Monday, 1 February 2021

ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಗೆ ನವ ಸಾರಥಿಗಳು


 ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಗೆ ನವ ಸಾರಥಿಗಳು

ಶಿವಮೊಗ್ಗ : ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯ ವಾರ್ಷಿಕ ಕೌನ್ಸಿಲ್ ಎಸ್ಸೆಸ್ಸೆಫ್ ಪ್ರಭಾರ ಅಧ್ಯಕ್ಷ ಸುಫ್ಯಾನ್ ಸಖಾಫಿರವರ ಅಧ್ಯಕ್ಷತೆಯಲ್ಲಿ ಶಿವಮೊಗ್ಗದಲ್ಲಿ ನಡೆಯಿತು.ಸಯ್ಯಿದ್ ಅಬೂಕ್ಕರ್ ಸಿದ್ದೀಕ್ ತಂಙಳ್ ಮುರ ದುಆ: ಮಾಡಿದರು. ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಮಾಜಿ ಅಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ದ್ವಿದಿನ ನಡೆದ ಗೈನ್ -21 ಪ್ರತಿನಿಧಿ ಸಮಾವೇಶದಲ್ಲಿ ಕರ್ನಾಟಕ ರಾಜ್ಯ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಎಸ್ ಪಿ ಹಂಝ ಸಖಾಫಿ ಬಂಟ್ವಾಳ, ಜಿ.ಎಂ ಮುಹಮ್ಮದ್ ಕಾಮಿಲ್ ಸಖಾಫಿ, ಎಸ್ಸೆಸ್ಸೆಫ್ ನ್ಯಾಶನಲ್ ಪ್ರಧಾನ ಕಾರ್ಯದರ್ಶಿ ಫಾರೂಕ್ ನಈಮಿ ಕೊಲ್ಲಂ, ಕಾರ್ಯದರ್ಶಿ ಮಜೀದ್ ಮಾಸ್ಟರ್ ಅರಿಯಲ್ಲೂರು, ನಾಯಕರಾದ ಕೆ.ಎಂ ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ ಮೊದಲಾದವರು ತರಗತಿಯನ್ನು ನಡೆಸಿದರು.

ನಂತರ ಅಡ್ವೈಸರ್ ಬೋರ್ಡ್ ಹಾಗೂ ಎಸ್ಸೆಸ್ಸೆಫ್ ನ್ಯಾಶನಲ್ ನಾಯಕರ ಸಮ್ಮುಖದಲ್ಲಿ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಗೆ ಹೊಸ ಸಮಿತಿಯನ್ನು ರಚಿಸಲಾಯಿತು. ಸಯ್ಯಿದ್ ಸಹೀದುದ್ದೀನ್ ಅಲ್ ಬುಖಾರಿ ನೂತನ ರಾಜ್ಯ ನಾಯಕರನ್ನು ಘೋಷಣೆ ಮಾಡಿದರು.

ಅಧ್ಯಕ್ಷರಾಗಿ ಅಬ್ದುಲ್ ಲತೀಫ್ ಸಅದಿ ಶಿವಮೊಗ್ಗ, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ, ಕೋಶಾಧಿಕಾರಿ ಹಾಫಿಳ್ ಸುಫ್ಯಾನ್ ಸಖಾಫಿ ಕಾವಲ್ಕಟ್ಟೆ.

ಕಾರ್ಯದರ್ಶಿಗಳಾಗಿ ಕೆ.ಎಂ ಮುಸ್ತಫಾ ಹಿಮಮಿ ನಈಮಿ ಹಾವೇರಿ, ನೌಫಲ್ ಸಖಾಫಿ ಕಳಸ, ಹುಸೈನ್ ಸಅದಿ ಹೊಸ್ಮಾರ್, ಸಫ್ವಾನ್ ಚಿಕ್ಕಮಂಗಳೂರು, ಶರೀಫ್ ಕೊಡಗು, ಎನ್.ಸಿ ರಹೀಂ ಉಡುಪಿ, ಹಕೀಂ ಬೆಂಗಳೂರು, ಮುಬಶ್ಶಿರ್ ಅಹ್ಸನಿ ಕೊಡಗು,ವಾಜಿದ್ ಹಾಸನ.

ಕಾರ್ಯಕಾರಿ ಸದಸ್ಯರುಗಳಾಗಿ ಸಯ್ಯದ್ ಅಲವೀ ತಂಙಳ್ ಕರ್ಕಿ, ರವೂಫ್ ಖಾನ್ ಉಡುಪಿ, ಮುನೀರ್ ಸಖಾಫಿ ಉಳ್ಳಾಲ, ಶಾಫಿ ಸಅದಿ ಬೆಂಗಳೂರು, ಆರಿಫ್ ಸಅದಿ ಉತ್ತರ ಕನ್ನಡ, ಖಾದರ್ ಬಾಷಾ ದಾವಣಗೆರೆ, ಸಯ್ಯಿದ್ ಖಾಲಿದ್ ಶಿವಮೊಗ್ಗ, ಅಝೀಝ್ ಸಖಾಫಿ ಕೊಡಗು, ಮಾಹಮ್ಮದ್ ಅಲಿ ದ.ಕ ಈಸ್ಟ್, ಯಾಸೀನ್ ಸಖಾಫಿ ಹಾವೇರಿ, ಸಲೀಂ ಕೊಪ್ಪಳ, ಜುನೈದ್ ಸಖಾಫಿ ಚಿತ್ರದುರ್ಗ, ಮನ್ಸೂರ್ ಉಡುಪಿ, ಸುಹೈಲ್ ತುಮಕೂರು, ಶರೀಫ್ ಬೆರ್ಕಳ ದ.ಕ ಈಸ್ಟ್, ಶರೀಪ್ ಮಿಸ್ಬಾಹಿ ಹಾಸನ, ನೂರುದ್ದೀನ್ ಮುಜೀಬಿ ಬಳ್ಳಾರಿ ಮೊದಲಾದವರನ್ನು ನೇಮಿಸಲಾಯಿತು.

ಕಾರ್ಯಕ್ರಮದಲ್ಲಿ ರಾಜ್ಯ ವಕ್ಫ್ ಬೋರ್ಡ್ ಸದಸ್ಯರಾದ ಶಾಫಿ ಸಅದಿ ಬೆಂಗಳೂರು,ಸಯ್ಯಿದ್ ಅಬೂಬಕ್ಕರ್ ಸಿದ್ದೀಕ್ ತಂಙಳ್ ತೀರ್ಥಹಳ್ಳಿ, ಸಯ್ಯಿದ್ ಹಾರೂನ್ ಅಲ್ ಬುಖಾರಿ ಭದ್ರಾವತಿ, ಎಸ್ ಮಹಮ್ಮದ್ ಹಾಜಿ ಸಾಗರ,ಶರೀಪ್ ಸಖಾಫಿ ಬೆನಪು , ರಾಜ್ಯ ಮುಸ್ಲಿಂ ಜಮಾಅತ್ ನಾಯಕರಾದ ಅಬ್ದುಲ್ ಹಮೀದ್ ಬಜ್ಪೆ, ಸಾದಿಕ್ ಮಾಸ್ಟರ್ ಮಲೆಬೆಟ್ಟು, ಎಸ್.ವೈ.ಎಸ್ ನಾಯಕರಾದ ಸಯ್ಯಿದ್ ಹಾಮಿಮ್ ತಂಙಳ್ ಬಾಳೆಹೊನ್ನೂರು, ಯಾಕೂಬ್ ಯೂಸುಫ್ ಹೊಸನಗರ, ಅಶ್ರಫ್ ಕಿನಾರೆ, ಅಬ್ದುಲ್ ಹಮೀದ್ ಮುಸ್ಲಿಯಾರ್ ನಗರ, ಅಬ್ದುಲ್ ಜಬ್ಬಾರ್ ಸಅದಿ ಶಿವಮೊಗ್ಗ ಮೊದಲಾದವರು ಉಪಸ್ಥಿತರಿದ್ದರು.

ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕೇರಿ ಸ್ವಾಗತಿಸಿದರು.ನೂತನ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ವಂದಿಸಿದರು.ಕಾರ್ಯದರ್ಶಿ ಕೆ.ಎಂ ಮುಸ್ತಫಾ ಹಿಮಮಿ ನಈಮಿ ಹಾವೇರಿ ಕಾರ್ಯಕ್ರಮವನ್ನು ನಿರೂಪಿಸಿದರು.


SHARE THIS

Author:

0 التعليقات: