Sunday, 14 February 2021

ಕೇಂದ್ರ ʼಸರ್ಕಾರಿ ನೌಕರʼರಿಗೆ ಗುಡ್‌ ನ್ಯೂಸ್:‌ ಕೌಟುಂಬಿಕ ʼಪಿಂಚಣಿ ಮಿತಿʼ ಹೆಚ್ಚಳ..!

 

ಕೇಂದ್ರ ʼಸರ್ಕಾರಿ ನೌಕರʼರಿಗೆ ಗುಡ್‌ ನ್ಯೂಸ್:‌ ಕೌಟುಂಬಿಕ ʼಪಿಂಚಣಿ ಮಿತಿʼ ಹೆಚ್ಚಳ..!

ನವದೆಹಲಿ: ಕೇಂದ್ರ ಸರ್ಕಾರ ಸರ್ಕಾರ ಸರ್ಕಾರಿ ನೌಕರರಿಗೆ ಶುಭ ಸುದ್ದಿ ನೀಡಿದ್ದು, ಕೌಟುಂಬಿಕ ಪಿಂಚಣಿ ಗರಿಷ್ಠ ಮಿತಿಯನ್ನ ಹೆಚ್ಚಳ ಮಾಡಿದೆ.

ಈ ಮಾಹಿತಿಯನ್ನ ಸ್ವತಃ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವ್ರು ತಿಳಿಸಿದ್ದು, 'ಇಲ್ಲಿ ತನಕ ಕುಟುಂಬ ಪಿಂಚಣಿ ಗರಿಷ್ಠ ಮಿತಿ 45,000 ರು ನಷ್ಟಿತ್ತು. ಈಗ ಈ ಮಿತಿಯನ್ನ 1,25,000 ರು ಪ್ರತಿ ತಿಂಗಳಿಗೆ ಏರಿಕೆ ಮಾಡಲಾಗಿದೆ ಇದರಿಂದ ಲಕ್ಷಾಂತರ ಕುಟುಂಬಕ್ಕೆ ಪ್ರಯೋಜನವಾಗಲಿದೆ' ಎಂದಿದ್ದಾರೆ.

ಆದರೆ, ಮೃತ ಪೋಷಕರ(ಇಬ್ಬರು ಸರ್ಕಾರಿ ನೌಕರರಾಗಿದ್ದು) ಪಿಂಚಣಿ(ಎರಡು ಕಡೆಯಿಂದ) ಮೊತ್ತ ಮಕ್ಕಳಿಗೆ ಸಿಗುವಾಗ ಎರಡು ಕುಟುಂಬದಿಂದ 1,25,000 ಪ್ರತಿ ತಿಂಗಳಿಗೆ ಎಂದು ನಿಗದಿಪಡಿಸಲಾಗಿದೆ. ಇನ್ನು ಸಿಸಿಎಸ್ (ಪಿಂಚಣಿ) ನಿಯಮ 54(11) ದಂತೆ, 2,50,000 ರೂಪಾಯಿಯ ಅರ್ಧದಷ್ಟು ಅಂದ್ರೆ 1,25,000 ರೂಪಾಯಿ ಹಾಗೂ 2,50,000 ರು 30% ಅಂದ್ರೆ 75,000 ರು ಎಂದು ನಿಗದಿಪಡಿಸಲಾಗಿದೆ. ಈ ಹಿಂದಿನ ಆದೇಶದಲ್ಲಿ ಎರಡು ಕುಟುಂಬದ ಪಿಂಚಣಿ ಮೊತ್ತ 45,000 ರು ದಾಟುವಂತಿರಲಿಲ್ಲ. ಆದ್ರೆ, ಈಗ ಅಧಿಕ ಪ್ರಮಾಣದಲ್ಲಿ ಪಿಂಚಣಿ ಮೊತ್ತ ಕೈ ಸೇರಲಿದೆ ಅನ್ನೋದು ವಿಶೇಷ.


SHARE THIS

Author:

0 التعليقات: