Tuesday, 23 February 2021

ದಾರುಲ್ ಮುಸ್ತಫಾ ಸನದುದಾನ ಸಮ್ಮೇಳನ ಯಶಸ್ಸಿಗೆ ತಾಜುಲ್ ಉಲಮಾ •ಎಸ್ಸೆಸ್ಸೆಫ್ ಗ್ರೂಪ್ ಕರೆ.


ದಾರುಲ್ ಮುಸ್ತಫಾ ಸನದುದಾನ ಸಮ್ಮೇಳನ ಯಶಸ್ಸಿಗೆ   ತಾಜುಲ್ ಉಲಮಾ •ಎಸ್ಸೆಸ್ಸೆಫ್ ಗ್ರೂಪ್  ಕರೆ.

ಹಚ್ಚ ಹಸಿರಿನಿಂದ ಕಂಗೊಳಿಸುವ ನೇತ್ರಾವತಿ ನದಿ ಕಿನಾರೆಯ ಸುಂದರ ಪ್ರದೇಶದ ಸಜ್ಜನರ ಪಾದಸ್ಪರ್ಷದಿಂದ ಅಧ್ಯಾತ್ಮಿಕ ಅನುಭೂತಿ ಪಡೆದ ಅನುಗ್ರಹೀತ ನಾಡು, ಪರಿಸರ ಪ್ರಿಯರ ಚಿಂತನೆ ಸೆಳೆವ   ನಿಸರ್ಗ ರಮ್ಯ ಊರು, ನಚ್ಚಬೆಟ್ಟುವಿನ ಪ್ರಕೃತಿ ಸೌಂದರ್ಯದ ಆದರ್ಶ ಧೀರಕೆ ಸುನ್ನಿ ಪರಂಪರೆಯ ಧಾರ್ಮಿಕ ಕೇಂದ್ರ, ಕರ್ನಾಟಕ ಜಂಇಯ್ಯತುಲ್ ಉಲಮಾ ರಾಜ್ಯ ಕಾರ್ಯದರ್ಶಿ,   ಗೌರವಾನ್ವಿತ ಬಹು ಮುಹಿಯುದ್ದೀನ್ ಕಾಮಿಲ್ ಸಖಾಫಿ ನೇತೃತ್ವ ನೀಡುತ್ತಿರುವ"ದಾರುಲ್ ಮುಸ್ತಫಾ ಮೋರಲ್ ಅಕಾಡೆಮಿ" ಯ ಪ್ರಥಮ ಸನದುದಾನ  ಮಹಾ ಸಮ್ಮೇಳನ ಫೆಬ್ರವರಿ 23 ರಿಂದ 25 ರವರೆಗೆ ನಡೆಯಲಿದೆ.

ಮೂರು ದಿನಗಳಲ್ಲಿ ವಿವಿಧ ಕಾರ್ಯಕ್ರಮ ನಡೆಯಲಿದ್ದು, ಸಮ್ಮೇಳನದ ಸಮಾರೋಪ ದಿನ  ಸಂಸ್ಥೆಯಲ್ಲಿ ವ್ಯಾಸಂಗ ಪೂರ್ತಿಗೊಳಿಸಿದ 11 ವಿದ್ವಾಂಸರಿಗೆ "ಸುಲ್ತಾನಿ" ಹಾಗೂ ಸುನ್ನೀ ಆದರ್ಶ ತತ್ವ ಸಂಹಿತೆಯಲ್ಲಿ ವಿಶೇಷ ಅಧ್ಯಯನ ಪೂರ್ತಿಗೊಳಿಸಿದ 30 ವಿದ್ವಾಂಸರಿಗೆ " ಅಲ್ - ಫುರ್ಖಾನಿ" ಬಿರುದನ್ನು ಭಾರತದ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ನೀಡಲಿದ್ದಾರೆ. ಸುನ್ನೀ ಪ್ರವರ್ತಕರು  

ಈ ಕಾರ್ಯಕ್ರಮ  ಪ್ರಚಾರ ಪಡಿಸಿ, ಅತೀ ಹೆಚ್ಚಿನ ಸಂಖ್ಯೆಯಲ್ಲಿ  ಭಾಗವಹಿಸಿ ವಿಜಯಗೊಳಿಸಿ , ಯಶಸ್ವಿಗೊಳಿಸಬೇಕಾಗಿ ವಿನಂತಿ.SHARE THIS

Author:

0 التعليقات: