ಟೋಕಿಯೊ ಒಲಿಂಪಿಕ್ಸ್ ಮುಖ್ಯಸ್ಥ ಯೊಶಿರೊ ಮೊರಿ ರಾಜೀನಾಮೆ
ಟೋಕಿಯೊ: ಮಹಿಳೆಯರು ಸಭೆ-ಸಮಾರಂಭಗಳಲ್ಲಿ ಹೆಚ್ಚು ಮಾತನಾಡುತ್ತಾರೆ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ಟೋಕಿಯೊ ಒಲಿಂಪಿಕ್ಸ್ ಮುಖ್ಯಸ್ಥ ಹಾಗೂ ಜಪಾನ್ ನ ಮಾಜಿ ಪ್ರಧಾನಿ ಯೊಶಿರೊ ಮೊರಿ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಜಪಾನ್ ಮಾಧ್ಯಮಗಳು ವರದಿ ಮಾಡಿವೆ.
ಫೆಬ್ರವರಿ ಮೊದಲ ವಾರದಲ್ಲಿ ನಡೆದ ಜಪಾನಿನ ಒಲಿಂಪಿಕ್ಸ್ ಮಂಡಳಿ ಸಭೆಯಲ್ಲಿ ಮಾತನಾಡಿದ್ದ ಮೊರಿ, ಮಹಿಳೆಯರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಯೊಶಿರೊ ಮೊರಿ ಹೇಳಿಕೆಗೆ ಟೆನಿಸ್ ತಾರೆ ನವೊಮಿ ಒಸಾಕಾ, ಗ್ರ್ಯಾಮಿ ಪ್ರಶಸ್ತಿ ಪುರಸ್ಕøತ ಸಂಗೀತಗಾರ ರೂಚಿ ಸಕಮೊಟೊ ಸೇರಿದಂತೆ ಹಲವು ಕ್ರೀಡಾಪಟುಗಳು ಆಕ್ಷೇಪ ವ್ಯಕ್ತಪಡಿಸಿದ್ದರು.
ಒಲಿಂಪಿಕ್ಸ್ ಪದಕ ವಿಜೇತರು, ಜಪಾನ್ ನ ಕ್ರೀಡಾ ಅಧಿಕಾರಿಗಳು ಹಾಗೂ ಟೋಕಿಯೊ ಒಲಿಂಪಿಕ್ಸ್ ಕಾರ್ಯಕರ್ತರು ಮೊರಿ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ರಾಜೀನಾಮೆಗಾಗಿ ಆನ್ ಲೈನ್ ನಲ್ಲಿ ನಡೆದ ಅಭಿಯಾನಕ್ಕೆ 10 ಲಕ್ಷಕ್ಕೂ ಅಧಿಕ ಮಂದಿ ಸಹಿ ಹಾಕಿದ್ದರು.
ತಮ್ಮ ಹೇಳಿಕೆ ವಿವಾದದ ತಿರುವು ಪಡೆಯುತ್ತಿದ್ದಂತೆ ಮೊರಿ ಕ್ಷಮೆಯಾಚಿಸಿದ್ದರು.
0 التعليقات: