Thursday, 4 February 2021

ವಾಹನ ಸವಾರರಿಗೆ ಬಿಗ್ ಶಾಕ್ : ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆ


ವಾಹನ ಸವಾರರಿಗೆ ಬಿಗ್ ಶಾಕ್ : ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆ

ನವದೆಹಲಿ: ಕೆಲ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಕಂಡು ಬಂದಿದೆ. ಗುರುವಾರ ಇಂಧನ ದರಲ್ಲಿ 35 ಪೈಸೆ ಹೆಚ್ಚಳದ ನಂತರ, ಭಾರತದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿದೆ. ಭಾರತದಲ್ಲಿ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ಪೆಟ್ರೋಲ್ ದರ ಏರಿಕೆ ಮಾಡಿದ್ದು, ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 86.65 ರೂ,ಕೋಲ್ಕತಾದಲ್ಲಿ 88.01 ರೂ., ಮುಂಬೈನಲ್ಲಿ 93.20 ರೂ., ಚೆನ್ನೈನಲ್ಲಿ 89.13 ರೂ.ಗೆ ಏರಿಕೆಯಾಗಿದೆ.

ಏತನ್ಮಧ್ಯೆ, ಡೀಸೆಲ್ ಬೆಲೆ ನವದೆಹಲಿಯಲ್ಲಿ ಲೀಟರ್ ಗೆ 76.83 ರೂ,ಕೋಲ್ಕತಾದಲ್ಲಿ 80.42 ರೂ., ಮುಂಬೈನಲ್ಲಿ 83.67 ರೂ., ಚೆನ್ನೈನಲ್ಲಿ 82.04 ರೂ.ಗೆ ಏರಿಕೆಯಾಗಿದೆ. ದೆಹಲಿಯಲ್ಲಿ ಗುರುವಾರ ಪೆಟ್ರೋಲ್ ಬೆಲೆ ದಾಖಲೆಯ ಗರಿಷ್ಠ ಮಟ್ಟಕ್ಕೇರಿದೆ. ಅಂತಾರಾಷ್ಟ್ರೀಯ ಕಚ್ಚಾ ತೈಲ ದರಗಳಲ್ಲಿ ಬದಲಾವಣೆ ಗಳ ಆಧಾರದ ಮೇಲೆ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಈ ದರಗಳನ್ನು ಪರಿಷ್ಕರಿಸಲಾಗಿದೆ. ಪೆಟ್ರೋಲಿಯಂ ರಫ್ತು ರಾಷ್ಟ್ರಗಳ ಸಂಘಟನೆ (ಒಪೆಕ್) ಮತ್ತು ಅದರ ಮಿತ್ರ ರಾಷ್ಟ್ರಗಳ ಸಭೆ ಫೆ.3ರಂದು ನಡೆದ ಸಭೆಯ ನಂತರ ತೈಲ ಬೆಲೆ ಏರಿಕೆಯಾಗಿದ್ದು, ಉತ್ಪಾದನೆ ಯನ್ನು ನಿಯಂತ್ರಿಸಲು ನಿರ್ಧರಿಸಲಾಗಿದೆ. '2020ರ ಏಪ್ರಿಲ್ ನಿಂದ, ಒಪೆಕ್ ಮತ್ತು ಒಪೆಕ್ ಯೇತರ ರಾಷ್ಟ್ರಗಳು ತೈಲ ಉತ್ಪಾದನೆಯನ್ನು 2.1 ಶತಕೋಟಿ ಬ್ಯಾರೆಲ್ ಗಳಷ್ಟು ಕಡಿಮೆ ಮಾಡಿ, ತೈಲ ಮಾರುಕಟ್ಟೆಯನ್ನು ಸ್ಥಿರಗೊಳಿಸಿ, ಮರುಸಮತೋಲನ ಪ್ರಕ್ರಿಯೆಯನ್ನು ಚುರುಕುಗೊಳಿಸಿವೆ ಎಂದು ಸಮಿತಿಯು ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ.



SHARE THIS

Author:

0 التعليقات: