Thursday, 4 February 2021

ಕೃಷಿ ಮಸೂದೆ: ಘಾಜಿಪುರ ಗಡಿ ತಲುಪಿದ ಕರ್ನಾಟಕ ರೈತರು- ಟಿಕೈತ್ ಭೇಟಿಯಾದ ಕೋಡಿಹಳ್ಳಿ


 ಕೃಷಿ ಮಸೂದೆ: ಘಾಜಿಪುರ ಗಡಿ ತಲುಪಿದ ಕರ್ನಾಟಕ ರೈತರು- ಟಿಕೈತ್ ಭೇಟಿಯಾದ ಕೋಡಿಹಳ್ಳಿ

ಬೆಂಗಳೂರು: ಕೃಷಿ ಮಸೂದೆ ವಾಪಸ್'ಗೆ ಆಗ್ರಹಿಸಿ ಕಳೆದ 2 ತಿಂಗಳುಗಳಿಂದ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಕೈಜೋಡಿಸಲು ರಾಜ್ಯದ ರೈತರು ಕೂಡ ಘಾಜಿಪುರದ ಗಡಿ ತಲುಪಿದ್ದಾರೆ.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ ರಾಜ್ಯದ ರೈತರು ಘಾಜಿಪುರ ಗಡಿ ತಲುಪಿದ್ದು, ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.

ಘಾಜಿಪುರ ಗಡಿ ತಲುಪಿದ ಕೂಡಲೇ ಕೋಡಿಹಳ್ಳಿ ಚಂದ್ರಶೇಖರ್ ಅವರು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕೈತ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಪ್ರತಿಭಟನಾನಿರತ ರೈತರೊಂದಿಗೆ ಮಾತನಾಡಿ, ರಾಜ್ಯದ ರೈತರಿಂದ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.

ಫೆಬ್ರವರಿ 6 ರಂದು ದೆಹಲಿ ಗಡಿಯಲ್ಲಿ ಕರ್ನಾಟಕ ಸುಮಾರು 4,000 ರೈತರು ಭಾಗಿಯಾಗಲಿದ್ದಾರೆ. ಫೆಬ್ರವರಿ 6 ರಂದು ಹೆದ್ದಾರಿ ತಡೆಗೆ ರೈತರ ಸಂಘಟನಗೆಳು ಕರೆ ನೀಡಿವೆ. ಈ ಕುರಿತು ರಾಜ್ಯದ ರೈತರು ಶೀಘ್ರದಲ್ಲೇ ಪ್ರತಿಕ್ರಿಯೆ ನೀಡಲಿದ್ದಾರೆ. ಫೆಬ್ರವರಿ 6 ರ ಬಳಿಕ ರಾಜ್ಯ ರೈತರು ತಂಡ, ತಂಡವಾಗಿ ಬಂದು ಟಿಕ್ರಿ, ಸಿಂಘು ಹಾಗೂ ಘಾಜಿಪುರದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಕೇಂದ್ರ ಸರ್ಕಾರ ಕೃಷಿ ಮಸೂದೆಗೆ ರಾಜ್ಯದ ರೈತರು ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ನಾವೂ ಕೂಡ ನಿಮಗೆ ಬೆಂಬಲ ನೀಡುತ್ತೇವೆ. ಒಮ್ಮೆಲೆ ಎಲ್ಲಾ ರೈತರು ಬಂದರೆ ರಾಜ್ಯ ಸರ್ಕಾರ ತಡೆ ಹಿಡಿಯುತ್ತದೆ. ಹೀಗಾಗಿ ನಾವು ತಂಡ ತಂಡವಾಗಿ ಬಂದು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತೇವೆ. ರೈಲು ಟಿಕೆಟ್ ಗಳಿಗೆ ನಾವೇ ಹಣವನ್ನು ನೀಡುತ್ತಿದ್ದೇವೆ. ಸಿಂಘು ಹಾಗೂ ಟಿಕ್ರಿ ಗಡಿಯಲ್ಲಿ ರೈತರು ಸಂಕಷ್ಟದಲ್ಲಿದ್ದಾರೆಂದು ಹೇಳಿದ್ದಾರೆ.


SHARE THIS

Author:

0 التعليقات: