Friday, 26 February 2021

ಕರ್ನಾಟಕದಲ್ಲಿ ಬಿಜೆಪಿಗೆ ಲೈಫ್ ಕೊಟ್ಟಿದ್ದೇ ನಾನು : ಹೆಚ್ .ಡಿ ಕುಮಾರಸ್ವಾಮಿ


ಕರ್ನಾಟಕದಲ್ಲಿ ಬಿಜೆಪಿಗೆ ಲೈಫ್ ಕೊಟ್ಟಿದ್ದೇ ನಾನು : ಹೆಚ್ .ಡಿ ಕುಮಾರಸ್ವಾಮಿ

ಚನ್ನಪಟ್ಟಣ : ‘ನಾನು ಕಾಣದಿರೋ ಬಿಜೆಪಿ ಪಕ್ಷನಾ ಕರ್ನಾಟಕದಲ್ಲಿ? ಬಿಜೆಪಿಗೆ ಲೈಫ್ ಕೊಟ್ಟಿದ್ದೇ ನಾನು ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

“ನನ್ನ ಮುಂದೆ ಇನ್ನು ಬಚ್ಚಾ ಇದೀಯಾ ನೀನು, ನನ್ನ ಬಗ್ಗೆ ಏಕವಚನದಲ್ಲಿ ಮಾತನಾಡುವ ಮುಂಚೆ ಯೋಚಿಸು, ನಿನಗಿಂತಲೂ ಚೆನ್ನಾಗಿ ಮಾತನಾಡಲು ನನಗೂ ಬರುತ್ತದೆ” ಎಂದು ಸಚಿವ ಸಿ.ಪಿ. ಯೋಗೇಶ್ವರ್​ ವಿರುದ್ಧ ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಯೋಗೇಶ್ವರ್ ನೀನು ಸಚಿವ ಆಗಿದ್ದೀಯಾ. ನಿನ್ನ ಕೆಲಸ ಮಾಡಿಕೊಂಡು ಹೋಗು, ನನ್ನ ವಿರುದ್ಧ ಮಾತನಾಡಿ ಲೀಡರ್ ಆಗುವ ಪ್ರಯತ್ನ ಬೇಡ. ಯಾರೋ ಅಡವಿಟ್ಟ ಇಸ್ಪೀಟು ದುಡ್ಡಲ್ಲಿ ನೀನು ಮಂತ್ರಿಯಾಗಿದ್ದೀಯ. ನಿನ್ನಂತವನು ನನ್ನ ಬಗ್ಗೆ ಏನು ಮಾತನಾಡಲು ಸಾಧ್ಯ?’ ಎಂದು ಮಾಜಿ ಸಿಎಂ ಕಿಡಿಕಾರಿದ್ದಾರೆ. ‘ನಾನು ಕಾಣದಿರೋ ಬಿಜೆಪಿ ಪಕ್ಷನಾ ಕರ್ನಾಟಕದಲ್ಲಿ? ಬಿಜೆಪಿಗೆ ಲೈಫ್ ಕೊಟ್ಟಿದ್ದೇ ನಾನು. 2006 ರಲ್ಲಿ ಎಲ್ಲಾ ಮಂಗನ ತರಹ ಹಾರಲು ರೆಡಿಯಾಗಿದ್ದರು. ಅವತ್ತು ಬಿಜೆಪಿಯನ್ನ ಉಳಿಸಿದ್ದು ನಾನು ಎಂದು ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.SHARE THIS

Author:

0 التعليقات: