Tuesday, 9 February 2021

ಶಶಿ ತರೂರ್ ಸೇರಿ ಆರು ಮಂದಿ ಬಂಧನಕ್ಕೆ ಸುಪ್ರೀಂ ತಡೆ


ಶಶಿ ತರೂರ್ ಸೇರಿ ಆರು ಮಂದಿ ಬಂಧನಕ್ಕೆ ಸುಪ್ರೀಂ ತಡೆ


ನವದೆಹಲಿ, ಫೆ.9- ಜ.26ರ ಗಣರಾಜ್ಯೋತ್ಸವ ದಿನದಂದು ರೈತ ಸಂಘಟನೆಗಳು ಹಮ್ಮಿಕೊಂಡಿದ್ದ ಟ್ರ್ಯಾಕ್ಟರ್ ರ್ಯಾಲಿ ಹಿಂಸಾಚಾರಕ್ಕೆ ತಿರುಗಿದ್ದು, ದಾರಿ ತಪ್ಪಿಸುವ ಕ್ರಮ ಎಂದು ಸಂಸದ ಮತ್ತು ಕಾಂಗ್ರೆಸ್ ಹಿರಿಯ ಮುಖಂಡ ಶಶಿ ತರೂರ್ ಟ್ವೀಟ್ ಮಾಡಿದ್ದರು. ಸಂಸದರು ಹಾಗೂ ಇತರರು ಸಮಾಜದಲ್ಲಿ ಶಾಂತಿ ಕದಡುವ ಪ್ರಚೋದನಾಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ, ಅವರನ್ನು ಬಂಧಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೆಹಲಿ ಪೊಲೀಸರಲ್ಲಿ ದೂರು ದಾಖಲಾಗಿತ್ತು. ತರೂರ್ ಹಾಗೂ ಆರು ಮಂದಿ ಪತ್ರಕರ್ತರ ಬಂಧನ ಕೋರಿ ಕೋರ್ಟ್‍ಗೆ ಸಲ್ಲಿಸಿದ್ದ ಮನವಿಯನ್ನು ಸರ್ವೋಚ್ಛ ನ್ಯಾಯಾಲಯ ತಿರಸ್ಕರಿಸಿದೆ.


ಶಶಿ ತರೂರ್, ರಾಜದೀಪ್ ಸರ್ದೇಸಾಯಿ, ಮೃಣಾಲ್ ಪಾಂಡೆ, ಜಫಾರ್ ಆಘಾ, ಪರೇಶ್ ನಾಥ್, ವಿನೋದ್ ಕೆ. ಜೋಶ್ ಮತ್ತು ಅನಂತ್ ನಾಥ್ ಬಂಧನಕ್ಕೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದ ನ್ಯಾಯಪೀಠ ತಡೆ ನೀಡಿ ನಿರ್ದೇಶನ ನೀಡಿದೆ. ಅಲ್ಲದೆ, ತರೂರ್ ಹಾಗೂ ಪತ್ರಕರ್ತರು ಸಲ್ಲಿಸಿದ್ದ ಅರ್ಜಿಗಳ ಬಗ್ಗೆ ನ್ಯಾಯಪೀಠ ನೋಟೀಸ್ ನೀಡಿ ಕೇಂದ್ರ ಮತ್ತು ಇತರರಿಂದ ಪ್ರತಿಕ್ರಿಯೆ ಕೋರಿದೆ.


ತರೂರ್ ಪರ ಕೋರ್ಟ್‍ನಲ್ಲಿ ವಾದಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಈ ಮಧ್ಯೆ ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮ ಅನುಸರಿಸಬಾರದು ಎಂದು ಕೇಳಿಕೊಂಡಿದ್ದರು. ಏನೂ ಆಗುವುದಿಲ್ಲ. ಅಪಾಯ ಎಲ್ಲಿದೆ ಎಂದು ನ್ಯಾಯಮೂರ್ತಿಗಳಾದ ಎಸ್.ಎಸ್. ಬೋಪಣ್ಣ ಹಾಗೂ ವಿ. ರಾಮಸುಬ್ರಮಣಿಯನ್ ಅವರನ್ನು ಒಳಗೊಂಡ ನ್ಯಾಯಪೀಠ ಹೇಳಿದೆ. ಎರಡು ವಾರಗಳ ನಂತರ ನಿಮ್ಮ ಮಾತನ್ನು ಕೇಳುತ್ತೇವೆ. ಈ ಮಧ್ಯೆ ಬಂಧವನ್ನು ಉಳಿಸಿಕೊಳ್ಳುತ್ತೇವೆ ಎಂದು ನ್ಯಾಯಪೀಠ ಹೇಳಿದೆ.SHARE THIS

Author:

0 التعليقات: