Saturday, 6 February 2021

ಜಗದೀಶ್ ಅಧಿಕಾರಿ ಬೇಷರತ್ ಕ್ಷಮೆ ಯಾಚನೆಗೆ ವಿಶ್ವ ಹಿಂದೂ ಪರಿಷತ್, ಬಜರಂಗದಳ ಆಗ್ರಹ


 ಜಗದೀಶ್ ಅಧಿಕಾರಿ ಬೇಷರತ್ ಕ್ಷಮೆ ಯಾಚನೆಗೆ ವಿಶ್ವ ಹಿಂದೂ ಪರಿಷತ್, ಬಜರಂಗದಳ ಆಗ್ರಹ

ಮಂಗಳೂರು, ಫೆ.6: ಬಿಲ್ಲವ ಸಮಾಜವನ್ನು ಕಡೆಗಣಿಸಿ ಮಾತನಾಡಿದ್ದರೆನ್ನಲಾದ ಜಗದೀಶ್ ಅಧಿಕಾರಿಯವರ ಹೇಳಿಕೆಯನ್ನು ಖಂಡಿಸಿರುವ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ, ಈ ಬಗ್ಗೆ ಜಗದೀಶ್ ಅಧಿಕಾರಿ ಬೇಷರತ್ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದೆ.

ಬಿಲ್ಲವ ಸಮಾಜವನ್ನು ಕಡೆಗಣಿಸಿ ಮಾತನಾಡಿದ ಜಗದೀಶ್ ಅಧಿಕಾರಿ ಹೇಳಿಕೆ ಖಂಡನೀಯ. ಮಾತ್ರವಲ್ಲದೆ, ‘ಬ್ಯಾರಿಲು ಆಂಡಲಾ ಅವು ಪೂಜಾರಿಲು ಅತ್ತು’  ಆಡಿದ ಮಾತು ಇಡೀ ಹಿಂದೂ ಸಮಾಜಕ್ಕೆ ಮಾಡಿದ ಅವಮಾನ. ಈ ಹೇಳಿಕೆಯನ್ನು ವಿಶ್ವ ಹಿಂದೂ ಪರಿಷತ್, ಬಜರಂಗದಳ ತೀವ್ರವಾಗಿ ಖಂಡಿಸುತ್ತದೆ. ಮಾತ್ರವಲ್ಲದೆ ಜಗದೀಶ್ ಅದಿಕಾರಿಯವರು ಬೇಷರತ್ ಕ್ಷಮೆ ಯಾಚಿಸಬೇಕೆಂದು ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.



SHARE THIS

Author:

0 التعليقات: