ಭಾರತ ಯಾವುದೇ ಭೂ ಭಾಗವನ್ನ ಚೀನಾಗೆ ಬಿಟ್ಟುಕೊಟ್ಟಿಲ್ಲ, ಬಿಟ್ಟುಕೊಡೋದಿಲ್ಲ: ರಕ್ಷಣಾ ಇಲಾಖೆ
ನವದೆಹಲಿ: ಚೀನಾದ ಜತೆಗಿನ ಸಂಘರ್ಷ ನಿಲ್ಲಿಸಲು ಮಾಡಿಕೊಂಡ ಒಪ್ಪಂದದಲ್ಲಿ ಭಾರತ ಯಾವುದೇ ಭೂ ಭಾಗವನ್ನ ಚೀನಾಗೆ ಬಿಟ್ಟುಕೊಟ್ಟಿಲ್ಲ ಎಂದು ಕೇಂದ್ರ ರಕ್ಷಣಾ ಇಲಾಖೆ ಸ್ಪಷ್ಟಪಡಿಸಿದೆ.
ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವ್ರು ಆರೋಪ ಮಾಡಿದ್ದು, ಬೆಳಗ್ಗೆಯಷ್ಟೇ ಪಾಂಗಾಂಗ್ ತ್ಸೋ ಸರೋವರದ ಬಳಿಯ ಒಪ್ಪಂದದ ಮೂಲಕ ದೇಶದ ಭೂಮಿಯನ್ನ ಚೀನಾಕ್ಕೆ ಬಿಟ್ಟುಕೊಟ್ಟಿದ್ದಾಗಿ ಆರೋಪಿಸಿದ್ದರು. ಇದಕ್ಕೆ ಸ್ವತಃ ರಕ್ಷಣಾ ಇಲಾಖೆಯೇ ಸ್ಪಷ್ಟನೆ ನೀಡಿದ್ದು, 1962ರಲ್ಲೇ ಚೀನಾ ಭಾರತದ 43 ಸಾವಿರ ಚದರ ಕಿ.ಮೀ. ಭೂಭಾಗವನ್ನ ಅತಿಕ್ರಮಿಸಿದೆ. ಈಗಿನ ಒಪ್ಪಂದದ ಪ್ರಕಾರ ಯಾವುದೇ ಭೂಭಾಗ ಚೀನಾಕ್ಕೆ ಸೇರಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ರೈತ ಬಾಂಧವರೇ ಗಮನಿಸಿ: ಕಿಸಾನ್ ವಿಕಾಸ್ ಪತ್ರ ಯೋಜನೆಯ ಹೊಸ ʼಬಡ್ಡಿ ದರʼ ಬಿಡುಗಡೆ, ಇಲ್ಲಿದೆ ದರ ಪಟ್ಟಿ..!
ಇನ್ನು ಈ ಕುರಿತು ಹೇಳಿಕೆಯೊಂದನ್ನ ಬಿಡುಗಡೆ ಮಾಡಿರುವ ರಕ್ಷಣಾ ಇಲಾಖೆ, ಭಾರತ ಫಿಂಗರ್ 8ರವರೆಗೆ ಗಡಿ ಪಹರೆ ಕಾಯುವ ಹಕ್ಕನ್ನ ಹೊಂದಿದ್ದು, ಈಗಿನ ಒಪ್ಪಂದದಲ್ಲಿಯೂ ಇದನ್ನ ಪ್ರತಿಪಾದಿಸಿದ್ದೇವೆ ಎಂದು ಹೇಳಿದೆ.
0 التعليقات: