಲ್ಲ ಎಂದು ಸ್ವತಃ ಯುವತಿಯೇ ಹೇಳಿಕೆ ನೀಡಿದ್ದಾಳೆ. ಮೊದಲು ಆರೋಪಿಯನ್ನು ಬಂಧಿಸಿ, ಒಳ್ಳೆಯ ವಾತಾವರಣ ಕಲ್ಪಿಸಿಕೊಡಬೇಕು. ಆರೋಪಿ ಬಂಧನವಾಗದೇ ಉತ್ತಮ ವಾತಾವರಣ ಸಾಧ್ಯವಿಲ್ಲ. ಈ ಬಗ್ಗೆ ಸುಪ್ರೀಂ ಕೋರ್ಟ್ ಗೂ ನಾವು ಅರ್ಜಿ ಸಲ್ಲಿಸುತ್ತೇವೆ ಎಂದು ಹೇಳಿದರು.

 ಮಂಗಳೂರು: ಕಾರು ಢಿಕ್ಕಿ; ನಿವೃತ್ತ ಸರಕಾರಿ‌ ಅಧಿಕಾರಿ ಮೃತ್ಯು

ಮಂಗಳೂರು: ಕಾರು ಢಿಕ್ಕಿ; ನಿವೃತ್ತ ಸರಕಾರಿ‌ ಅಧಿಕಾರಿ ಮೃತ್ಯು

 

ಮಂಗಳೂರು: ಕಾರು ಢಿಕ್ಕಿ; ನಿವೃತ್ತ ಸರಕಾರಿ‌ ಅಧಿಕಾರಿ ಮೃತ್ಯು

ಮಂಗಳೂರು, ಮಾ.29: ನಗರದ ಸರ್ಕ್ಯೂಟ್ ಹೌಸ್ ಬಳಿ ನಡೆದುಕೊಂಡು ಹೋಗುತ್ತಿದ್ದ ನಿವೃತ್ತ ಸರಕಾರಿ ಅಧಿಕಾರಿಗೆ ಕಾರು ಢಿಕ್ಕಿ ಹೊಡೆದ ಪರಿಣಾಮ‌ ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ರವಿವಾರ ರಾತ್ರಿ ನಡೆದಿದೆ.

ಮೃತರನ್ನು ನಗರದ ಲೇಡಿಹಿಲ್ ನಿವಾಸಿ ಎ. ಆನಂದ (62) ಎಂದು ಗುರುತಿಸಲಾಗಿದೆ.

ಬಿಎಸ್‌ಎನ್‌ಎಲ್ ಅಧಿಕಾರಿಯಾಗಿದ್ದ ಆನಂದ ಅವರು ನಿವೃತ್ತಿ ಬಳಿಕ ‌ಉಡುಪಿಯ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದರು.‌ ನಿನ್ನೆ ‌ರಾತ್ರಿ ಕಂಪೆನಿಗೆ ಸಂಬಂಧಿಸಿದ ಮೀಟಿಂಗ್ ‌ಮುಗಿಸಿ, ಬಸ್ಸಿನಿಂದಿಳಿದು ಸರ್ಕ್ಯೂಟ್ ಹೌಸ್ ರಸ್ತೆಯಾಗಿ ನಡೆದುಕೊಂಡು‌ ಹೋಗುತ್ತಿದ್ದ ಅವರಿಗೆ ಸರಕಾರಿ ಇಲಾಖೆಯೊಂದರ ಎಇಇ ಆಗಿದ್ದ ಷಣ್ಮುಗಂ‌ ಎಂಬಾತ ಅತೀ ವೇಗ‌ ಮತ್ತು ಅಜಾಗರೂಕತೆಯಿಂದ ತನ್ನ ಕಾರು ಚಲಾಯಿಸಿ  ಆನಂದ್ ಅವರಿ‌ಗೆ ಢಿಕ್ಕಿ ಹೊಡೆದು ಪರಾರಿಯಾದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಗಂಭೀರ ಗಾಯಗೊಂಡ ಆನಂದ ಸ್ಥಳದಲ್ಲೇ ಮೃತಪಟ್ಟರೆ, ಆರೋಪಿ‌ ಕಾರು ಚಾಲಕ, ಸರಕಾರಿ ಅಧಿಕಾರಿ ಷಣ್ಮುಗಂ ಕಾರು ನಿಲ್ಲಿಸದೆ ಪರಾರಿಯಾದ ಎನ್ನಲಾಗಿದೆ. ತಕ್ಷಣ ‌ಸ್ಥಳೀಯರು‌ ಇತರ ವಾಹನದಲ್ಲಿ‌ ಬೆನ್ನಟ್ಟಿ‌ ಕಾರನ್ನು ತಡೆಹಿಡಿದರು. ಅಲ್ಲದೆ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದರು. ಮೃತ ಆನಂದ ಅವರ‌ ಪತ್ನಿ ನೀಡಿದ ದೂರಿನಂತೆ ಆರೋಪಿ ಷಣ್ಮುಗಂ ವಿರುದ್ಧ ಕದ್ರಿ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

 ಮಹಾರಾಷ್ಟ್ರದಲ್ಲಿ ಒಂದೇ ದಿನ 40,414 ಕೋವಿಡ್-19 ಪ್ರಕರಣಗಳು ಪತ್ತೆ

ಮಹಾರಾಷ್ಟ್ರದಲ್ಲಿ ಒಂದೇ ದಿನ 40,414 ಕೋವಿಡ್-19 ಪ್ರಕರಣಗಳು ಪತ್ತೆ


ಮಹಾರಾಷ್ಟ್ರದಲ್ಲಿ ಒಂದೇ ದಿನ 40,414 ಕೋವಿಡ್-19 ಪ್ರಕರಣಗಳು ಪತ್ತೆ

ಮುಂಬೈ: ಮಹಾರಾಷ್ಟ್ರದಲ್ಲಿ ಒಂದೇ ದಿನದಲ್ಲಿ 40,414 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು 27,13,875 ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ. ಒಂದೇ ದಿನದಲ್ಲಿ ಈ ಪ್ರಮಾಣದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿರುವುದು ಇದೇ ಮೊದಲಾಗಿದೆ. ಮಾ.25 ರಂದು ರಾಜ್ಯದಲ್ಲಿ ಕೊರೊನಾ ಸಂಖ್ಯೆ 26 ಲಕ್ಷಕ್ಕೆ ಏರಿಕೆಯಾಗಿತ್ತು.

ಕೊರೊನಾ ಕಾರಣದಿಂದಾಗಿ 108 ಮಂದಿ ಇತ್ತೀಚೆಗೆ ಮೃತಪಟ್ಟಿದ್ದು, ಮಹಾರಾಷ್ಟ್ರದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 54,181ಕ್ಕೆ ಏರಿಕೆಯಾಗಿದೆ. ಮುಂಬೈ ನಲ್ಲಿಯೂ ಅತಿ ಹೆಚ್ಚು ಕೊರೊನಾ ಪ್ರಕರಣಗಳು ಕಂಡುಬಂದಿವೆ.

ಭಾನುವಾರ ಭಾರತದಲ್ಲಿ 62,714 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ. ದೇಶದಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆ 1,19,71,624ಕ್ಕೆ ಏರಿಕೆಯಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ಕಳೆದ 24 ಗಂಟೆಯಲ್ಲಿ 28,739 ಜನರು ಗುಣಮುಖಗೊಂಡಿದ್ದಾರೆ, 312 ಜನರು ದೇಶದಲ್ಲಿ ಮೃತಪಟ್ಟಿದ್ದಾರೆ.

ಮಾರ್ಚ್ 27ರ ಶನಿವಾರದ ತನಕ ದೇಶದಲ್ಲಿ 24,09,50,842 ಮಾದರಿಗಳ ಕೋವಿಡ್ ಪರೀಕ್ಷೆಯನ್ನು ಮಾಡಲಾಗಿದೆ. ಶನಿವಾರ 11,81,289 ಮಾದರಿಗಳ ಪರೀಕ್ಷೆ ಮಾಡಲಾಗಿದೆ ಎಂದು ಐಸಿಎಂಆರ್ ಹೇಳಿದೆ.

ಭಾರತದಲ್ಲಿನ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 1,19,71,624ಕ್ಕೆ ಏರಿಕೆಯಾಗಿದೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 4,86,310. ಒಟ್ಟು ಮೃತಪಟ್ಟವರ ಸಂಖ್ಯೆ 1,61,552 ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಇಂದು ದೇಶದ ಒಟ್ಟು ಕೊರೊನಾ ಪ್ರಕರಣ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ.


 ಮ್ಯಾನ್ಮಾರ್‌ನಲ್ಲಿ ಮುಂದುವರಿದ ಪ್ರತಿಭಟನೆಯ ಕಿಚ್ಚು  ಸೇನೆಯ ನರಮೇಧದ ವಿರುದ್ದ ವಿಶ್ವದಾದ್ಯಂತ ಆಕ್ರೋಶ

ಮ್ಯಾನ್ಮಾರ್‌ನಲ್ಲಿ ಮುಂದುವರಿದ ಪ್ರತಿಭಟನೆಯ ಕಿಚ್ಚು ಸೇನೆಯ ನರಮೇಧದ ವಿರುದ್ದ ವಿಶ್ವದಾದ್ಯಂತ ಆಕ್ರೋಶ


ಮ್ಯಾನ್ಮಾರ್‌ನಲ್ಲಿ ಮುಂದುವರಿದ ಪ್ರತಿಭಟನೆಯ ಕಿಚ್ಚು
ಸೇನೆಯ ನರಮೇಧದ ವಿರುದ್ದ ವಿಶ್ವದಾದ್ಯಂತ ಆಕ್ರೋಶ

 ಯಾಂಗೊನ್,ಮಾ.28: ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವದ ಮರುಸ್ಥಾಪನೆಗೆ ಆಗ್ರಹಿಸಿ ರವಿವಾರವೂ ಸಾವಿರಾರು ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಸೇನಾ ಪಡೆಗಳು ಶನಿವಾರ 100ಕ್ಕೂ ಅಧಿಕ ಮಂದಿ ಪ್ರಜಾಪ್ರಭುತ್ವ ಹೋರಾಟಗಾರರನ್ನು ಹತ್ಯೆಗೈದ ಮರುದಿನವೇ ಮ್ಯಾನ್ಮಾರ್‌ನಾದ್ಯಂತ ಪ್ರತಿಭಟನೆಗಳು ಇನ್ನಷ್ಟು ತೀವ್ರಗೊಂಡಿವೆ.

  ದೇಶದ ಎರಡು ಅತಿ ದೊಡ್ಡ ನಗರಗಳಾದ ಯಾಂಗೊನ್ ಹಾಗೂ ಮ್ಯಾಂಡಲೆ ನಗರಗಳಲ್ಲಿ ಪ್ರತಿಭಟನೆಗಳು ಮುಂದುವರಿದಿವೆ. ಪ್ರತಿಭಟನಾಕಾರರನ್ನು ಹತ್ತಿಕ್ಕಲು ಪೊಲೀಸರು ಬಲಪ್ರಯೋಗಿಸಿರುವುದಾಗಿ ವರದಿಗಳು ತಿಳಿಸಿವೆ.

 ಆಂಗ್ ಸಾನ್ ಸೂ ಕಿ ನೇತೃತ್ವದ ಪ್ರಜಾತಾಂತ್ರಿಕ ಸರಕಾರವನ್ನು ಪದಚ್ಯುತಗೊಳಿಸಿದ ಸೇನಾಕ್ರಾಂತಿಯ ವಿರುದ್ಧ ಪ್ರತಿಭಟನೆಗಿಳಿದ ನಾಗರಿಕರ ವಿರುದ್ಧ ದಮನಕಾರ್ಯಾಚರಣೆ ನಡೆಸುತ್ತಿರುವ ಭದ್ರತಾ ಪಡೆಗಳು ಶನಿವಾರ 114ಕ್ಕೂ ಅಧಿಕ ಮಂದಿಯನ್ನು ಹತ್ಯೆಗೈದಿದ್ದವು. ಭದ್ರತಾಪಡೆಗಳ ಗುಂಡಿಗೆ ಬಲಿಯಾದವರಲ್ಲಿ 16 ವರ್ಷಕ್ಕಿಂತ ಕೆಳವಯಸ್ಸಿನ ಹಲವಾರು ಮಕ್ಕಳೂ ಕೂಡಾ ಸೇರಿದ್ದಾರೆಂದು ವರದಿಗಳು ತಿಳಿಸಿವೆ.

  ಮ್ಯಾನ್ಮಾರ್‌ನಲ್ಲಿ ಭದ್ರತಾಪಡೆಗಳು ನಡೆಸಿದ ರಕ್ತಪಾತವನ್ನು ವಿಶ್ವಸಂಸ್ಧೆ ವಿದೇಶಾಂಗ ಕಾರ್ಯದರ್ಶಿ ಆ್ಯಂಟೊನಿಯೊ ಗ್ಯುಟೆರಸ್ ಬಲವಾಗಿ ಖಂಡಿಸಿದ್ದಾರೆ. ‘‘ಮ್ಯಾನ್ಮಾರ್‌ನಲ್ಲಿ ಮಿಲಿಟರಿ ದಮನಕಾರ್ಯಾಚರಣೆಯ ಮುಂದುವರಿಕೆಯು ಅಸ್ವೀಕಾರಾರ್ಹವಾದುದು ಹಾಗೂ ಅದರ ವಿರುದ್ಧ ಸದೃಢ, ಏಕೀಕೃತ ಮತ್ತು ದೃಢನಿಶ್ಚಯದ ಪ್ರತಿಕ್ರಿಯೆಯ ಅಗತ್ಯವಿದೆ’’ ಎಂದವರು ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.

 ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಅವರು ಮ್ಯಾನ್ಮಾರ್‌ನಲ್ಲಿ ಭದ್ರತಾಪಡೆಗಳು ನಡೆಸಿದ ನರಮೇಧಕ್ಕೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ‘‘ ಬರ್ಮಾದ ಭದ್ರತಾಪಡೆಗಳು ನಡೆಸಿದ ರಕ್ತಪಾತದಿಂದ ದಿಗ್ಬ್ರಾಂತನಾಗಿದ್ದೇನೆ. ಕೆಲವೇ ಜನರ ಹಿತಾಸಕ್ತಿಗಾಗಿ ಜುಂಟಾ (ಮ್ಯಾನ್ಮಾರ್ ಸೇನಾಡಳಿತ)ವು ಜನರ ಪ್ರಾಣಗಳನ್ನು ಬಲಿತೆಗೆದುಕೊಳ್ಳುತ್ತಿದೆ’’ಎಂದವರು ಹೇಳಿದರು.

 ಮ್ಯಾನ್ಮಾರ್ ಹತ್ಯಾಕಾಂಡವನ್ನು ಖಂಡಿಸಿ ಆಸ್ಟ್ರೇಲಿಯ, ಕೆನಡ, ಜರ್ಮನಿ, ಗ್ರೀಸ್. ಇಟಲಿ,ಜಪಾನ್,ಡೆನ್ಮಾರ್ಕ್, ನೆದರ್‌ಲ್ಯಾಂಡ್ಸ್, ನ್ಯೂಝಿಲ್ಯಾಂಡ್, ದಕ್ಷಿಣ ಕೊರಿಯ, ಬ್ರಿಟನ್ ಹಾಗೂ ಅಮೆರಿಕ ಸೇರಿದಂತೆ 12 ರಾಷ್ಟ್ರಗಳ ಸೇನಾ ವರಿಷ್ಠರು ಹೇಳಿಕೆಯೊಂದನ್ನು ನೀಡಿದ್ದು, ನಿಶಸ್ತ್ರಧಾರಿ ವ್ಯಕ್ತಿಗಳ ವಿರುದ್ಧ ಬಲಪ್ರಯೋಗವನ್ನು ಖಂಡಿಸಿದ್ದಾರೆ.


 


ಮ್ಯಾನ್ಮಾರ್ ಸೇನೆಯಿಂದ ಥೈಲ್ಯಾಂಡ್ ಗಡಿ ಬಳಿ ವಾಯುದಾಳಿ

ಮ್ಯಾನ್ಮಾರ್ ಸೇನೆಯಿಂದ ಥೈಲ್ಯಾಂಡ್ ಗಡಿ ಬಳಿ ವಾಯುದಾಳಿ


ಮ್ಯಾನ್ಮಾರ್ ಸೇನೆಯಿಂದ ಥೈಲ್ಯಾಂಡ್ ಗಡಿ ಬಳಿ ವಾಯುದಾಳಿ

ಯಾಂಗೂನ್, ಮಾ.28: ಮ್ಯಾನ್ಮಾರ್‌ನ ಸೇನಾ ಫೈಟರ್ ಜೆಟ್‌ಗಳು ಶನಿವಾರ ಥೈಲ್ಯಾಂಡ್‌ನ ಗಡಿಪ್ರದೇಶಕ್ಕೆ ತಾಗಿಕೊಂಡಿರುವ ಸಶಸ್ತ್ರಧಾರಿ ಬಂಡುಕೋರ ಗುಂಪೊಂದರ ನಿಯಂತ್ರಣದಲ್ಲಿರುವ ಹಳ್ಳಿಯೊಂದರ ಮೇಲೆ ವಾಯುದಾಳಿ ನಡೆಸಿದೆ.

ಮ್ಯಾನ್ಮಾರ್ ಸೇನೆಯ ಫೈಟರ್ ಜೆಟ್‌ಗಳು ಪಪುವಾ ಜಿಲ್ಲೆಯಲ್ಲಿರುವ ಡೇ ಪು ನೊ ಗ್ರಾಮದ ಮೇಲೆ ಶನಿವಾರ ರಾತ್ರಿ 8:00 ಗಂಟೆಯ ವೇಳೆಗೆ ದಾಳಿ ನಡೆಸಿರುವುದಾಗಿ ಮ್ಯಾನ್ಮಾರ್‌ನ ವಾಯವ್ಯ ಪ್ರಾಂತ್ಯದ ಮೇಲೆ ನಿಯಂತ್ರಣವನ್ನು ಹೊಂದಿರುವ ಕರೆನ್ ನ್ಯಾಶನಲ್ ಯೂನಿಯನ್ (ಕೆಎನ್‌ಯು) ತಿಳಿಸಿದೆ. ವಾಯುದಾಳಿಗೆ ಬೆದರಿ ಜನರು ಮನೆಗಳನ್ನು ತೊರೆದು ಪಲಾಯನಗೈದರೆಂದು ಅದು ಹೇಳಿದೆ.

 ಘಟನೆಯಲ್ಲಿ ಇಬ್ಬರು ನಾಗರಿಕರು ಮೃತಪಟ್ಟು, ಇನ್ನಿಬ್ಬರು ಗಾಯಗೊಂಡಿದ್ದಾರೆಂದು ನಾಗರಿಕ ಹಕ್ಕುಗಳ ಸಂಘಟನೆ ‘ಕರೆನ್ ಪೀಸ್ ಸಪೋರ್ಟ್ ನೆಟ್‌ವರ್ಕ್’ ತಿಳಿಸಿದೆ. ವಾಯುದಾಳಿಗೆ ತುತ್ತಾಗಿರುವ ಹಳ್ಳಿಯು ದುರ್ಗಮ ಪ್ರದೇಶವಾಗಿರುವುದರಿಂದ ಅಲ್ಲಿಗೆ ಸಂಪರ್ಕ ಸಾಧಿಸುವುದು ಕಷ್ಟಕರವಾಗಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಿರುವ ಸಾಧ್ಯತೆಯಿದೆಂದು ಅವರು ಹೇಳಿದ್ದಾರೆ.


 


 

 `CD ಪ್ರಕರಣ':`ಸಿಡಿ ಲೇಡಿ' ಇಂದು ಕೋರ್ಟ್ ಮುಂದೆ ಹಾಜರು?

`CD ಪ್ರಕರಣ':`ಸಿಡಿ ಲೇಡಿ' ಇಂದು ಕೋರ್ಟ್ ಮುಂದೆ ಹಾಜರು?


`CD ಪ್ರಕರಣ':`ಸಿಡಿ ಲೇಡಿ' ಇಂದು ಕೋರ್ಟ್ ಮುಂದೆ ಹಾಜರು?

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರದ್ದು ಎನ್ನಲಾಗ್ತಿರುವ ಸಿಡಿ ಪ್ರಕರಣಕ್ಕೆ ದಿನಕ್ಕೊಂದು ಹೊಸ ಟ್ವಿಸ್ಟ್‌ʼಗಳು ಸಿಗ್ತಿದೆ. ಈ ನಡುವೆ ಇಂದು ಸಿ.ಡಿ ಯುವತಿ ನ್ಯಾಯಾಲಯದ ಮುಂದೆ ಹಾಜರಾಗ್ತಾಳೆ ಅಂತಾ ಯುವತಿಯ ಪರ ವಕೀಲ ಕೆಎನ್‌ ಜಗದೀಶ್‌ ವಕೀಲ ತಿಳಿಸಿದ್ದಾರೆ.

ಫೇಸ್‌ಬುಕ್‌ ನಲ್ಲಿ ಈ ಕುರಿತು ಮಾತನಾಡಿರುವ ವಕೀಲ ಜಗದೀಶ್‌, ' ಸಿಡಿ ಲೇಡಿ ಪೋಷಕರು ತಮ್ಮ ಮಗಳ ಪರವಾಗಿ ನಿಲ್ಲಬೇಕು. ಯಾಕಂದ್ರೆ, ಮಗಳಿಗೆ ಅನ್ಯಾಯವಾಗಿದೆ. ನಾವು ಅಂದುಕೊಂಡಂತೆ ಆದ್ರೆ, ಸೋಮವಾರ ಆಕೆ ಕೋರ್ಟ್‌ಗೆ ಹಾಜರಾಗಲಿದ್ದಾರೆ. ಇನ್ನು ಈ ಪ್ರಕರಣ ದಾಖಲಾದ ನಂತ್ರ ಪೋಷಕರಿಗೆ ಸೆಕ್ಯೂರಿಟಿ ಕೊಡಿ ಅಂದ್ರೆ ಯಾರನ್ನೂ ಬೇಟಿ ಮಾಡದೇ ಎಸ್‌ಐಟಿ ಪೊಲೀಸರು ವಾಪಸ್ ಕಳಿಸಿದ್ದಾರೆ. ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಯುತವಾದ ತನಿಖೆ ಆಗಿಲ್ಲ. ಪೊಲೀಸರು ರಾಜಕಾರಣಿಗಳಿಗೆ ತಮ್ಮ ತಲೆ ಬಗ್ಗಿಸಿದ್ದಾರೆ ಅನಿಸ್ತಿದೆ' ಎಂದು ಹೇಳಿದ್ದಾರೆ.

ಯುವತಿಗೆ ಎಸ್ ಐಟಿ ಮೇಲೆ ನಂಬಿಕೆ ಇಲ್ಲ. ಈಗಾಗಲೇ ಆಕೆಯ ಪೋಷಕರು, ಸಹೋದರರಿಗೆ ಬ್ಲ್ಯಾಕ್ ಮೇಲ್ ಮಾಡಿ ಸುಳ್ಳು ಹೇಳಿಕೆ ಕೊಡಿಸಿದ್ದಾರೆ. ಹೀಗಾಗಿ ಎಸ್ ಐಟಿ ಮುಂದೆ ಹಾಜರಾದರೆ, ತನಿಖಾಧಿಕಾರಿಗಳು ತನಿಖೆಯ ದಿಕ್ಕು ತಪ್ಪಿಸುವ ಸಾಧ್ಯತೆ ಇದೆ. ನನಗೆ ಎಸ್ ಐಟಿ ಮೇಲೆ ನಂಬಿಕೆ ಇಲ್ಲ. ಹೀಗಾಗಿ ನೇರವಾಗಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗಿ ಘಟನೆಯ ಇಂಚಿಂಚೂ ಮಾಹಿತಿ ಹೇಳುತ್ತೇನೆ ಎಂದಿದ್ದಾರೆ.


ಸೂಯೆಝ್ ತೆರವು ಕಾರ್ಯದಲ್ಲಿ ನೆರವು ನೀಡಲು ಸಿದ್ಧ: ಅಮೆರಿಕ

ಸೂಯೆಝ್ ತೆರವು ಕಾರ್ಯದಲ್ಲಿ ನೆರವು ನೀಡಲು ಸಿದ್ಧ: ಅಮೆರಿಕ


ಸೂಯೆಝ್ ತೆರವು ಕಾರ್ಯದಲ್ಲಿ ನೆರವು ನೀಡಲು ಸಿದ್ಧ: ಅಮೆರಿಕ


ವಾಶಿಂಗ್ಟನ್, ಮಾ. 27: ಯುರೋಪ್ ಮತ್ತು ಏಶ್ಯ ಖಂಡಗಳನ್ನು ಜೋಡಿಸುವ ಪ್ರಮುಖ ಜಲಮಾರ್ಗ ಸೂಯೆಝ್ ಕಾಲುವೆಯಲ್ಲಿ ಅಡ್ಡಲಾಗಿ ಸಿಲುಕಿಕೊಂಡಿರುವ ಬೃಹತ್ ಕಂಟೇನರ್ ಹಡಗನ್ನು ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ಈಜಿಪ್ಟ್‌ಗೆ ನೆರವು ನೀಡಲು ಸಿದ್ಧವಿರುವುದಾಗಿ ಅಮೆರಿಕ ಶುಕ್ರವಾರ ಹೇಳಿದೆ.

 ಬೇಡಿಕೆ ಬಂದರೆ ಅಮೆರಿಕ ನೌಕಾಪಡೆಯ ಪರಿಣತರ ತಂಡವೊಂದನ್ನು ಹಡಗನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ನಿಯೋಜಿಸಬಹುದಾಗಿದೆ ಎಂದು ಶ್ವೇತಭವನದ ವಕ್ತಾರೆ ಜೆನ್ ಸಾಕಿ ಹೇಳಿದರು.

‘‘ಈಜಿಪ್ಟ್‌ನೊಂದಿಗೆ ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆಗಳನ್ನು ನಡೆಸಲಾಗಿದೆ. ಸೂಯೆಝ್ ಕಾಲುವೆಯನ್ನು ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ನೆರವು ನೀಡಲು ನಾವು ಸಿದ್ಧರಿದ್ದೇವೆ ಎನ್ನುವುದನ್ನು ಅವರಿಗೆ ತಿಳಿಸಲಾಗಿದೆ’’ ಎಂದು ಹೇಳಿದ ಅವರು, ‘‘ಈ ನಿಟ್ಟಿನಲ್ಲಿ ಮಾತುಕತೆಗಳು ಮುಂದುವರಿದಿವೆ’’ ಎಂದರು.


 ಸಮುದ್ರದ ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿರುವ  ಹಡಗುಗಳು.

ಸಮುದ್ರದ ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿರುವ ಹಡಗುಗಳು.


ಸಮುದ್ರದ ಟ್ರಾಫಿಕ್‌ ಜಾಮ್‌ನಲ್ಲಿ ಸಿಲುಕಿರುವ  ಹಡಗುಗಳು.

ಕೈರೋ: ಈಜಿಪ್ಟ್‌ನ ಸುಯೆಜ್ ಕಾಲುವೆಯಲ್ಲಿ ಸಿಲುಕಿರುವ ಹಡಗನ್ನು ತೆರವುಗೊಳಿಸುವ ಕಾರ್ಯಾಚರಣೆ ಇನ್ನೂ ನಡೆಯುತ್ತಿದ್ದು, ಇದರಿಂದ ಸಮುದ್ರದಲ್ಲಿ ಹಲವು ಹಡಗುಗಳು ಸಾಲುಗಟ್ಟಿ ನಿಲ್ಲಬೇಕಾಗಿದೆ.

ಹೀಗಾಗಿ ಕಾಲುವೆ ಮುಖಾಂತರ ಸಾಗಬೇಕಿದ್ದ ಹಡಗುಗಳಿಗೆ ನಷ್ಟ ಉಂಟಾಗಿದ್ದು, ಅದಕ್ಕಾಗಿ ಡಿಸ್ಕೌಂಟ್ ನೀಡುವ ಕುರಿತು ಸುಯೆಜ್ ಕಾಲುವೆ ಪ್ರಾಧಿಕಾರ ಮುಂದಾಗಿದೆ.

ಪ್ರಾಧಿಕಾರ ಅಧ್ಯಕ್ಷರ ಒಸಾಮ ರಬೀ ಭಾನುವಾರ ಈ ಕುರಿತು ಹೇಳಿಕೆ ನೀಡಿದ್ದು, ಸುಯೆಜ್ ಕಾಲುವೆ ಬಂದ್ ಆಗಿರುವುದರಿಂದ ದಿನಕ್ಕೆ $13-14 ಮಿಲಿಯನ್ ನಷ್ಟವಾಗುತ್ತಿದೆ. 369 ಹಡಗುಗಳು ಕಾಲುವೆ ಮೂಲಕ ಸಾಗಲು ಸರದಿಯಲ್ಲಿ ಕಾಯುತ್ತಿವೆ ಎಂದು ಹೇಳಿದ್ದಾರೆ.

ಕಾಲುವೆಯಲ್ಲಿ ಸಿಲುಕಿಕೊಂಡಿರುವ ಹಡಗನ್ನು ಹೊರತರಲು ಕಳೆದ ಐದು ದಿನಗಳಿಂದ ಶ್ರಮಿಸಲಾಗುತ್ತಿದೆ. ಎವರ್ ಗಿವನ್ ಹೆಸರಿನ ಜಪಾನ್ ಮೂಲದ ಬೃಹತ್ ಕಂಟೇನರ್ ಸರಕು ಸಾಗಣಿಕೆ ಹಡಗು ಕಾಲುವೆಯಲ್ಲಿ ಸಿಲುಕಿಕೊಂಡಿದೆ.


30ರಲ್ಲಿ 26 ಸೀಟ್‌ ಗೆಲ್ಲುತ್ತೇವೆ; ಅಮಿತ್‌ ಶಾ   ಅಮಿತ್‌ ಶಾಈಗಾಗಲೇ ʼಇವಿಎಂʼ ಪ್ರವೇಶಿಸಿರಬೇಕು: ಮಮತಾ ಬ್ಯಾನರ್ಜಿ ಗರಂ

30ರಲ್ಲಿ 26 ಸೀಟ್‌ ಗೆಲ್ಲುತ್ತೇವೆ; ಅಮಿತ್‌ ಶಾ ಅಮಿತ್‌ ಶಾಈಗಾಗಲೇ ʼಇವಿಎಂʼ ಪ್ರವೇಶಿಸಿರಬೇಕು: ಮಮತಾ ಬ್ಯಾನರ್ಜಿ ಗರಂ


30ರಲ್ಲಿ 26 ಸೀಟ್‌ ಗೆಲ್ಲುತ್ತೇವೆ; ಅಮಿತ್‌ ಶಾ 
ಅಮಿತ್‌ ಶಾಈಗಾಗಲೇ ʼಇವಿಎಂʼ ಪ್ರವೇಶಿಸಿರಬೇಕು: ಮಮತಾ ಬ್ಯಾನರ್ಜಿ ಗರಂ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಈಗಾಗಲೇ ಮೊದಲ ಹಂತದ ಚುನಾವಣೆಯು ನಡೆದಿದ್ದು, ಈ ಕುರಿತಾದಂತೆ ಗೃಹ ಸಚಿವ ಅಮಿತ್‌ ಶಾ ಬಿಜೆಪಿ ಗೆಲುವಿನ ಕುರಿತು ಭರವಸೆ ವ್ಯಕ್ತಪಡಿಸಿದ್ದರು. "ಮೊದಲ ಹಂತದ ಚುನಾವಣೆ ಮುಕ್ತಾಯವಾಗಿದೆ. ಬೂತ್‌ ಮಟ್ಟದ ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ʼ30ರಲ್ಲಿ 26 ಸೀಟುಗಳನ್ನು ಗೆಲ್ಲುತ್ತೇವೆʼ ಎಂದು ನಾನು ಹೇಳಬಲ್ಲೆ" ಎಂದು ಹೇಳಿಕೆ ನೀಡಿದ್ದರು. ಈ ಕುರಿತಾದಂತೆ ಇದೀಗ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಸಮಾವೇಶವೊಂದರಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, "ಮೊದಲ ಹಂತದಲ್ಲಿ ಮತದಾನ ನಡೆದಿದ್ದು, 30 ಸ್ಥಾನಗಳಲ್ಲಿ 26 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಗೃಹ ಸಚಿವರು ಹೇಳುತ್ತಾರೆ. ನೀವು (ಅಮಿತ್ ಶಾ) ಇವಿಎಂ ಪ್ರವೇಶಿಸಿದ್ದೀರಾ? ಎಲ್ಲಾ 30 ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ ಎಂದು ನೀವು ಯಾಕೆ ಹೇಳಲಿಲ್ಲ?. ಮೇ 2 ಕ್ಕೆ ಕಾಯೋಣ. ಟಿಎಂಸಿ ಗೆಲ್ಲುತ್ತದೆ. ಹೊರಗಿನವರು ಬಂಗಾಳವನ್ನು ಆಳಲು ಸಾಧ್ಯವಿಲ್ಲ" ಎಂದು ಗುಡುಗಿದ್ದಾರೆ.


 ಆಶ್ರಯ ಇಲ್ಲದವರಿಗೆ ಮುಹಿಮ್ಮಾತಿನಲ್ಲಿ ಹೊಸ ಸಂಸ್ಥೆ  ಬರುತ್ತಿದೆ

ಆಶ್ರಯ ಇಲ್ಲದವರಿಗೆ ಮುಹಿಮ್ಮಾತಿನಲ್ಲಿ ಹೊಸ ಸಂಸ್ಥೆ ಬರುತ್ತಿದೆ


 ಆಶ್ರಯ ಇಲ್ಲದವರಿಗೆ ಮುಹಿಮ್ಮಾತಿನಲ್ಲಿ ಹೊಸ ಸಂಸ್ಥೆ  ಬರುತ್ತಿದೆ

ಕಾಸರಗೋಡು : ಆಶ್ರಿತರಿಲ್ಲದ ವೃದ್ಧರ ಮತ್ತು ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿರುವವರ ಆರೈಕೆ ಮತ್ತು ರಕ್ಷಣೆಗಾಗಿ ಮುಹಿಮ್ಮಾತ್ ಸಂಸ್ಥೆಯ ಅಂಡರಲ್ಲಿ ನೂತನ ಸಂಸ್ಥೆಯನ್ನು ಪ್ರಾರಂಭಿಸಲಾಗುತ್ತದೆ.

ಮುಹಿಮ್ಮಾತ್ ಕೆಯರ್ ಹೋಮ್ ಪದ್ಧತಿಯ ಲಾಂಚಿಂಗ್, ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ನಿರ್ವಹಿಸಿದರು.

ಆರೈಕೆಗೆ ಜನರಿಲ್ಲದ್ದರಿಂದ ವೃದ್ಧರು ಬೀದಿಗಳಲ್ಲಿ ಅಲೆದಾಡುವ ಪರಿಸ್ಥಿತಿ ಬಂದೊದಗುತ್ತಿದೆ. ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಸರಿಯಾದ ರಕ್ಷಣೆ ಸಿಗುತ್ತಿಲ್ಲ. ಅಂಗವಿಕಲರು ಕೂಡ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಜನರನ್ನು ರಕ್ಷಿಸಲಿಕ್ಕಾಗಿಯೇ ಮುಹಿಮ್ಮಾತ್ ಈ ಹೊಸ ಪದ್ಧತಿಯನ್ನು ಪ್ರಾರಂಭಿಸುತ್ತಿರುವುದು. ಮುಹಿಮ್ಮಾತಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಯ್ಯಿದ್ ಅಲಿ ಬಾಫಕಿ ತಂಙಳ್ ಪ್ರಾರ್ಥನೆ ನಡೆಸಿದರು. ಸಯ್ಯಿದ್ ಹಸನುಲ್ ಅಹ್ದಲ್ ತಂಙಳ್ ಅಧ್ಯಕ್ಷತೆ ವಹಿಸಿದರು. ಸಯ್ಯಿದ್ ಮುಹಮ್ಮದ್ ಇಬ್ರಾಹೀಂ ಪೂಕುಞ್ಞಿ ತಂಙಳ್ ಕಲ್ಲಕ್ಕಟ್ಟ, ಸಯ್ಯಿದ್ ಇಬ್ರಾಹೀಂ ಹಾದಿ ತಂಙಳ್ ಚೂರಿ, ಎ.ಪಿ ಅಬ್ದುಲ್ಲಾ ಮುಸ್ಲಿಯಾರ್ ಮಾಣಿಕೊತ್, ಬಿ.ಎಸ್ ಅಬ್ದುಲ್ಲಾ ಕುಞ್ಞಿ ಫೈಝಿ, ಸಯ್ಯಿದ್ ಮುನೀರುಲ್ ಅಹ್ದಲ್ ತಂಙಳ್, ಸಯ್ಯಿದ್ ಹಾಮಿದ್ ಅನ್ವರ್ ಅಹ್ದಲ್ ತಂಙಳ್, ಪಳ್ಳಂಗೋಡು ಅಬ್ದುಲ್ ಖಾದರ್ ಮದನಿ, ಕೆ.ಪಿ ಹುಸೈನ್ ಸಅದಿ ಕೆ.ಸಿ ರೋಡ್, ಅಬ್ದುಲ್ ಖಾದರ್ ಸಖಾಫಿ ಮೊಗ್ರಾಲ್ ಮುಂತಾದವರು ಭಾಗವಹಿಸಿದರು.

  ಮಾ.29ರಂದು ಸಿಡಿ ಸಂತ್ರಸ್ತೆ ನ್ಯಾಯಾಲಯಕ್ಕೆ ಹಾಜರು: ವಕೀಲ ಜಗದೀಶ್

ಮಾ.29ರಂದು ಸಿಡಿ ಸಂತ್ರಸ್ತೆ ನ್ಯಾಯಾಲಯಕ್ಕೆ ಹಾಜರು: ವಕೀಲ ಜಗದೀಶ್

 

ಮಾ.29ರಂದು ಸಿಡಿ ಸಂತ್ರಸ್ತೆ ನ್ಯಾಯಾಲಯಕ್ಕೆ ಹಾಜರು: ವಕೀಲ ಜಗದೀಶ್

ಬೆಂಗಳೂರು: ಮಾಜಿ ಸಚಿವ ರಮೇಶ್‌ ಜಾರಕಿಹೊಳಿಯವರಿಗೆ ಸಂಬಂಧಿಸಿದ್ದೆನ್ನಲಾದ ಅಶ್ಲೀಲ ಸಿ.ಡಿ.ಯಲ್ಲಿ ಕಾಣಿಸಿಕೊಂಡಿರುವ ಯುವತಿ ಪ್ರಕರಣದ ಕುರಿತು ಹೇಳಿಕೆ ನೀಡಲು ಮಾ.29ರಂದು ನ್ಯಾಯಾಲಯದ ಎದುರು ಹಾಜರಾಗುವ ಸಾಧ್ಯತೆ ಇದೆ ಎಂದು ವಕೀಲ ಕೆ.ಎನ್.ಜಗದೀಶ್ ತಿಳಿಸಿದ್ದಾರೆ.

ಪ್ರಕರಣದ ಸಂಬಂಧ ಹೇಳಿಕೆ ನೀಡಲು (ಸ್ಟೇಟ್‌ಮೆಂಟ್‌ 164) ಸಂತ್ರಸ್ತ ಯುವತಿಯನ್ನು ಮಾ.29(ಸೋಮವಾರ)ರಂದು ನ್ಯಾಯಾಲಯದ ಎದುರು ಹಾಜರುಪಡಿಸುವ ಸಾಧ್ಯತೆ ಇದೆ ಎಂದು ಜಗದೀಶ್ ಇಂದು ಫೇಸ್‌ಬುಕ್‌ ಲೈವ್‌ನಲ್ಲಿ ಹೇಳಿದ್ದಾರೆ.  

ಸಿ.ಡಿ. ಪ್ರಕರಣಕ್ಕೆ ಸಂಬಂಧಿಸಿ ಅತ್ಯಾಚಾರ ಪ್ರಕರಣ ಮತ್ತು ಸುಲಿಗೆ ಪ್ರಕರಣ ದಾಖಲಾಗಿವೆ. ಎರಡೂ ಪ್ರಕರಣಗಳನ್ನು ವಿಶೇಷ ತನಿಖಾ ತಂಡ(ಎಸ್.ಐ.ಟಿ.) ತನಿಖೆ ನಡೆಸುತ್ತಿದೆ. ಆದರೆ ಇವೆರಡೂ ಗಂಭೀರ ಸ್ವರೂಪದ ದೂರುಗಳಾಗಿದ್ದು, ಪೊಲೀಸರು ನ್ಯಾಯಯುತವಾಗಿ ತನಿಖೆ ನಡೆಸುವ ಬಗ್ಗೆ ಸಂಶಯಗಳಿವೆ ಎಂದು ಜಗದೀಶ್ ಆರೋಪಿಸಿದ್ದಾರೆ.

'ಕೋರ್ಟ್‌ನಲ್ಲಿ ಇನ್‌–ಕ್ಯಾಮೆರಾ ಪ್ರಕ್ರಿಯೆ ನಡೆಯಲಿದ್ದು, ಯುವತಿಯ ಹೇಳಿಕೆಗಳು ದಾಖಲಾಗಲಿವೆ. ಆರೋಪಿ ಮತ್ತು ಸಂತ್ರಸ್ತೆ ಆರೋಗ್ಯ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ' ಎಂದು ಜಗದೀಶ್‌ ಅವರೊಂದಿಗೆ ಫೇಸ್‌ಬುಕ್‌ ಸಂವಾದದಲ್ಲಿದ್ದ ಮಂಜುನಾಥ್ ಎಂಬುವವರು ತಿಳಿಸಿದ್ದಾರೆ.

ಯುವತಿ ಕೈಬರಹದಲ್ಲಿ ನೀಡಿದ್ದ ದೂರಿನ ಪ್ರತಿಯನ್ನು ಆಕೆಯ ಪರ ವಕೀಲರಾಗಿರುವ ಕೆ.ಎನ್.ಜಗದೀಶ್ ಶುಕ್ರವಾರ ಪೊಲೀಸ್‌ ಆಯುಕ್ತರಿಗೆ ತಲುಪಿಸಿ, ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದರು.

ಐಪಿಸಿ ಸೆಕ್ಷನ್ 376 ಸಿ (ಪ್ರಭಾವಿ ಹುದ್ದೆಯಲ್ಲಿದ್ದು, ಅತ್ಯಾಚಾರ), 354 ಎ(ಕೆಲಸ ನೀಡುವುದಾಗಿ ನಂಬಿಸಿ ದೈಹಿಕ ಸಂಪರ್ಕ) 506 (ಜೀವ ಬೆದರಿಕೆ), 417(ವಂಚನೆ) ಅಡಿ ಪ್ರಕರಣ ದಾಖಲಾಗಿದೆ. ಜತೆಗೆ, ವೀಡಿಯೊ ಹರಿಬಿಟ್ಟಿರುವ ಆರೋಪದ ಮೇಲೂ ರಮೇಶ್ ಜಾರಕಿಹೊಳಿ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67ರ ಅಡಿ ಪ್ರಕರಣ ದಾಖಲಾಗಿದೆ.

ದೂರು ನೀಡಿದ ಬೆನ್ನಲ್ಲೇ ರಮೇಶ್‌ ಜಾರಕಿಹೊಳಿ ವಿರುದ್ಧ ಎಫ್‌ಐಆರ್‌ ಕೂಡಾ ದಾಖಲಾಗಿದೆ.

 ಕುಟುಂಬ ಸಮ್ಮಿಲನದಿಂದ ಕುಟುಂಬದಲ್ಲಿ ಅಭಿವೃದ್ಧಿ ಮತ್ತು ಬಡತನ ನಿರ್ಮೂಲನೆ ಮಾಡಲು ಸಾಧ್ಯ: ರಫೀಕ್ ಮಾಸ್ಟರ್

ಕುಟುಂಬ ಸಮ್ಮಿಲನದಿಂದ ಕುಟುಂಬದಲ್ಲಿ ಅಭಿವೃದ್ಧಿ ಮತ್ತು ಬಡತನ ನಿರ್ಮೂಲನೆ ಮಾಡಲು ಸಾಧ್ಯ: ರಫೀಕ್ ಮಾಸ್ಟರ್


 ಕುಟುಂಬ ಸಮ್ಮಿಲನದಿಂದ ಕುಟುಂಬದಲ್ಲಿ ಅಭಿವೃದ್ಧಿ ಮತ್ತು ಬಡತನ ನಿರ್ಮೂಲನೆ ಮಾಡಲು ಸಾಧ್ಯ: ರಫೀಕ್ ಮಾಸ್ಟರ್

    ಮಂಗಳೂರಿನಿಂದ ಅಂತರಾಷ್ಟ್ರೀಯ ವಿಮಾನ ನಿಲ್ದಾನಕ್ಕೆ ಹೊಗುವ ದಾರಿಯಲ್ಲಿ, ರಸ್ತೆ ಬದಿಯಲ್ಲಿ ಇಂದು ನಮಗೆ ಕಾಣ ಸಿಗುವ ಒಂದೇ ಒಂದು ಮಸೀದಿಯಾಗಿದೆ ಮರವೂರಿನ ಜಮಾಅತ್'ಗೊಳಪಟ್ಟ. ಮುಹ್ಯಿದ್ದೀನ್ ಜುಮುಅ ಮಸ್ಜಿದ್ ಮರವೂರ್. ಮಸೀದಿ ನವೀಕರಣಕ್ಕಿಂತ ಮುಂಚೆ ಈ ಮಸೀದಿ ಮಂಗಳೂರಿನ ಪುರಾತನ ಮಂಗಳೂರಿನ ಝೀನತ್ ಬಕ್ಷ್ ಮಸೀದಿಯಂತೆ ಅಧ್ಯಾತ್ಮಿಕ ಭಾವನೆಯಿಂದ ಕೂಡಿ ಮುಖ್ಯ ದ್ವಾರ ಮತ್ತು ಇತರ ಕಿಟಕಿಗಳು ಬೆಲೆಬಾಳುವ ಬಹಳ ದೊಡ್ಡ ಗಾತ್ರದ ಮರಗಳಿಂದ ತುಂಬಿ ಮಿನುಗುತ್ತಿತ್ತು. ಹಿರಿಯರು ಹೇಳುವ ಪ್ರಾಕಾರ ಮರವೂರಿನಲ್ಲಿ ಹತ್ತು ಕುಟುಂಬವಿತ್ತು, ಐದು ವಕ್ತಿನ ಕಡ್ಡಾಯ ನಮಾಝ್'ಗೆ ಮಸೀದಿಯೊಂದರ ಅವಶ್ಯಕತೆ ಇತ್ತು ಆಗ ಈ ಮಸೀದಿ ಆ ಹತ್ತು ಕುಟುಂಬದವರಿಂದ ನಿರ್ಮಿತವಾದವು. ಮರವೂರ್ ಕುಟುಂಬದ ಮೂಲ ಇಲ್ಲಿಂದ ನೆನಪಿಸಬಹುದು. ಪ್ರತೀ ವರ್ಷ ಇಂದಿಗೂ ಅವರ ಮಕ್ಕಳು ಈದ್ ನಮಾಜ್ ಮತ್ತು ಮರವೂರಿನ ಖಬರ್'ನಲ್ಲಿ ಅಂತ್ಯ ವಿಶ್ರಾಂತಿಗೊಳ್ಳುತ್ತಿರುವ ತಂದೆ ತಾಯಿ, ಅಜ್ಜ ಅಜ್ಜಿ'ಯರಿಗೋಸ್ಕರ ಎಲ್ಲರೂ ಬಂದು ಇಲ್ಲಿ ದುಆ ಮಾಡುವುದು ರೂಢಿಯಾಗಿದೆ.

          ಮರವೂರಿನ ಅಹ್ಮದ್ ಹಾಜಿ ಮತ್ತು ಫಾತಿಮ ದಂಪತಿಗಳಿಗೆ ಒಟ್ಟು ಒಂಬತ್ತು ಮಕ್ಕಳು, ಏಳು ಗಂಡು ಮತ್ತು ಎರಡು ಹೆಣ್ಣು. ಕಾಲ ಕ್ರಮೇನ ಈ ಕುಟುಂಬದ ಬಹುತೇಕ ಸದಸ್ಯರು ಮರವೂರು ಬಿಟ್ಟು ಇತರ ಸ್ಥಳೀಯ ಊರಿನ ಕಡೆಗೆ ಸ್ಥಾಳಂತರವಾದರು. ಈಗ ಅವರ ಮಕ್ಕಳು ಮತ್ತು ಮೊಮ್ಮಕ್ಕಳು ಮಂಗಳೂರು, ಮೂಡಬಿದಿರೆ ಮತ್ತು ಬಜ್ಪೆಯಲ್ಲಿ ವಾಸಿಸುತ್ತಿದ್ದಾರೆ. ವಿಷೇಶವೆಂದರೆ ಈ ತಲೆಮಾರಿನ ಆ ಒಂಬತ್ತು ಮಕ್ಕಳು ಕುಟುಂಬ ಬಂಧವನ್ನು ಅನ್ಯೋನ್ಯತೆಯೊಂದಿಗೆ ಗಟ್ಟಿಯಾಗಿಟ್ಟಿದ್ದು, ಅದರ ಪರಿಣಾಮವಾಗಿ ಅವರ ಮಕ್ಕಳು ಇನ್ನಿತರ ಎಲ್ಲಾ ಮಕ್ಕಳೊಂದಿಗೆ ಸಂಪರ್ಕದಲ್ಲೇ (Cousins Relationship) ಇದ್ದು ಅವರೆಲ್ಲರೂ ಪರಸ್ಪರ ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದಾರೆ. ಈ ಸಹೋದರತೆಯ ಜೀವನವನ್ನು ಕುಟ್ಟುಂಬದಲ್ಲಿ ಕಲಿಯುತ್ತಿರುವ  ಯುವಕ, ಯುವತಿಯರು ಮತ್ತು ಇನ್ನು ಬರುವ ಮುಂದಿನ ಪೀಳಿಗೆಗೆ ಎಲ್ಲಾ ರೀತಿಯಲ್ಲಿ ಸಹಕಾರಿಯಾಗಲು ಮರವೂರ್  ಫಾತಿಮ ಅಹ್ಮದ್ ಟ್ರಸ್ಟ್'ಅನ್ನು  ಅಸ್ಥಿತ್ವಕ್ಕೆ ತಂದು ಸಮೀತಿ ರಚಿಸಿ ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ತಯಾರಿಯಲ್ಲಿದೆ.ಐದು ತಲೇಮಾರನ್ನು ಒಟ್ಟು ಗೂಡಿಸಿ ಫಾಮಿಲಿ ರೀ ಯುನಿಯನ್ ಮಾಡುವ ಮೂಲಕ ಮಲವೂರಿನ ಅಹ್ಮದ್ ಹಾಜಿ ಮತ್ತು ಫಾತಿಮ ದಂಪತಿಗಳ ಮಕ್ಕಳಿಂದ, ಮೊಮ್ಮಕ್ಕಳ, ಮರಿ ಮೊಮ್ಮಕಳವರೆಗೆ ಪ್ರತಿಯಬ್ಬ ವ್ಯಕ್ತಿಯೂ ಈ ಟ್ರಸ್ಟ್'ನ ಸದಸ್ಯರಾಗಿದ್ದಾರೆ.

    ಮಂಗಳೂರು ಪರಿಸರದ ಗೆಸ್ಟ್ ಹೌಸ್ ಒಂದರಲ್ಲಿ Family Re Union ಮಾಡುವ ಮೂಲಕ ಸ್ವದೇಶದಲ್ಲಿರುವ ಕುಟುಂಬದ ಪ್ರತಿಯೊಬ್ಬ ಸದಸ್ಯರು ಪಾಲ್ಗೊಂಡು Maravoor Fatima Ahmed Trust'ಅನ್ನು ಅಸ್ಥಿತ್ವಕ್ಕೆ ತರಲಾಗಿದೆ.

        ಫ್ಯಾಮಿಲ್ ರಿ-ಯುನಿಯನ್'ನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ರಫೀಖ್ ಮಾಸ್ಟರ್'ರವರು ಮರವೂರ್ ಫ್ಯಾಮಿಲಿ ಟ್ರಸ್ಟ್'ನ ಮಾರ್ಗದರ್ಶಕರಾಗಿ ಮತ್ತು ಮುಖ್ಯ ಅಥಿತಿಯಾಗಿ ಭಾಗವಹಿಸಿದ ಅವರು ಮಾತನಾಡುತ್ತಾ ಕುಟುಂಬದಲ್ಲಿ ಇಂತಹ ಸಮ್ಮಿಲನ ನಡೆಸುವುದರೊಂದಿಗೆ ಯಾವ ರೀತಿಯ ಅಭಿವೃದ್ಧಿ ಮತ್ತು ಬಡತನ ನಿರ್ಮೂಲನೆಯನ್ನು ಮಾಡಬಹುದೆಂಬುವುದರ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು. ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ'ವಸಲ್ಲಮರ ಸರಳ ಜೀವನ ಶೈಲಿ ಮತ್ತು ಹಝ್ರತ್ ಉಮರ್ ರಳಿಯಲ್ಲಾಹು ಅನ್ಹು'ರವರು ಆಡಳಿತಗಾರರಾಗಿ ಇರುವಾಗ ಅವರು ನಡೆಸಿದ ಜೀವನ ಶೈಲಿಯ ಬಗ್ಗೆ  ಹಲವಾರು ಉದಾಹರಣೆಗಳನ್ನು ನೀಡಿ ಮಾತನಾಡಿದ ಅವರು

ಧರ್ಮದ ಅನುಸಾರವಾಗಿ ನಾವು ಯಾವ ರೀತಿಯ ಸರಳತೆಯ ಜೀವನ ನಡೆಸಬೇಕೆನ್ನುವ ಬಗ್ಗೆ ಮತ್ತು ಒಬ್ಬ ಶ್ರೀಮಂತನ ಮದುವೆಗೆ ಹಾಜರಾಗಲು ನಾವೆಷ್ಟು ಆಧ್ಯತೆ ನೀಡುತ್ತೇವೆಯೋ ಅದಕ್ಕಿಂತ ಹೆಚ್ಚು ಪಟ್ಟು ಆದ್ಯತೆಯನ್ನು ನಾವು ಮರಣ ಹೊಂದಿದವರ ಮನೆಗೆ ಹೋಗಿ ಸಾಂತ್ವಾನ ನೀಡುವಲ್ಲಿಯೂ ಪ್ರೋತ್ಸಾಹಿಸ ಬೇಕು. ಕುಟುಂಬದಲ್ಲಿ ಯಾರಾದರು ಆರ್ಥಿಕ ಸಂಕಷ್ಟದಲ್ಲಿದ್ದರೆ ಕುಟುಂಬದೊಳಗಿನವರಿಂದಲೇ ಉದ್ಯೋಗ ನೀಡುವ ಮೂಲಕವೋ ಅಥವಾ ವ್ಯಾಪಾರ ನಡೆಸಲು ಮಾರ್ಗದರ್ಶನ ನೀಡುವ ಮೂಲಕವೋ ಸಹಕಾರಿಯಾಗಿ ಅದಕ್ಕೆ ಸೂಕ್ತ ಪರಿಹಾರ ಹುಡುಕಿ ಎಲ್ಲದಕ್ಕೂ ಕೊಟುಂಬದೊಳಗಿನಲ್ಲೇ ಮುಗಿಯುವ ಮಟ್ಟದಲ್ಲಿ ಕುಟುಂಬದ ಒಗ್ಗಟ್ಟನ್ನು ಬೆಳೆಸಬೇಕು. 

     ಮಕ್ಕಳಿಂದ ಖಿರಾಅತ್ ಪಾರಾಯಣ, ಯುವಕರಿಂದ ಹಗ್ಗ ಜಗ್ಗಾಟ, ವೇದಿಕೆಯ ಮುಂದೆ ನಿಂತು ಕುಟುಂಬದ ಪ್ರತಿಯೊಬ್ಬ ಸದಸ್ಯರ ಪರಿಚಯ. ಹಿಂದಿನ ಕಾಲವನ್ನು ನೆನಪಿಸುವತ್ತ ಹಿರಿಯ ಮಹಿಳೆಯರಿಂದ ಮೆಹೆಂದಿ ಹಚ್ಚುವ ಕಾರ್ಯಕ್ರಮ ಒಂದು ಕಡೆಯಾದರೆ ಮಕ್ಕಳಿಂದ ಈಜುಕೊಳದಲ್ಲಿ ಮೋಜು ಇನ್ನೊಂದು ಕಡೆ.ಯುವಕರಿಂದ ಹಲವಾರು ಆಟೋಟ ಕಾರ್ಯಕ್ರಮ ನಡೆಯಿತು.ಇಡೀ ಕುಟುಂಬದಲ್ಲಿ ಧಾರ್ಮಿಕ ಮತ್ತು ಲೌಕಿವಾದ ವಿದ್ಯೆ ಕಲಿತ ಹಾಫಿಝ್ಳ್, ಡಾಕ್ಟರ್, ಹೀಗೆ ಹಲವಾರು ಪದವಿ ಪಡೆದ ವಿದ್ಯಾವಂತ ಮತ್ತು ಪ್ರತಿಭಾವಂತರನ್ನು ಗುರುತಿಸಿ ಸನ್ಮಾನಿಸಲಾಯಿತು.   

ಅಹ್ಮದ್ ಹಾಜಿ ಮತ್ತು ಫಾತಿಮ ದಂಪತಿಗಳ ಗಂಡು ಮಕ್ಕಳೆಲ್ಲರೂ ವ್ಯಾಪಾರಸ್ಥರಾಗಿದ್ದು ಕುಟುಂಬದ ವಿಷೇಶತೆಯಾಗಿತ್ತು ಮತ್ತು ಅವರ ಇಡೀ ಜೀವಿತಾವಧಿಯಲ್ಲಿ ಸದಾ ಕಾಲ ಅವರ ಇಬ್ಬರು ಸಹೋದರಿಯರನ್ನು ಭೇಟಿಯಾಗಿ ಕ್ಷೇಮ ವಿಚಾರಿಸುತ್ತಿದ್ದುದ್ದು ಇಂದಿನ ಜನಾಂಗದಲ್ಲಿ ಕಾಣ ಸಿಗದ ಮತ್ತೊಂದು ವಿಷೇಶತೆಯಾಗಿದೆ. ಕಾರ್ಯಕ್ರಮದಲ್ಲಿ  ಇಬ್ರಾಹಿಂ ಹಾಜಿ, ಅಬೂಬಕರ್ ಹಾಜಿ ಮತ್ತು Group-4 ಅಬೂಬಕರ್'ರವರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.

     ಮರವೂರ್ ಫಾತಿಮ ಅಹ್ಮದ್ ಟ್ರಸ್ಟ್ ಹಮ್ಮಿಕೊಂಡಂತಹ ಫ್ಯಾಮಿಲಿ ರಿ-ಯುನಿಯನ್ ಕಾರ್ಯಕ್ರಮದ ಉಪಸ್ಥಿತಿಯನ್ನು ಗಣ್ಯ ಮತ್ತು ಹಿರಿಯ ವ್ಯಕ್ತಿಗಳಾದ ಹನೀಫ್ ಪ್ಲಾಸ್ಟಿಕ್, ಹಾಜಿ ಅಬೂಬಕರ್,ಹಾಜಿ ಇಬ್ರಾಹಿಂ, ಅಬೂಬಕರ್ ಗ್ರೂಪ್-೪, ಬಿ ಎ ಮುಹಮ್ಮದ್ ಬಾವ,ಅಬ್ದುಲ್ ಖಾದರ್, ಸಯ್ಯದ್, ಮುಹಮ್ಮದ್ ಬಾವ ಕಿನ್ನಿಪದವು ,ಶಬೀರ್ ಹಂಡೇಲ್, ಶಬೀರ್ ಹಾಂದಿ, ಸಲೀಮ್ ಹಾಂದಿ, ಶಾಫಿ ಬಜ್ಪೆ, ಶಕೀರ್ ಮರವೂರ್, ವಹಿಸಿದರು.

          ಕಾರ್ಯಕ್ರಮವನ್ನು ಹಾಫಿಝ್ಳ್ ಹಫ್ಹಾಮ್'ರವರು ಖಿರಾಅತ್ ಪಠಿಸುವುದರ ಮೂಲಕ ಉದ್ಘಾಟಿಸಿದರು. ಸ್ವಾಗತ ಮತ್ತು ನೀರೂಪಣೆಯನ್ನು ಅಶ್ಫಾಕ್ ಮತ್ತು ಅನ್ಸಾಫ್  ಮಾಡಿದರು.


   ವರದಿ: ಅಶ್ರು ಬಜ್ಪೆ

Saturday, 27 March 2021

 ಮ್ಯಾನ್ಮಾರ್ ಸೇನೆಯಿಂದ ಒಂದೇ ದಿನ 100ಕ್ಕೂ ಹೆಚ್ಚು ಮಂದಿಯ ಹತ್ಯೆ

ಮ್ಯಾನ್ಮಾರ್ ಸೇನೆಯಿಂದ ಒಂದೇ ದಿನ 100ಕ್ಕೂ ಹೆಚ್ಚು ಮಂದಿಯ ಹತ್ಯೆ


 ಮ್ಯಾನ್ಮಾರ್ ಸೇನೆಯಿಂದ ಒಂದೇ ದಿನ 100ಕ್ಕೂ ಹೆಚ್ಚು ಮಂದಿಯ ಹತ್ಯೆ

ಯಂಗೂನ್: ಮ್ಯಾನ್ಮಾರ್‌ನಲ್ಲಿ ಸೇನಾ ಕ್ಷಿಪ್ರ ಕ್ರಾಂತಿ ವಿರುದ್ಧದ ಪ್ರತಿಭಟನೆ ಹತ್ತಿಕ್ಕಲು ಹರಸಾಹಸ ನಡೆಸುತ್ತಿರುವ ಅಲ್ಲಿನ ಸೇನೆ, ಶನಿವಾರ ಒಂದೇ ದಿನ 100ಕ್ಕೂ ಹೆಚ್ಚು ಪ್ರತಿಭಟನಾಕಾರನ್ನು ಸಾಯಿಸಿದೆ. ಕ್ಷಿಪ್ರ ಕ್ರಾಂತಿ ನಡೆದ ಬಳಿಕ ಒಂದು ತಿಂಗಳಲ್ಲಿ ಇಷ್ಟೊಂದು ಅಪಾರ ಸಂಖ್ಯೆಯಲ್ಲಿ ಸೇನೆ ಹತ್ಯೆ ಮಾಡಿರುವುದು ಇದೇ ಮೊದಲು.

ಸಾವಿನ ಸಂಖ್ಯೆ 114ನ್ನು ತಲುಪುವ ಸಾಧ್ಯತೆ ಇದೆ ಎಂದು ಆನ್‌ಲೈನ್ ಸುದ್ದಿತಾಣ Myanmar Now ವರದಿ ಮಾಡಿದೆ. ಸ್ವತಂತ್ರ ಸಂಶೋಧಕರೊಬ್ಬರು ಲೆಕ್ಕ ಹಾಕಿದಂತೆ ಮೃತರ ಸಂಖ್ಯೆ 107. ಇಪ್ಪತ್ತಕ್ಕೂ ಹೆಚ್ಚು ನಗರ ಹಾಗೂ ಪಟ್ಟಣಗಳಲ್ಲಿ ಪ್ರತಿಭಟನಾಕಾರರನ್ನು ಸೇನೆ ಹತ್ತಿಕ್ಕುತ್ತಿದೆ ಎಂದು ಹೇಳಲಾಗಿದೆ. ಮಾರ್ಚ್ 14ರಂದು 74-90 ಮಂದಿ ಪ್ರತಿಭಟನಾಕಾರರು ಸೈನಿಕರ ಗುಂಡಿಗೆ ಬಲಿಯಾಗಿದ್ದರು.

ಸೇನೆಯ ಈ ಕ್ರಮಕ್ಕೆ ವಿಶ್ವಾದ್ಯಂತ ಖಂಡನೆ ವ್ಯಕ್ತವಾಗಿದೆ. "ಮ್ಯಾನ್ಮರ್ ಸಶಸ್ತ್ರ ಪಡೆಯ 76ನೇ ದಿನಾಚರಣೆಯನ್ನು ಭಯಾನಕ ಮತ್ತು ಅಗೌರವದ ದಿನ" ಎಂದು ಮ್ಯಾನ್ಮಾರ್ ಕುರಿತ ಯೂರೋಪಿಯನ್ ಒಕ್ಕೂಟದ ನಿಯೋಗ ಟ್ವೀಟ್ ಮಾಡಿದೆ.

"ಮಕ್ಕಳೂ ಸೇರಿದಂತೆ ಶಸ್ತ್ರಾಸ್ತ್ರಗಳಿಲ್ಲದ ನಾಗರಿಕರನ್ನು ಹತ್ಯೆ ಮಾಡಿರುವುದನ್ನು ಸಮರ್ಥಿಸಿಕೊಳ್ಳಲಾಗದು" ಎಂದು ಹೇಳಿದೆ. ಅಮೆರಿಕದ ರಕ್ಷಣಾ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಕೂಡ ಘಟನೆಯನ್ನು ಖಂಡಿಸಿದ್ದಾರೆ.