Friday, 5 February 2021

ಹೊಸ ಪಡಿತರ ಚೀಟಿ ಪಡೆಯಲು 'ಆನ್ ಲೈನ್ ಸೇವೆ' ಪುನಾರಂಭ : ರಾಜ್ಯ ಸರ್ಕಾರದಿಂದ ಆದೇಶ


ಹೊಸ ಪಡಿತರ ಚೀಟಿ ಪಡೆಯಲು 'ಆನ್ ಲೈನ್ ಸೇವೆ' ಪುನಾರಂಭ : ರಾಜ್ಯ ಸರ್ಕಾರದಿಂದ ಆದೇಶ

ಬೆಂಗಳೂರು : ಹೊಸ ಪಡಿತರ ಚೀಟಿಗಳ ಆನ್ ಲೈನ್ ಸೇವೆಯನ್ನು ಪುನಾರಂಭಿಸುವ ಬಗ್ಗೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಇಲಾಖೆ ತಂತ್ರಾಂಶದಲ್ಲಿ ಹೊಸ ಆನ್ ಲೈನ್ ಅರ್ಜಿಗಳನ್ನು ಸ್ವೀಕಾರ ಮಾಡುವ ಅವಕಾಶವನ್ನು ಚಾಲ್ತಿಗೊಳಿಸಲಾಗಿದೆ. ಸಾರ್ವಜನಿಕರು ಹೊಸ ಪಡಿತರ ಚೀಟಿಗಳಿಗೆ ಆನ್ ಲೈನ್ ಅರ್ಜಿಗಳನ್ನು ಇಲಾಖೆ ನಿಗಧಿಪಡಿಸಿದ ಮಾನದಂಡಗಳಂತೆ ಸಲ್ಲಿಸಬಹುದಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಅಧಿಸೂಚನೆ ಹೊರಡಿಸಿದೆ.

ಹೊಸ ಪಡಿತರ ಚೀಟಿಗಾಗಿ ಆನ್ ಲೈನ್ ಅರ್ಜಿ ಸಲ್ಲಿಸುವ ಅವಕಾಶವನ್ನು ಚಾಲ್ತಿಗೊಳಿಸಿರುವ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು/ಜಂಟಿ/ಉಪನಿರ್ದೇಶಕರುಗಳಿಗೆ ಆಯುಕ್ತರು, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಇವರು ಆದೇಶ ಹೊರಡಿಸಿದ್ದಾರೆ.


SHARE THIS

Author:

0 التعليقات: