Monday, 1 February 2021

ಭಾರತದ ಸಂಪತ್ತನ್ನು ಮೋದಿ ತನ್ನ ಬಂಡವಾಳಶಾಹಿ ಸ್ನೇಹಿತರಿಗೆ ಧಾರೆಯೆರೆಯುತ್ತಿದ್ದಾರೆ : ರಾಹುಲ್ ಗಾಂಧಿ


ಭಾರತದ ಸಂಪತ್ತನ್ನು ಮೋದಿ ತನ್ನ ಬಂಡವಾಳಶಾಹಿ ಸ್ನೇಹಿತರಿಗೆ ಧಾರೆಯೆರೆಯುತ್ತಿದ್ದಾರೆ : ರಾಹುಲ್ ಗಾಂಧಿ

ನವದೆಹಲಿ : ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಗಾರಿದ್ದಾರೆ. ಭಾರತದ ಸಂಪತ್ತನ್ನು ಮೋದಿ ತನ್ನ ಬಂಡವಾಳಶಾಹಿ ಗೆಳೆಯರಿಗೆ ಧಾರೆಯೆರೆಯುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆಪಾದಿಸಿದ್ದಾರೆ.

“ಜನರ ಕೈಗೆ ಹಣ ನೀಡುವುದನ್ನು ಮರೆತುಬಿಡಿ, ಮೋದಿ ಸರಕಾರ ತನ್ನ ಬಂಡವಾಳಶಾಹಿ ಸ್ನೇಹಿತರಿಗೆ ಇಡೀ ಭಾರತದ ಸಂಪತ್ತನ್ನು ಧಾರೆಯೆರೆಯಲು ಯೋಜಿಸುತ್ತಿದೆ” ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಸಂಸತ್ತಿನಲ್ಲಿ ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ಈಗಾಗಲೇ 100ರೂ. ಗಡಿ ದಾಟುತ್ತಿರುವ ನಡುವೆ, ಬಜೆಟ್ ನಲ್ಲಿ ಇಂಧನ ಬೆಲೆ ಏರಿಕೆಯಾಗುವಂತೆ ಕೃಷಿ ಸೆಸ್ ಹಾಕಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.   


 


SHARE THIS

Author:

0 التعليقات: