Saturday, 13 February 2021

ಜಪಾನ್ ನಲ್ಲಿ ನಡುಗಿದ ಭೂಮಿ, ಪ್ರಬಲ ಭೂಕಂಪ


ಜಪಾನ್ ನಲ್ಲಿ ನಡುಗಿದ ಭೂಮಿ, ಪ್ರಬಲ ಭೂಕಂಪ


ಡಿಜಿಟಲ್ ಡೆಸ್ಕ್ : ಜಪಾನ್ ನಲ್ಲಿ ಶನಿವಾರ ರಾತ್ರಿ ರಿಕ್ಟರ್ ಮಾಪಕದಲ್ಲಿ 7.1 ತೀವ್ರತೆಯ ಭೂಕಂಪನವು ಸಂಭವಿಸಿದೆ, ಆದರೆ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಜಪಾನ್‌ನ ತೋಹೊಕು ಪ್ರದೇಶದ ಮಿಯಾಗಿ ಮತ್ತು ಫುಕುಶಿಮಾ ಪ್ರಾಂತ್ಯಗಳಲ್ಲಿ ಹಾನಿಯ ವರದಿಗಳು ಬರುತ್ತಿವೆ. ಟೋಕಿಯೊದಲ್ಲಿ ನಡುಕ ಉಂಟಾಗಿದೆ ಆದರೆ, ಸುನಾಮಿ ಎಚ್ಚರಿಕೆ ಇನ್ನೂ ನೀಡಿಲ್ಲ. ಜಪಾನಿನ ಹವಾಮಾನ ಸಂಸ್ಥೆ ಈ ಹೇಳಿಕೆ ಬಿಡುಗಡೆ ಮಾಡಿದೆ .

ಅಲ್ಲಿನ ಕಾಲಮಾನದ ಪ್ರಕಾರ ಶನಿವಾರ ತಡರಾತ್ರಿ 11:08 ರ ಸುಮಾರಿಗೆ ಭೂಕಂಪನ ಸಂಭವಿಸಿದೆ ಎಂದು ಹವಾಮಾನ ಸಂಸ್ಥೆ ತಿಳಿಸಿದೆ. ಆದರೆ ಸುನಾಮಿ ಎಚ್ಚರಿಕೆ ನೀಡಿಲ್ಲ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ನಿರೀಕ್ಷಿಸಲಾಗಿದೆ.



SHARE THIS

Author:

0 التعليقات: