Sunday, 7 February 2021

ಉತ್ತರಾಖಂಡದಲ್ಲಿ ಹಿಮ ಪ್ರವಾಹ: ಋಷಿ ಗಂಗಾ ವಿದ್ಯುತ್ ಯೋಜನೆಗೆ ಹಾನಿ

 

ಉತ್ತರಾಖಂಡದಲ್ಲಿ ಹಿಮ ಪ್ರವಾಹ: ಋಷಿ ಗಂಗಾ ವಿದ್ಯುತ್ ಯೋಜನೆಗೆ ಹಾನಿ

ಚಮೋಲಿ(ಉತ್ತರಖಂಡ): ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠದ ಧೋಲಿಗಂಗಾ ನದಿಯಲ್ಲಿ ರವಿವಾರ ಬೆಳಗ್ಗೆ ಭೀಕರ ಹಿಮ ಪ್ರವಾಹ ಉಂಟಾಗಿದ್ದು, ಘಟನೆಯಿಂದ ರೈನಿ ಗ್ರಾಮದ ಸಮೀಪವಿರುವ ಋಷಿಗಂಗಾ ವಿದ್ಯುತ್ ಯೋಜನೆಗೆ ಹಾನಿಯಾಗಿದೆ ಎಂದು ವರದಿಯಾಗಿದೆ.

ಸುತ್ತಮುತ್ತಲಿನ ಪ್ರದೇಶದಲ್ಲಿ ವಾಸವಾಗಿರುವ ಸಾವಿರಾರು  ಜನರನ್ನು ತುರ್ತು ಸ್ಥಳಾಂತರಿಸುವಂತೆ ಒತ್ತಾಯಿಸಲಾಗಿದೆ. ಹಲವು ಮನೆಗಳಿಗೆ ಹಾನಿಯಾಗಿದೆ. 150ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದು, ಹಲವು ಜನರು ಪ್ರವಾಹದಲ್ಲಿ ಸಿಲುಕಿ ಹಾಕಿಕೊಂಡಿರುವ ಶಂಕೆ ಇದೆ ಎಂದು ಎನ್ ಡಿಟಿವಿ ವರದಿ ಮಾಡಿದೆ.

ವಿಪತ್ತು ನಿರ್ವಹಣಾ ತಂಡಗಳನ್ನು ಸಜ್ಜುಗೊಳಿಸಲಾಗಿದ್ದು, ನೂರಾರು ಐಟಿಬಿಪಿ(ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್)ರಕ್ಷಣಾ ಕಾರ್ಯಾಚರಣೆಗಾಗಿ ಧಾವಿಸಿವೆ.

ವಿಷ್ಣುಪ್ರಯಾಗ್, ಜೋಶಿಮಠ, ಕರ್ಣಪ್ರಯಾಗ್, ರುದ್ರಪ್ರಯಾಗ್,ಶ್ರೀನಗರ, ಋಷಿಕೇಶ್ ಅಥವಾ ಹರಿದ್ವಾರದಲ್ಲಿರುವ ಅಲಕಾನಂದ ಹಾಗೂ ಗಂಗಾನದಿಗಳಿಗೆ ಭೇಟಿ ನೀಡದಂತೆ ರಾಜ್ಯ ಸರಕಾರ ಎಚ್ಚರಿಕೆ ನೀಡಿದೆ.


SHARE THIS

Author:

0 التعليقات: