Tuesday, 16 February 2021

ದಿಶಾ ರವಿ ಬಂಧನಕ್ಕೆ ವಿಮೆನ್ ಇಂಡಿಯಾ ಮೂವ್‌ಮೆಂಟ್ ಖಂಡನೆ


ದಿಶಾ ರವಿ ಬಂಧನಕ್ಕೆ ವಿಮೆನ್ ಇಂಡಿಯಾ ಮೂವ್‌ಮೆಂಟ್ ಖಂಡನೆ


ರೈತ ಹೋರಾಟವನ್ನು ಬೆಂಬಲಿಸಿ ಟ್ವೀಟ್ ಮಾಡಿದ ಸ್ವೀಡನ್ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ ಬರ್ಗ್ ರ ಟೂಲ್ ಕಿಟ್ ವಿಚಾರವಾಗಿ ಕರ್ನಾಟಕದ ಯುವ ಪರಿಸರ ಹೋರಾಟಗಾರ್ತಿ ದಿಶಾ ರವಿಯವರನ್ನು ಬಂಧನವನ್ನು ವಿಮೆನ್ ಇಂಡಿಯಾ ಮೂವ್‌ಮೆಂಟ್ ಕರ್ನಾಟಕ ( ವಿಮ್ ) ತೀವ್ರವಾಗಿ ಖಂಡಿಸಿದೆ.


“ವಿಭಿನ್ನ ಧ್ವನಿಗಳನ್ನು ಹತ್ತಿಕ್ಕುವ ಸರಕಾರದ ಪ್ರಯತ್ನ ಮುಂದುವರೆಯುತ್ತಲೇ ಇದ್ದು, ಸಾಮಾಜಿಕ ಕಾರ್ಯಕರ್ತರಾದ ನಿಕಿತಾ ಜಾಕೋಬ್ ಮತ್ತು ಶಂತನು ರವರಿಗೆ ಲಭಿಸಿದ ಬಂಧನ ವಾರಂಟ್ ಇದನ್ನು ಸಾಬೀತುಪಡಿಸುತ್ತದೆ. ಸರ್ಕಾರವು ತನ್ನ ಇಂತಹ ಚಾಳಿಗೆ ಇನ್ನೆಷ್ಟು ಬಲಿಪಶುಗಳನ್ನು ಬೇಡಬಹುದು ಎಂಬುದು ಯಕ್ಷಪ್ರಶ್ನೆಯಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಸರಕಾರವು ಏಕಾಧಿಪತ್ಯಕ್ಕೆ ಸಾಗುತ್ತಿದೆ ಎಂಬುದು ಜನಸಾಮಾನ್ಯರ ಆತಂಕವಾಗಿದೆ. ಕಾನೂನುಗಳ ದುರುಪಯೋಗ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದ್ದು ಈ ಕೂಡಲೇ ದಿಶಾ ಅವರನ್ನು ಬಿಡುಗಡೆಗೊಳಿಸಬೇಕು ಮತ್ತು ರೈತ ವಿರೋಧಿ ಕಾನೂನುಗಳನ್ನು ವಾಪಾಸು ಪಡೆಯಬೇಕು” ಎಂದು ವಿಮೆನ್ ಇಂಡಿಯಾ ಮೂವ್‌ಮೆಂಟ್ ಕರ್ನಾಟಕ ರಾಜ್ಯಾಧ್ಯಕ್ಷೆ ಶಾಹಿದಾ ತಸ್ನೀಂ ಒತ್ತಾಯಿಸಿದ್ದಾರೆ.SHARE THIS

Author:

0 التعليقات: