Saturday, 13 February 2021

ನಾಳೆ ಪ್ರಧಾನಿ ತಮಿಳುನಾಡಿಗೆ: ಸಾಮಾಜಿಕ ತಾಣದಾದ್ಯಂತ 'ಗೋ ಬ್ಯಾಕ್ ಮೋದಿ' ಟ್ರೆಂಡಿಂಗ್!

 


ನಾಳೆ ಪ್ರಧಾನಿ ತಮಿಳುನಾಡಿಗೆ: ಸಾಮಾಜಿಕ ತಾಣದಾದ್ಯಂತ 'ಗೋ ಬ್ಯಾಕ್ ಮೋದಿ' ಟ್ರೆಂಡಿಂಗ್!

ಚೆನ್ನೈ: ಕೇಂದ್ರ ಸರಕಾರವು ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಗಳ ಕುರಿತು ರೈತರು ತೀವ್ರ ಪ್ರತಿಭಟನೆ ನಡೆಸುತ್ತಿದ್ದರೂ, ಪ್ರಧಾನಿ ಮತ್ತು ಕೇಂದ್ರ ಸರಕಾರ ಇದರ ಪರಿಹಾರಕ್ಕೆ ಪ್ರಯತ್ನಿಸುತ್ತಿಲ್ಲ ಎಂಬ ಅಪವಾದದ ನಡುವೆಯೇ ಫೆ.14ರಂದು ತಮಿಳುನಾಡಿಗೆ ತೆರಳುತ್ತಿರುವ ಪ್ರಧಾನಿ ಮೋದಿಗೆ 'ಗೋ ಬ್ಯಾಕ್ ಮೋದಿ' ಘೋಷಣೆಗಳು ಎದುರಾಗಿದೆ. ಭಾರತದಾದ್ಯಂತ ಸಾಮಾಜಿಕ ತಾಣ ಟ್ವಿಟರ್ ನಲ್ಲಿ 'ಗೋ ಬ್ಯಾಕ್ ಮೋದಿ' ಟ್ರೆಂಡಿಂಗ್ ಆಗಿದೆ.

"ಹಲವಾರು ತಿಂಗಳುಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಅಹವಾಲು ಕೇಳದ ಪ್ರಧಾನಿ ಚುನಾವಣೆಯ ಸಲುವಾಗಿ ತಮಿಳುನಾಡಿಗೆ ಆಗಮಿಸುತ್ತಿದ್ದಾರೆ. ನಿಮ್ಮ ಕುರಿತು ನಮಗೆ ವಿಶ್ವಾಸವಿಲ್ಲ. ವ್ಯಾಲೆಂಟೈನ್ಸ್ ದಿನದಂದು ತಮಿಳುನಾಡಿನಲ್ಲಿ 'ಗೋ ಬ್ಯಾಕ್ ಮೋದಿ' ಟ್ರೆಂಡಿಂಗ್ ಮಾಡೋಣ ಎಂದು ಬಳಕೆದಾರರೋರ್ವರು ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಫೆ.14 ಭಾನುವಾರದಂದು ಚೆನ್ನೈಗೆ ಆಗಮಿಸಲಿದ್ದು, ಅಲ್ಲಿನ ಜವಹರ್ ಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.


SHARE THIS

Author:

0 التعليقات: