Monday, 8 February 2021

ಟ್ರೆಂಡಿಂಗ್ | ಮೋದಿಯ ಹಳೇ ಫೋಟೊಗಳು ಟ್ರೋಲ್ ಆಗುತ್ತಿರುವುದೇಕೆ?


ಟ್ರೆಂಡಿಂಗ್ | ಮೋದಿಯ ಹಳೇ ಫೋಟೊಗಳು ಟ್ರೋಲ್ ಆಗುತ್ತಿರುವುದೇಕೆ?


ನವದೆಹಲಿ : ಬಿಜೆಪಿ ಸರಕಾರದ ನೂತನ ಕೃಷಿ ಕಾನೂನು ಹಿಂಪಡೆಯುವಂತೆ ಒತ್ತಾಯಿಸಿ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಅಪಹಾಸ್ಯ ಮಾಡಲು, ಪ್ರತಿಭಟನಕಾರರನ್ನು ‘ಆಂದೋಲನ ಜೀವಿಗಳು’ ಎಂದು ಕರೆದ ಪ್ರಧಾನಿ ನರೇಂದ್ರ ಮೋದಿ ಈಗ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ಟ್ರೋಲ್ ಗೊಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ವಿಟರ್ ನಲ್ಲಿ #andolanjeevi ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದೆ.


ಮೋದಿಯವರ ಈ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸುತ್ತಿರುವ ಟ್ರೋಲಿಗರು, ಮೋದಿ ಮತ್ತು ಬಿಜೆಪಿಗರು ಈ ಹಿಂದೆ ನಡೆಸಿದ ಪ್ರತಿಭಟನೆಗಳ ಹಳೆಯ ಫೋಟೊಗಳನ್ನು ಶೇರ್ ಮಾಡುತ್ತಿದ್ದಾರೆ. ನೀವು ಕೂಡ ಹೋರಾಟಗಳ ಮೂಲಕವೇ ಅಧಿಕಾರಕ್ಕೆ ಬಂದದ್ದು ಎಂಬುದನ್ನು ಮರೆಯಬೇಡಿ ಎಂದು ಟ್ರೋಲಿಗರು ಕುಟುಕಿದ್ದಾರೆ.


ಇಂದು ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಕುರಿತು ಮಾತನಾಡಿದ್ದ ಮೋದಿ, “ದೇಶದಲ್ಲಿ ಆಂದೋಲನ್ ಜೀವಿ (ರೈತ ಹೋರಾಟಗಾರರು) ಎಂಬ ಹೊಸ ಸಮುದಾಯವೊಂದು ಹುಟ್ಟಿಕೊಂಡಿದೆ. ಎಲ್ಲಾ ಪ್ರತಿಭಟನೆಯಲ್ಲೂ ಅವರನ್ನು ನೋಡಬಹುದು, ಅವರು ದೇಶಕ್ಕೆ ಪರಾವಲಂಬಿಯಾಗಿದ್ದಾರೆ” ಎಂದು ಹೇಳಿದ್ದರು.SHARE THIS

Author:

0 التعليقات: