Tuesday, 9 February 2021

ಭಾರತೀಯ ಮುಸ್ಲಿಮನಾಗಿರುವುದಕ್ಕೆ ಹೆಮ್ಮೆ ಇದೆ: ಗುಲಾಮ್ ನಬಿ ಆಝಾದ್


ಭಾರತೀಯ ಮುಸ್ಲಿಮನಾಗಿರುವುದಕ್ಕೆ ಹೆಮ್ಮೆ ಇದೆ: ಗುಲಾಮ್ ನಬಿ ಆಝಾದ್


ಹೊಸದಿಲ್ಲಿ : ಭಾರತೀಯ ಮುಸ್ಲಿಮನಾಗಿರುವುದಕ್ಕೆ ಹೆಮ್ಮೆ ಇದೆ ಪಾಕಿಸ್ತಾನಕ್ಕೆ ನಾನು ಎಂದಿಗೂ ಹೋಗಿಲಿಲ್ಲ ಎಂದು ರಾಜ್ಯಸಭಾ ಪ್ರತಿಪಕ್ಷ ನಾಯಕ ಗುಲಾಮ್ ನಬಿ ಆಝಾದ್ ಹೇಳಿದ್ದಾರೆ. ಪಾಕಿಸ್ತಾನದ ಪರಿಸ್ಥಿತಿಯ ಬಗ್ಗೆ ತಾನು ಓದಿದ್ದೇನೆ ಮತ್ತು ಅಲ್ಲಿಗೆ ಹೋಗದಿರುವುದು ಅದೃಷ್ಟ ಎಂದು ಅವರು ಹೇಳಿದ್ದಾರೆ. ಆಝಾದ್ ಅವರು ರಾಜ್ಯಸಭೆಯಲ್ಲಿ ತಮ್ಮ ವಿದಾಯ ಭಾಷಣದಲ್ಲಿ ಮಾತನಾಡುತ್ತಿದ್ದರು.


ಆಝಾದ್ ತಮ್ಮ ಭಾಷಣದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ‘ನಾನು ಅಟಲ್ ‌ಜೀ ಯಿಂದ ಸಾಕಷ್ಟು ಕಲಿತಿದ್ದೇನೆ. ವಿಶೇಷವಾಗಿ ಸಭೆಯನ್ನು ಗದ್ದಲಗಳಿಲ್ಲದೆ ಹೇಗೆ ನಡೆಸಬೇಕು” ಎಂದು ಆಝಾದ್ ಹೇಳಿದ್ದಾರೆ. ತಮ್ಮ ಬಗ್ಗೆ ಗೌರವ ಪೂರ್ಣವಾಗಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಕಾಂಗ್ರೆಸ್ ನಾಯಕ ಧನ್ಯವಾದ ಅರ್ಪಿಸಿದ್ದಾರೆ. ‘ನಾವು ಹಲವು ಬಾರಿ ಪರಸ್ಪರ ವಾಗ್ವಾದಗಳನ್ನು ನಡೆಸಿದ್ದೇವೆ. ಆದರೆ ನೀವು (ಮೋದಿ) ಇದನ್ನು ಎಂದಿಗೂ ವೈಯಕ್ತಿಕವಾಗಿ ತೆಗೆದುಕೊಂಡಿಲ್ಲ” ಎಂದು ಅವರು ಹೇಳಿದ್ದಾರೆ. 


SHARE THIS

Author:

0 التعليقات: