Thursday, 11 February 2021

ಇಂಡಿಯಾ ಗೇಟ್‌ಗೆ ನೂರರ ಹರುಷ


ಇಂಡಿಯಾ ಗೇಟ್‌ಗೆ ನೂರರ ಹರುಷ


ರಾಜಧಾನಿ ಹೊಸದಿಲ್ಲಿಯಲ್ಲಿರುವ ಇಂಡಿಯಾ ಗೇಟ್‌ಗೆ ಈಗ ಸರಿಯಾಗಿ ನೂರು ವರ್ಷದ ಸಂಭ್ರಮ. 1921ರ ಫೆ.10ರಂದು ಇಂಡಿಯಾ ಗೇಟ್‌ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. ವಿಶೇಷವೆಂದರೆ, ಇಂಡಿಯಾ ಗೇಟ್‌ ಸ್ಥಾಪನೆಯ ಉದ್ದೇಶವೇ ಬೇರೆ.

1911ರಲ್ಲಿ ಕಲ್ಕತ್ತಾದಿಂದ ದಿಲ್ಲಿಗೆ ರಾಜಧಾನಿ ವರ್ಗಾವಣೆಯಾದ ಅನಂತರ‌, ಬ್ರಿಟಿಷರು ರೈಸಿನಾ ಹಿಲ್‌ ಪ್ರದೇಶದಲ್ಲಿ ಹೊಸ ಕಟ್ಟಡಗಳ ಸ್ಥಾಪನೆಗೆ ಮುಂದಾಗಿದ್ದರು. ಈಗಿರುವ ರಾಷ್ಟ್ರಪತಿ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದು 1911ರ ಡಿಸೆಂಬರ್‌ 15ರಂದು. ಕಿಂಗ್‌ ಜಾರ್ಜ್‌ ವಿ ಅವರು ಇದಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಅಂದರೆ ಇದನ್ನು ಡ್ನೂಕ್‌ ಆಫ್ ಕನೌತ್‌ ಅವರ ಹೆಸರಿನಲ್ಲಿ ಕನೌ°ತ್‌ ಪ್ಲೇಸ್‌ ಅನ್ನು ನಿರ್ಮಾಣ ಮಾಡಲಾಯಿತು.

ಮೊದಲ ಮಹಾಯುದ್ಧದ ಸ್ಮಾರಕ: ಆದರೆ ಇಂಡಿಯಾ ಗೇಟ್‌ 1911ರಲ್ಲಿ ಶುರುವಾಗಿರಲಿಲ್ಲ. ಮೊದಲನೇ ವಿಶ್ವ ಮಹಾಯುದ್ಧದ ಬಳಿಕ ಅಲ್ಲಿ ಭಾಗವಹಿಸಿ ಹುತಾತ್ಮರಾದ ಬ್ರಿಟನ್‌ ಇಂಡಿಯನ್‌ ಸೇನೆಯ ಯೋಧರ ನೆನಪಿನಲ್ಲಿ ಇದನ್ನು ಕಟ್ಟಲು ನಿರ್ಧರಿಸಲಾಯಿತು. ಇದನ್ನು ಮೂಲತಃ ಆಲ್‌ ಇಂಡಿಯಾ ವಾರ್‌ ಮೆಮೋರಿಯಲ್‌ ಆರ್ಚ್‌ ಎಂಬ ಹೆಸರಿನಲ್ಲಿ ಕರೆಯಲಾಗುತ್ತಿತ್ತು.

1921ರ ಕಲ್ಕತ್ತಾದ ಸೂಪರಿಂಟೆಂಡೆಂಟ್‌ ಗವರ್ನಮೆಂಟ್‌ ಪ್ರಿಂಟಿಂಗ್‌ ಪ್ರಕಾರ, ಇಂಡಿಯಾ ಗೇಟ್‌ಗೆ ಶಂಕುಸ್ಥಾಪನೆ ನೆರವೇರಿಸುವ ವೇಳೆಯಲ್ಲಿ ದೇಶದ ಎಲ್ಲ ಭಾಗದಿಂದಲೂ ಸೇನೆ ಬಂದು ಜಮಾವಣೆಯಾಗಿತ್ತು. ಅಂದು ಡ್ನೂಕ್‌ ಆಫ್ ಕನೌ°ತ್‌ ಅವರು ಶಂಕು ಸ್ಥಾಪನೆ ನೆರವೇರಿಸಿದ್ದರು.

ಈ ವೇಳೆ ಮಾತನಾಡಿದ್ದ ಡ್ನೂಕ್‌ ಆಫ್ ಕನೌ°ತ್‌, ಯೋಧರ ಬಲಿದಾನ ಮುಂದಿನ ತಲೆಮಾರಿನ ವರೆಗೆ ಶಾಶ್ವತವಾಗಿ ಉಳಿಯಲಿ ಎಂಬ ಕಾರಣದಿಂದಾಗಿ ಇದನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದಿದ್ದರು.

ಅಮರ್‌ ಜವಾನ್‌ ಜ್ಯೋತಿ: 1971ರಲ್ಲಿ ಭಾರತ-ಪಾಕಿಸ್ಥಾನದ ನಡುವಿನ ಯುದ್ಧದಲ್ಲಿ ಹುತಾತ್ಮರಾದವರ ನೆನಪಿಗಾಗಿ ಅಮರ್‌ ಜವಾನ್‌ ಜ್ಯೋತಿಯನ್ನು 1972 ರಲ್ಲಿ ನಿರ್ಮಿಸಲಾಯಿತು. ಇದು ಇಂಡಿ ಯಾ ಗೇಟ್‌ ಕೆಳಗೇ ಇದೆ. ಇಲ್ಲಿ ಎಂದಿಗೂ ಆರದ ದೀಪ ಬೆಳಗುತ್ತಿದ್ದು, ಯೋಧರ ಶೌರ್ಯದ ಸ್ಮರಣಾರ್ಥ ಬಂದೂಕಿನ ಮೇಲೆ ಹೆಲ್ಮೆಟ್‌ ಇಟ್ಟಿರುವ ಪ್ರತಿಮೆ ಇದೆ.

42 ಮೀಟರ್‌ ಎತ್ತರ

ಸದ್ಯ ಇಂಡಿಯಾ ಗೇಟ್‌ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ. ಇದು 42 ಮೀಟರ್‌ ಎತ್ತರವಿದೆ. 1921ರಲ್ಲಿ ಕೆಲಸ ಆರಂಭಿಸಿ 1931ರಲ್ಲಿ ಕಾಮಗಾರಿ ಅಂತ್ಯಗೊಳಿಸಲಾಯಿತು.SHARE THIS

Author:

0 التعليقات: