Monday, 15 February 2021

ಭಾರತೀಯ ಸೆಲೆಬ್ರಿಟಿ ಟ್ವೀಟ್‍ಗಳ ಮೇಲೆ ಪ್ರಭಾವ ಬೀರಿದ್ದ ಬಿಜೆಪಿ ಐಟಿ ಸೆಲ್: ಮಹಾರಾಷ್ಟ್ರ ಗೃಹ ಸಚಿವ ಹೇಳಿಕೆ


 ಭಾರತೀಯ ಸೆಲೆಬ್ರಿಟಿ ಟ್ವೀಟ್‍ಗಳ ಮೇಲೆ ಪ್ರಭಾವ ಬೀರಿದ್ದ ಬಿಜೆಪಿ ಐಟಿ ಸೆಲ್: ಮಹಾರಾಷ್ಟ್ರ ಗೃಹ ಸಚಿವ ಹೇಳಿಕೆ

ಮುಂಬೈ: ರೈತರ ಪ್ರತಿಭಟನೆಗಳ ಕುರಿತಂತೆ ಭಾರತೀಯ ಸೆಲೆಬ್ರಿಟಿಗಳು ಮಾಡಿರುವ ಟ್ವೀಟ್ ಕುರಿತು ನಡೆಯುತ್ತಿರುವ ತನಿಖೆಗಳಲ್ಲಿ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಹಾಗೂ 12 ಮಂದಿ ಇನ್‍ಫ್ಲೂಯೆನ್ಸರ್‍ಗಳ ಹೆಸರು ಕೇಳಿ ಬಂದಿದೆ ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಅವರು ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ.

ಕೋವಿಡ್‍ನಿಂದ ಗುಣಮುಖರಾದ ನಂತರ ಮೊದಲ ಬಾರಿ ಸುದ್ದಿಗಾರರ ಜತೆ ಮಾತನಾಡಿದ ದೇಶಮುಖ್, ಸೆಲೆಬ್ರಿಟಿಗಳನ್ನು ತನಿಖೆಗೊಳಪಡಿಸಲಾಗುವುದು ಎಂದು ತಾವು ಯಾವತ್ತೂ ಹೇಳಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರಲ್ಲದೆ ತಮ್ಮ ಹಿಂದಿನ ಹೇಳಿಕೆಯನ್ನು ತಿರುಚಲಾಗಿದೆ ಎಂದಿದ್ದಾರೆ.

"ಲತಾ ಮಂಗೇಶ್ಕರ್ ಜಿ ನಮಗೆ ದೇವರ ಸಮಾನ. ಇಡೀ ಜಗತ್ತು ಸಚಿನ್ ತೆಂಡುಲ್ಕರ್ ಅವರನ್ನು ಗೌರವಿಸುತ್ತದೆ. ನಾವು ಬಿಜೆಪಿ ಐಟಿ ಸೆಲ್ ಪಾತ್ರದ ಕುರಿತು ತನಿಖೆ ನಡೆಸುತ್ತಿದ್ದೇವೆ ಹಾಗೂ ಸೆಲೆಬ್ರಿಟಿ ಟ್ವೀಟ್‍ಗಳು ಅವರ ಪ್ರಭಾವದಿಂದ ಮಾಡಲ್ಪಟ್ಟಿದ್ದವೇ ಎಂದು ತನಿಖೆ ನಡೆಸುತ್ತಿದ್ದೇವೆ,'' ಎಂದು ದೇಶಮುಖ್ ಹೇಳಿದರು.

ರೈತರ ಪ್ರತಿಭಟನೆಗಳಿಗೆ ಬೆಂಬಲ ಸೂಚಿಸಿ ಅಮೆರಿಕನ್ ಪಾಪ್ ಗಾಯಕಿ ರಿಹಾನ್ನ ಹಾಗೂ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್ ಟ್ವೀಟ್ ಮಾಡಿದ ಬೆನ್ನಲ್ಲೇ ಭಾರತ ಸರಕಾರಕ್ಕೆ ಬೆಂಬಲ ಸೂಚಿಸಿ  ಹಲವು ಸೆಲೆಬ್ರಿಟಿಗಳು ಮಾಡಿರುವ ಟ್ವೀಟ್‍ಗೂ ಬಿಜೆಪಿಗೂ ಇರಬಹುದಾದ ಸಂಬಂಧದ ಕುರಿತಂತೆ ತನಿಖೆ ನಡೆಸಲು ಕಾಂಗ್ರೆಸ್ ಕೋರಿತ್ತು. ಈ ಹಿನ್ನೆಲೆಯಲ್ಲಿ  ತನಿಖೆ ನಡೆಸಲಾಗುತ್ತಿದೆ.SHARE THIS

Author:

0 التعليقات: