ಪ್ರತಿಭಟನಾಕಾರರನ್ನು ನಾಯಿಗೆ ಹೋಲಿಸಿದ ತೆಲಂಗಾಣ ಮುಖ್ಯಮಂತ್ರಿ : ಕ್ಷಮೆಯಾಚನೆಗೆ ಪ್ರತಿಪಕ್ಷಗಳ ಒತ್ತಾಯ
ನಾಲ್ಗೊಂಡಾ: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಬುಧವಾರ ಸಾರ್ವಜನಿಕ ಸಮಾರಂಭವೊಂದರ ಬಳಿಯ ಪ್ರತಿಭಟನಾಕಾರರ ಗುಂಪೊಂದನ್ನು ನಾಯಿಗೆ ಹೋಲಿಸಿದ್ದಾರೆ.
ಇದು ಪ್ರತಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಟಿಆರ್ ಎಸ್ ಮುಖಂಡರಾಗಿರುವ ಚಂದ್ರಶೇಖರ್ ರಾವ್ ಕ್ಷಮೆಯಾಚನೆಗೆ ಒತ್ತಾಯಿಸಿವೆ.
ನಾಗರ್ಜುನ ಸಾಗರದಲ್ಲಿ ಸರ್ಕಾರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಸಾರ್ವಜನಿಕರನ್ನುದ್ದೇಶಿಸಿ ಚಂದ್ರಶೇಖರ ರಾವ್ ಮಾತನಾಡುವಾಗ ಕೆಲ ಮಹಿಳೆಯರು ಸೇರಿದಂತೆ ಪ್ರತಿಭಟನಾಕಾರರ ಗುಂಪೊಂದು ಮುಖ್ಯಮಂತ್ರಿಗೆ ಮನವಿ ಸಲ್ಲಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ಆರಂಭಿಸಿದ್ದಾರೆ.
ಈ ಗದ್ದಲ ಕುರಿತಂತೆ ಪ್ರತಿಕ್ರಿಯಿಸಿದ ಚಂದ್ರಶೇಖರ್ ರಾವ್, ಮನವಿ ಕೊಟ್ಟು ಇಲ್ಲಿಂದ ಹೋಗಿ, ಒಂದು ವೇಳೆ ಇಲ್ಲಿಯೇ ಇರುವುದಾದರೆ ಶಾಂತಿಯಿಂದ ಇರಿ, ನಿಮ್ಮ ಮೂರ್ಖತನದ ನಡೆಯಿಂದ ಯಾರೂ ಕೂಡಾ ಗೊಂದಲಕ್ಕೊಳಗಾಲ್ಲ, ಅನಗತ್ಯವಾಗಿ ನಿಮ್ಮ ಮೇಲೆ ಹಲ್ಲೆಯಾಗುತ್ತದೆ. ನಿಮ್ಮಂತಹ ಅನೇಕ ನಾಯಿಗಳನ್ನು ನೋಡಿದ್ದೇನೆ. ಇಲ್ಲಿಂದ ತೆರಳಿ ಎಂದು ಹೇಳಿದ್ದಾರೆ.
ಸಭೆಯಲ್ಲಿ ಮಹಿಳೆಯರನ್ನು ನಾಯಿ ಎಂದು ಮುಖ್ಯಮಂತ್ರಿ ಕರೆದಿದ್ದಾರೆ. ಪ್ರಜಾಪ್ರಭುತ್ವವನ್ನು ಮರೆಯಬಾರದು. ಮಹಿಳೆಯರು ಅನೇಕ ಕಾರಣದಿಂದ ನಿಂತಿದ್ದರೂ ಮುಖ್ಯಮಂತ್ರಿ ಕುಳಿತೇ ಇದ್ದರು. ಅವರು ನಮ್ಮ ಬಾಸ್ ಆಗಿದ್ದು, ಮುಖ್ಯಮಂತ್ರಿ ಕ್ಷಮೆ ಯಾಚಿಸಬೇಕೆಂದು ಠಾಕೂರ್ ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ಈ ರೀತಿಯ ಹೇಳಿಕೆ ನೀಡುವ ಮೂಲಕ ಹಿಂದೂಗಳು ಹಾಗೂ ಬಿಜೆಪಿಯನ್ನು ಅಪಮಾನಿಸಿದ್ದಾರೆ ಎಂದು ಬಿಜೆಪಿ ವಕ್ತಾರ ಕೃಷ್ಣ ಸಾಗರ್ ರಾವ್ ಆರೋಪಿಸಿದ್ದಾರೆ.
0 التعليقات: