Saturday, 6 February 2021

ಇಂದು ಪ್ರಧಾನಿ ಮೋದಿ ಪಶ್ಚಿಮ ಬಂಗಾಳ, ಅಸ್ಸಾಂಗೆ ಭೇಟಿ


ಇಂದು ಪ್ರಧಾನಿ ಮೋದಿ ಪಶ್ಚಿಮ ಬಂಗಾಳ, ಅಸ್ಸಾಂಗೆ ಭೇಟಿ


ನವದೆಹಲಿ : ಚುನಾವಣಾ ಕಣವಾಗಿರುವ ಅಸ್ಸಾಂ ಮತ್ತು ಪಶ್ಚಿಮ ಬಂಗಾಳಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಒಂದು ದಿನದ ಪ್ರವಾಸ ಕೈಗೊಳ್ಳಲಿದ್ದು, ಹಲವು ಮೂಲಸೌಕರ್ಯ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.


ಇಂದು ಮೊದಲು ಪ್ರಧಾನಿ ಮೋದಿ ಅಸ್ಸಾಂಗೆ ಭೇಟಿ ನೀಡಲಿದ್ದು, ಸೋಮ್ ಮಾಲಾ ಎಂಬ ಎರಡು ಆಸ್ಪತ್ರೆಗಳ ಶಂಕುಸ್ಥಾಪನೆ ಹಾಗೂ ರಾಜ್ಯದ ಸೊನಿತ್ ಪುರ ಜಿಲ್ಲೆಯ ಧೇಕಿಯಾಜುಲಿಯಲ್ಲಿ ರಾಜ್ಯ ಹೆದ್ದಾರಿ ಮತ್ತು ಪ್ರಮುಖ ಜಿಲ್ಲಾ ರಸ್ತೆಗಳ ಕಾರ್ಯಕ್ರಮ 'ಅಸೋಮ್ ಮಾಲಾ'ಕ್ಕೆ ಚಾಲನೆ ನೀಡಲಿದ್ದಾರೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.


ನಂತರ ಪ್ರಧಾನಿ ಅವರು ಪಶ್ಚಿಮ ಬಂಗಾಳದ ಹಲ್ದಿಯಾಕ್ಕೆ ಭೇಟಿ ನೀಡಲಿದ್ದಾರೆ. ಸುಮಾರು 1,100 ಕೋಟಿ ರೂಪಾಯಿ ಬಂಡವಾಳ ಹೂಡಿಕೆಯಲ್ಲಿ ನಿರ್ಮಾಣಮಾಡಿರುವ ಮತ್ತು ವರ್ಷಕ್ಕೆ ಒಂದು ಮಿಲಿಯನ್ ಮೆಟ್ರಿಕ್ ಟನ್ ಸಾಮರ್ಥ್ಯಹೊಂದಿರುವ ಪಶ್ಚಿಮ ಬಂಗಾಳದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ನಿರ್ಮಿಸಿರುವ ಎಲ್ ಪಿಜಿ ಆಮದು ಟರ್ಮಿನಲ್ ಅನ್ನು ಮೋದಿ ಅವರು ದೇಶಕ್ಕೆ ಸಮರ್ಪಿಸಲಿದ್ದಾರೆ.


 


SHARE THIS

Author:

0 التعليقات: