Sunday, 21 February 2021

ಪ್ರತಿಭಟನಾ ನಿರತ ರೈತರಿಗೆ ಸಾಮಾಜಿಕ ತಾಣಗಳ ಬಳಕೆಯನ್ನು ಕಲಿಸುತ್ತಿರುವ ವಿದ್ಯಾರ್ಥಿಗಳು


 ಪ್ರತಿಭಟನಾ ನಿರತ ರೈತರಿಗೆ ಸಾಮಾಜಿಕ ತಾಣಗಳ ಬಳಕೆಯನ್ನು ಕಲಿಸುತ್ತಿರುವ ವಿದ್ಯಾರ್ಥಿಗಳು

ಹೊಸದಿಲ್ಲಿ: ಟ್ವಿಟರ್ ಖಾತೆಯನ್ನು ಹೇಗೆ ಪ್ರಾರಂಭಿಸುವುದು, ಸಂದೇಶಗಳನ್ನು ಕಳುಹಿಸುವುದು ಹೇಗೆ?, ಆನ್ ‌ಲೈನ್ ‌ನಲ್ಲಿ ಪ್ರಚಲಿತದಲ್ಲಿರುವ ವಿಷಯವೊಂದರಲ್ಲಿ ಭಾಗವಹಿಸುವುದು ಹೇಗೆ? ಎನ್ನುವುದರ ಕುರಿತಾದಂತೆ ವಿದ್ಯಾರ್ಥಿಗಳ ಗುಂಪೊಂದು ʼಪ್ರತಿಭಟನೆಯ ಭಾಗವಾಗಿ ಸಾಮಾಜಿಕ ಮಾಧ್ಯಮವನ್ನು ಬಳಸುವ ವಿಧಾನʼ ಎನ್ನುವುದರ ಕುರಿತು ಗಾಝಿಪುರದ ಪ್ರತಿಭಟನಾ ಸ್ಥಳದಲ್ಲಿ ರೈತರೊಂದಿಗೆ ಕಾರ್ಯಾಗಾರಗಳನ್ನು ನಡೆಸಲು ಪ್ರಾರಂಭಿಸಿದೆ.

ಆಲ್ ಇಂಡಿಯಾ ಸ್ಟೂಡೆಂಟ್ಸ್ ಫೆಡರೇಶನ್ (ಎಐಎಸ್ಎಫ್) ನೊಂದಿಗೆ ಸಂಯೋಜಿತವಾಗಿರುವ ವಿದ್ಯಾರ್ಥಿಗಳು ಸುಮಾರು ಒಂದು ತಿಂಗಳಿನಿಂದ ಈ ಸ್ಥಳದಲ್ಲಿ ಗ್ರಂಥಾಲಯವನ್ನು ನಡೆಸುತ್ತಿದ್ದಾರೆ.

ಈ ಕುರಿತು ಮಾತನಾಡಿದ ಲಕ್ನೋ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಜಯ್ ಸಿಂಗ್, "ಅನೇಕ ಪ್ರತಿಭಟನಾಕಾರರು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪ್ರಾರಂಬಿಸುವ ಕುರಿತು ಸಹಾಯ ಕೇಳುತ್ತಿದ್ದಾರೆ, ಇದು ಬುಧವಾರ ಈ ಕಾರ್ಯಾಗಾರಗಳನ್ನು ಪ್ರಾರಂಭಿಸಲು ಕಾರಣವಾಯಿತು. ಈ ಅಧಿವೇಶನಗಳನ್ನು ಪ್ರತಿದಿನ ಮಧ್ಯಾಹ್ನ ಮುಖ್ಯ ವೇದಿಕೆಯ ಬಳಿ ನಡೆಸುವುದಾಗಿ ವಿದ್ಯಾರ್ಥಿಗಳು ಹೇಳಿದ್ದಾರೆ.

ಈ ಅಧಿವೇಶನಗಳಲ್ಲಿ, ಪ್ರತಿಭಟನಾಕಾರರಿಗೆ ತಮ್ಮ ಆಯ್ಕೆಯ ಸಾಮಾಜಿಕ ಮಾಧ್ಯಮ ವೇದಿಕೆಯಾದ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಅಥವಾ ಟ್ವಿಟರ್ ನಲ್ಲಿ ಖಾತೆಯನ್ನು ಹೇಗೆ ಹೊಂದುವುದು ಎಂದು ಕಲಿಸಲಾಗುತ್ತದೆ - . ಉದಾಹರಣೆಗೆ, ಟ್ವಿಟರ್ ‌ನಲ್ಲಿ ಖಾತೆಯನ್ನು ಹೇಗೆ ರಚಿಸುವುದು ಎಂದು ಅವರಿಗೆ ಮೊದಲು ಕಲಿಸಲಾಗುತ್ತದೆ; ನಂತರ ಲೈಕ್‌ ಮಾಡುವುದು ಅಥವಾ ರಿಟ್ವೀಟ್ ಮಾಡುವ ಕುರಿತು ಕಲಿಸಿಕೊಡಲಾಗುತ್ತದೆ. ಜೊತೆಗೆ ಟ್ರೆಂಡಿಂಗ್ ವಿಷಯದಲ್ಲಿ ಹೇಗೆ ಭಾಗವಹಿಸುವುದು ಮತ್ತು ಹ್ಯಾಶ್‌ಟ್ಯಾಗ್‌ಗಳನ್ನು ಹೇಗೆ ಬಳಸುವುದು ಎನ್ನುವುದನ್ನೂ ಕಾರ್ಯಾಗಾರದಲ್ಲಿ ಕಲಿಸಿಕೊಡಲಾಗುತ್ತದೆ ಎಂದು ತಿಳಿದು ಬಂದಿದೆ.


SHARE THIS

Author:

0 التعليقات: