ನಕ್ಸಲರು ಹೂತಿಟ್ಟಿದ್ದ ಐಐಡಿ ಸ್ಫೋಟ : ಎಸ್ಟಿಎಫ್ ಯೋಧ ಹುತಾತ್ಮ
ರಾಯ್ಪುರ: ಚತ್ತೀಸ್ಗಢದ ನಕ್ಸಲರ ಉಪಟಳ ಹೆಚ್ಚುತ್ತಿದ್ದು ,ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರು ಹೂತಿಟ್ಟಿದ್ದ ಐಇಡಿ ಸ್ಫೋಟಗೊಂಡು ವಿಶೇಷ ಕಾರ್ಯಪಡೆಯ (ಎಸ್ಟಿಎಫ್) ಯೋಧ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ನಕ್ಸಲ್ ವಿರೋಧಿ ಕಾರ್ಯಾಚರಣೆಗೆ ಭದ್ರತಾ ಪಡೆಗಳ ಜಂಟಿ ತಂಡ ಹೊರಟಿದ್ದಾಗ ಸಂಜೆ 4.30ರ ಸುಮಾರಿಗೆ ತಾರೆಮ್ ಪೊಲೀಸ್ ಠಾಣೆ ವ್ಯಾಪ್ತಿಯ ಪೆಡ್ಡಗೆಲ್ಲೂರ್ ಗ್ರಾಮದ ಬಳಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಜನರಲ್ (ಬಸ್ತರ್ ಶ್ರೇಣಿ) ಸುಂದರರಾಜ್ ಪಿ. ಮಾಹಿತಿ ನೀಡಿದ್ದಾರೆ.
ಎಸ್ಟಿಎಫ್, ಕೋಬ್ರಾ-ಸಿಆರ್ಪಿಎಫ್ ಮತ್ತು ಜಿಲ್ಲಾ ಪಡೆಗೆ ಸೇರಿದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾದ್ದರು.ಹಿಂತಿರುಗುವಾಗ ಕಾನ್ಸ್ಸ್ಟೇಬಲ್ ಮೋಹನ್ ನಾಗ್ ಅಜಾಗರೂಕತೆಯಿಂದ ಐಇಡಿ ತುಳಿದಿದ್ದರು. ಈ ವೇಳೆ ಐಇಡಿ ಸ್ಫೋಟಗೊಂಡು ತೀವ್ರವಾಗಿ ಗಾಯಗೊಂಡಿದ್ದರು. ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅಲ್ಲಿ ಮೃತಪಟ್ಟಿದ್ದಾರೆ ಐಜಿ ತಿಳಿಸಿದ್ದಾರೆ.
0 التعليقات: