`KSRTC' ಬಸ್ ನಲ್ಲಿ ಒಯ್ಯುತ್ತಿದ್ದ ಕೋಳಿಗೂ ಟಿಕೆಟ್ ಕೊಟ್ಟ ಕಂಡಕ್ಟರ್!
ಪುತ್ತೂರು : ದೇವರ ಸೇವೆಗೆ ಕೆಎಸ್ ಆರ್ ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಚೀಲದಲ್ಲಿ ಕೋಳಿ ಹಿಡಿದುಕೊಂಡಿದ್ದರು. ಇದನ್ನು ಗಮನಿಸಿದಿ ಬಸ್ ಕಂಡಕ್ಟರ್ ಕೋಳಿಗೂ ಫುಲ್ ಚಾರ್ಜ್ ಟಿಕೆ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, ದೇವರ ಸೇವೆಗೆ ವ್ಯಕ್ತಿಯೊಬ್ಬರು ಚೀಲದಲ್ಲಿ ಕೋಳಿ ತೆಗೆದುಕೊಂಡು ಹೋಗುತ್ತಿದ್ದರು. ಇದನ್ನು ಗಮನಿಸಿದ ಕಂಡಕ್ಟರ್ ಪ್ರಯಾಣಿಕನಿಗೆ 50 ರೂ. ದರದ ಟಿಕೆಟ್ ನ್ನು ಕೋಳಿಗೂ ನೀಡಿದ್ದಾರೆ.
ಕೆಎಸ್ ಆರ್ ಟಿಸಿ ಕಂಡಕ್ಟರ್ ಕ್ರಮಕ್ಕೆ ಪುತ್ತೂರು ಶಾಸಕ ಸಂಜೀವ್ ಮಠಂದೂರು ಟೀಕಿಸಿದ್ದಾರೆ. ಆದರೆ, ಇದಕ್ಕೆ ಉತ್ತರಿಸಿರುವ ವಿಭಾಗೀಯ ಸಂಚಲನಾ ಅಧಿಕಾರಿ ಮುರಳೀಧರ್, ಸರ್ಕಾರದ ಸುತ್ತೋಲೆ ಪ್ರಕಾರ ಬಸ್ಸಿನಲ್ಲಿ ಪ್ರಯಾಣಿಕರನ್ನು ಹೊರತುಪಡಿಸಿ ಪಕ್ಷಿ, ಪ್ರಾಣಿ ಯಾವುದೂ ಒಯ್ಯುವಂತಿಲ್ಲ. ಕೋಳಿಯೇ ಆದರೂ ಸರಿ, ಒಂದು ಕೋಳಿಗೆ ಒಬ್ಬ ಪ್ರಯಾಣಿಕನಷ್ಟೇ ದರವನ್ನು ನಿಗದಿಪಡಿಸಬೇಕೆಂಬ ನಿಯಮವಿದೆ ಎಂದು ಹೇಳಿದರು.
0 التعليقات: