Monday, 1 February 2021

ಬಿಜೆಪಿ ಗಾಳಿ ತುಂಬಿದ ಬಲೂನ್ ಇದ್ದಂತೆ - ಮಮತಾ ಬ್ಯಾನರ್ಜಿ



ಬಿಜೆಪಿ ಗಾಳಿ ತುಂಬಿದ ಬಲೂನ್ ಇದ್ದಂತೆ - ಮಮತಾ ಬ್ಯಾನರ್ಜಿ


ಕೋಲ್ಕತ್ತಾ: ಬಿಜೆಪಿ ಒಂದು ರೀತಿ ಗಾಳಿ ತುಂಬಿದ ಬಲೂನ್‌ನಂತಿದ್ದು, ಅದು ಮಾಧ್ಯಮಗಳಲ್ಲಿ ಮಾತ್ರ ಹಾರಾಡುತ್ತಾ ಜೀವಂತವಾಗಿದೆ ಮತ್ತು ಇದು ಅಡ್ಡ ದಾರಿಯಲ್ಲಿ ಹಣ ಸಂಪಾದಿಸಿದವರಿಗೆ ವಾಷಿಂಗ್ ಮೆಷಿನ್ ಆಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವ್ಯಂಗ್ಯದ ಮಾತುಗಳನ್ನಾಡಿದ್ದಾರೆ.


ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಆಲ್ ಇಂಡಿಯಾ ಫೇರ್ ಪ್ರೈಸ್ ಶಾಪ್ ಡೀಲರ್ ಫೆಡರೇಷನ್ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ ಅವರು, ತಾವು ಸಂಗ್ರಹಿಸಿದ ಹಣವನ್ನು ಭದ್ರಪಡಿಸಿ ಕೊಳ್ಳಲು ಕೆಲವರು ಟಿಎಂಸಿ ತೊರೆದು ಬಿಜೆಪಿ ಸೇರಿದ್ದಾರೆ. ಅಂತವರು ಒಂದು ವೇಳೆ ಟಿಎಂಸಿಯಲ್ಲೇ ಉಳಿದಿದ್ದರೂ ಅವರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡುತ್ತಿರಲಿಲ್ಲ ಎಂದಿದ್ದಾರೆ.


ಬಿಜೆಪಿಯವರಿಗೆ ಏನೂ ಮಾಡಲು ಸಾಧ್ಯವಿಲ್ಲ. ಆ ಪಕ್ಷದವರ ಬಳಿ ಹಣವಿದೆ ಅಷ್ಟೇ. ಅದನ್ನು ಬಳಸಿಕೊಂಡು ಒಂದಷ್ಟು ಏಜೆನ್ಸಿಗಳ ಮೂಲಕ ಹಾದಿ ಬೀದಿಗಳಲ್ಲಿ ಪಕ್ಷದ ಬಾವುಟಗಳನ್ನು ಕಟ್ಟಿಸುತ್ತಾರೆ. ಆದರೆ, ಪಶ್ಚಿಮ ಬಂಗಾಳದಲ್ಲಿ ಮತ್ತೆ ಟಿಎಂಸಿಯೇ ಅಧಿಕಾರಕ್ಕೆ ಬರುತ್ತದೆ. ಮಾ -ಮಾಟಿ-ಮಾನ್ಷು ಘೋಷಣೆ ಮೊಳಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ಬಿಜೆಪಿಯವರನ್ನು ಮಾಧ್ಯಮದವರ ನಡುವೆ ಬಿಟ್ಟುಬಿಡಿ. ಟಿಎಂಸಿ ನಿಮ್ಮ ಹೃದಯದಲ್ಲಿ ನೆಲೆಸಿರುತ್ತದೆ. ನೀವು ನಮಗೆ ಭರವಸೆ ಕೊಡಿ. ನಾವು ನಿಮಗೆ ಭವಿಷ್ಯದಲ್ಲಿ ಉತ್ತಮ ಆಡಳಿತ ಕೊಡುವುದನ್ನು ಖಾತರಿಪಡಿಸುತ್ತೇವೆ ಎಂದು ಮಮತಾ ಬ್ಯಾನರ್ಜಿ ಭರವಸೆಯ ಮಾತುಗಳನ್ನಾಡಿದ್ದಾರೆ.



SHARE THIS

Author:

0 التعليقات: