Tuesday, 2 February 2021

SჄS ಈಶ್ವರಮಂಗಲ ಸೆಂಟರ್ ವತಿಯಿಂದ 72ನೇ ಗಣರಾಜ್ಯೋತ್ಸವ ಆಚರಣೆ ಮತ್ತು ದ್ವಜ ಪ್ರದರ್ಶನ


 SჄS ಈಶ್ವರಮಂಗಲ ಸೆಂಟರ್ ವತಿಯಿಂದ 72ನೇ ಗಣರಾಜ್ಯೋತ್ಸವ ಆಚರಣೆ ಮತ್ತು ದ್ವಜ ಪ್ರದರ್ಶನ

ಈಶ್ವರಮಂಗಲ : ಕರ್ನಾಟಕ ಮುಸ್ಲಿಂ ಜಮಾಅತ್  ಎಸ್ ವೈಎಸ್ ಎಸ್ ಎಸ್ ಎಫ್  ಈಶ್ವರಮಂಗಲ ಸಂಯುಕ್ತ ವತಿಯಿಂದ  72ನೇ ಗಣರಾಜ್ಯೋತ್ಸವ ವನ್ನು ಆಚರಿಸಲಾಯ್ತು. ಎಸ್ ವೈಎಸ್ ಟೀಮ್ ಇಸಾಬಾ ಅಮೀರ್ ಇಸ್ಮಾಯಿಲ್ ಕೆಎಚ್ಚ್ ರವರ ನಾಯಕತ್ವದಲ್ಲಿ ದ್ವಜ ಪ್ರದರ್ಶನ ನಡೆಸಲಾಯ್ತು. ದೆಹಲಿ ರೈತರ ಹೋರಾಟಕ್ಕೆ ಸಹಮತ ವ್ಯಕ್ತ ಪಡಿಸಿ ಮಾತನಾಡಿದ ಎಸ್ ಎಸ್ ಎಫ್  ಜಿಲ್ಲಾ ನಾಯಕ ಫೈಝಲ್ ಝುಹ್ರಿ ದೆಹಲಿ ಸೇರಿದಂತೆ ರಾಷ್ಟ್ರದಾದ್ಯಂತ ರೈತರು ಸರಕಾರದ ಕರಾಳ ಕೃಷಿ ಕಾಯ್ದೆಗಳ ವಿರುದ್ದ ಬೀದಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಆದರೆ ಸರಕಾರ ಕೃಷಿಕರ ಬೇಡಿಕೆಗಳನ್ನು ಈಡೇರಿಸದೇ ಹೋರಾಟವನ್ನು ಹತ್ತಿಕ್ಕಲು ಮುಂದಾಗಿದೆ. ಇದು ನಮ್ಮ ದೇಶದ ಕೃಷಿ ಕ್ಷೇತ್ರವನ್ನು ಬಂಡವಾಳ ಶಾಹಿಗಳಿಗೆ ಮಾರಾಟ ಮಾಡುವ ತಂತ್ರವಾಗಿದೆ. ಈ ನಿಟ್ಟಿನಲ್ಲಿ ರೈತರ ಎಲ್ಲಾ ರೀತಿಯ ಹೋರಾಟಗಳಿಗೆ ನಮ್ಮ ಸಾಂಘಿಕ ಕುಟುಂಬದ ಸಹಮತವಿದೆ ಎಂದು ವ್ಯಕ್ತಪಡಿಸಿದರು.

ಸಭೆಯಲ್ಲಿ ಎಸ್ ವೈ ಎಸ್ ಈಶ್ವರಮಂಗಲ ಸೆಂಟರ್ ಅಧ್ಯಕ್ಷ ಅಬ್ದುಲ್ ಜಲೀಲ್ ಸಖಾಫಿ ಕರ್ನೂರ್ ಅಧ್ಯಕ್ಷತೆ ವಹಿಸಿದ್ದರು, ಕರ್ನಾಟಕ ಮುಸ್ಲಿಂ ಜಮಾಅತ್ ಈಶ್ವರಮಂಗಲ ವಲಯ ಅಧ್ಯಕ್ಷರಾದ ಅಬೂಬಕರ್ ಸಿಎಂ, ಕೋಶಾಧಿಕಾರಿ ಅಬ್ದುಲ್ ರಹ್ಮಾನ್ ಹಾಜಿ ಮೇನಾಲ, ಎಸ್ ವೈ ಎಸ್ ಈಶ್ವರಮಂಗಲ ಸೆಂಟರ್ ಪ್ರಧಾನ ಕಾರ್ಯದರ್ಶಿ  ಅಬ್ದುಲ್ ಹಮೀದ್ ಕೊಯಿಲ, ಕಾರ್ಯದರ್ಶಿಗಳಾದ  ತ್ವಾಹ ಸಅದಿ, ಶಂಸುದ್ದೀನ್ ಹನೀಫಿ, ತಖ್ಯುದ್ದೀನ್ ಮದನಿ, ಎಸ್ ಎಸ್ ಎಫ್ ಈಶ್ವರಮಂಗಲ ಸೆಕ್ಟರ್ ಅಧ್ಯಕ್ಷ ಶಿಹಾಬ್ ಸಖಾಫಿ, ಅಬ್ದುಲ್ ಲತೀಫ್ ಸಖಾಫಿ ಮಾಡನ್ನೂರ್, ಅಬ್ದುಲ್ ಲತೀಫ್ ಮುಸ್ಲಿಯಾರ್ ಮೀನಾವು, ಝಕರಿಯಾ ಸಖಾಫಿ ಮೇನಾಲ, ಅಬ್ದುಲ್ಲ ಮೆನಸಿನಕಾನ, ಶರೀಫ್ ಪಿಎಚ್, ಮುಹಮ್ಮದ್ ಎಇ  ಕರ್ನೂರ್, ರಝ್ಝಾಖ್ ಮೇನಾಲ, ಮುಸ್ತಫ ಕರ್ನೂರ್, ಹಸೈನಾರ್ ಮದ್ಲ ಮೊದಲಾದವರು ಉಪಸ್ಥಿತರಿದ್ದರು.SHARE THIS

Author:

0 التعليقات: