Tuesday, 16 February 2021

ಪತ್ರಕರ್ತ ಸರ್ದೇಸಾಯಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಲ್ಲ : ಸುಪ್ರೀಂ ಕೋರ್ಟ್ ಸ್ಪಷ್ಟನೆ

 

ಪತ್ರಕರ್ತ ಸರ್ದೇಸಾಯಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಲ್ಲ : ಸುಪ್ರೀಂ ಕೋರ್ಟ್ ಸ್ಪಷ್ಟನೆ

ನವದೆಹಲಿ: ಹಿರಿಯ ಪತ್ರಕರ್ತ ರಾಜ್​ದೀಪ್ ಸರ್ದೇಸಾಯಿ ವಿರುದ್ಧ ಸ್ವಯಂ ಪ್ರೇರಿತವಾಗಿ 'ನ್ಯಾಯಾಂಗ ನಿಂದನೆ' ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಸುಪ್ರೀಂ ಸ್ಪಷ್ಟನೆ ನೀಡಿದೆ.

ಫೆ.16 ರಂದು ರಾತ್ರಿ ರಾಜ್​ದೀಪ್ ಸರ್ದೇಸಾಯಿ ಅವರ ಟ್ವೀಟ್ ನ್ನು ಆಧಾರವಾಗಿಟ್ಟುಕೊಂಡು ಅವರ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಈ ಬಗ್ಗೆ ವೆಬ್​ಸೈಟ್ ನಲ್ಲೇ ಸ್ಪಷ್ಟನೆ ನೀಡಿರುವ ಸುಪ್ರೀಂ ಕೋರ್ಟ್ 'ಅಜಾಗರೂಕತೆಯಿಂದ' ಕೋರ್ಟ್ ವೆಬ್ ಸೈಟ್ ನಲ್ಲಿ ಇಂತಹ ಮಾಹಿತಿ ಪ್ರಕಟವಾಗಿತ್ತು, ಅದನ್ನು ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸರ್ದೇಸಾಯಿ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಸ್ವಯಂ ಪ್ರೇರಿತ ಕಂಟೆಂಪ್ಟ್ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಕೆಲವು ಸುದ್ದಿವಾಹನಿಗಳಲ್ಲಿ ಪ್ರಸಾರವಾಗ್ತಿದೆ. ಆದರೆ ರಾಜ್​ದೀಪ್​ ವಿರುದ್ಧ ಇಂತಹ ಯಾವುದೇ ಪ್ರಕ್ರಿಯೆಗಳನ್ನ ಪ್ರಾರಂಭಿಸಲಾಗಿಲ್ಲ ಎಂದು ಸುಪ್ರೀಂ ಸ್ಪಷ್ಟನೆ ನೀಡಿದೆ.


SHARE THIS

Author:

0 التعليقات: