Friday, 12 February 2021

ನಾಳೆ ರಜಬ್ ಒಂದು


ನಾಳೆ ರಜಬ್ ಒಂದು

ಇಂದು  ರಾತ್ರಿ ರಜಬ್ ತಿಂಗಳ ಚಂದ್ರದರ್ಶನ ವಾದ ಬಗ್ಗೆ ನಂಬಲರ್ಹ ಮೂಲಗಳಿಂದ ತಿಳಿದು ಬಂದಿದ್ದು ನಾಳೆ (13-2-2021) ಶನಿವಾರ ರಜಬ್ ತಿಂಗಳ ಪ್ರಾರಂಭ ಎಂದು ಉಳ್ಳಾಲ ಖಾಝಿ ಖುರ್ರತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ತಂಗಳ್ ಅಲ್ ಮದನಿ ಕೂರತ್ ಘೋಷಿಸಿದ್ದಾರೆ.


🟢ರಜಬ್ ತಿಂಗಳ ಮಹತ್ವ 🟢   

ಅತೀ ಮಹತ್ವವಾದ ಪವಿತ್ರ ರಮಾಳಾನಿನ ಸ್ವಾಗತ ಮತ್ತು ಪ್ರಚಾರ  ಪುಣ್ಯ ರಜಬಿನಲ್ಲೇ ಶುರುಮಾಡಲು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು "ಅಲ್ಲಾಹುಮ್ಮ ಬಾರಿಕ್'ಲನಾ ಫೀ ರಜಬಿವ್ವಶಅಬಾನ್ ವಬಲ್ಲಿಗ್'ಲನಾ ಶಹ್'ರ್ ರಮಾಳಾನ್" 

اللهم بارك لنا في رجب وشعبان وبلغنا شهر رمضان

 ಎಂದು ದುಆ ಮಾಡಲು ಹೇಳುವ ಮೂಲಕ ಪ್ರೇರಣೆ ನೀಡಿದ್ದಾರೆ.  ಹನ್ನೆರಡು ತಿಂಗಳಲ್ಲಿ ಅಲ್ಲಾಹನ ತಿಂಗಳೆಂದು ವಿಶೇಷಿಸಲ್ಪಟ್ಟ ಖೈರಿನ ತಿಂಗಳು ರಜಬ್ ನಮ್ಮೆಡೆಗೆ ಆಗಮನದಲ್ಲಿದೆ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ  "ರಜಬ್ ಅಲ್ಲಾಹನ ತಿಂಗಳು, ಶಅಬಾನ್ ನನ್ನ ತಿಂಗಳು, ರಮಾಳಾನ್ ನನ್ನ ಸಮೂಹದ ತಿಂಗಳು".  ಮಹತ್ವವೇರಿದ ರಜಬ್ ತಿಂಗಳಿಗೆ ದೊಡ್ಡ  ಮಹತ್ವವಿದೆ. ಒಳಿತಿಗೆ ದುಪ್ಪಟ್ಟು ಪ್ರತಿಫಲವಿದೆ. ಪಾಪಗಳಿಗೆ  ಘೋರ ಶಿಕ್ಷೆಗೆ ಕಾದಿದೆ. ಇಮಾಮರುಗಳು ರಜಬನ್ನು ಗಾಳಿಗೂ, ಶಅಬಾನನ್ನು ಮೋಡಕ್ಕೂ,  ರಮಾಳಾನನ್ನು ಮಳೆಗೂ ಹೋಲಿಸಿದ್ದಾರೆ. ರಜಬಲ್ಲಿ  ಬೀಜ ಬಿತ್ತಿದರೆ, ಶಅಬಾನಲ್ಲಿ ನೀರುಣಿಸಿ ಪೋಷಿಸದರೆ, ರಮಾಳಾನಿನಲ್ಲಿ ಕೊಯ್ಲು  ನಡೆಸಲು ಸಾಧ್ಯವಾಗುತ್ತದೆ. ಆದ್ದರಿಂದ ರಜಬಿನಲ್ಲಿ ಪೂರ್ಣ ಪ್ರಮಾಣದ ಸಿದ್ಧತೆ ನಡೆಸಬೇಕೆಂದು ಇಮಾಮರು ಹೇಳಿದ್ದು ಮಾತ್ರವಲ್ಲ ರಜಬ್ ಇಸ್ತಿಗ್ಫಾರಿನ ತಿಂಗಳು ಆದೂದರಿಂದ ಧಾರಾಳ ಇಸ್ತಿಗ್ಫಾರ್ ನಡೆಸಿ ಪಾಪಮುಕ್ತಿ ಹೊಂದಿ ಅಲ್ಲಾಹನೆಡೆಗೆ ಹತ್ತಿರವಾಗಬೇಕೆಂದೂ ರಜಬಿನಲ್ಲಿ ಖೈರಾತ್'ಗಳು ವರ್ಷಿಸುತ್ತದೆ ಎಂದು ತಿಳಿಸಿದ್ದಾರೆ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ತಿಳಿಸಿದ್ದಾರೆ 'ಒಬ್ಬರು ಇಸ್ತಿಗ್ಫಾರ್ ರೂಡಿ ಮಾಡಿದರೆ ಅಲ್ಲಾಹು ಅವನ ಎಲ್ಲಾ  ಟೆನ್ಶನ್,ಬೇಸರಗಳನ್ನು ನೀಗಿಸಿ ಸಂತಸ ಕೊಡುವನು, ಅವನ ಆಗ್ರಹಗಳನ್ನು ಪೂರೈಸಿಕೊಡುವನು'. ಇಸ್ತಿಗ್ಫಾರಿಗೆ ಉತ್ತಮ ಪ್ರತಿಫಲವಿದೆ. ಇಸ್ತಿಗ್ಫಾರಿನಿಂದ ಸಮೃದ್ಧಿ ಲಭ್ಯವಿದೆ. ಜೀವಮಾನದಲ್ಲಿ ಒಂದೇ ಒಂದು ಪಾಪ ಮಾಡದ ಪ್ರವಾದಿ ಶ್ರೇಷ್ಠರೇ ಪ್ರತಿದಿನ 100 ಇಸ್ತಿಗ್ಫಾರ್ ಹೇಳುತ್ತಿದ್ದರೆಂದರೆ ಪಾಪ ಗಳಲ್ಲೇ ಮುಳುಗುವ ನಾವು ಇಸ್ತಿಗ್ಫಾರಿನ ತಿಂಗಳಾದ ಈ ರಜಬಿನಲ್ಲಿ ವಿಶೇಷವಾಗಿ ಧಾರಾಳ ಇಸ್ತಿಗ್ಫಾರ್ ಹೇಳಬೇಕಾಗಿದೆ. ಒಬ್ಬ ಅಲ್ಲಾಹನ ದಾಸ ,ಒಡೆಯನಾದ ಅಲ್ಲಾಹನ ಬಳಿ ತಾನು  ಮಾಡಿದ ಪಾಪದ ಬಗ್ಗೆ ಪಶ್ಚಾತ್ತಾಪಪಟ್ಟು ಇಸ್ತಿಗ್ಫಾರ್ ಹೇಳಿ ಮಗ್ಫಿರತ್ತನ್ನು ಕೇಳುವಾಗ ಅಲ್ಲಾಹನಿಗೆ ಅತ್ಯಂತ ಸಂತೋಷವಾಗುತ್ತದೆ ಎಂದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ತಿಳಿಸಿದ್ದಾರೆ.

      ದುಆಗೆ ಉತ್ತರ ಸಿಗುವಂತಹ ಐದು ರಾತ್ರಿಗಳಲ್ಲೊಂದಾಗಿದೆ  ರಜಬಿನ ಒಂದನೆ ದಿನದ ರಾತ್ರಿ.   ರಜಬಿನ ಪ್ರತೀ ದಿನಕ್ಕೂ ಮಹತ್ವವಿದೆ.   ಜಾಹಿಲಿಯ ಕಾಲದಲ್ಲೇ ಜನ ಮಹತ್ವ ಕೊಡುತ್ತಿದ್ದಂತಹ ನಾಲ್ಕು ತಿಂಗಳು ಗಳಲ್ಲಿ ಒಂದು ರಜಬು ತಿಂಗಳು. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಅತ್ಯಂತ ಮಹತ್ತರವಾದ  ಇಸ್ರಾಹ್-ಮಿಹ್ರಾಜ್ ನಡೆದದ್ದೂ ರಜಬ್'ನಲ್ಲಿ. ನಮಾಝ್ ಕಡ್ಡಾಯಗೊಂಡ ತಿಂಗಳು ರಜಬ್. ಇಮಾಂ ಶಾಫೀ(ರ), ಅಜ್ಮೀರ್ ಖ್ವಾಜ(ರ) ಮುಂತಾದ ಮಹಾತ್ಮರಗಳ ವಫಾತ್ ಮತ್ತು  ಜನನಕ್ಕೆ ಸೌಭಾಗ್ಯ ಸಿಕ್ಕಿದಂತಹ ತಿಂಗಳು ರಜಬ್. ಹಾಗಾಗಿ ಪುಣ್ಯ ರಜಬನ್ನು ಧನ್ಯಗೊಳಿಸಿ ರಬ್ಬಿನೆಡೆಗೆ


SHARE THIS

Author:

0 التعليقات: