ಸತತ ಏಳನೇ ದಿನ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ !
ನವದೆಹಲಿ: ಪೆಟ್ರೋಲ್ ಬೆಲೆ ಗ್ರಾಹಕರನ್ನು ವಿಪರೀತವಾಗಿ ಸುಡುತ್ತಿದೆ. ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳು ಬೆಲೆಗಳನ್ನು ಏರಿಸಿವೆ. ಸೋಮವಾರ (ಫೆಬ್ರವರಿ 15) ದೇಶಾದ್ಯಂತ ಸತತ ಏಳನೇ ದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಹೆಚ್ಚಿಸಲಾಗಿದೆ.
ಪೆಟ್ರೋಲ್ ಬೆಲೆಯನ್ನು 23. 26 ಪೈಸೆ ಮತ್ತು ಡೀಸೆಲ್ ಅನ್ನು 30 ಪೈಸೆ ಹೆಚ್ಚಿಸಿದೆ.
ಇತ್ತೀಚಿನ ಏರಿಕೆಯೊಂದಿಗೆ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 88.73 ರೂ ಮತ್ತು ಡೀಸೆಲ್ ಲೀಟರ್ಗೆ 79.35 ರೂ (29 ಪೈಸೆ ಏರಿಕೆಯಾಗಿದೆ) ಏರಿಕೆಯಾಗಿದೆ. ಕಳೆದ ಏಳು ದಿನಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ 2.06 ರೂ ಮತ್ತು ಡೀಸೆಲ್ ಲೀಟರ್ಗೆ 2.56 ರೂ. ಏರಿಕೆಯಾಗಿದೆ.
0 التعليقات: