Thursday, 25 February 2021

ಸಾಮಾಜಿಕ ಜಾಲತಾಣದಲ್ಲಿ ಇಸ್ಲಾಂ, ಪ್ರವಾದಿ ಅವಹೇಳನ ವಿರುದ್ಧ ಖಂಡನೆ; ಸೂಕ್ತ ಕ್ರಮಕ್ಕೆ ಆಗ್ರಹ.


ಸಾಮಾಜಿಕ ಜಾಲತಾಣದಲ್ಲಿ ಇಸ್ಲಾಂ, ಪ್ರವಾದಿ ಅವಹೇಳನ ವಿರುದ್ಧ ಖಂಡನೆ; ಸೂಕ್ತ ಕ್ರಮಕ್ಕೆ ಆಗ್ರಹ.

ಧರ್ಮ ನಿಂದಕ ಪೊಲೀಸ್ ವಶಕ್ಕೆ,

ಇಸ್ಲಾಂ ಧರ್ಮವನ್ನು ಅವಹೇಳಿಸಿ, ಮುಸ್ಲಿಂ ಮಹಿಳೆಯರನ್ನು ನೀಚವಾಗಿ ನಿಂದಿಸಿದ ಶರವಣ ನಾಯಕ್ ಎಂಬ ಅಂಧ ಕೋಮುವಾದಿಯನ್ನು   ಪೊಲೀಸರಿಗೊಪ್ಪಿಸಿದ ಘಟನೆ ಪುತ್ತೂರು ತಾಲೂಕಿನಲ್ಲಿ ನಡೆದಿದೆ.

ಇಸ್ಲಾಂ ಶಾಂತಿಯ ಧರ್ಮ, ಮುಸ್ಲಿಮರು ಕಾನೂನು ಕೈತೆಗೆದುಕೊಳ್ಳುವ ಬದಲು ಕಾನೂನಿನ ಮುಖಾಂತರವೇ ಇಂತಹ ನೀಚ ವರ್ಗದ ನಿರ್ಮೂಲನೆ ಮಾಡುವೆವು

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಪವಿತ್ರ ಇಸ್ಲಾಂ, ಪ್ರವಾದಿ ಮುಹಮ್ಮದ್ ಪೈಗಂಬರ್ (ಸ) ಹಾಗೂ ಮುಸ್ಲಿಂ ಮಹಿಳೆಯರ ವಿರುದ್ಧ ಅತಿ ಕೆಟ್ಟದಾದ ಅವಾಚ್ಯ ಪದ ಬಳಸಿ ನಿಂದಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟ ವಿಕೃತ ಮನಸ್ಸಿನ ಆರೋಪಿ  ಶರ್ವಣ್ ಎಂಬಾತನ  ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ಸೂಕ್ತ ಶಿಕ್ಷೆಗೆ ಒಳಪಡಿಸ ಬೇಕೆಂದು  ಮುಸ್ಲಿಂ ಜಮಾಅತ್ ಬಡಗನ್ನೂರು ವಲಯ ಹಾಗೂ ಪಾಲಡ್ಕ ಮುಹಮ್ಮದಿಯ ಜಮಾಅತ್ ಕಮಿಟಿ ಸಮಿತಿಯ ಖಂಡನಾ ಸಭೆಯಲ್ಲಿ ಆಗ್ರಹಿಸಲಾಗಿದೆ. ಇದರಿಂದ ನಾಡಿನ ಶಾಂತಿ, ಸೌಹಾರ್ದತೆ ಮತ್ತು ಸಾಮರಸ್ಯವನ್ನು ಕೆಡಿಸುವ ಹುನ್ನಾರವು ಅಡಗಿದೆ. ಯಾವುದೇ ತಂಟೆ ತಕರಾರು ಬೇದ ಬಾವಗಲಿಳ್ಳದೆ ಪರಸ್ಪರ ಅನ್ಯೋನ್ಯವಾಗಿ ಉತ್ತಮ ಮಾದರಿಯುತ ಸಾಮರಸ್ಯ ಜೀವನ ನಡೆಸುವ ಊರಿಗೆ ಕಲಂಕವು ಕೂಡವಾಗಿದೆ. ಸೌಹಾರ್ದತೆಯನ್ನು ಕೆಡಿಸಿ ಅಶಾಂತಿ ಸೃಷ್ಟಿಸಿ ತಮ್ಮ ಬೇಳೆ ಬೇಯಿಸಲು ಯತ್ನಿಸುವವರ ವಿರುದ್ಧ ನಿರ್ದಾಕ್ಷಿಣ ಕ್ರಮ ಅನಿವಾರ್ಯವಾಗಿದೆ .ಇಂತಹ ಸಮಾಜ ಘಾತುಕ ಕೋಮು ಕ್ರಿಮಿಯನ್ನು ಬಂದಿಸಿ ಆತನ ವಿರುದ್ಧ ಪೋಲಿಸ್ ಇಲಾಖೆಯು ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಇಲಾಖೆಯನ್ನು ಒತ್ತಾಯಿಸಲಾಗಿದೆ.ಖಂಡನಾ ಸಭೆಯಲ್ಲಿ ಜಮಾಅತ್ ಕಮಿಟಿ ಅದ್ಯಕ್ಷರಾದ ಹಮೀದ್ ಕೊಯಿಲ,ಪ್ರದಾನ ಕಾರ್ಯದರ್ಶಿ ಸಿ ಕೆ ಅಹ್ಮದ್ ನ‌ಈಮಿ,ಉಪಾಧ್ಯಕ್ಷರಾದ ಸಿದ್ದೀಕ್ ಪಾಲಡ್ಕ,ಬಡಗನ್ನೂರು  ಮುಸ್ಲಿಂ ಜಮಾಅತ್ ಮುಖಂಡರಾದ,ಸಲ್ಮಾನ್ ಇಬ್ರಾಹಿಮ್ , ಎಸ್ ವೈ ಎಸ್  ಮುಖಂಡರಾದ ಸಿ ಕೆ ಮುಹಮ್ಮದ್  ಖಾನ್, ಮುಸ್ತಫಾ ಪಿ ಎಸ್,ಸುಲೈಮಾನ್ ಸಖಾಪಿ , ಎಸ್ಸೆಸ್ಸೆಪ್ ಮುಖಂಡರಾದ ಮುದಶ್ಸಿರ್ ಸರವು,ರಮೀಝ್ ಮುಂಡೋಳೆ,ಮುಸ್ತಪಾ ಪಿ ಎ,ಅಬ್ದುಲ್ ರಹಮಾನ್‌ ಅಣಿಲೆ, ಶರೀಪ್ ಮುಂಡೋಳೆ ಮತ್ತಿತರರು ಉಪಸ್ಥಿತರಿದ್ದರು.


SHARE THIS

Author:

0 التعليقات: